ವಿದೇಶಗಳಲ್ಲಿ ಅರಣ್ಯ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಉತ್ಸುಕರಾಗಬೇಕು: ಮೂರ್ತಿ

ರಾಷ್ಟ್ರ ಮತ್ತು ವಿದೇಶಗಳಲ್ಲಿ ದೊರೆಯುವ ಅರಣ್ಯ ಪೂರಕ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಉತ್ಸುಕತೆ ತೋರಬೇಕು ಎಂದು ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್‌.ಎನ್‌. ಮೂರ್ತಿ ಸಲಹೆ ನೀಡಿದರು

Students should be eager to pursue forestry education abroad rav

ಗೋಣಿಕೊಪ್ಪ {ಜು.29} : ರಾಷ್ಟ್ರ ಮತ್ತು ವಿದೇಶಗಳಲ್ಲಿ ದೊರೆಯುವ ಅರಣ್ಯ ಪೂರಕ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಉತ್ಸುಕತೆ ತೋರಬೇಕು ಎಂದು ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್‌.ಎನ್‌. ಮೂರ್ತಿ ಸಲಹೆ ನೀಡಿದರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮತ್ತು ವಸತಿ ನಿಲಯಗಳ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಅರಣ್ಯ ಪದವೀಧರರು ಉಪ ವಲಯ, ವಲಯ ಅಧಿಕಾರಿ, ಸಹಾಯಕ ಸಂರಕ್ಷಣಾಧಿಕಾರಿ ಹುದ್ದೆ ನಿಭಾಯಿಸುವಷ್ಟುಮಾತ್ರ ಮಾನಸಿಕವಾಗಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ. ಶೇ.10ರಷ್ಟುವಿದ್ಯಾರ್ಥಿಗಳಾದರೂ ಐಎಫ್‌ಎಸ್‌, ಫಾರಿನ್‌ ಸರ್ವಿಸ್‌ ಮೂಲಕ ಹುದ್ದೆ ಗಿಟ್ಟಿಸಿಕೊಳ್ಳಲು ವಿಫುಲ ಅವಕಾಶವಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು. ವಿದೇಶಗಳಲ್ಲಿ ಕೂಡ ಸರ್ಕಾರದ ಆರ್ಥಿಕ ಪ್ರೋತ್ಸಾಹದೊಂದಿಗೆ ಅರಣ್ಯ ವಿಜ್ಞಾನ ಮುಂದುವರಿಸಲು ಅವಕಾಶವಿದೆ. ಇಲಾಖೆಯಲ್ಲಿ ಮತ್ತಷ್ಟುನೀತಿ ಅನುಷ್ಠಾನಗೊಳಿಸಲು ಐಎಫ್‌ಎಸ್‌ ಶಿಕ್ಷಣಕ್ಕೆ ಮುಂದಾಗಬೇಕು ಎಂದು ಅವರು ಸಲಹೆ ನಿಡಿದರು.

ಣಿ ಸ್ಫೋಟಕ್ಕೆ ಪ್ರಾಣಿ-ಪಕ್ಷಿ ಸಂಕುಲವೇ ನಾಶ: ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ

ಶಿವಮೊಗ್ಗ(Shivamogga) ಕೆಳದಿ ಶಿವಪ್ಪ ನಾಯಕ(Keladi Shivappa Nayak) ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲದ ಕುಲಪತಿ ಡಾ.ಆರ್‌.ಸಿ. ಜಗದೀಶ*(Dr.R.C.Jagdish) ಮಾತನಾಡಿ, ಅರಣ್ಯ ಇಲಾಖೆಯಲ್ಲಿ ಒಬ್ಬ ಪದವೀಧರರನ್ನು ರೂಪಿಸಲು ಸರ್ಕಾರ 96 ಲಕ್ಷ ರು. ವಿನಿಯೋಗಿಸುತ್ತಿದೆ.  ಇದರ ಸದುಪಯೋಗಪಡೆದುಕೊಂಡು ಉತ್ಸುಕತೆಯಿಂದ ಶಿಕ್ಷಣ ಪಡೆದುಕೊಂಡು  ವೈಯಕ್ತಿಕ ಬದುಕಿನೊಂದಿಗೆ ನಿಮ್ಮ ಸೇವೆಯು  ಸಮಾಜಕ್ಕೆ, ಭವಿಷ್ಯದಲ್ಲಿನ ಅರಣ್ಯ ಅಭಿವೃದ್ಧಿಗೆ ಸೇವೆ ನೀಡಲು ಮಾನಸಿಕವಾಗಿ ನಿಮ್ಮನ್ನ ನೀವು ಸಮರ್ಪಿಸಿಕೊಳ್ಳಲು ಸಿದ್ಧರಾಗಬೇಕು. ಕಿರಿಯ ವಿದ್ಯಾರ್ಥಿಗಳಿಗೆ ಅರಣ್ಯಶಾಸ್ತ್ರದಲ್ಲಿನ ಧನಾತ್ಮಕ ವಿಚಾರವನ್ನು ತಿಳಿಸುವ ಗುಣ ರೂಢಿಸಿಕೊಳ್ಳಬೇಕು ಎಂದರು.

Chikkamagaluru: ಅರಣ್ಯ ಇಲಾಖೆಯ ಕ್ಯಾಂಪ್‌ನಲ್ಲಿ ಕಳ್ಳತನ ಮಾಡಿದ್ದ ಖದೀಮರ ಬಂಧನ

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಎಂ. ಹನುಮಂತಪ್ಪ, ಕುಲಸಚಿವ ಡಾ.ಆರ್‌. ಲೋಕೇಶ, ವಿದ್ಯಾರ್ಥಿ ಕಲ್ಯಾಣ ಮುಖ್ಯಸ್ಥ ಡಾ.ಎನ್‌. ಶಿವಶಂಕರ್‌, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ, ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಹುಲ್‌ಗೌಡ ಪಾಟೀಲ್‌ ಇದ್ದರು. ಕಾಲೇಜು ಮತ್ತು ವಿದ್ಯಾರ್ಥಿ ನಿಲಯದ ವರದಿ ವಾಚಿಸಲಾಯಿತು. ಕ್ರೀಡೆ, ಸಾಂಸ್ಕೃತಿಕ ಹಾಗೂ ವಿಶೇಷ ಸಾಧಕರಿಗೆ ಬಹುಮಾನ ವಿತರಣೆ, ವಸತಿ ನಿಲಯದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

 

 

Latest Videos
Follow Us:
Download App:
  • android
  • ios