ಮೂವರು ಶಿಕ್ಷಕಿಯರ ಜಗಳಕ್ಕೆ ಹೆದರಿ ಶಾಲೆ ತ್ಯಜಿಸಿದ 37 ವಿದ್ಯಾರ್ಥಿಗಳು!
ಶಿಕ್ಷಕರ ಜಗಳದಿಂದ ಬೇಸತ್ತ ವಿದ್ಯಾರ್ಥಿಗಳ ಪೋಷಕರು ಮಕ್ಕಳನ್ನು ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದು, ವಿದ್ಯಾರ್ಥಿಗಳಿಲ್ಲದೆ ಶಾಲೆಯೇ ಖಾಲಿಯಾದ ವಿದ್ಯಮಾನ ದ.ಕ. ಜಿಲ್ಲೆ ಬೆಳ್ತಂಗಡಿ ತಾಲೂಕು ಸೋಣಂದೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಬೆಳ್ತಂಡಗಿ (ಜು.4) : ಶಿಕ್ಷಕರ ಜಗಳದಿಂದ ಬೇಸತ್ತ ವಿದ್ಯಾರ್ಥಿಗಳ ಪೋಷಕರು ಮಕ್ಕಳನ್ನು ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದು, ವಿದ್ಯಾರ್ಥಿಗಳಿಲ್ಲದೆ ಶಾಲೆಯೇ ಖಾಲಿಯಾದ ವಿದ್ಯಮಾನ ದ.ಕ. ಜಿಲ್ಲೆ ಬೆಳ್ತಂಗಡಿ ತಾಲೂಕು ಸೋಣಂದೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಸುಮಾರು 75 ವರ್ಷದ ಇತಿಹಾಸ ಇರುವ ಮಾಲಾಡಿ ಗ್ರಾ.ಪಂ. ವ್ಯಾಪ್ತಿಯ ಸೋಣಂದೂರು ದ.ಕ. ಜಿ.ಪಂ. ಹಿ.ಪ್ರಾ.ಶಾಲೆಯಲ್ಲಿ 1ರಿಂದ 7ನೇ ತರಗತಿ ತನಕ 37 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಈ ಶಾಲೆಯ ಮೂವರು ಶಿಕ್ಷಕಿಯರು ವಿದ್ಯಾರ್ಥಿಗಳ ಎದುರೇ ಬಹಿರಂಗವಾಗಿ ಆಗಾಗ ಜಗಳವಾಡುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ. ಶಿಕ್ಷಕಿಯರ ಜಗಳದಿಂದ ಬೇಸತ್ತು ಪೋಷಕರು ತಮ್ಮ ಮಕ್ಕಳನ್ನು ಅಕ್ಕಪಕ್ಕದ ಸರ್ಕಾರಿ, ಖಾಸಗಿ ಶಾಲೆಗಳಿಗೆ ಸೇರಿಸಿದ್ದಾರೆ.
ಶಾಲೆಯನ್ನು ಒಂದು ವರ್ಷದಿಂದ ದತ್ತು ಪಡೆದಿರುವ ಮಂಗಳೂರಿನ ಅರವಿಂದ್ ವಿವೇಕ್ ¶ೌಂಡೇಶನ್ ಶಾಲೆಯ ಅಭಿವೃದ್ಧಿ ಕಡೆ ಗಮನ ಹರಿಸಿತ್ತು. ¶ೌಂಡೇಶನ್‌ನಿಂದ ಶಾಲೆಗೆ ಇಬ್ಬರು ಶಿಕ್ಷಕಿಯರನ್ನು ನೀಡಲಾಗಿತ್ತು. ಈ ಶಿಕ್ಷಕಿಯರ ಜೊತೆಗೂ ಶಾಲೆಯ ಮೂವರು ಶಿಕ್ಷಕಿಯರು ಜಗಳ ನಡೆಸುತ್ತಿದ್ದರು ಎನ್ನಲಾಗಿದೆ. ಈಗ ಮಕ್ಕಳಿಲ್ಲದೆ ಶಾಲೆ ಭಣಗುಡುತ್ತಿದ್ದು, ತರಗತಿಗಳೆಲ್ಲವೂ ಸಂಪೂರ್ಣ ಖಾಲಿ ಖಾಲಿಯಾಗಿವೆ.
ವಿದ್ಯಾರ್ಥಿಗಳಲ್ಲೂ ಹೆಚ್ಚುತ್ತಿದೆ ಸ್ಟ್ರೆಸ್ ಲೆವೆಲ್, ಸೊಲ್ಯೂಷನ್ ಏನು?