Asianet Suvarna News Asianet Suvarna News

ತೈವಾನ್‌ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಓದಲು ಆಯ್ಕೆಯಾದ ತಮಿಳುನಾಡಿನ ಬಡ ಹಳ್ಳಿ ಹುಡುಗಿ

ತಮಿಳುನಾಡಿನ ಇಬ್ಬರು ಹಳ್ಳಿಯ ಹುಡುಗಿಯರು ತೈವಾನ್‌ನ ಕುನ್ ಶಾನ್ ವಿಶ್ವವಿದ್ಯಾನಿಲಯದಲ್ಲಿ ಎಂಜಿನಿಯರಿಂಗ್ ಪದವಿಗೆ ಸೇರುವ ಅವಕಾಶವನ್ನು ಪಡೆದಿದ್ದಾರೆ.

Tamil nadu government school  village girls bags admission in taiwan for UG courses gow
Author
First Published Aug 13, 2023, 1:49 PM IST

ಚೆನ್ನೈ (ಆ.13): ತಮಿಳುನಾಡಿನ ಹಳ್ಳಿಯ ಹುಡುಗಿಯರಿಬ್ಬರು ತೈವಾನ್‌ನ ಕುನ್ ಶಾನ್ ವಿಶ್ವವಿದ್ಯಾನಿಲಯದಲ್ಲಿ ಎಂಜಿನಿಯರಿಂಗ್ ಪದವಿಗೆ ಸೇರುವ ಅವಕಾಶವನ್ನು ಪಡೆದ್ದಾರೆ.  ಪನ್ನಂದೂರು ಗ್ರಾಮದ ಜಯಶ್ರೀ ಪೆರುಮಾಳ್  ಧರ್ಮಪುರಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ. ಮತ್ತೊಬ್ಬಳು ಚೆನ್ನೈನ ಅವಳಿಂದು ಜಿ ಜಯಲಕ್ಷ್ಮಿ , ಇಬ್ಬರೂ ಕೂಡ  ಪೂರ್ವ ಏಷ್ಯಾದ ದೇಶವು ನೀಡುವ ಪೂರ್ಣ ವಿದ್ಯಾರ್ಥಿವೇತನದೊಂದಿಗೆ  ತೈವಾನ್‌ನ ಕುನ್ ಶಾನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ಸಿಕ್ಕಿದೆ. ಜಯಶ್ರೀ ಪೆರುಮಾಳ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಲಿದ್ದರೆ, ಜಯಲಕ್ಷ್ಮಿ ಅಂತರಾಷ್ಟ್ರೀಯ ವ್ಯವಹಾರದಲ್ಲಿ ಕೋರ್ಸ್ ಮಾಡಲು ಯೋಜಿಸಿದ್ದಾರೆ.

ಬಡತನದ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಮಿಳುನಾಡು ಸರಕಾರ 'ನಾನ್ ಮುದಲ್ವನ್' ('ನಾನು ಮೊದಲಿಗ, ತರಬೇತಿ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಸೌಲಭ್ಯಗಳನ್ನು ಒಳಗೊಂಡಿರುವ ಸಮಗ್ರ ಯೋಜನೆ) ನಂತಹ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಮೂಲಕ ವಿದ್ಯಾರ್ಥಿನಿ ಜಯಶ್ರೀ ತರಬೇತಿ ಪಡೆದಿದ್ದಳು. ಹೀಗಾಗಿ ತಮಿಳುನಾಡು ಸರಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುವುದಾಗಿ ವಿದ್ಯಾರ್ಥಿನಿ ಹೇಳಿದ್ದಾಳೆ.

ಹೊಸ ಪಠ್ಯಪುಸ್ತಕದ 8ನೇ ತರಗತಿ ಪಾಠದಲ್ಲಿ ಬ್ರಾಹ್ಮಣರ ಅವಹೇಳನ ವಿವಾದ

ಇನ್ನು ಜೆಇಇಯಂತಹ ಪ್ರವೇಶ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಮೂಲಕ ಐಐಟಿಯಂತಹ ಪ್ರೀಮಿಯಂ ಇನ್‌ಸ್ಟಿಟ್ಯೂಟ್‌ಗೆ ಸೇರಲು ಸಿದ್ಧರಾಗಿರುವ 200 ಕ್ಕೂ ಹೆಚ್ಚು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ಭರಿಸುವುದಾಗಿ ತಮಿಳುನಾಡು ಸರ್ಕಾರ  ಘೋಷಿಸಿದೆ. ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿದರು.

ರಾಜ್ಯಾದ್ಯಂತ ಸರ್ಕಾರಿ ಶಾಲೆಗಳ ಸುಮಾರು 20 ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. “ನಾವು ವಿವಿಧ ದೇಶಗಳು ನೀಡುವ ವಿದ್ಯಾರ್ಥಿವೇತನದ ಬಗ್ಗೆ ಜಾಗೃತಿ ಮೂಡಿಸಲು ಯೋಜಿಸುತ್ತಿದ್ದೇವೆ. ಈ ವರ್ಷ ಹಂಗೇರಿ, ಜಪಾನ್, ಕೆನಡಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ದೇಶಗಳಿಗೆ ಅರ್ಜಿ ಸಲ್ಲಿಸಲು ನಾವು ಈಗಾಗಲೇ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ್ದೇವೆ ಎಂದು ಮೂಲ ತಿಳಿಸಿದೆ.

ಯುಜಿ, ಪಿಜಿ, ಪಿಎಚ್‌ಡಿ ಮತ್ತು ಇತರ ಕಾರ್ಯಕ್ರಮಗಳನ್ನು ಮುಂದುವರಿಸಲು ಸ್ಕಾಲರ್‌ಶಿಪ್ ಪಡೆದ 120 ವಿದ್ಯಾರ್ಥಿಗಳ ಪೈಕಿ ಮೂವರು ಮಾತ್ರ ಯುಜಿ ವಿದ್ಯಾರ್ಥಿಗಳು. ಅಧಿಕಾರಿಗಳು ದೇಶ ಮತ್ತು ಅವರು ಅನುಸರಿಸುತ್ತಿರುವ ಕೋರ್ಸ್ ಬಗ್ಗೆ ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷಿಸುತ್ತಾರೆ. ಅನೇಕ ದೇಶಗಳು ಇಂತಹ ಸ್ಕಾಲರ್‌ಶಿಪ್‌ಗಳನ್ನು ನೀಡುತ್ತವೆ ಆದ್ದರಿಂದ ಭಾರತದಲ್ಲಿನ ತಮ್ಮ ಸಂಸ್ಥೆಗಳು ಎರಡೂ ದೇಶಗಳೊಂದಿಗೆ ಪರಿಚಿತರಾಗಿರುವ ಜನರನ್ನು ನೇಮಿಸಿಕೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

NCERT ಪಠ್ಯಪುಸ್ತಕ ಸಮಿತಿಯಲ್ಲಿ ಸುಧಾ ಮೂರ್ತಿ, ಶಂಕರ್‌ ಮಹದೇವನ್‌ಗೆ ಸ್ಥಾನ

ಐಐಟಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಏಮ್ಸ್ ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ಭರಿಸುವುದಾಗಿ 2022-23ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಘೋಷಿಸಿತ್ತು. ಅರ್ಹತೆ ಪಡೆಯಲು, ವಿದ್ಯಾರ್ಥಿಗಳು VI ನೇ ತರಗತಿಯಿಂದ XII ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ಓದುವುದು ಕಡ್ಡಾಯವಾಗಿದೆ.

3ನೇ ಮಗು ಮಾಹಿತಿ ಮುಚ್ಚಿಟ್ಟ ಸರ್ಕಾರಿ ಶಾಲೆ ಶಿಕ್ಷಕ ಕೆಲಸದಿಂದ ಅಮಾನತು!

ಅಧಿಕೃತ ಪ್ರಕಟಣೆಯ ಪ್ರಕಾರ, ಜೆಇಇ, ಸಿಯುಇಟಿ ಮತ್ತು ಆರ್ಕಿಟೆಕ್ಚರ್‌ನಲ್ಲಿ ರಾಷ್ಟ್ರೀಯ ಸಾಮರ್ಥ್ಯ ಪರೀಕ್ಷೆಯಂತಹ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಸರ್ಕಾರಿ ಶಾಲೆಗಳ ಸುಮಾರು 225 ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಎನ್‌ಐಟಿ, ಎನ್‌ಐಎಫ್‌ಟಿ, ಐಎಂಯು ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳನ್ನು ಒಳಗೊಂಡಂತೆ ಹಲವು ಶಿಕ್ಷಣ ಸಂಸ್ಥೆಗಳನ್ನು ವಿದ್ಯಾರ್ಥಿಗಳು ಸೇರಲು ಸಿದ್ಧವಾಗಿರುವ ವಿದ್ಯಾರ್ಥಿಗಳಿಗೆ ಇದರಿಂದ ಲಾಭವಾಗಲಿದೆ.
 

Follow Us:
Download App:
  • android
  • ios