Asianet Suvarna News Asianet Suvarna News

ವಿದ್ಯಾರ್ಥಿಗಳಲ್ಲೂ ಹೆಚ್ಚುತ್ತಿದೆ ಸ್ಟ್ರೆಸ್ ಲೆವೆಲ್, ಸೊಲ್ಯೂಷನ್ ಏನು?

ಓದಿ, ಕೆಲಸಕ್ಕೆ ಸೇರಿ ಬೆಳೆಯ ಬೇಕಾದ ಮಕ್ಕಳಲ್ಲಿ Stress Level ಹೆಚ್ಚುತ್ತಲೇ ಇದೆ. ಒತ್ತಡ ತಾಳಲಾರದೇ ಹೃದಯ ಸಂಬಂಧ ಕಾಯಿಲೆಯಿಂದ ಹಿಡಿದು, ಬೇರೆ ಬೇರೆ Lifestyle related dieasesನಿಂದ ಮಕ್ಕಳು ಬಳಲುತ್ತಿರುವುದು ದುರಂತ. 

mental stress increased among bengaluru students college management should have solution
Author
First Published Jun 29, 2023, 4:19 PM IST | Last Updated Jun 29, 2023, 4:19 PM IST

- ನಿಧಿ ಸುನಿಲ್, ಕ್ರಿಸ್ಟ್ ವಿಶ್ವವಿದ್ಯಾನಿಲಯ

ಇತ್ತೀಚಿಗೆ ಮಾನಸಿಕ ಆರೋಗ್ಯದ ವಿಚಾರಕ್ಕೆ ವಿಶ್ವವೇ ಚಿಂತಿತವಾಗಿದೆ. ಕಾಲೇಜು ವಿದ್ಯಾರ್ಥಿಗಳಲ್ಲೂ ಮಾನಸಿಕ ತುಮುಲ ಹೆಚ್ಚುತ್ತಿರುವುದು ಚಿಂತಿಸುವಂತೆ ಮಾಡಿದೆ. ಭಾರತದಲ್ಲಿ ಶಿಕ್ಷಣ ಮತ್ತು ತಾಂತ್ರಿಕತೆಗೆ ಹೆಸರು ಮಾಡಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಅನೇಕ ಪ್ರತಿಷ್ಠಿತ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿವೆ. ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ ಹಾಗೂ ಕಾಯಿಲೆಗೆ ಈ ಉದ್ಯಾನ ನಗರಿಯೂ ಚಿಂತಿತವಾಗಿದ್ದು, ಅದರತ್ತ ಗಮನ ಹರಿಸಲು ಆರಂಭಿಸಿದೆ. ಕಾಲೇಜು ವಿದ್ಯಾರ್ಥಿಗಳು ಎದುರಿಸುವ ಕಷ್ಟಗಳಿಗೆ ಪರಿಹಾರ ಸೂಚಿಸಲು ಶಾಲಾ ಕಾಲೇಜುಗಳು ಮುಂದಾಗಿರುವುದು ಅತ್ಯುತ್ತಮ ಬೆಳವಣಿಗೆ.

• ವಿದ್ಯಾಭ್ಯಾಸದ ಒತ್ತಡ (Education Stress):
ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳು ಅಕಾಡೆಮಿಕ್ ಒತ್ತಡಕ್ಕೆ ಒಳಗಾಗೋದು ಹೆಚ್ಚುತ್ತಿದೆ. ನಗರದ ಸ್ಪರ್ಧಾತ್ಮಕ ವಾತಾವರಣ (Competative Atmoshpere), ತೆರೆದುಕೊಳ್ಳುತ್ತಿರುವ ಅನೇಕ ಅವಕಾಶಗಳು, ಕಠಿಣ ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ವಿಚಲಿತರಾಗುವುದು ಹೆಚ್ಚುತ್ತಿದೆ. ಅಕಾಡೆಮಿಕ್ ಉನ್ನತಿಗೆ ಗಮನ ಹರಿಸೋ ಜೊತೆಗೆ, ಶಿಕ್ಷಣದಿಂದ ವಿಚಲಿತರಾಗೋ ಮಕ್ಕಳ ಮನಸ್ಸನ್ನು ಒಂದೆಡೆಗೆ ಹಿಡಿದುಕೊಳ್ಳುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ. 

•ಬದಲಾವಣೆ:
ಕಾಲೇಜು ಜೀವನ ವಿದ್ಯಾರ್ಥಿಯ ಜೀವನದ ಮುಖ್ಯ ಬದಲಾವಣೆಯ ಕಾಲ. ಅನೇಕರಿಗೆ ಮನೆಯಿಂದ ದೂರವಾಗಿ, ಹೊಸ ಸಾಮಾಜಿಕ ಬದುಕಿಗೆ ಹೊಂದಿಕೊಳ್ಳುವ ಸಮಯವಿದು. ರಿಸ್ಟ್ರಿಕ್ಟೆಡ್ ಪರಿಸರದಿಂದ, ಒಮ್ಮೆಯೇ ಸಿಗುವ ಸ್ವಾತಂತ್ರ್ಯವನ್ನು ನುಭವಿಸುವ ಕಲೆ ವಿದ್ಯಾರ್ಥಿಗಳಿಗೆ ಗೊತ್ತಿರಬೇಕು. ಇದಕ್ಕೆ ಮಕ್ಕಳು ಬೆಳೆದ ವಾತಾವರಣ, ಮನೆಯಲ್ಲಿ ಪೋಷಕರ ಸಂಬಂಧ ಸೇರಿ ಹಲವು ವಿಷಯಗಳು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಬೇರೆಡೆಗೆ ಸೆಳೆಯುವ ಮನಸ್ಸನ್ನು ಹಿಡಿದಿಡಬೇಕು. 

International Joke Day : ಚೆಂದದೊಂದು ಜೋಕ್ ಹೇಳಿದರೂ ನಗು ಬರೋಲ್ಲ ಅಂದ್ರೆ, ಏನೋ ಪ್ರಾಬ್ಲಂ ಇಂದೆ ಎಂದರ್ಥ

•ಆರ್ಥಿಕ ಭಾರ:
ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೋದು ಹಿರಿಯರು ಹೇಳುವ ಮಾತು. ಆದರೆ, Peer Pressure ಅನ್ನೋದು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತೆ. ಸ್ನೇಹಿತರ ಹತ್ತಿರ ಹಯಾಬೂಸಾ ಬೈಕಿದೆ ಇದೆ. ನಂಗೂ ಬೇಕೆಂದು ಪೋಷಕರ ಮೇಲೆ ಒತ್ತಡ ಹಾಕೋ ಮಕ್ಕಳಿಗೆ ತಮ್ಮ ಮನೆಯ ಆರ್ಥಿಕ ಪರಿಸ್ಥಿತಿಯ ಅರಿವು ಇರೋದಿಲ್ಲ. ಹೋಗಲಿ ಈ ಬಗ್ಗೆ ಅಪ್ಪ ಹೇಳಿದರೂ ಒಪ್ಪಿಕೊಳ್ಳುವ ಮನಸ್ಥಿತಿ ಇರೋಲ್ಲ. ಬಯಸಿದ್ದು ತಕ್ಷಣವೇ ಫ್ರೆಂಡ್ಸ್‌ಗೆ ಸಿಗುತ್ತೆ, ನನಗೂ ಸಿಗಬೇಕೆಂಬ ಹಠ ಮಕ್ಕಳನ್ನುತಪ್ಪು ದಾರಿಯತ್ತ ಎಳೆಯುತ್ತಿದೆ. ಇದೇ ಅವರಿಗೆ ಒತ್ತಡ ಹೆಚ್ಚುವಂತೆ ಮಾಡುವುದಲ್ಲದೇ, ಮಾನಸಿಕ ತೊಳಲಾಟದಿಂದ ಬಳಲುವಂತೆ ಮಾಡುತ್ತದೆ. ಇಂಥ ಮಕ್ಕಳಿಗೆ ಶಿಕ್ಷಣದ ಮಹತ್ವ ಹೇಳುವ ಜೊತೆಗೆ, ಪ್ರತಿಭೆಗೆ ತಕ್ಕಂತೆ ಯಾವುದಾದರೂ ಪ್ರೋತ್ಸಾಹ ದನ ನೀಡಿದರೆ ಸಮಸ್ಯೆಗೆ ಪರಿಹಾರವಾಗಬಲ್ಲದು. 

•ಸಾಮಾಜಿಕ ಒತ್ತಡ ಮತ್ತು ಸ್ನೇಹಿತರು:
ಕಾಲೇಜುಗಳಲ್ಲಿನ ಸಾಮಾಜಿಕ ಪರಿಸರ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಗಾಢ ಪರಿಣಾಮ ಬೀರಬಹುದು. ಬೆಂಗಳೂರಿನ ಕಾಲೇಜುಗಳು ವಿವಿಧ ಹಿನ್ನೆಲೆಗಳಿಂದ, ಸಂಸ್ಕೃತಿಗಳಿಂದ ಮತ್ತು ಪ್ರದೇಶಗಳಿಂದ ಬಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. ಈ ಸಾಮಾಜಿಕ ಮತ್ತು ಸಾಂಸ್ಕೃತಿ ವೈವಿಧ್ಯತೆ  ಒತ್ತಡ  ಹೆಚ್ಚಿಸುವ ಜೊತೆಗೆ, ವಿದ್ಯಾರ್ಥಿಗಳು ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುವಂತೆ ಮಾಡುವ ಸಾಧ್ಯತೆಯೂ ಇರುತ್ತದೆ. ವಿದ್ಯಾರ್ಥಿಗಳಿಗೆ ಆತ್ಮೀಯ ಸಂಪರ್ಕ ಕಲ್ಪಿಸಲು ಅನುವು ಮಾಡಿಕೊಡುವುದು ಕಾಲೇಜು ಆಡಳಿತ ಮಂಡಳಿಗಳ ಕರ್ತವ್ಯ. ಮಾತುಕತೆಗಾಗಿ ನೆಟ್ವರ್ಕ್‌ಗಳನ್ನು ಸ್ಥಾಪಿಸುವುದು ಅವಶ್ಯಕ.

Mental Health Tips: ವೃದ್ಧಾಪ್ಯ ಚೆನ್ನಾಗಿರ್ಬೇಕು ಅಂದ್ರೆ ಯವೌನದ ಈ ಗುಣಗಳನ್ನ ಬಿಡ್ಲೇ ಬೇಕು

•ಆಸಕ್ತಿ ಇರೋ ಚಟುವಟಿಕೆಗಳಲ್ಲಿ ಭಾಗವಹಿಸೋದು:
ಆಸಕ್ತಿ ಇರೋ ಕ್ರಿಯಾ ಚಟುವಟಿಕೆಗಳಲ್ಲಿ ನಿರತರಾಗುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಸ್ವಂತ-ಆರೋಗ್ಯಕ್ಕೆ ಗಮನ ಕೊಡದೇ, ಹೊಸತು ಪಡೆಯಲು ಹೆಣಗುತ್ತಾರೆ. ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು, ದೈಹಿಕ ಚಟುವಟಿಕೆಗಳಲ್ಲಿಯೂ ತೊಡಗಿಕೊಳ್ಳುವುದು ಅನಿವಾರ್ಯ. ಆದ್ದರಿಂದ ಅಗತ್ಯಕ್ಕೆ ತಕ್ಕಂತೆ ಸೂಕ್ತ ಪರಿಸರ ಸೃಷ್ಟಿಸಬೇಕು. ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಫಿಸಿಕಲ್ ಆ್ಯಕ್ಟಿವಿಟಿ‌ಗಳಲ್ಲಿ ಪಾಲ್ಗೊಳ್ಳಲೇಬೇಕೆಂಬ (Physical Activity) ಪದ್ಧತಿ ಜಾರಿಯಾದರೆ, ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಸೂಕ್ತ ಪರಿಸರ ಒದಗಿಸದಂತಾಗುತ್ತದೆ. 

•ಮಾನಸಿಕ ಆರೋಗ್ಯಕ್ಕೆ ಒತ್ತು:
ಯಾವ ಹುತ್ತದ ಯಾವ ಹಾವಿರುತ್ತೆ ಅಂತ ಹೇಳುವುದು ಕಷ್ಟ. ಮಕ್ಕಳನ್ನು ಅದರಲ್ಲಿಯೂ ಕಾಲೇಜು ವಿದ್ಯಾರ್ಥಿಗಳನ್ನು ಕಾಡುವ ಮಾನಸಿಕ ಒತ್ತಡ, ತುಮುಲಗಳೇನು? ಅದಕ್ಕೇನು ಕಾರಣವೆಂದು ಊಹಿಸುವುದು ಕಷ್ಟದ ಕೆಲಸ. ಅದಕ್ಕೆ ಆಗತ್ಯ ಪೂರಕ ಸಾಧನಗಳನ್ನು ಬಳಸಬೇಕು. ಅಲ್ಲದೇ ಸೂಕ್ತ ಚಟುವಟಿಕೆಗಳ ಮೂಲಕ ಮಕ್ಕಳ ಮನಸ್ಸನ್ನು ಅರಿಯುವ ಪ್ರಯತ್ನದೊಂದಿಗೆ, ಅವರ ಭವಿಷ್ಯ ಉಜ್ವಲವಾಗಲು ಆಗತ್ಯವಿರುವ ನೆರವು ನೀಡುವುದು ಶಿಕ್ಷಣ ಸಂಸ್ಥೆಗಳ ಆದ್ಯತೆಯಾಗಬೇಕು. 

Mental Health Tips: ಆತಂಕದ ಸಮಸ್ಯೆಯೇ? ಆತಂಕ ಬೇಡ, ದಿನವೂ ಆರೇ ಕೆಲಸ ಮಾಡಿ ಆರಾಮಾಗಿರಿ

ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೇನು ತಲೆ ನೋವಿರುತ್ತೆ? ಎಂಬ ಉಡಾಫೆಯೊಂದಿಗೆ ಮಕ್ಕಳ ಮನಸ್ಸನ್ನು ಅರಿಯುವ ಪ್ರಯತ್ನವೇ ಮಾಡದೇ ಹೋದರೆ ಭವಿಷ್ಯದಲ್ಲಿ ಸಮಾಜವೇ ಮಾನಸಿಕ ರೋಗಿಗಳ (Mental Patients) ಆಸ್ಪತ್ರೆ ಆದಂತೆ ಆಗುವುದರಲ್ಲಿ ಅನುಮಾನವೇ ಇಲ್ಲ. ಮುಗ್ಧತೆ ಉಳಿಸಿಕೊಳ್ಳುವುದರೊಂದಿಗೆ ಮಾನಸಿಕ, ದೈಹಿಕ ಆರೋಗ್ಯದ ಕಡೆ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸುವಂತೆ ಮಾಡಬೇಕು. ಅಲ್ಲದೇ ಬೆಂಗಳೂರಿನಂಥ ನಗರಗಳಲ್ಲಿ ದಾರಿ ತಪ್ಪುವ ಸಾಧ್ಯತೆಗಳೂ ಹೆಚ್ಚಿದ್ದು, ವಿದ್ಯಾರ್ಥಿಗಳಿಗೆ ಅತ್ಯುತ್ತಮ ವಾತಾವರಣ ಒದಗಿಸುವ ಹೊಣೆ ಶಿಕ್ಷಣ ಸಂಸ್ಥೆಗಳದ್ದು. ಆಗ ಮಾತ್ರ ಸ್ವಸ್ಥ ಸಮಾಜದ ಕನಸು ನನಸಾಗುತ್ತದೆ. ಮಕ್ಕಳೂ ತಮ್ಮ ಕಾಲೇಜು ಜೀವನವನ್ನು ಖುಷ್ ಖುಷಿಯಾಗಿ ಕಳೆಯುತ್ತಾರೆ. ಭವಿಷ್ಯವೂ ಆರೋಗ್ಯವಾಗಿರುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

Latest Videos
Follow Us:
Download App:
  • android
  • ios