ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 9 ವರ್ಷದ ಬಾಲಕಿಗೆ ಶಾಲಾ ಶಿಕ್ಷಕಿ ಬಾಸುಂಡೆ ಬರುವಂತೆ ಥಳಿಸಿದ್ದು, ಈಗ ಬಾಲಕಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಚಿಂತಾಮಣಿ ನಗರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ (ಜೂ.16) : ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 9 ವರ್ಷದ ಬಾಲಕಿಗೆ ಶಾಲಾ ಶಿಕ್ಷಕಿ ಬಾಸುಂಡೆ ಬರುವಂತೆ ಥಳಿಸಿದ್ದು, ಈಗ ಬಾಲಕಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಚಿಂತಾಮಣಿ ನಗರದಲ್ಲಿ ನಡೆದಿದೆ.

ಚಿಂತಾಮಣಿ ನಗರದ ಸೆಲ್‌ ಪೆಟ್ರೋಲ್‌ ಬಂಕ್‌ ಹಿಂಭಾಗ ಇರುವಂತಹ ಪ್ರೀತಿ ಪಬ್ಲಿಕ್‌ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದಂತಹ ಬಾಲಕಿ ಟೆಸ್ಟ್‌ ನಲ್ಲಿ ಉತ್ತಮ ಅಂಕ ಪಡೆದಿಲ್ಲ ಎಂಬ ಕಾರಣಕ್ಕೆ ಗುರುವಾರ ಶಾಲಾ ಶಿಕ್ಷಕಿ ಬಾಲಕಿಯ ಕೈ, ಕಾಲು, ಬೆನ್ನಿನ ಮೇಲೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ.

ಕಿಟಕಿ ವಿಚಾರಕ್ಕೆ ಜಗಳ: ಶಾಲೆಯ ಮುಖ್ಯ ಶಿಕ್ಷಕಿಗೆ ಚಪ್ಪಲಿ, ಕೋಲಿನಿಂದ ಥಳಿಸಿದ ಶಿಕ್ಷಕಿಯರು!

ಶಿಕ್ಷಕಿ ತಳಿಸಿದ ವಿಚಾರನ್ನು ಬಾಲಕಿ ಪೋಷಕರಿಗೆ ತಿಳಿಸಿದ್ದಾಳೆ. ಈ ಹಿಂದೆ ಸಹಾ ಇದೇ ಬಾಲಕಿಗೆ ಈ ರೀತಿ ತಳಿಸಿದ ಬಗ್ಗೆ ಶಾಲೆಯ ಆಡಳಿತ ಮಂಡಳಿಗೆ ದೂರು ನೀಡಲಾಗಿತ್ತು. ಆದರೆ ಮತ್ತೆ ಅದೇ ಘಟನೆ ಮರುಕಳಿಸಿದೆ. ಶಾಲೆಯ ಶಿಕ್ಷಕಿಯ ನಡುವಳಿಕೆಗೆ ಬಾಲಕಿಯ ತಂದೆ ದಯಾನಂದ ಬೇಸರ ವ್ಯಕ್ತಪಡಿದ್ದಾರೆ. ಈಗ ಶಾಲೆಗೆ ಭೇಟಿ ಕೊಟ್ಟು ಸಹಾಯಕ ಪ್ರಿನ್ಸಿಪಾಲ್‌ ಗಮನಕ್ಕೆ ವಿಷಯ ತಂದಿದ್ದಾರೆ. ಆದರೆ ಬಾಲಕಿ ಸುಸ್ತಾಗಿರುವ ಹಿನ್ನೆಲೆಯಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಚಿಂತಾಮಣಿ ನಗರ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.