ನೇರವಾಗಿ ನಿಂತ ಹಾವು... ಅಪರೂಪದ ವಿಡಿಯೋ ವೈರಲ್

ಬೃಹತ್ ಗಾತ್ರದ ಹಾವೊಂದು ತನ್ನ ದೇಹದ ಅರ್ಧ ಭಾಗವನ್ನು ನೇರವಾಗಿ ನಿಲ್ಲಿಸಿಕೊಂಡು ಎತ್ತಲೋ ನೋಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

King cobra standing up, video goes viral akb

ಹಾವುಗಳು ಈ ಜೀವ ವೈವಿಧ್ಯದ ಅವಿಭಾಜ್ಯ ಅಂಗ. ಹಾವುಗಳು ನಮ್ಮ ಪರಿಸರದಲ್ಲಿರುವ ಭಯ ಹುಟ್ಟಿಸುವ ಸರೀಸೃಪಗಳಲ್ಲಿ ಒಂದಾಗಿದೆ. ಆದರೂ ಅವುಗಳ ವಿಶಿಷ್ಟ ಮತ್ತು ಅದ್ಭುತ ಸಾಮರ್ಥ್ಯಗಳು ಹೆಚ್ಚಾಗಿ ಅವುಗಳನ್ನು ಆಕರ್ಷಕ ಜೀವಿಗಳನ್ನಾಗಿ ಮಾಡುತ್ತವೆ. ಹಾವುಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಈಗ ಬೃಹತ್ ಗಾತ್ರದ ಹಾವೊಂದು ತನ್ನ ದೇಹದ ಅರ್ಧ ಭಾಗವನ್ನು ನೇರವಾಗಿ ನಿಲ್ಲಿಸಿಕೊಂಡು ಎತ್ತಲೋ ನೋಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಈ ಅಪರೂಪದ ವಿಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿರುವ ಅವರು ನಾಗರಹಾವು ಅಕ್ಷರಶಃ ಬೆಳೆದ ವ್ಯಕ್ತಿಯಂತೆ ಎದ್ದು ನಿಂತಿದೆ. ಎದುರಾಳಿಯನ್ನು ಎದುರಿಸುವ ಸಂದರ್ಭದಲ್ಲಿ ಅವುಗಳು ತಮ್ಮ ದೇಹದ 3ನೇ ಒಂದು ಭಾಗವನ್ನು ನೇರವಾಗಿ ನಿಲ್ಲಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅವರು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಭಾರಿ ಗಾತ್ರದ ನಾಗರ ಹಾವೊಂದು ಪ್ರಚೋದನೆಗೊಳಗಾದ ಸ್ಥಿತಿಯಲ್ಲಿ ಎತ್ತರದ ಪ್ರದೇಶದಲ್ಲಿ ಎದ್ದು ನಿಂತಿರುವುದನ್ನು ಕಾಣಬಹುದಾಗಿದೆ. ಈ ವಿಡಿಯೋವನ್ನು ಫೆ.27 ರಂದು ಪೋಸ್ಟ್ ಮಾಡಲಾಗಿದ್ದು, 1,50,000ಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ನೋಡಿದ್ದಾರೆ. ಅಲ್ಲದೇ ಅನೇಕರು ಈ ಪೋಸ್ಟನ್ನು ರಿಟ್ವಿಟ್ ಮಾಡಿದ್ದಾರೆ. 

ಕಾಲು ನೀಡಿ ಕುಳಿತ ಮಹಿಳೆಯ ಕಾಲಿನ ಕೆಳಗೆ ಸಾಗಿದ ಹಾವು: ತಣ್ಣಗೆ ಕುಳಿತ ಗಟ್ಟಿಗಿತ್ತಿ

ಭಾರಿ ಗಾತ್ರದ ಹಾವು ಹೀಗೆ ಮನುಷ್ಯರಂತೆ ಎದ್ದು ನಿಂತಿರುವುದನ್ನು ನೋಡಿದರೆ ಸರೀಸೃಪಗಳನ್ನು (reptile) ಎದುರಿಸುವುದು ಅಪಾಯಕಾರಿ ಎಂಬುದನ್ನು ಇದು ಸಾಬೀತುಪಡಿಸಿದೆ . ಇದು ಬೆನ್ನುಮೂಳೆಯಲ್ಲಿ ನಡುಕ ಹುಟ್ಟಿಸುತ್ತದೆ ಎಂದು ವಿಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಇದೊಂದು ಭಯಾನಕ ನೋಟ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇದು  ಬೆನ್ನುಮೂಳೆಯಲ್ಲಿ ಬೆವರುವಂತೆ ಮಾಡುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಹಾವುಗಳು ಯಾವಾಗಲು ಜನರನ್ನು ಆಕರ್ಷಿಸುತ್ತಿರುತ್ತವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ನನ್ನಷ್ಟೇ ಎತ್ತರದ ಹಾವು ನೋಡಿ ಶಾಕ್ ಆಯ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಆನೇಕಲ್‌ನಲ್ಲೊಂದು ವಿಸ್ಮಯ: ಒಂದೇ ಕೊಂಬೆಗೆ ಸರತಿಯಲ್ಲಿ ಬರುವ ನಾಗರ ಹಾವುಗಳು!

ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ(venomous snake)  ನಾಗರಹಾವು ಒಂದಾಗಿದ್ದು, ಇದು ಅತ್ಯಂತ ಉದ್ದದ ಹಾವು ಕೂಡ ಹೌದು ಒಂದು ವಯಸ್ಕ ನಾಗರಹಾವು 10 ರಿಂದ 12 ಅಡಿ ಉದ್ದ ಮತ್ತು 20 ಪೌಂಡ್ (9 ಕೆಜಿ) ವರೆಗೆ ತೂಗುತ್ತದೆ. ನ್ಯಾಷನಲ್ ಜಿಯಾಗ್ರಫಿಕ್ (National Geographic) ಪ್ರಕಾರ, ಅವುಗಳು ಅಕ್ಷರಶಃ ನೇರವಾಗಿ ಎದ್ದು ನಿಂತು ತಮ್ಮ ಕಣ್ಣಿನಲ್ಲಿ ಪೂರ್ಣವಾಗಿ ಬೆಳೆದ ವ್ಯಕ್ತಿಯನ್ನು ನೋಡಬಹುದು. ಅಲ್ಲದೇ ಅವುಗಳು ಒಂದೇ ಕಡಿತದಲ್ಲಿ ನೀಡಬಹುದಾದ ನ್ಯೂರೋಟಾಕ್ಸಿನ್ (neurotoxin) ವಿಷದ ಪ್ರಮಾಣವು 20 ಜನರನ್ನು ಕೊಲ್ಲಲು ಸಾಕಾಗುವಷ್ಟಿರುತ್ತದೆ. 
 

ಸನಾತನ ಧರ್ಮದಲ್ಲಿ ಹಾವಿನ ಪ್ರಾಮುಖ್ಯತೆ ಅಪಾರವಾಗಿದೆ ಮತ್ತು ಹಾವುಗಳಿಗೆ ಸಂಬಂಧಿಸಿದ ಕಥೆಗಳು ತುಂಬಾ ಆಸಕ್ತಿದಾಯಕವಾಗಿವೆ. ನಾಗಲೋಕ, ಹಾವಿನ ಕತೆಗಳು ಧರ್ಮಗ್ರಂಥಗಳಲ್ಲಿ ಯಥೇಚ್ಛವಾಗಿದ್ದು, ಆಸಕ್ತಿ ಹುಟ್ಟಿಸುತ್ತವೆ. ಇದಲ್ಲದೇ ಸರ್ಪವನ್ನು ದೇವರಾಗಿ ಪೂಜಿಸಲಾಗುತ್ತದೆ. ಶಿವನ ಕೊರಳಲ್ಲಿಯೇ ಹಾವಿದೆ. ವಿಷ್ಣುವಿನ ಪಲ್ಲಂಗವಾಗಿ ಹಾವಿದೆ. ಹಾವಿನ ಹಬ್ಬವಾದ ನಾಗಪಂಚಮಿಯನ್ನು ಕೂಡ ಆಚರಿಸಲಾಗುತ್ತದೆ. ಸರ್ಪಹತ್ಯೆ ಮಾಡಿದರೆ ಅದಕ್ಕೆ ಅಂತ್ಯಸಂಸ್ಕಾರ ಮಾಡುವ ಮಟ್ಟಿಗೆ ಹಾವುಗಳ ಬಗ್ಗೆ ಗೌರವ, ಭಯ, ಭಕ್ತಿ ಇದೆ. 

Latest Videos
Follow Us:
Download App:
  • android
  • ios