Asianet Suvarna News Asianet Suvarna News

Bicycle turned into e Bike: ಸಹೋದರಿಯ ಸೈಕಲ್‌ ಇ-ಬೈಕನ್ನಾಗಿಸಿದ ತಮಿಳುನಾಡು ವಿದ್ಯಾರ್ಥಿ

* ತಮಿಳು ನಾಡು ವಿದ್ಯಾರ್ಥಿಯ ವಿಶಿಷ್ಟ ಸಾಧನೆಗೆ ಎಲ್ಲರಿಂದಲೂ ವ್ಯಾಪಕ ಮೆಚ್ಚುಗೆ
*ಸಹೋದರಿಯ ಸೈಕಲ್ ಅನ್ನು ಇ ಬೈಕ್ ಆಗಿ ಅಭಿವೃದ್ಧಿಪಡಿಸಿದ ಎಂಎಸ್ಸಿ ವಿದ್ಯಾರ್ಥಿ
*40 ಕಿ.ಮೀ ವ್ಯಾಪ್ತಿಯ ಈ ಬೈಕ್ 20 ಕಿ.ಮೀ. ಓಡುವಷ್ಟರಲ್ಲಿ ಬ್ಯಾಟರಿ ಪೂರ್ತಿ ಚಾರ್ಜ್ ಆಗುತ್ತದೆ
 

Tamil Nadu Madurai Student Converts Bicycle into E bike Runs up to 40KM in single charge
Author
Bengaluru, First Published Mar 26, 2022, 2:42 PM IST | Last Updated Mar 26, 2022, 2:42 PM IST

ತಮಿಳುನಾಡು (ಮಾ. 26): ಮನುಷ್ಯನಿಗೆ ಏನಾದರೂ ಹೊಸದನ್ನು ಸಾಧಿಸುವ ಛಲವೊಂದಿದ್ದರೆ ಸಾಕು. ಅಸಾಧ್ಯವಾದ್ದನ್ನು ಸಾಧಿಸುತ್ತಾನೆ. ಪ್ರಯತ್ನಶೀಲತೆ, ಇಚ್ಛಾಶಕ್ತಿ, ಪ್ರತಿಭೆಗಳಿದಿದ್ದರೆ ಯಾವ ಕೆಲಸವೂ ಹಿಂದೆ ಬೀಳುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ವೈಜ್ಞಾನಿಕ ಮನೋಭಾವವನ್ನು ವ್ಯಕ್ತಿಯನ್ನು ಹೊಸತನಕ್ಕೆ ಪ್ರೇರೇಪಿಸುತ್ತೆದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳನ್ನುನೋಡಬಹುದು. ಈ ಸಾಲಿಗೆ ತಮಿಳುನಾಡಿ ವಿದ್ಯಾರ್ಥಿಯೊಬ್ಬರು ಸೇರಿಕೊಂಡಿದೆ. ಹೊಸದನ್ನು ಸಂಶೋಧಿಸುವ ಅವರ ಚಿಕಿತ್ಸಕ ಗುಣದ ಪರಿಣಾಮವಾಗಿ ಸೈಕಲ್ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಬದಲಾಗಿದೆ!

ಇಡೀ ದೇಶವೇ ಪರ್ಯಾಯ ಇಂಧನ ವಾಹನಗಳ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿರುವಾಗ ತಮಿಳುನಾಡಿನ (Tamil Nadu) ಈ ವಿದ್ಯಾರ್ಥಿ (Student)ಯ ಪ್ರಯತ್ನ ಗಮನಾರ್ಹವಾಗಿದೆ ಎಂದು ಹೇಳಬಹುದು. ಈಗಾಗಲೇ ಸಾಕಷ್ಟು  ಇ ಬೈಕ್‌ (e Bike) ಗಳನ್ನು ಆವಿಷ್ಕರಿಸುವ, ಹೊಸದಾಗಿ ಮಾಡುವ ಪ್ರಯತ್ನಗಳು ನಿರಂತರವಾಗಿದ್ದು, ಹಾಗಾಗಿ, ತಮಿಳುನಾಡು ವಿದ್ಯಾರ್ಥಿ ಕೈಗೊಂಡಿರುವ ಪ್ರಯತ್ನಗಳು ಮಹತ್ವದ್ದಾಗುತ್ತವೆ.

 ಇದನ್ನೂ ಓದಿ: Exam Preparation: ಸ್ಮಾರ್ಟ್ ಆಗಿ ಸ್ಟಡಿ ಮಾಡಿ, ಹೆಚ್ಚು ಅಂಕಗಳಿಸಿ!

ಅಷ್ಟಕ್ಕೂ ಈ ವಿದ್ಯಾರ್ಥಿ ಏನು ಮಾಡಿದ್ದಾನೆಎಂದರೆ, ಬೈಸಿಕಲ್‌ನಿಂದ ಇ-ಬೈಕ್ ಅನ್ನು ಅಭಿವೃದ್ಧಿಪಡಿಸಿದ್ದಾನೆ. ಇದಿಷ್ಟೇ ಆಗಿದ್ದರೆ ಅಂಥ ವಿಶೇಷ ಏನೂ ಇರಲಿಲ್ಲ. ಆದರೆ, ಈ ವಿದ್ಯಾರ್ಥಿ ರೂಪಿಸಿರುವ ಬೈಸಿಕಲ್ ಚಾಲನೆಯಲ್ಲಿರುವಾಗಲೇ ಬೈಕ್ ಕೂಡ ಚಾರ್ಜಿಂಗ್ ಆಗುತ್ತದೆ.  ತಮಿಳುನಾಡಿನ ಮಧುರೈ (Madurai)ನಲ್ಲಿ ಎಂಎಸ್ಸಿ ವಿದ್ಯಾರ್ಥಿಯಾಗಿರುವ ಧನುಷ್ ಕುಮಾರ್ (Dhanush Kumar) ಅವರು ತಮ್ಮ ಸಹೋದರಿಯ ಬೈಸಿಕಲ್ ಅನ್ನು ಎಲೆಕ್ಟ್ರಾನಿಕ್-ಬೈಕ್ ಆಗಿ ಪರಿವರ್ತಿಸಿದ್ದಾರೆ. 

ಈ ಇ-ಬೈಕ್ 40 ಕಿಲೋ ಮೀಟರ್‌ಗಳವರೆಗೆ ಪ್ರಯಾಣಿಸಬಲ್ಲದು ಮತ್ತು ಅದರ ಬ್ಯಾಟರಿಯು 20 ಕಿ ಮೀಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ ಅಂತಾರೆ ಧನುಷ್. “ನನ್ನ ಸಹೋದರಿ ಸರ್ಕಾರದಿಂದ ಪಡೆದ ಬೈಸಿಕಲ್ ಅನ್ನು ನಾನು ಇ-ಬೈಕ್ ಆಗಿ ಪರಿವರ್ತಿಸಿದೆ.

"ಇದು 40 ಕಿಮೀ ವರೆಗೆ ಪ್ರಯಾಣಿಸಬಲ್ಲದು ಮತ್ತು 20 ಕಿಲೋಮೀಟರ್‌ಗಳಲ್ಲಿ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ, ”ಎಂದು ಧನುಷ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಈ ಬೈಕ್ ಎಂದರೆ, ಬ್ಯಾಟರಿಗಳನ್ನು ಸ್ವೈಪ್ ಮಾಡಬೇಕು ಇಲ್ಲವೇ ಅವುಗಳನ್ನು ಚಾರ್ಜಿಂಗ್‌ ಹಾಕಬೇಕು. ಆದರೆ, ಈ ವಿದ್ಯಾರ್ಥಿ ಅಭಿವೃದ್ದಿಪಡಿಸಿರುವ ಬೈಕ್‌ನಲ್ಲಿ ಬ್ಯಾಟರಿ ಸ್ವಯಂ ಆಗಿ ಚಾರ್ಜ್ ಆಗುವುದು ಗಮನಾರ್ಹ ಅಂಶವಾಗಿದೆ.

ಬ್ಯಾಟರಿ ಚಾಲಿತ ವಾಹನಗಳ ಬಳಕೆಯನ್ನು ಹೆಚ್ಚಿಸುವುದಕ್ಕಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಉತ್ತೇಜನ ನೀಡುತ್ತಿವೆ. ಟ್ಯಾಕ್ಸ್, ನೋಂದಣಿ ಫೀ ಕಡಿತ.. ಇನ್ನಿತರ ಅನೇಕ ಡಿಸ್ಕೌಂಟ್‌ಗಳನ್ನು ನೀಡಲಾಗುತ್ತಿದೆ. ಆ ಮೂಲಕ ವಿದ್ಯುತ್ ಚಾಲಿತ ವಾಹನಗಳ ಮಾರಾಟ ಹಾಗೂ ಖರೀದಿಯನ್ನು ಹೆಚ್ಚಿಸುವ ಉದ್ದೇಶವಾಗಿದೆ. 

ಇದನ್ನೂ ಓದಿ  AnantU Climate Technologies: ಅಹಮದಾಬಾದ್‌ನಲ್ಲಿನ ವಿವಿಯಿಂದ ಹವಾಮಾನ ಸಂಬಂಧ ಕೋರ್ಸ್!    

ನಿಗದಿತ ರೀತಿಯಲ್ಲಿ ಪ್ರದರ್ಶನ:  ಈ ಹಿಂದೆ, ಕೇಂದ್ರವು ಕರಡು ಅಧಿಸೂಚನೆಯನ್ನು ಹೊರಡಿಸಿ, ವಾಹನಗಳು ಫಿಟ್‌ನೆಸ್ ಪ್ರಮಾಣಪತ್ರ ಮತ್ತು ನೋಂದಣಿ ಚಿಹ್ನೆಯ ಸಿಂಧುತ್ವವನ್ನು ನಿಗದಿತ ರೀತಿಯಲ್ಲಿ ಪ್ರದರ್ಶಿಸಲು ಸೂಚಿಸಿತ್ತು. ಆನಂತರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಹೇಳಿಕೆಯಲ್ಲಿ, ಭಾರೀ ಸರಕುಗಳು/ಪ್ರಯಾಣಿಕರ ವಾಹನಗಳು, ಮಧ್ಯಮ ಸರಕುಗಳು/ಪ್ರಯಾಣಿಕರ ವಾಹನಗಳು ಮತ್ತು ಲಘು ಮೋಟಾರು ವಾಹನಗಳ ಸಂದರ್ಭದಲ್ಲಿ ಫಿಟ್ನೆಸ್ ಪ್ರಮಾಣಪತ್ರ ಮತ್ತು ನೋಂದಣಿ ಚಿಹ್ನೆಯನ್ನು  ಪ್ರದರ್ಶಿಸಲಾಗುತ್ತದೆ. 

 ಆಟೋ-ರಿಕ್ಷಾಗಳು, ಇ-ರಿಕ್ಷಾಗಳು, ಇ-ಕಾರ್ಟ್‌ಗಳು ಮತ್ತು ಕ್ವಾಡ್ರಿಸೈಕಲ್‌ಗಳ ಸಂದರ್ಭದಲ್ಲಿ ಅಳವಡಿಸಿದ್ದರೆ ಅದನ್ನು ವಿಂಡ್‌ಸ್ಕ್ರೀನ್‌ನ ಎಡಭಾಗದ ಮೇಲಿನ ಅಂಚಿನಲ್ಲಿ ಪ್ರದರ್ಶಿಸಬೇಕು. ಮೋಟಾರು ಸೈಕಲ್‌ಗಳಿಗೆ, ಫಿಟ್‌ನೆಸ್ ಪ್ರಮಾಣಪತ್ರ ಮತ್ತು ನೋಂದಣಿ ಚಿಹ್ನೆಯನ್ನು ವಾಹನದ ಎದ್ದುಕಾಣುವ ಭಾಗದಲ್ಲಿ ಪ್ರದರ್ಶಿಸಲಾಗುತ್ತದೆ.

ಅಧಿಸೂಚನೆಯ ಪ್ರಕಾರ, ವಾಹನಗಳು ಮಾಹಿತಿಯನ್ನು ಹಳದಿ ಬಣ್ಣದಲ್ಲಿ ನೀಲಿ ಹಿನ್ನೆಲೆಯಲ್ಲಿ ಏರಿಯಲ್ ಬೋಲ್ಡ್ ಲಿಪಿಯಲ್ಲಿ ಪ್ರದರ್ಶಿಸಬೇಕು. ಸರಿಯಾದ ಫಿಟ್‌ನೆಸ್ ಪ್ರಮಾಣಪತ್ರ ಮತ್ತು ಅವಧಿ ಮುಗಿದ ನೋಂದಣಿ ಇಲ್ಲದ ವಾಹನಗಳನ್ನು ರಸ್ತೆಗಿಳಿಸದಂತೆ ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

Latest Videos
Follow Us:
Download App:
  • android
  • ios