ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) ಕಾಲೇಜುಗಳಲ್ಲಿ ಗೋವುಗಳ ಅಧ್ಯಯನ ಪ್ರೋತ್ಸಾಹಿಸಲು ಮುಂದಾಗಿದೆ. ರಾಷ್ಟ್ರಮಟ್ಟದ ಸ್ವಯಂಪ್ರೇರಿತ ಪರೀಕ್ಷೆಯಾದ ಕಾಮಧೇನು ಗೋವು ವಿಜ್ಞಾನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೋತ್ಸಾಹಿಸಲು ಯುಜಿಸಿ, ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ.  

ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದಡಿಯಲ್ಲಿ ಬರುವ ರಾಷ್ಟ್ರೀಯ ಕಾಮಧೇನು ಆಯೋಗ (ಆರ್‌ಕೆಎ) ಫೆಬ್ರವರಿ 25 ರಂದು ಆನ್‌ಲೈನ್‌ನಲ್ಲಿ ಪರೀಕ್ಷೆಯನ್ನು ನಡೆಸಲಿದೆ. ಈ ಕಾಮಧೇನು ಪರೀಕ್ಷೆಯು ಪ್ರಾಥಮಿಕ, ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಎಲ್ಲಾ ನಾಗರಿಕರಿಗೆ ಮುಕ್ತವಾಗಿದೆ. ಈ ಪರೀಕ್ಷೆಯಲ್ಲಿ ಭಾಗವಹಿಸುವವರಿಗೆ ಮೆಚ್ಚುಗೆ ಪ್ರಮಾಣಪತ್ರ ನೀಡಲಾಗುವುದು.

ಮೊಮ್ಮಗಳ ಕನಸು ಈಡೇರಿಸಲು ಮನೆ ಮಾರಿ ಆಟೋದಲ್ಲಿ ಜೀವನ ನಡೆಸುತ್ತಿರುವ ಅಜ್ಜ!

ದೇಶಿಯ ಹಸು ಮತ್ತು ಅದರ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಆಸಕ್ತಿ ಮೂಡಿಸಲು ಈ ಕೌ ಸೈನ್ಸ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ವಾರ್ಷಿಕವಾಗಿ    ಈ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಆರ್‌ಕೆಎ ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ ಹೇಳಿದ್ದಾರೆ. "ಯುವ ವಿದ್ಯಾರ್ಥಿಗಳು ಮತ್ತು ಇತರ ಪ್ರತಿಯೊಬ್ಬ ನಾಗರಿಕರಲ್ಲಿ ಸ್ಥಳೀಯ ಹಸುಗಳ ಬಗ್ಗೆ ಸಾಮೂಹಿಕ ಜಾಗೃತಿ ಮೂಡಿಸಲು, ಆರ್‌ಕೆಇ ಹಸು ವಿಜ್ಞಾನದ ಬಗ್ಗೆ ರಾಷ್ಟ್ರೀಯ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ" ಎಂದು ಈ ಹಿಂದೆ ವಲ್ಲಭಭಾಯ್ ಕಥಿರಿಯಾ ಹೇಳಿದ್ದರು. ಅದರಂತೆ ಇದೀಗ ಆಯೋಗವು ಹಸು ವಿಜ್ಞಾನದ ಅಧ್ಯಯನ ಸಾಮಗ್ರಿಯನ್ನು ಸಿದ್ಧಪಡಿಸಿದೆ.

ಕಾಮಧೇನು ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಆಸಕ್ತರು  ಆಯೋಗದ kamdhenu.gov.in. ವೆಬ್‌ಸೈಟ್‌ನಲ್ಲಿ ಲಭ್ಯವಿದೆ,

ಪರೀಕ್ಷೆಗೆ ಯಾವುದೇ ಶುಲ್ಕ ಇರುವುದಿಲ್ಲ ಮತ್ತು ಪಠ್ಯಕ್ರಮದ ಜೊತೆಗೆ ಹಸುಗಳ ಕುರಿತ ಇತರ ಸಾಹಿತ್ಯ ಮತ್ತು ಉಲ್ಲೇಖ ಪುಸ್ತಕಗಳನ್ನು ರಾಷ್ಟ್ರೀಯ ಕಾಮಧೇನು ಆಯೋಗ್‌ನ ವೆಬ್‌ಸೈಟ್‌ನಲ್ಲಿ ಶಿಫಾರಸು ಮಾಡಲಾಗುವುದು. ಇದು ಅಭ್ಯರ್ಥಿಗಳು ಪರೀಕ್ಷೆಗೆ ಸಿದ್ಧವಾಗಲು ಸಹಾಯ ಮಾಡುತ್ತದೆ ಎಂದು ಸಚಿವಾಲಯ ಹೇಳಿದೆ.

ಆರ್‌ಕೆಎ ವೆಬ್‌ಸೈಟ್‌ನಲ್ಲಿ ಪರೀಕ್ಷೆಯ ಫಲಿತಾಂಶಗಳನ್ನು ತಕ್ಷಣವೇ ಘೋಷಿಸಲಾಗುತ್ತದೆ. ಯಶಸ್ವಿ ಅರ್ಹ ಅಭ್ಯರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ. ಈ ಪರೀಕ್ಷೆಯನ್ನು ಬರೆಯುವಎಲ್ಲರಿಗೂ ಮೆಚ್ಚುಗೆಯ ಪತ್ರಗಳನ್ನು ನೀಡಲಾಗುತ್ತದೆ,

ಡಿಸೆಂಬರ್ 1, 2010 ರಂದು ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ, ಪ್ರತಿ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ‘ಕಾಮಧೇನು ಪೀಠ’ ಪ್ರಾರಂಭಿಸುವಂತೆ ಉಪಕುಲಪತಿಗಳನ್ನು ಒತ್ತಾಯಿಸಿದ್ದರು.

ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಕಾಮಧೇನು ಪೀಠಗಗಳು, ದೇಶಾದ್ಯಂತ ಇರುವ ಹಸುಗಳ ದೇಸಿ ತಳಿಗಳ ಬಗ್ಗೆ  ಯುವಕರಿಗೆ ಶಿಕ್ಷಣ ನೀಡಲು ಪ್ರಯತ್ನಿಸುತ್ತವೆ.

ಬಿಟೆಕ್, ಡಿಪ್ಲೋಮಾ ಬಾಕಿ ಶುಲ್ಕ ಪಾವತಿಗೆ ನರೇಗಾದಲ್ಲಿ ಬೆವರು ಹರಿಸುತ್ತಿರುವ ಸೋದರಿಯರು

ನಮ್ಮ ಸ್ಥಳೀಯ ಹಸುಗಳ ಕೃಷಿ, ಆರೋಗ್ಯ, ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಪ್ರಾಮುಖ್ಯತೆಯ ಬಗ್ಗೆ ನಾವು ಯುವಕರಿಗೆ ಶಿಕ್ಷಣ ನೀಡಬೇಕಾಗಿದೆ. ” ಎಂದು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಕಾಮಧೇನು ಪೀಠ’ ಕುರಿತ ರಾಷ್ಟ್ರೀಯ ವೆಬ್‌ನಾರ್ ಸಂದರ್ಭದಲ್ಲಿ ಕಥಿರಿಯಾ ಹೇಳಿದ್ದರು.

2019 ರ ಫೆಬ್ರವರಿಯಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಕಾಮಧೇನು ಆಯೋಗ(ಆರ್‌ಕೆಎ) ದೇಶದ ಸ್ಥಳೀಯ ಹಸುಗಳ ಆರ್ಥಿಕ, ವೈಜ್ಞಾನಿಕ, ಪರಿಸರ, ಆರೋಗ್ಯ, ಕೃಷಿ ಮತ್ತು ಆಧ್ಯಾತ್ಮಿಕ ಪ್ರಸ್ತುತತೆ ಕುರಿತು ಮಾಹಿತಿಯನ್ನು ಪ್ರಸಾರ ಮಾಡುವ ಕೆಲಸ ಮಾಡುತ್ತಿದೆ. ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ಕೆಲಸವನ್ನು ಆಯೋಗವು ನಿರಂತರವಾಗಿ ಮಾಡುತ್ತ ಬಂದಿದೆ.

ದೇಶದಲ್ಲಿ ಹಸು ಕುರಿತು ಅಧ್ಯಯನ ನಡೆಯಬೇಕೆಂಬುದು ಬಹಳ ದಿನಗಳ ಬೇಡಿಕೆಯಾಗಿತ್ತು. ಈ ಸಂಬಂಧ ಕಾಮಧೇನು ಆಯೋಗವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಹಸುವಿನ ಉಪಯೋಗಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ  ಭಾಗವಾಗಿಯೇ ಇದೀಗ ವಿವಿಗಳಲ್ಲಿ ಹಸು ಅಧ್ಯಯಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಬಹುದು.

ಬಿಟೆಕ್, ಡಿಪ್ಲೋಮಾ ಬಾಕಿ ಶುಲ್ಕ ಪಾವತಿಗೆ ನರೇಗಾದಲ್ಲಿ ಬೆವರು ಹರಿಸುತ್ತಿರುವ ಸೋದರಿಯರು