Asianet Suvarna News Asianet Suvarna News

ಉಕ್ರೇನ್- ರಷ್ಯಾ ಯುದ್ಧ: ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸುತ್ತೂರು ಮಠ ಆಸರೆ

* ಉಕ್ರೇನ್- ರಷ್ಯಾ ಎರಡೂ ದೇಶಗಳ ನಡುವಿನ ಯುದ್ಧ, ಅತಂತ್ರರಾದ ವಿದ್ಯಾರ್ಥಿಗಳು.
* ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸುತ್ತೂರು ಮಠ ಆಸರೆ
* ಮೊದಲ ಹಂತದಲ್ಲಿ‌ 500 ವಿದ್ಯಾರ್ಥಿಗಳಿಗೆ ನೆರವು

suttur mutt start class For karnataka medical students who returned from ukraine rbj
Author
Bengaluru, First Published May 1, 2022, 1:08 PM IST

ವರದಿ : ಮಧು.ಎಂ.ಚಿನಕುರಳಿ

ಮೈಸೂರು, (ಮೇ.01) :
ರಷ್ಯಾ-ಉಕ್ರೇನ್ ನಡುವಿನ ಘೋರ ಯುದ್ಧ‌ ಇಡೀ ಪ್ರಪಂಚದ ಮೇಲೆ ಕರಾಳ ಪರಿಣಾಮ ಬೀರಿದೆ. ದೇಶ ದೇಶಗಳ ಆರ್ಥಿಕ ಪರಿಸ್ಥಿತಿಯನ್ನ ಬದಲಿಸಿದೆ, ಎಷ್ಟೋ ದೇಶಗಳ ಹಣದುಬ್ಬರಕ್ಕೂ ಕಾರಣವಾಗಿದೆ. ಇದೆಲ್ಲಕ್ಕೂ ಮುಖ್ಯವಾಗಿ ಆ ಒಂದು ವರ್ಗದ ಬದುಕನ್ನ ಮಾತ್ರ ಕರಾಳತೆಗೆ ದೂಡಿದೆ. ಕತ್ತೆಗೆ ಜಾರುತ್ತಿರುವ ಅವರ ಬದುಕನ್ನು ಅಸನು ಮಾಡಲು ಮೈಸೂರಿನ ಪ್ರತಿಷ್ಠಿತ ಸುತ್ತೂರು ಸಂಸ್ಥಾನ ಮುಂದಾಗಿದೆ.

ಸಂಕಷ್ಟದಲ್ಲಿರುವ ವಿದ್ಯಾರ್ಥಿ ಸಮೂಹಕ್ಕೆ ಸುತ್ತೂರು ಮಠ ಆಸರೆ.
ಶಿಕ್ಷಣ ವಂಚಿತ ಉಕ್ರೇನ್ ವಿಧ್ಯಾರ್ಥಿಗಳ ನೆರವಿಗೆ ಧಾವಿಸಿದ ಜೆಎಸ್ ಎಸ್ ಉನ್ನತ ಶಿಕ್ಷಣ ಸಂಸ್ಥೆ ಬ್ರಿಡ್ಜಿಂಗ್ ಸ್ವರೂಪದ ಮೂಲಕ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿರುವ ಜೆಎಸ್‌ಎಸ್ ಶಿಕ್ಷ ಸಂಸ್ಥೆ ಉಕ್ರೇನ್ ಹಾಗು ರಷ್ಯಾ ಯುದ್ದದಿಂದ ಭಾರತಕ್ಕೆ ಹಿಂದಿರುಗಿರುವ ವಿದ್ಯಾರ್ಥಿಗಳ ಕಷ್ಟಕ್ಕೆ ನೆರವಾಗಲು ಮುಂದಾಗಿದೆ. ಮತ್ತೆ ವಿದೇಶಕ್ಕೆ ತೆರಳಲಾಗದೆ ವಿದ್ಯಾಭ್ಯಾಸದಿಂದ ವಂಚಿತರಾಗಿರುವ ವಿದ್ಯಾರ್ಥಿಗಳ ಕಷ್ಟವನ್ನು ಅರಿತಿರುವ ಸುತ್ತೂರು ಸಂಸ್ಥಾನದ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳು ಅವರ ವಿದ್ಯಾಭ್ಯಾಸಕ್ಕೆ ನೆರವಾಗಲು ಮುಂದಾಗಿ ಜೆಎಸ್ಎಸ್ ಉನ್ನತ ಶಿಕ್ಷಣ ಸಂಸ್ಥೆ ಮೂಲಕ ಓದು ಮುಂದುವರಿಸಲು ನೆರವು ನೀಡುತ್ತಿದ್ದಾರೆ.

ಉಕ್ರೇನ್‌ನಿಂದ ವಾಪಸ್ ಆದ ಮೆಡಿಕಲ್ ವಿದ್ಯಾರ್ಥಿಗಳಿಗೆ ವಿಜಯಪುರದಲ್ಲಿ ಪಾಠ.!

ಉಕ್ರೇನ್, ಚೀನಾ ಹಾಗೂ ರಷ್ಯಾದಿಂದ ಹಿಂದಿರುಗಿರುವ ವಿದ್ಯಾರ್ಥಿಗಳು ಈ ಅವಕಾಶ ಪಡೆಯಬಹುದಾಗಿದೆ. ಜೆ.ಎಸ್.ಎಸ್ ಉನ್ನತ ಶಿಕ್ಷಣ ಸಂಸ್ಥೆ, ಸಂಶೋಧನಾ ಅಕಾಡೆಮಿ ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ಸಹಾಯ ಯೋಜನೆಯಡಿ ಈ ನೆರವು ನೀಡಕಾಗುತ್ತಿದೆ. ಇಲ್ಲಿ ಗಮನ ಹರಿಸಬೇಕಾದ ಮತ್ತೊಂದು ಸಂಗತಿ ಎಂದರೆ ಸಂಕಷ್ಟದ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸದೆ ಕೋರ್ಸ್ ನಡೆಸಲು ನಿರ್ಧಾರ ಮಾಡಲಾಗಿದೆ.

ಮೊದಲ ಹಂತದಲ್ಲಿ‌ 500 ವಿದ್ಯಾರ್ಥಿಗಳಿಗೆ ನೆರವು.
ಉಕ್ರೇನ್, ಚೀನಾ ಹಾಗೂ ರಷ್ಯಾದಿಂದ ಬಂದ ವಿದ್ಯಾರ್ಥಿಗಳಿಗೆ ಬ್ರಿಡ್ಜಿಂಗ್ ಶಿಕ್ಷಣ ಸ್ವರೂಪದಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ನಿರ್ಧಾರ ಮಾಡಲಾಗಿದೆ. ಸುತ್ತೂರು  ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಇಂತಹ ಆಶಯ ವ್ಯಕ್ಯಪಡಿಸಿದ್ದರು. ವಿದ್ಯಾರ್ಥಿಗಳಿಗರ ಸಹಾಯವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ನಿರ್ದೇಶನ ನೀಡಿದ್ದರು. ಶ್ರೀಗಳ ಆಶಯದಂದತೆ ಕೋರ್ಸ್ ಆರಂಭ ಮಾಡುತ್ತಿದ್ದೇವೆ ಎಂದು ಮೆಡಿಕಲ್ ಕಾಲೇಜು ಪ್ರಾಂಶುಪಾಲ ಬಸವನಗೌಡಪ್ಪ ಹೇಳಿದ್ದಾರೆ.

ಎರಡೂ ದೇಶಗಳ ನಡುವಿನ ಯುದ್ಧ, ಅತಂತ್ರರಾದ ವಿದ್ಯಾರ್ಥಿಗಳು.
ಎಸ್, ರಷ್ಯಾ-ಉಕ್ರೇನ್ ಯುದ್ಧದಿಂದ ನೇರ ಪರಿಣಾಮ ಎದುರಿಸುತ್ತಿರೋದು ಅಲ್ಲಿ ವೈದ್ಯಕೀಯ ವ್ಯಾಸಂಗ ಮಾಡಲು ತೆರಳಿದ್ದ ವಿದ್ಯಾರ್ಥಿಗಳು. ಭಾರತದಿಂದ ಸರಿ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಉಕ್ರೇನ್‌ಗೆ ತೆರಳಿದ್ದರು.‌ ಇದರಲ್ಲಿ ಗರಿಷ್ಟ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೆರ ಆಗುದ್ದು, ಎಲ್ಲರೂ ವೈದ್ಯಕೀಯ ವ್ಯಾಸಂಗ ಮಾಡುತ್ತದರು. ಇದಕ್ಕೆ ಮುಖ್ಯ ಕಾರಣ ಕಡಿಮೆ ವೆಚ್ಚದಲ್ಲಿ ಸಿಗುವ ವೈದ್ಯಕೀಯ ಪದವಿ. ಆದರೆ ಉಕ್ರೇನ್‌ನಲ್ಲಿ ರಷ್ಯಾ ನಡಸಿದ ಮಿಲಿಟರಿ ಕಾರ್ಯಾಚರಣೆಯಿಂದ ಇವರೆಲ್ಲ ಅರ್ಧಕ್ಕೆ ವ್ಯಾಸಂಗ ನಿಲ್ಲಿಸಿದ ಸ್ವದೇಶಕ್ಕೆ ಮರಳಬೇಕಾಯಿತು. ಇದರಲ್ಲಿ ಪ್ರಥಮ ವರ್ಷ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಂದ ಹಿಡಿದು, ಕೇವಲ ಮೂರು ತಿಂಗಳಲ್ಲಿ ಎಂಬಿಬಿಎಸ್ ಮುಗಿಸುವ ವಿದ್ಯಾರ್ಥಿಗಳು ಇದ್ದಾರೆ. 

ಯುದ್ಧದಿಂದಾಗಿ ಉಕ್ರೇನ್ ವಾಸಕ್ಕೆ ಕಠಿಣವಾಗಿದ್ದು, ಅಲ್ಲಿಗೆ ಮತ್ತೆ ಮರಳಿ ಓದುವ ಪರಿಸ್ಥಿತಿ ಇವರಿಗಿಲ್ಲ. ಆನ್‌ಲೈನ್ ತರಗತಿಗಳಿಂದ ಓದಿನಲ್ಲಿ ಪ್ರಗತಿಯೂ ಕಾಣುತ್ತಿಲ್ಲ. ಈಗಿರುವಾಗ ತಮಗೆಲ್ಲ ದೇಶದಲ್ಲೇ ವ್ಯಾಸಂಗ ಮುಂದುವರಿಸಲು ಸರ್ಕಾರಗಳು ನೆರವಾಗಬೇಕು ಎಂಬ ಕೂಗು ಜೋರಾಗಿದೆ.

ಥಿಯರಿ ಕ್ಲಾಸ್ ಜೊತೆಗೆ ಕ್ಲಿನಿಕಲ್ ಎಜುಕೇಷನ್ ವ್ಯವಸ್ಥೆ ಕೂಡ ಮಾಡಲಾಗಿದೆ. ಒಂದೆ ದಿನದಲ್ಲಿ 280 ಹೆಚ್ಚು ವಿದ್ಯಾರ್ಥಿಗಳು ಸಂಪರ್ಕ ಮಾಡಿದ್ದು, ಉಚಿತವಾಗಿ ಈ ಕೋರ್ಸ್ ಆರಂಭ ಮಾಡಿದ್ದೇವೆ.  ಮೊದಲ ಹಂತದಲ್ಲಿ ಸುಮಾರು 500 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಆಡಳಿತ ಮಂಡಳಿ ಜೊತೆ ಚರ್ಚಿಸಿ ನಿರ್ಧಾರ ಮಾಡಲಾಗುತ್ತೆ. ನಾವು ನೀಡಿದ ವಿದ್ಯಾಭ್ಯಾಸದ ಬಗ್ಗೆ ಒಂದು ಸರ್ಟಿಪೀಕೇಟ್ ನೀಡಲಾಗುತ್ತದೆ. ಮತ್ತೆ ವಿದೇಶಕ್ಕೆ ಹೋದಾಗ ಅದು ಅನುಕೂಲ ಆಗಬಹುದು. ಜೊತೆಗೆ ಭಾರತಕ್ಕೆ ಹಿಂದಿರುಗಿದ ಮೇಲೆ ವಿದ್ಯಾರ್ಥಿಗಳು ಬರೆಯುವ ಎಫ್ ಎಂ ಜಿ ಇ ಪರೀಕ್ಷೇಗೂ ಇದು ಸಹಕಾರಿ ಆಗಲಿದೆ ಎಂದು ಜಿಎಸ್ ಎಸ್ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಬಸವನಗೌಡಪ್ಪ ಹೇಳಿದ್ದಾರೆ.

Follow Us:
Download App:
  • android
  • ios