ಹಿಜಾಬ್ ವಿವಾದ ಶುರುವಾದ ಕಾಲೇಜಿನ ಆಡಳಿತ ಮಂಡಳಿಯಿಂದ ಮಹತ್ವದ ದಾಖಲೆ ಬಿಡುಗಡೆ

* ರಾಜ್ಯದ ಎಲ್ಲ ಜಿಲ್ಲೆಗಳಿಗೂ ಕೂಡ  ವ್ಯಾಪಿಸಿದ ಹಿಜಾಬ್-ಕೇಸರಿ ವಿವಾದ
* ಹಿಜಾಬ್ ವಿವಾದ ಶುರುವಾದ ಕಾಲೇಜಿನ ಆಡಳಿತ ಮಂಡಳಿಯಿಂದ ಮಹತ್ವದ ದಾಖಲೆ ಬಿಡುಗಡೆ
* ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಆರಂಭಗೊಂಡಿರುವ ಹಿಜಾಬ್-ಕೇಸರಿ ವಿವಾದ

Udupi Govt College releases Some Photos Of Hijab Row rbj

ಉಡುಪಿ, (ಫೆ.09): ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಆರಂಭಗೊಂಡಿರುವ ಹಿಜಾಬ್ ಹಾಗೂ ಕೇಸರಿ ಕಾಳಗHijab Controversy) ಇದೀಗ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಕೂಡ  ವ್ಯಾಪಿಸಿದೆ.

ಈ ಹಿಂದೆ ವಿದ್ಯಾರ್ಥಿಗಳು ಹಿಜಾಬ್ ಧರಿಸುತ್ತಿರಲಿಲ್ಲ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ ಕಾಲೇಜು ಆಡಳಿತ ಮಂಡಳಿ ಮಹತ್ವದ ದಾಖಲೆಗಳನ್ನು ಬಿಡುಗಡೆಗೊಳಿಸಿದೆ.

ಆ ಮೂಲಕ ಈ ಹಿಂದೆಯೂ ಹಿಜಾಬ್ ಧರಿಸಲಾಗುತ್ತಿತ್ತು ಎಂದು ವಿದ್ಯಾರ್ಥಿನಿಯರು ಮಾಡುತ್ತಿದ್ದ ವಾದಕ್ಕೆ ಶಿಕ್ಷಣ ಸಂಸ್ಥೆ ದಾಖಲೆಗಳ ಮೂಲಕ ಸ್ಪಷ್ಟನೆ ನೀಡಿದೆ.

ಕೆಲವರ ಹಠದಿಂದ ಹಿಜಾಬ್ ವಿವಾದದ ರೂಪ ಪಡೆದಿದೆ, ಶಾಸಕ ರಘುಪತಿ ಭಟ್

ಕಾಲೇಜಿನ 2009-10ನೇ ಸಾಲಿನ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟಿಸಲಾದ ಫೋಟೋಗಳನ್ನು ದಾಖಲೆಗಳಾಗಿ ಬಿಡುಗಡೆಗೊಳಿಸಲಾಗಿದೆ. ವಾರ್ಷಿಕ ಸಂಚಿಕೆಯಲ್ಲಿ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದೆ. ಕಾಲೇಜಿನಲ್ಲಿ ಹಿಜಾಬ್ ತೊಡಲು ಹಿಂದೆಯೂ ಅವಕಾಶ ಇರಲಿಲ್ಲ ಎನ್ನುವುದನ್ನು ಕಾಲೇಜು ಆಡಳಿತ ಮಂಡಳಿ ಫೋಟೋಗಳ ಮೂಲಕ ಸ್ಪಷ್ಟಪಡಿಸಿದೆ. ಫೋಟೋಗಳ ಪ್ರಕಾರ ಸಮಾನ ವಸ್ತ್ರ ಸಂಹಿತೆಯಲ್ಲಿರುವ ಎಲ್ಲಾ ವಿದ್ಯಾರ್ಥಿನಿಯರು ಅನುಸರಿಸಿದ್ದಾರೆ.

ಕಾಲೇಜಿನ ಬೆಳಗ್ಗಿನ ಶಾಲಾ ಅಸೆಂಬ್ಲಿ ಫೋಟೋಗಳು ಕೂಡಾ ಪ್ರಕಟಿಸಲಾಗಿದೆ. ಕಾಲೇಜು ಬಿಡುಗಡೆಗೊಳಿಸಿದ ದಾಖಲೆಗಳಲ್ಲಿ ಹಿಜಾಬ್ ಕಂಡು ಬಂದಿಲ್ಲ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ದಾಖಲೆಗಳಲ್ಲಿ ಕಂಡು ಬಂದಿಲ್ಲ. ಹಿಜಾಬ್ ಸಂಸ್ಕೃತಿಯಿರಲಿಲ್ಲ ಎಂದು ಕಾಲೇಜು ಸಾಕ್ಷ್ಯ ಬಿಡುಗಡೆಗೊಳಿಸಿದೆ. ಸದ್ಯ ಸಂಸ್ಥೆ ಬಿಡುಗಡೆಗೊಳಿಸಿದ ಯಾವುದೇ ಫೋಟೋಗಳಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಲ್ಲ. ಆ ಮೂಲಕ ಈ ಹಿಂದೆ ಹಿಜಾಬ್ ಧರಿಸಲು ಅವಕಾಶವಿರಲಿಲ್ಲ ಎನ್ನುವುದು ಸ್ಪಷ್ಟಗೊಂಡಂತಾಗಿದೆ.

ಆದರೆ, ಹಿಂದೆಯಿಂದಲೂ ಹಿಜಾಬ್ ಅವಕಾಶ ಇತ್ತು ಎಂದು ವಿದ್ಯಾರ್ಥಿನಿಯರು ವಾದಿಸುತ್ತಿದ್ದರು. ವಿದ್ಯಾರ್ಥಿನಿಯರ ವಾದಕ್ಕೆ ಸಂಬಂಧಿಸಿದಂತೆ ಸಂಸ್ಥೆ ಸೂಕ್ತ ದಾಖಲೆಗಳನ್ನೇ ಬಿಡುಗಡೆಗೊಳಿಸಿದೆ.

ಫೋಟೋ ಪ್ರದರ್ಶನ ಮಾಡಿದ ಶಾಸಕ ರಘುಪತಿ ಭಟ್
Udupi Govt College releases Some Photos Of Hijab Row rbj

ರಾಜ್ಯದಲ್ಲಿ ಹಿಜಾಬ್‌ನ ಕಿಚ್ಚು ಹಚ್ಚಿದ್ದ ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರ ವಿರುದ್ಧ ಉಡುಪಿ ಶಾಸಕ ರಘಪತಿ ಭಟ್ ಸ್ಪೋಟಕ ದಾಖಲೆ ಬಹಿರಂಗ ಮಾಡಿದ್ದಾರೆ. ಕಾಲೇಜಿನಲ್ಲಿ ಹಲವು ವರ್ಷಗಳಿಂದ ಹಿಜಾಬ್ ಧರಿಸಲು ಅವಕಾಶ ನೀಡಿದ್ದರು ಎಂಬ ಹೇಳಿಕೆ‌ ನೀಡಿದ್ದ ವಿದ್ಯಾರ್ಥಿನಿಯರದ್ದು ಹಸಿ ಸುಳ್ಳು ಎಂದು ಶಾಸಕರು ದಾಖಲೆಗಳ ಮೂಲಕ ಬಹಿರಂಗಪಡಿಸಿದ್ದಾರೆ.

ಸದ್ಯ ವಿವಾದ ಸೃಷ್ಠಿಸಿರುವ ಆರು ಮಂದಿ ವಿದ್ಯಾರ್ಥಿನಿಯರ ಪೈಕಿ ಆಲಿಯಾ ಬಾನು ಎಂಬಾಕೆ 2021-2022 ಸಾಲಿನ ಕಾಲೇಜಿನ ವಿದ್ಯಾರ್ಥಿ ಸಂಘದಲ್ಲಿ ಇಂಟ್ಯಾರಾಕ್ಟ್ ಕ್ಲಬ್‌ನ ಸಂಚಾಲಕಿಯಾಗಿದ್ದು, ಆಕೆ ಪ್ರಮಾಣ ವಚನ ಸ್ವೀಕಾರ ಮಾಡುವ ವೇಳೆ ಹಿಜಾಬ್ ಧರಿಸಿರಲಿಲ್ಲ. ಆದರೆ ಈಗ ಕಾಲೇಜು ಆರಂಭವಾಗಿದ ದಿನದಿಂದ ಹಿಜಾಬ್ ಧರಿಸುತ್ತಿದ್ದೆವು ಎಂಬುವುದಾಗಿ ಸುಳ್ಳು ಹೇಳಿದ್ದು, ಇದಕ್ಕೆ ಉತ್ತರವಾಗಿ ಆಕೆ ಪ್ರಮಾಣ ವಚನ ಸ್ವೀಕಾರ ಮಾಡಿದ ಸಂದರ್ಭದಲ್ಲಿ ತೆಗೆದ ಹಿಜಾಬ್ ರಹಿತ ಫೋಟೋವನ್ನು ಶಾಸಕ ರಘಪತಿ ಭಟ್ ಪ್ರದರ್ಶನ ಮಾಡಿದ್ದಾರೆ.

ಹಿಜಾಬ್ ವಿವಾದಕ್ಕೆ ಮೂಲ ಕಾರಣರಾದ ಆರು ಮಂದಿ ವಿದ್ಯಾರ್ಥಿನಿಯರು, ಈ ಹಿಂದೆ ಕಾಲೇಜಿನಲ್ಲಿ ಹಿಜಾಬ್ ಧರಿಸುತ್ತಿರಲಿಲ್ಲ ಎಂಬುವುದನ್ನು ಶಾಸಕ ರಘಪತಿ ಭಟ್ ನಿರೂಪಿಸಿದ್ದಾರೆ. ಈ ದಾಖಲೆಗಳನ್ನು ಹೈಕೋರ್ಟ್‌ಗೂ ಸಲ್ಲಿಕೆ ಮಾಡಿದ್ದು, ಕಾಲೇಜಿನಲ್ಲಿ ಈ ಹಿಂದೆಯಿಂದ ಕಾಲೇಜಿನಲ್ಲಿ ಹಿಜಾಬ್ ಧರಿಸೋಕೆ ಅವಕಾಶ ಇರಲಿಲ್ಲ ಅಂತಾ ಶಾಸಕ ರಘಪತಿ ಭಟ್ ಹೇಳಿದ್ದಾರೆ.

2002ರಿಂದ ಕಾಲೇಜಿನ ಎಲ್ಲಾ ಕಾರ್ಯಕ್ರಮಗಳ ದಾಖಲಾತಿಗಳು ಇದೆ. ಕಾಲೇಜಿನ 2009-10 ಸಾಲಿನ ವಾರ್ಷಿಕ ಸಂಚಿಕೆಯಲ್ಲೂ ತರಗತಿ ಪ್ರಕಾರ ವಿದ್ಯಾರ್ಥಿನಿಯರ ಫೋಟೋಗಳಿದ್ದು, ಯಾವುದೇ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಲ್ಲ. ಕಾಲೇಜಿನಲ್ಲಿ ಹಿಜಾಬ್ ಧರಿಸಲು ಹಿಂದೆಯೂ ಅವಕಾಶ ಇರಲಿಲ್ಲ. ಸಮಾನ ವಸ್ತ್ರಸಂಹಿತೆಯಲ್ಲಿ ವಿದ್ಯಾರ್ಥಿನಿಯರಿದ್ದರು. ಕಾಲೇಜಿನ ಬೆಳಗ್ಗಿನ ಅಸೆಂಬ್ಲಿ ವೇಳೆಯಲ್ಲೂ ವಿದ್ಯಾರ್ಥಿನಿ ಯರು ಹಿಜಾಬ್ ಧರಿಸಿಲ್ಲ. ಈ ಬಗ್ಗೆಯೂ ಬೇಕಾದ ಎಲ್ಲಾ ದಾಖಲೆಗಳಿವೆ ಎಂದಿದ್ದಾರೆ.
 

Latest Videos
Follow Us:
Download App:
  • android
  • ios