Asianet Suvarna News Asianet Suvarna News

100ಕ್ಕೂ ಅಧಿಕ ಹಳೆಯ ಸೈಕಲ್‌ ಸಂಗ್ರಹಿಸಿ ರಿಪೇರಿ ಮಾಡಿ ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳಿಗೆ ಹಂಚಿದ ಶಾಲಾ ಬಾಲಕರು 

ಹಳೆಯ ಸೈಕಲ್‌ಗಳನ್ನು ಸಂಗ್ರಹಿಸಿ, ರಿಪೇರಿ ಮಾಡಿ ಪುನಃ ಬಣ್ಣ ಬಳಿಯುವ ವಿದ್ಯಾರ್ಥಿಗಳ ಉಪಕ್ರಮದ ನಂತರ ಕೇರಳ ವಿಧಾನಸಭೆಯ ಸ್ಪೀಕರ್ ಎ.ಎನ್. ಶಂಸೀರ್ ಅವರು ನೆರೆಹೊರೆಯ ಶಿಕ್ಷಣ ಸಂಸ್ಥೆಗಳ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಸೈಕಲ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

this kerala school students collected over 100 old cycles fixed them and distributed to friends ash
Author
First Published Jun 7, 2023, 12:24 PM IST

ತಿರುವನಂತಪುರಂ (ಜೂನ್ 7, 2023): ಸಾಮಾನ್ಯವಾಗಿ ದೇಶದ ಹಲವು ರಾಜ್ಯಗಳಲ್ಲಿ ಜೂನ್ 1 ರಂದು ಶಾಲೆಗಳು ಪ್ರಾರಂಭವಾಗುತ್ತವೆ. ಇದೇ ರೀತಿ, ಇತ್ತೀಚೆಗೆ ಹೊಸ ಶೈಕ್ಷಣಿಕ ವರ್ಷಕ್ಕೆ ಶಾಲೆಗಳು ಪುನರಾರಂಭಗೊಂಡಾಗ, ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರಿನ ಶೆಣೈ ಸ್ಮಾರಕ ಹೈಯರ್ ಸೆಕೆಂಡರಿ ಶಾಲೆಯ ಹಲವು ವಿದ್ಯಾರ್ಥಿಗಳ ಖುಷಿಗೆ ಪಾರವೇ ಇರಲಿಲ್ಲ. ಅವರು ತಮ್ಮ ಕನಸಿನ ಸೈಕಲ್‌ಗಳನ್ನು ತಮ್ಮ ಸ್ವಂತ ಸ್ನೇಹಿತರು ಮತ್ತು ಸಹಪಾಠಿಗಳಿಂದ ಉಡುಗೊರೆಯಾಗಿ ಪಡೆದರು. 

ಹೌದು, ಹಳೆಯ ಸೈಕಲ್‌ಗಳನ್ನು ಸಂಗ್ರಹಿಸಿ, ರಿಪೇರಿ ಮಾಡಿ ಪುನಃ ಬಣ್ಣ ಬಳಿಯುವ ವಿದ್ಯಾರ್ಥಿಗಳ ಉಪಕ್ರಮದ ನಂತರ ಕೇರಳ ವಿಧಾನಸಭೆಯ ಸ್ಪೀಕರ್ ಎ.ಎನ್. ಶಂಸೀರ್ ಅವರು ನೆರೆಹೊರೆಯ ಶಿಕ್ಷಣ ಸಂಸ್ಥೆಗಳ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಸೈಕಲ್‌ಗಳನ್ನು ಉಡುಗೊರೆಯಾಗಿ ನೀಡಿದರು. SMHSS ನಲ್ಲಿ ಬೇಸಿಗೆ ರಜೆಯ ಸಮಯದಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಶಿಬಿರದಿಂದ 'ಮರುಬಳಕೆ' ಎಂಬ ಅಭಿಯಾನವು ಹೊರಹೊಮ್ಮಿದ್ದು, ಈ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳು ಹಳೆಯ, ಹಾಳಾದ ಸೈಕಲ್‌ಗಳನ್ನು ರಿಪೇರಿ ಮಾಡಿ, ಮತ್ತೆ ಪೇಂಟ್‌ ಮಾಡಿ ಅಂದ ಚೆಂದ ನೀಡಿದ್ದಾರೆ. 

ಇದನ್ನು ಓದಿ: 50 ಲಕ್ಷ ಮೌಲ್ಯದ ಕಾರು ಖರೀದಿಸಿದ್ದಕ್ಕೆ ಕಮ್ಯುನಿಸ್ಟ್‌ ನಾಯಕನ ವಿರುದ್ಧವೇ ತಿರುಗಿಬಿದ್ದ ಪಕ್ಷ: ತನಿಖೆ ಆರಂಭ

ಈ ಶಿಬಿರದ ಸಮಯದಲ್ಲಿ, ಮೊದಲು ವಿದ್ಯಾರ್ಥಿಗಳು ಮರುಬಳಕೆಯ ಕಾಗದ ಮತ್ತು ಇತರ ವಸ್ತುಗಳಿಂದ ಕೆಲವು ಕರಕುಶಲ ಇತ್ಯಾದಿಗಳನ್ನು ತಯಾರಿಸಿದರು. ನಂತರ ನಾನು ಹಳೆಯ ಸೈಕಲ್‌ಗಳನ್ನು ಮರುಬಳಕೆ ಮಾಡಲು ಯೋಚಿಸಿದೆ. ಏಕೆಂದರೆ ಈ ಶಿಬಿರದ ಥೀಮ್‌ ‘ಮರುಬಳಕೆ ಮತ್ತು ದುರಸ್ತಿ’ ಎಂದು SMHSS ನಲ್ಲಿ ಶಿಕ್ಷಕ ಮತ್ತು SPC-ಇನ್‌ಚಾರ್ಜ್‌ನ ಸಿವಿ ರಾಜು ಈ ಉಪಕ್ರಮದ ಬಗ್ಗೆ ತಿಳಿಸಿದ್ದಾರೆ.

ಈ ಹಿನ್ನೆಲೆ ಪಯ್ಯನೂರು ಮತ್ತು ಸುತ್ತಮುತ್ತಲಿನ ಮನೆಗಳಿಂದ ಹಳೆಯ ಮತ್ತು ತಿರಸ್ಕರಿಸಿದ ಸೈಕಲ್‌ಗಳನ್ನು ಸಂಗ್ರಹಿಸಿ, ಅವುಗಳನ್ನು ರಿಪೇರಿ ಮಾಡಿ ತಮ್ಮ ಮಕ್ಕಳಿಗೆ ಸೈಕಲ್‌ ಖರೀದಿಸಲು ಸಾಧ್ಯವಾಗದ ಕುಟುಂಬಗಳ ವಿದ್ಯಾರ್ಥಿಗಳಿಗೆ ವಿತರಿಸುವುದು ಇದರ ಉದ್ದೇಶವಾಗಿತ್ತು ಎಂದೂ ತಿಳಿದುಬಂದಿದೆ. ನಮ್ಮ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆಗೆ ಪ್ರಯಾಣಿಸಲು ಸೈಕಲ್‌ಗಳನ್ನು ಬಳಸುತ್ತಾರೆ. ನಮ್ಮ ಕೆಲವು ವಿದ್ಯಾರ್ಥಿಗಳು ತಮ್ಮದೇ ಆದ ಸೈಕಲ್ ಹೊಂದಲು ಕನಸು ಕಂಡಿದ್ದಾರೆ ಎಂದು ನಮಗೆ ತಿಳಿದಿತ್ತು, ಆದರೆ ಅದನ್ನು ಹೊಂದಲು ಸಾಧ್ಯವಿರಲಿಲ್ಲ. ಆದ್ದರಿಂದ ನಾವು ಅವರಿಗೆ ಸೈಕಲ್‌ ನೀಡಿದರೆ ಅದು ಉತ್ತಮ ಸಹಾಯವಾಗುತ್ತದೆ ಎಂದು ತಿಳಿದು ಇದನ್ನು ಮಾಡಿದೆವು ಎಂದೂ ಹೇಳಿದ್ದಾರೆ. 

ಇದನ್ನೂ ಓದಿ: ತಂಗಿ ಸೈಕಲ್‌ನಿಂದ ಕೆಳಕ್ಕೆ ಬೀಳದಿರಲೆಂದು ಅಣ್ಣನ ಪ್ರಯತ್ನ ನೋಡಿ: ವಿಡಿಯೋ ವೈರಲ್‌..!

ಶಾಲಾ ಆಡಳಿತ ಮಂಡಳಿ ಹಾಗೂ ಪಿಟಿಎ ಹಸಿರು ನಿಶಾನೆ ತೋರಿದ ಬಳಿಕ ‘ಮರುಬಳಕೆ’ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. "ನಾವು ಈ ಅಭಿಯಾನದ ಮೂಲಕ ಸುಮಾರು 20 ಸೈಕಲ್‌ಗಳನ್ನು ಸಂಗ್ರಹಿಸಲು ಆಶಿಸಿದ್ದೆವು. ಆದರೆ ನಾವು ಸಾಮಾಜಿಕ ಮಾಧ್ಯಮದಲ್ಲಿ ಉಪಕ್ರಮದ ಬಗ್ಗೆ ಪೋಸ್ಟ್ ಮಾಡಿದ ಕೆಲವೇ ಗಂಟೆಗಳ ನಂತರ ಮತ್ತು ನಮ್ಮ ಸ್ನೇಹಿತರಲ್ಲಿ ಪ್ರಚಾರ ಮಾಡಿದ ಕೆಲವೇ ಗಂಟೆಗಳ ನಂತರ, ನಮಗೆ ಹಲವಾರು ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದವು. ಮೂರು ದಿನಗಳಲ್ಲಿ, ನಾವು ಕೇವಲ ಪಯ್ಯನೂರಿನಿಂದ ಮಾತ್ರವಲ್ಲದೆ ಕಣ್ಣೂರು ಜಿಲ್ಲೆಯ ಇತರ ಭಾಗಗಳಿಂದ ಮತ್ತು ನೆರೆಯ ಕಾಸರಗೋಡಿನಿಂದ ನೂರಕ್ಕೂ ಹೆಚ್ಚು ಕರೆಗಳು ಮತ್ತು ಸಂದೇಶಗಳು ಬಂದವು, ಆದ್ದರಿಂದ ನಾವು ಹೆಚ್ಚಿನ ಕೊಡುಗೆಗಳನ್ನು ಸ್ವೀಕರಿಸುವುದನ್ನು ಮುಚ್ಚಬೇಕಾಯಿತು" ಎಂದು ರಾಜು ಹೇಳಿದರು.

ಮುಂದಿನ ದಿನಗಳಲ್ಲಿ, ವಿದ್ಯಾರ್ಥಿಗಳು ಹಿತೈಷಿಗಳು ನೀಡಿದ ವಾಹನದಲ್ಲಿ ಕಣ್ಣೂರು ಮತ್ತು ಕಾಸರಗೋಡು ಸುತ್ತಿ ಎಲ್ಲಾ ಸೈಕಲ್‌ಗಳನ್ನು ಸಂಗ್ರಹಿಸಿ ಮತ್ತೆ ಶಾಲಾ ಸಭಾಂಗಣಕ್ಕೆ ತಂದು ಮಿನಿ ಸೈಕಲ್ ಫ್ಯಾಕ್ಟರಿಯನ್ನಾಗಿ ಮಾಡಿದರು. ಅನುಭವಿ ಸೈಕಲ್ ಮೆಕ್ಯಾನಿಕ್‌ನ ಸಹಾಯದಿಂದ ಶಿಬಿರದ ಭಾಗವಾಗಿದ್ದ ಎಸ್‌ಪಿಸಿಯ ಸುಮಾರು 44 ವಿದ್ಯಾರ್ಥಿಗಳು ಸೈಕಲ್ ರಿಪೇರಿ ಮಾಡುವುದನ್ನು ಕಲಿತರು ಎಂದೂ ತಿಳಿದುಬಂದಿದೆ. ಈ ಮಧ್ಯೆ, ಈ ಶಿಬಿರದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು ಸಹ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಏಕಾಂಗಿಯಾಗಿ ಬೈಕ್ ಸವಾರಿ ಮುಗಿಸಿದ ದೃಷ್ಟಿಹೀನ ಪ್ರಸನ್ನಕುಮಾರ್

Follow Us:
Download App:
  • android
  • ios