Asianet Suvarna News Asianet Suvarna News

ಕಲಬುರಗಿ: ಎಂಎ ರಾಜ್ಯಶಾಸ್ತ್ರ ಪರೀಕ್ಷೆ ಬರೆದ ಮಂಗಳಮುಖಿ..!

ಕಲಬುರಗಿಯ ಅಂಬೇಡ್ಕರ್‌ ಕಾಲೇಜಿನಲ್ಲಿ ತೃತೀಯ ಲಿಂಗಿ ದಿವ್ಯಾ ಯಶಸ್ವಿಯಾಗಿ ಸ್ನಾತಕೋತ್ತರ ಪರೀಕ್ಷೆ ಬರೆದಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಅಂಬೇಡ್ಕರ್‌ ಕಾಲೇಜಿನಲ್ಲಿ ದಿವ್ಯಾ ಕಳೆದ ಸೋಮವಾರ ಎಂಎ (ರಾಜ್ಯಶಾಸ್ತ್ರ) ಅಂತಿಮ ಪರೀಕ್ಷೆ ಯಶಸ್ವಿಯಾಗಿ ಬರೆದರು. 

Transgender who wrote the MA Political Science exam in Kalabuargi grg
Author
First Published Nov 16, 2023, 10:30 PM IST

ಶೇಷಮೂರ್ತಿ ಅವಧಾನಿ

ಕಲಬುರಗಿ(ನ.16): ಸಾಮಾನ್ಯವಾಗಿ ಟ್ರಾಫಿಕ್‌ ಸಿಗ್ನಲ್‌ಗಳಲ್ಲೋ, ರಸ್ತೆ ಇಕ್ಕೆಲಗಳಲ್ಲೋ ಗುಂಪಾಗಿ ನಿಂತು ಹೋಗಿ ಬರೋ ವಾಹನಗಳಿಂದ ಖುಷಿ ರೂಪದಲ್ಲಿ ಹಣ ಕೇಳುವ ಮಂಗಳಮುಖಿ ಸಮೂಹವನ್ನ ನಾವು ನೋಡಿರುತ್ತೇವೆ. ಆದರೆ ಇಂತಹ ತೃತೀಯ ಲಿಂಗಿಗಳ ಗುಂಪಿನಲ್ಲೂ ಉನ್ನತ ಶಿಕ್ಷಣ ಪಡೆದು ಸಾಧನೆ ಹಾದಿಯಲ್ಲಿ ಅನೇಕರು ಸಾಗುತ್ತಿದ್ದಾರೆಂಬ ಮಾತಿಗೆ ಕಲಬುರಗಿಯ ತೃತೀಯ ಲಿಂಗಿ ದಿವ್ಯಾ ಸಾಕ್ಷಿಯಾಗಿದ್ದಾರೆ.

ಕಲಬುರಗಿಯ ಅಂಬೇಡ್ಕರ್‌ ಕಾಲೇಜಿನಲ್ಲಿ ತೃತೀಯ ಲಿಂಗಿ ದಿವ್ಯಾ ಯಶಸ್ವಿಯಾಗಿ ಸ್ನಾತಕೋತ್ತರ ಪರೀಕ್ಷೆ ಬರೆದಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಅಂಬೇಡ್ಕರ್‌ ಕಾಲೇಜಿನಲ್ಲಿ ದಿವ್ಯಾ ಕಳೆದ ಸೋಮವಾರ ಎಂಎ (ರಾಜ್ಯಶಾಸ್ತ್ರ) ಅಂತಿಮ ಪರೀಕ್ಷೆ ಯಶಸ್ವಿಯಾಗಿ ಬರೆದರು. ತೃತೀಯ ಲಿಂಗಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲು ಸುಪ್ರೀಂ ಕೋರ್ಟ್‌ ನೀಡಿದ ಬೆನ್ನಲ್ಲೆ ಇವರಲ್ಲೂ ಶಿಕ್ಷಣ ಪಡೆಯುವ ಹಂಬಲ ಹೆಚ್ಚುತ್ತದೆ ಎನ್ನಲು ಇಲ್ಲಿನ ಬೆಳವಣಿಗೆಯೆ ಕನ್ನಡಿ. ಮಂಗಳಮುಖಿ ಮಹಿಳಾ ಸಮೂಹದಲ್ಲಿನ ಈ ಬೆಳವಣಿಗೆ ಎಲ್ಲರನ್ನೂ ಆಕರ್ಷಿಸಿದೆ. ಕಲಬುರಗಿಯ ಅಂಬೇಡ್ಕರ್‌ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಸ್ನಾತಕೋತ್ತರ ಕೇಂದ್ರವಿದೆ. ಇಲ್ಲಿಯೇ ತೃತೀಯ ಲಿಂಗಿ ದಿವ್ಯಾ ತಮ್ಮ ಎಂಎ ರಾಜ್ಯಶಾಸ್ತ್ರ ಅಂತಿಮ ಪರೀಕ್ಷೆ ಯಶಸ್ವಿಯಾಗಿ ಬರೆದಿದ್ದಾರೆ. ಉಳಿದಂತೆ ಎಲ್ಲರ ಜೊತೆಗೂ ಕುಳಿತು ದಿವ್ಯಾ ಪರೀಕ್ಷೆ ಬರೆದು ಬೆರಗುಗೊಳ್ಳುವಂತೆ ಮಾಡಿದ್ದಾರೆ.

ಕೆಇಎ ಪರೀಕ್ಷಾ ಅಕ್ರಮ: ಕಲಬುರಗಿಯಲ್ಲಿ ಸಿಐಡಿ ಉನ್ನತ ಮಟ್ಟದ ತಂಡದಿಂದ ತನಿಖೆ ಶುರು

ಧುತ್ತರಗಾ ಮೂಲದವರು:

ಜಿಲ್ಲೆಯ ಚಿಂಚೋಳಿ ತಾಲೂಕಿನ ಧುತ್ತರಗಾ ಮೂಲದ ರಾಜಶೇಖರ್‌ ಕಾಲೇಜು ಕಲಿಯುವಾಗಲೇ ದೇಹದಲ್ಲಿನ ಹಾರ್ಮೋನ್‌ ವ್ಯತ್ಯಾಸಗೊಂಡು ಪುರುಷನಾಗಿದ್ದವ ಮಹಿಳೆಯಾಗಿ ಬದಲಾದ. ಕಾಲೇಜಿನ ದಾಖಲೆಗಳಲ್ಲೆಲ್ಲಾ ರಾಜಶೇಖರ್‌ ಎಂದೇ ಹೆಸರು ದಾಖಲಾಗಿದೆ. ಹೀಗಾಗಿ ದಿವ್ಯಾಳನ್ನು ಈಗಲೂ ರಾಜಶೇಖರ್‌ ಎಂದೇ ಗುರುತಿಸಲಾಗುತ್ತದೆ. ಎಂಎ ಮೊದಲ ವರ್ಷ ಪ್ಯಾಂಟ್‌, ಷರ್ಟ್‌ ಹಾಕಿಕೊಂಡೇ ಕಾಲೇಜಿಗೆ ಹಾಜರಾಗುತ್ತಿದ್ದ ರಾಜಶೇಖರ್‌, ಎಂಎ 2 ನೇ ವರ್ಷಕ್ಕೆ ಬಂದಾಗ ದಿವ್ಯಾ ಎಂದು ಬದಲಾದ. ಆಗಲೇ ಈತನ ದೇಹದಲ್ಲಿನ ಹಾರ್ಮೋನ್‌ಗಳು ಹೆಚ್ಚಿನ ಬದಲಾವಣೆ ಕಂಡು ರಾಜಶೇಖರನನ್ನು ದಿವ್ಯಾ ಆಗಿ ಪರಿವರ್ತಿಸಿದ್ದವು.

ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ತವರಿಂದಲೇ ಕೆಇಎ ಪ್ರಶ್ನೆಪತ್ರಿಕೆ ಸೋರಿಕೆ?

ಎಂಎ ಮೊದಲ ವರ್ಷ ಪ್ಯಾಂಟ್‌ ಷರ್ಟ್‌ ಹಾಕಿಕೊಂಡೇ ಎಲ್ಲರೊಂದಿಗೆ ಕಾಲೇಜಿಗೆ ಬಂದು ಹೋಗುತ್ತಿದ್ದ ರಾಜಶೇಖರ್‌ 2 ನೇ ವರ್ಷಕ್ಕೆ ಹೆಣ್ಣಾಗಿ ಪರಿವರ್ತನೆಯಾಗಿರೋದು ಜೊತೆಗಾರ ಸಹಪಾಠಿಗಳಿಗೆ ಅಚ್ಚರಿ ಮೂಡಿಸಿತ್ತು. ಈ ಬದಲಾವಣೆಯನ್ನು ಎಲ್ಲರೂ ಗಮನಿಸಿ ಆತನಿಗೆ ಸಹಕರಿಸಿದ್ದರು.

ಇತರರಿಗೆ ಪ್ರೇರಣೆಯಾದ ದಿವ್ಯಾ:

ಮನೆಯಲ್ಲಿ ನಾನು ತೃತೀಯ ಲಿಂಗಿ ಆಗಿರೋದು ವಿರೋಧಿಸಿದ್ದರು. ಹಾಗಾಗಿ ನಾನು ನನ್ನಂತೆಯೇ ಇರೋ ಸಮುದಾಯ ಸೇರಿಕೊಂಡೆ ಇದೇ ಸಮುದಾಯದಲ್ಲಿದ್ದು ಓದಿ ಮುಂದೆ ಬರಬೇಕೆಂಬ ಛಲದೊದಿಗೆ ಎಂಎ ಪರೀಕ್ಷೆ ಬರೆದಿದ್ದೇನೆ. ಹೆಚ್ಚಿನ ಅಂಕ ಪಡೆದು ಪಾಸಾಗುವೆನೆಂದು ದಿವ್ಯಾ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ರಾಜಶೇಖರ್‌ ಹೋಗಿ ದಿವ್ಯಾ ಎಂದು ತೃತೀಯ ಲಿಂಗಿಯಾಗಿ ಪರಿವರ್ತನೆಯಾದರೂ ಆ್ಮವಿಶ್ವಾಸ ಬಿಟ್ಟುಕೊಡದಂತೆ ತನ್ನ ಉನ್ನತ ಶಿಕ್ಷಣ ಮುಂದುವರಿಸಿರುವ ಈ ಮಂಗಳಮುಖಿ ತಮ್ಮ ಸಮುದಾಯದ ಇತರರಿಗೆ ಪ್ರೇರಣೆಯಾಗಿದ್ದಾರೆ.

Follow Us:
Download App:
  • android
  • ios