ಕಡು ಬಡತನ ಅನ್ನೋದು ಶಿಕ್ಷಣದ ಮೇಲೆ ಭಾರೀ ಕೆಟ್ಟ ಪ್ರಭಾವ ಬೀರುತ್ತದೆ. ಶ್ರೀಮಂತರಿಗೆ ಸರಸ್ವತಿ ಒಲಿಯಲ್ಲ, ಬಡವರಿಗೆ ಲಕ್ಷ್ಮೀ ಒಲಿಯುವುದಿಲ್ಲ. ಒಂಥರಾ ಹಲ್ಲಿದ್ದವರಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲಿಲ್ಲ ಅನ್ನೋ ಹಾಗೆ. ದುಡ್ಡಿದ್ದವನಿಗೆ ಓದುವ ಮನಸ್ಸಿರಲ್ಲ. ದುಡ್ಡಿಲ್ಲದವನಿಗೆ ಚೆನ್ನಾಗಿ ಓದಿ ಏನಾದ್ರೂ ಸಾಧನೆ ಮಾಡಬೇಕು ಅನ್ನೋ ಹಂಬಲ. ಬಡತನದಲ್ಲಿ ಹುಟ್ಟಿ ಬೆಳೆದ ಅದೆಷ್ಟೋ ಸಾಧಕರು ಚಿಕ್ಕಂದಿನಿಂದಲೂ ಕಷ್ಟಪಟ್ಟು ಶ್ರಮಿಸಿ ಓದಿ ಮುಂದೆ ಬಂದಿರೋ ಬಗ್ಗೆ ಸಾಕಷ್ಟು ನಿದರ್ಶನಗಳಿವೆ. ಅದೇ ರೀತಿ ಇಲ್ಲೊಬ್ಬ ಡಿಪ್ಲೋಮಾ ವಿದ್ಯಾರ್ಥಿನಿ, ತನ್ನ ಉನ್ನತ ವಿದ್ಯಾಭ್ಯಾಸಕ್ಕಾಗಿ ದಿನಗೂಲಿ ನೌಕರಿ ಮಾಡ್ತಿದ್ದಾಳೆ.

ಒಡಿಶಾದ ಪುರಿಯಲ್ಲಿ ೨೦ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ರೋಸಿ ಬೆಹರ, ಕಾಲೇಜಿನ ಬಾಕಿ ಶುಲ್ಕ ಪಾವತಿಸಲು ದಿನಗೂಲಿ ನೌಕರಿ ಮಾಡ್ತಿದ್ದಾಳೆ. ತನ್ನ ಡಿಪ್ಲೊಮಾ ಪ್ರಮಾಣಪತ್ರ ಪಡೆಯಲು 24,500 ರೂ. ಡೆಪಾಸಿಟ್  ಮಾಡಲು ರೋಸಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಎಂಜಿಎನ್‌ಆರ್‌ಇಜಿಎಸ್)ಯಡಿ ರಸ್ತೆ ಪ್ರಾಜೆಕ್ಟ್‌ನಲ್ಲಿ ಕಳೆದ ೩ ವಾರಗಳಿಂದ ಕೆಲಸ ದುಡಿಯುತ್ತಿದ್ದಾಳೆ.

ವಾರಕ್ಕಿನ್ನು ನಾಲ್ಕೇ ದಿನ ಕೆಲ್ಸ, ಯಾರಿಗೆ ಅನ್ವಯ? ದಿನಕ್ಕೆಷ್ಟು ಗಂಟೆ ದುಡೀಬೇಕು?

ರೋಸಿ ಚೈನ್‌ಪುರ ಪಂಚಾಯತ್‌ನ ಪುರಿ ಜಿಲ್ಲೆಯ ಗೋರಡಿಪಿಧಾ ಗ್ರಾಮದಲ್ಲಿ ವಾಸಿಸುತ್ತಾಳೆ. ತನ್ನ ಸಿವಿಲ್ ಎಂಜಿನಿಯರಿಂಗ್ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರವೂ, ಅವಳು ಕಾಲೇಜಿನ ಬಾಕಿ ಶುಲ್ಕ ಪಾವತಿಸಲು ದಿನಗೂಲಿ  ಕೆಲಸ ಮಾಡುವಂತಾಗಿದೆ.

"2019 ರಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮುಗಿಸಿದ ನಂತರ, ಡಿಗ್ರಿಗೆ ಪ್ರವೇಶ ಪಡೆಯಲು ಹಣ ಹೊಂದಿಸಲು ಸಾಧ್ಯವಾಗಲಿಲ್ಲ. ಅಲ್ಲದೇ ಡಿಪ್ಲೊಮಾ ಶಾಲೆಗೆ ನಾನು ಬಾಕಿ ಹಣ 24,500 ರೂಗಳನ್ನು ಪಾವತಿಸಬೇಕಾಗಿದೆ" ಅಂತಾರೆ ರೋಸಿ ಬೆಹೆರಾ.

ಡಿಪ್ಲೊಮಾ ಮುಗಿಸಿದ ನಂತರ, ಖಾಸಗಿ ಸಂಸ್ಥೆಯಿಂದ ಸರ್ಕಾರಿ ವಿದ್ಯಾರ್ಥಿವೇತನದಲ್ಲಿ ಬಿಟೆಕ್ ಪದವಿ ಪಡೆಯುವ ಬಗ್ಗೆ ವಿಚಾರಿಸಿದರು. ಆದ್ರೆ ರೋಸಿ, ಪರಿಶಿಷ್ಟ ಜಾತಿ ವರ್ಗದವರಾಗಿರುವುದರಿಂದ ಸರ್ಕಾರವು ತನ್ನ ಬೋಧನಾ ಶುಲ್ಕವನ್ನು ಭರಿಸುತ್ತಿದ್ದರೂ, ಅವಳು ಹಾಸ್ಟೆಲ್ ಮತ್ತು ಕಾಲೇಜು ಬಸ್ ಶುಲ್ಕವನ್ನು ಸ್ವಂತವಾಗಿ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.

ಫೈನಲ್ ಇಯರ್ ಡಿಗ್ರಿಯಲ್ಲಿದ್ದಾಗಲೇ 30 ಲಕ್ಷ ರೂಪಾಯಿ ವೇತನದ ನೌಕರಿ

ಸ್ಥಳೀಯ ಶಾಸಕರು ಹಾಗೂ ಕಾಲೇಜಿನ ಆಡಳಿತ ಮಂಡಳಿಗೆ ನಾನು ಹಲವು ಬಾರಿ ವಿನಂತಿಸಿದರೂ, ನನ್ನ ಡಿಪ್ಲೊಮಾ ಪ್ರಮಾಣಪತ್ರವನ್ನು ನಿರಾಕರಿಸಿದ್ರು. ನನ್ನ ಹಾಸ್ಟೆಲ್ ಬಾಕಿ ಮತ್ತು ಬಸ್ ಶುಲ್ಕವನ್ನು ಪಾವತಿಸಲು ನನಗೆ ಬೇರೆ  ಆಯ್ಕೆಗಳೇ ಇರಲಿಲ್ಲ ಎಂದು ರೋಸಿ ಹೇಳುತ್ತಾರೆ.

"ನಾನು ಉತ್ತಮ ಸಂಖ್ಯೆಯೊಂದಿಗೆ ಮೆಟ್ರಿಕ್ ಉತ್ತೀರ್ಣನಾಗುತ್ತಿದ್ದಂತೆ ಸರ್ಕಾರದಿಂದ ವಿದ್ಯಾರ್ಥಿವೇತನವನ್ನು ಪಡೆದುಕೊಂಡೆ. ಆ ನಂತರ ಖೋರ್ಧಾದಲ್ಲಿ ಬರುನೈ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ (ಬಿಐಇಟಿ)ಯಲ್ಲಿ ಡಿಪ್ಲೋಮಾಗೆ ಸೇರಿಕೊಂಡೆ" ಎಂದು ರೋಸಿ ಹೇಳುತ್ತಾರೆ.

ಅಂದಹಾಗೆ ಕಡು ಬಡತನವಿದ್ರೂ ರೋಸಿ ಓದೋದ್ರಲ್ಲಿ ಎತ್ತಿದ ಕೈ. ರೋಸಿ ಒಬ್ಬಳೇ ಅಲ್ಲ ಆ ಕುಟುಂಬದಲ್ಲಿ ಮತ್ತೊಬ್ಬ ವಿದ್ಯಾರ್ಥಿಯಿದ್ದಾರೆ.  ಅಕ್ಕನ ಹಾದಿಯಲ್ಲೇ ತಂಗಿ ಕೂಡ ಬಿಟೆಕ್ ಪದವಿ ಮಾಡುತ್ತಿದ್ದಾಳೆ. ರೋಸಿಯ ಇಡೀ ಕುಟುಂಬ ಸಂಪಾದನೆಗಾಗಿ ದಿನಗೂಲಿ ಕೆಲಸ ಮಾಡುತ್ತದೆ. ರೋಸಿ ಪೋಷಕರು, ಸಹೋದರಿಯರು ಹಾಗೂ ಅಜ್ಜ ಕೂಡ ನರೇಗಾ ಯೋಜನೆಯಡಿ ದಿನಗೂಲಿ ಕೆಲಸ ಮಾಡುತ್ತಾರೆ.

ರೋಸಿ ತಂಗಿ ತನ್ನ ದೈನಂದಿನ ಕೂಲಿ ಕೆಲಸದ ಜೊತೆಗೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್ ಓದುತ್ತಿದ್ದಾಳೆ. "ನನ್ನ ದೊಡ್ಡ ತಂಗಿ ಕಂಪ್ಯೂಟರ್ ವಿಜ್ಞಾನದಲ್ಲಿ ಬಿಟೆಕ್ ಓದುತ್ತಿದ್ರೂ, ನನಗೆ ಸಹಾಯ ಮಾಡಲು ಮುಂದೆ ಬಂದಳು. ನರೇಗಾ ಯೋಜನೆಯ ಕೆಲಸದಿಂದ ನನ್ನ ಕುಟುಂಬ ಸದಸ್ಯರು ಸಂಗ್ರಹಿಸಿದ ಹಣದಿಂದ BIETಯಿಂದ ನನ್ನ ಪ್ರಮಾಣಪತ್ರವನ್ನು ಪಡೆಯುವ ಸಮಸ್ಯೆ ಭಾಗಶಃ ಪರಿಹಾರವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ಹೆಚ್ಚಿನ ಅಧ್ಯಯನಕ್ಕಾಗಿ ನಾನು ಇನ್ನಷ್ಟು ಹಣವನ್ನು ವ್ಯವಸ್ಥೆ ಮಾಡಿಕೊಳ್ಳಬೇಕಿದೆʼ ಅಂತಾಳೆ ರೋಸಿ.  

ಈ ಅಕ್ಕ-ತಂಗಿ ಎಲ್ಲರಂತಲ್ಲ, ಗಣಿತ ಎಂದರೆ ಇವರಿಗೆ ಲೆಕ್ಕವೇ ಅಲ್ಲ