Tamil Nadu: ಮಕ್ಕಳಿಗೆ ವೈಜ್ಞಾನಿಕ ಆಸಕ್ತಿ ಬೆಳೆಸಲು ರೈನ್‌ಬೋ ಫೋರ್ಮ್
*ಸರ್ಕಾರಿ ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಹೆಚ್ಚಿಸಲು ವಿಶಿಷ್ಟ ಪ್ರಯತ್ನ
*ತಮಿಳುನಾಡು ಸರ್ಕಾರದಿಂದ ವಿಶಿಷ್ಟ ರೈನ್‌ಬೋ ಫೋರಮ್(ವನವಿಲ್ ಮಂಡ್ರಂ) ಆರಂಭ
*ವಿಜ್ಞಾನ, ತಂತ್ರಜ್ಞಾನ, ಗಣಿತ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಲು ವಿನೂತನ ಪ್ರಯತ್ನ
ಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಸಕ್ತಿಯನ್ನು ಬೆಳೆಸುವ ಉದ್ದೇಶದಿಂದ ತಮಿಳುನಾಡು ಸರ್ಕಾರ ವಿನೂತನ ಯೋಜನೆಯೊಂದನ್ನ ಪ್ರಾರಂಭಿಸಿದೆ. ವನವಿಲ್ ಮಂಡ್ರಂ (ರೈನ್ಬೋ ಫೋರಂ Rainbow forum) ಎಂಬ ವಿಶಿಷ್ಟ ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಚಾಲನೆ ನೀಡಿದ್ದಾರೆ. ರೈನ್ಬೋ ಫೋರಂ (Rainbow forum) ಯೋಜನೆಯು, 6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (Science Technology Engineering Mathematics-STEM) ಕಲಿಯಲು ಆಸಕ್ತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇತ್ತೀಚೆಗಷ್ಟೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕತ್ತೂರಿನ ಪಪ್ಪಕುರಿಚಿ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ರೈನ್ಬೋ ಫೋರಂ ಯೋಜನೆಗೆ ಚಾಲನೆ ನೀಡಿದರು. ಈ ವೇಳೆ ಸಚಿವರಾದ ಕೆ.ಎನ್ ನೆಹರು, ತಂಗಂ ತೆನ್ನರಸು, ಅನ್ಬಿಲ್ ಮಹೇಶ್ ಪೊಯ್ಯಮೊಳಿ ಮತ್ತು ತಿರುಚಿರಾಪಳ್ಳಿ ಮೇಯರ್ ಎಂ ಅನ್ಬುಗನ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ಇದಿಷ್ಟೇ ಅಲ್ಲದೇ ಸಿಎಂ ಸ್ವಾಲಿನ್ (CM Stalin) ಅವರು, ಮಾಧ್ಯಮಿಕ ಶಾಲೆಗಳ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಉತ್ತೇಜಿಸಲು, ತಮಿಳುನಾಡು ಶಾಲಾ ಶಿಕ್ಷಣ ಇಲಾಖೆ ವತಿಯಿಂದ 100 ಸಂಚಾರಿ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯಗಳಿಗೆ ಚಾಲನೆ ನೀಡಿದರು. ಈ ಸಂಚಾರಿ ಪ್ರಯೋಗಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಯೋಗಗಳು ಮತ್ತು ಗಣಿತವನ್ನು ಮಾಸಿಕ ಆಧಾರದ ಮೇಲೆ ಸರಿಯಾದ ಮಾರ್ಗದರ್ಶನದೊಂದಿಗೆ ಕಲಿಸಲಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಸಾಧನಗಳನ್ನು ಪ್ರದರ್ಶಿಸುತ್ತಾರೆ. ಒಟ್ಟು 13, 210 ಸರ್ಕಾರಿ ಶಾಲೆಗಳಲ್ಲಿ ಸುಮಾರು 25 ಲಕ್ಷ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅಂದಾಜು 25 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನ ಜಾರಿಗೊಳಿಸಲಾಗುವುದು.
ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಪ್ರಯೋಗಗಳನ್ನು ನಡೆಸಿದ ತರಗತಿ ಕೊಠಡಿಗಳಿಗೂ ಭೇಟಿ ನೀಡಿ ಸಿಎಂ ಸ್ಟಾಲಿನ್ ವೀಕ್ಷಣೆ ಮಾಡಿದ್ರು. ರಾಜ್ಯಾದ್ಯಂತ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ವ್ಯಕ್ತಪಡಿಸಿದ ಶಿಕ್ಷಕರಿಗೆ ತಾವು ಇದುವರೆಗೆ ಬೋಧನೆಯಲ್ಲಿ ಬಳಸುತ್ತಿದ್ದ ವಿಧಾನಗಳನ್ನು ಹಂಚಿಕೊಳ್ಳಲು ಮತ್ತು ಕಾರ್ಯಕ್ರಮದ ನಿರಂತರ ಅನುಷ್ಠಾನಕ್ಕೆ ಸಲಹೆಗಳನ್ನು ನೀಡಲು ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ.
Amazon Academy: ಮುಂದಿನ ವರ್ಷ ಆಗಸ್ಟ್‌ನಿಂದ ಅಮೆಜಾನ್ ಅಕಾಡೆಮಿ ಸ್ಥಗಿತ
ಸುಮಾರು 12,000 ಶಿಕ್ಷಕರು ಈ ಯೋಜನೆ ಬಗ್ಗೆ ಬಹಳ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಅವರು ವಿದ್ಯಾರ್ಥಿಗಳಿಗೆ ತುಲನಾತ್ಮಕವಾಗಿ ಕಷ್ಟಕರವಾದ ವಿಷಯಗಳನ್ನು ಹಂಚಿಕೊಳ್ಳಲು ಮುಂದೆ ಬಂದಿದ್ದಾರೆ. ತರಗತಿಯಲ್ಲಿ ಅನುಸರಿಸಲು ಮತ್ತು ಅವುಗಳನ್ನು ಸರಳ ಪ್ರಯೋಗಗಳ ಮೂಲಕ ಹೇಗೆ ಹೆಚ್ಚು ಆಸಕ್ತಿಕರಗೊಳಿಸಬಹುದು ಎಂಬುದನ್ನು ತೋರಿಸಲು ವಿಷಯ ಪರಿಣಿತರನ್ನು ಸೇರಿಸಿಕೊಳ್ಳಲಾಗಿದೆ. ಈ ಯೋಜನೆಯ ಆರಂಭವನ್ನು ಗುರುತಿಸಲು, ಶಿಕ್ಷಕರು ತರಗತಿಯಲ್ಲಿ ಸರಳ ಪ್ರಯೋಗಗಳನ್ನು ಪ್ರದರ್ಶಿಸಬಹುದು. ಈ ಪ್ರಯೋಗಗಳನ್ನು ತರಗತಿಗಳಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಇವು ಪಠ್ಯಕ್ರಮದ ಭಾಗವಾಗಿರುವ ಪಾಠಗಳನ್ನು ಆಧರಿಸಿದೆ ಎಂದು ಖಚಿತಪಡಿಸಿಕೊಳ್ಳಲು ಶಾಲೆಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಈ ಪ್ರಯೋಗಗಳಿಗೆ ವಸ್ತುಗಳನ್ನು ಖರೀದಿಸಲು ಪ್ರತಿ ಶಾಲೆಗೆ ಆರಂಭಿಕವಾಗಿ 1,200 ರೂ.ಗಳನ್ನು ನಿಗದಿಪಡಿಸಲಾಗಿದೆ.
Project Zimadari: ಕಣಿವೆ ರಾಜ್ಯದ ಶಿಕ್ಷಣದಲ್ಲಿ ಕ್ರಾಂತಿ ಸೃಷ್ಟಿಸಿದ ಜಿಮಾದಾರಿ ಕಾರ್ಯಕ್ರಮ!
ತಮಿಳುನಾಡಿನಾದ್ಯಂತ ಈ ರೈನ್ಬೋ ಫೋರಂ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಸುಮಾರು 710 STEM ಫೆಸಿಲಿಟೇಟರ್‌ಗಳನ್ನು ಆಯ್ಕೆ ಮಾಡಲಾಗಿದೆ. ಅವರು ಮೊಬೈಲ್ ವಿಜ್ಞಾನ ಮತ್ತು ಗಣಿತ ಪ್ರಯೋಗಕಾರರಾಗಿ ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ, 6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಸರಳ ವಿಜ್ಞಾನ ಪ್ರಯೋಗಗಳನ್ನು ನಡೆಸಲು ಅವರು ಮಾರ್ಗದರ್ಶನ ನೀಡುತ್ತಾರೆ. ತಮಿಳುನಾಡು ಸರ್ಕಾರ ಜಾರಿಗೆ ತಂದಿರುವ ಈ ಹೊಸ ಯೋಜನೆಯ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಈಗಾಗಲೇ ಪ್ರಯತ್ನಕ್ಕೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.