Asianet Suvarna News Asianet Suvarna News

Amazon Academy: ಮುಂದಿನ ವರ್ಷ ಆಗಸ್ಟ್‌ನಿಂದ ಅಮೆಜಾನ್ ಅಕಾಡೆಮಿ ಸ್ಥಗಿತ

ಹೈಸ್ಕೂಲ್ ವಿದ್ಯಾರ್ಥಿಗಳಿಗೆ 2023 ಆಗಸ್ಟ್‌ನಿಂದ ಅಮೆಜಾನ್ ಆನ್‌ಲೈನ್ ಅಕಾಡೆಮಿ ಸಿಗಲ್ಲ, 2024ನೇ ಸಾಲಿಗೆ ಪ್ರವೇಶ ಪಡೆದುಕೊಂಡವರಿಗೆ ಮರುಪಾವತಿಸಲಿದೆ ಕಂಪನಿ, ಆರಂಭವಾದ ಎರಡೇ ವರ್ಷದಲ್ಲಿ ಅಮೆಜಾನ್ ತನ್ನ ಎಜುಟೆಕ್ ಕಂಪನಿ ಮುಚ್ಚುತ್ತಿದೆ
 

Amazon academy will shut down from 2023 August Says Amazon company
Author
First Published Nov 26, 2022, 12:19 PM IST

ನಷ್ಟದಿಂದಾಗಿ ಪ್ರತಿಷ್ಠಿತ ಎಜುಟೆಕ್‌ ಕಂಪೆನಿ ಬೈಜೂಸ್(BYJU’S)  ಕಳೆದ ತಿಂಗಳು 2,500 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿತ್ತು. ಇತರ ಎಜುಟೆಕ್‌ ಕಂಪೆನಿಗಳಾದ ಅನ್ ಅಕಾಡೆಮಿ, ಟಾಪ್‌ಆರ್, ವೈಟ್‌ಹ್ಯಾಟ್ ಜೂನಿಯರ್ ಮತ್ತು ವೇದಾಂತು ಕೂಡ ಈ ವರ್ಷದ ಆರಂಭದಲ್ಲಿ ಸಿಬ್ಬಂದಿ ಕಡಿತ ಮಾಡಿದ್ದವು. ಇದೀಗ ಇ ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ. ಆದ್ರೆ ಯಾವುದೇ ನಿಖರ ಕಾರಣ ನೀಡದೇ, ಅಮೆಜಾನ್ ಅಕಾಡೆಮಿ(Amazon Academy) ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಅಮೆಜಾನ್ ಇಂಡಿಯಾ, ಭಾರತದಲ್ಲಿನ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ತನ್ನ ಆನ್‌ಲೈನ್ ಶಿಕ್ಷಣ ವೇದಿಕೆಯನ್ನು ಆಗಸ್ಟ್ 2023ರಿಂದ ಮುಚ್ಚುವುದಾಗಿ ಅಮೆಜಾನ್ ಹೇಳಿದೆ.  ಈ ಮೂಲಕ ಆನ್ಲೈನ್ ಕಲಿಕಾ ತಾಣ ಅಮೆಜಾನ್ ಅಕಾಡೆಮಿ, ಭಾರತದಲ್ಲಿ ಕಾರ್ಯಾರಂಭ ಮಾಡಿದ ಎರಡು ವರ್ಷಗಳ ಒಳಗಾಗಿ  ಸ್ಥಗಿತಗೊಂಡಂತಾಗಲಿದೆ.

ಆದ್ರೆ ಅಮೆಜಾನ್ ಅಕಾಡೆಮಿನ್ನು ಮುಚ್ಚಲು ಕಾರಣ ಏನು ಎಂಬುದನ್ನು ಅಮೆಜಾನ್ ಕಂಪನಿ  ಬಹಿರಂಗಪಡಿಸಿಲ್ಲ. ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಅಮೆಜಾನ್ ಅಕಾಡೆಮಿ ಪ್ಲಾಟ್‌ಫಾರ್ಮ್ ಆರಂಭವಾಗಿತ್ತು. ವರ್ಚುವಲ್ ಕಲಿಕೆಯ ಜನಪ್ರಿಯತೆಯ ಮಧ್ಯೆ ಕಳೆದ ವರ್ಷ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಾ ಬಂದಿತು. ಇದು ಭಾರತದಾದ್ಯಂತ ಉನ್ನತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆಗೆ ಇದು ತರಬೇತಿ ನೀಡುತ್ತದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಅಧ್ಯಾಪಕರಿಗೂ ಡ್ರೆಸ್ ಕೋಡ್!

ಅಮೆಜಾನ್ ನ ಈ ಘೋಷಣೆಯಿಂದ  ಅಕಾಡೆಮಿಗೆ ಸೇರಿರುವ ವಿದ್ಯಾರ್ಥಿಗಳು ಆತಂಕಗೊಳ್ಳುವ ಅವಶ್ಯಕತೆಯಿಲ್ಲ. ಅಮೆಜಾನ್ ಅಕಾಡೆಮಿಗೆ ಪ್ರಸಕ್ತ ಶೈಕ್ಷಣಿಕ ಅವಧಿಯಲ್ಲಿ ದಾಖಲಾದವರಿಗೆ ಸಂಪೂರ್ಣ ಶುಲ್ಕವನ್ನು ಮರುಪಾವತಿಸುವುದಾಗಿ  ಅಮೆಜಾನ್ ಕಂಪನಿ ಹೇಳಿದೆ. ವಿಶ್ವದ ಅತಿದೊಡ್ಡ ಆನ್‌ಲೈನ್ ರಿಟೇಲ್ ಕಂಪನಿ ಅಮೆಜಾನ್ ಮೌಲ್ಯಮಾಪನದ ಆಧಾರದ ಮೇಲೆ,  "ಪ್ರಸ್ತುತ ಹಂತ ಹಂತವಾಗಿ ಗ್ರಾಹಕರನ್ನು ನೋಡಿಕೊಂಡು ಅಕಾಡೆಮಿ ಸ್ಥಗಿತಗೊಳಿಸಲಾಗುತ್ತದೆ" ಎಂದು‌ ತನ್ನ ಹೇಳಿಕೆಯಲ್ಲಿ ತಿಒದಗಿಸಲು  ಆದಾಗ್ಯೂ, ಗ್ರಾಹಕರು ಅಕ್ಟೋಬರ್ 2024 ರವರೆಗೆ ಒಂದು ವರ್ಷದ ವಿಸ್ತೃತ ಅವಧಿಗೆ ಆನ್‌ಲೈನ್‌ನಲ್ಲಿ ಪೂರ್ಣ ಕೋರ್ಸ್ ಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆ ಎಂದು ಕಂಪನಿ ಹೇಳಿದೆ.

"ಆನ್‌ಲೈನ್ ಅಕಾಡೆಮಿಯು, ಕ್ಯುರೇಟೆಡ್ ಕಲಿಕಾ ಸಾಮಗ್ರಿಗಳು, ಲೈವ್ ಉಪನ್ಯಾಸಗಳು ಮತ್ತು ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಸಮಗ್ರ ಮೌಲ್ಯಮಾಪನಗಳ ಮೂಲಕ ವಿದ್ಯಾರ್ಥಿಗಳನ್ನು ಜೆಇಇಗೆ ಅಗತ್ಯವಿರುವ ಆಳವಾದ ಜ್ಞಾನ ಮತ್ತು ಅಭ್ಯಾಸದ ದಿನಚರಿಗಳೊಂದಿಗೆ ಸಜ್ಜುಗೊಳಿಸುತ್ತದೆ" ಎಂದು ಕಂಪನಿಯು ತನ್ನ ಪ್ರಾರಂಭದ ಸಮಯದಲ್ಲಿ ತಿಳಿಸಿತ್ತು. ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಆಕಾಂಕ್ಷಿಗಳಿಗೆ ಸಂಪೂರ್ಣ ಪಠ್ಯಕ್ರಮ ಕೋರ್ಸ್‌ಗಳನ್ನು ಪರಿಚಯಿಸಲು ಅಮೆಜಾನ್ ಕಂಪನಿಯು, ಎಜ್ಯುಕೇಷನ್ ಗ್ರೂಪ್  ಶ್ರೀ ಚೈತನ್ಯದೊಂದಿಗೆ ಸಹಕರಿಸಿದೆ.

ಇದನ್ನೂ ಓದಿ: ಈ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದಿಂದಲೇ Football Training

ಪ್ರತಿಷ್ಠಿತ ತಂತ್ರಜ್ಞಾನ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಜೆಇಇ ರೆಡಿ(JEE Ready) ಎಂಬ ಆ್ಯಪ್ ಅನ್ನು ಅಮೆಜಾನ್ ಆರಂಭಿಸಿತ್ತು.  ಅಮೆಜಾನ್ ಅಕಾಡೆಮಿ(Amazon Academy) ಎಂದು ಮರುನಾಮಕರಣಗೊಂಡು ಜೆಇಇ ರೆಡಿ, ಉಚಿತ ಆನ್ ಲೈನ್ ತರಗತಿಗಳನ್ನು ನೀಡುತ್ತಾ ಬಂದಿದೆ. ಇದು ಅಣಕು ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ವಿಶ್ಲೇಷಿಸುತ್ತದೆ. ಈ ಮೂಲಕ ಲಕ್ಷಾಂತರ ಬಡ ಮಕ್ಕಳಿಗೆ ತಂತ್ರಜ್ಞಾನ ಆಧಾರಿತ ಕಲಿಕೆ ಒದಗಿಸುವ ಪ್ರಯತ್ನ ಮಾಡಿತ್ತು. ಆದ್ರೀಗ ಮುಚ್ಚುವ ನಿರ್ಧಾರ ಮಾಡಿರೋದು ಸಾಕಷ್ಟು ವಿದ್ಯಾರ್ಥಿಗಳ ಬೇಸರಕ್ಕೆ ಕಾರಣವಾಗಿದೆ. ಕೋವಿಡ್ ಲಾಕ್‌ಡೌನ್‌ ನಂತರ ಭಾರತದಾದ್ಯಂತ ಮತ್ತೆ ಶಾಲೆಗಳು ಮತ್ತು ಕೋಚಿಂಗ್ ಸೆಂಟರ್‌ಗಳು ತೆರೆದಿದ್ರಿಂದ, ಅನೇಕ ಎಜುಟೆಕ್ ಕಂಪನಿಗಳು ತತ್ತರಿಸಿ ಹೋಗಿವೆ. 

Follow Us:
Download App:
  • android
  • ios