Chikkamagaluru: ಅರಣ್ಯ ಇಲಾಖೆಯ ಕ್ಯಾಂಪ್‌ನಲ್ಲಿ ಕಳ್ಳತನ ಮಾಡಿದ್ದ ಖದೀಮರ ಬಂಧನ

ಅರಣ್ಯ ಇಲಾಖೆಯ ಕ್ಯಾಂಪ್‌ನಲ್ಲಿ ಮುಳ್ಳು ತಂತಿ ಕದ್ದಿದ್ದ ಖದೀಮರನ್ನು ಪ್ರಕರಣ ದಾಖಲಾದ 24 ಗಂಟೆಯಲ್ಲೇ ಬಂಧಿಸುವಲ್ಲಿ ಕಾಫಿನಾಡಿನ ಪೊಲೀಸರು ಯಶ್ವಸಿಯಾಗಿದ್ದಾರೆ.

3 accused arrested for theft case in chikkamagaluru gvd

ಚಿಕ್ಕಮಗಳೂರು (ಜು.27): ಅರಣ್ಯ ಇಲಾಖೆಯ ಕ್ಯಾಂಪ್‌ನಲ್ಲಿ ಮುಳ್ಳು ತಂತಿ ಕದ್ದಿದ್ದ ಖದೀಮರನ್ನು ಪ್ರಕರಣ ದಾಖಲಾದ 24 ಗಂಟೆಯಲ್ಲೇ ಬಂಧಿಸುವಲ್ಲಿ ಕಾಫಿನಾಡಿನ ಪೊಲೀಸರು ಯಶ್ವಸಿಯಾಗಿದ್ದಾರೆ.

ಸಖರಾಯಪಟ್ಟಣ ಠಾಣೆಯ ಪೊಲೀಸರು ಕಾರ್ಯಾಚರಣೆ: ಜುಲೈ24 ರ ರಾತ್ರಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ಅಯ್ಯನಕೆರೆಯ ಬಳಿಯಿರುವ ಅರಣ್ಯ ಇಲಾಖೆಗೆ ಏರಿದ್ದ ಕ್ಯಾಂಪ್‌ನಲ್ಲಿಟ್ಟಿದ್ದ  ಮುಳ್ಳು ತಂತಿ ಸಿಂಬೆಗಳು ಕಳ್ಳತನವಾಗಿರುವ ಕುರಿತು 25ರಂದು ಪ್ರಕರಣ ದಾಖಲಿಸಿಕೊಂಡ ಸಖರಾಯಪಟ್ಟಣ ಠಾಣೆಯ ಪಿಎಸ್ಐ ಎನ್.ಪಿ ನವೀನ್ ಮತ್ತು ಜಿ. ಲೋಕೇಶ್ ನೇತೃತ್ವದ ತಂಡ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಂತೆ ಪ್ರಕರಣದ ಬೆನ್ನುಹತ್ತಿ 24 ಗಂಟೆಯಲ್ಲೆ ಮಾಲು ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ. 

ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ 14 ದಿನಗಳ ಬಳಿಕ ರಸ್ತೆಯಲ್ಲಿ ಬಿಂದಾಸ್ ಓಡಾಟ!

ಬಂಧಿತ ಆರೋಪಿಗಳಾದ ಶ್ರೀಧರ, ಕಿರಣ, ಸುಮಂತ, ಇವರುಗಳು ಅಗ್ರಹಾರ ತಾಂಡ್ಯ ಗ್ರಾಮದ ನಿವಾಸಿಗಳಾಗಿದ್ದು, ಅಯ್ಯನಕೆರೆ ಬಳಿಯ ಅರಣ್ಯ ಇಲಾಖೆಯ ಕ್ಯಾಂಪ್‌ನಿಂದ ಮುಳ್ಳುತಂತಿ ಹಾಗೂ ದೇವನೂರು ಅಂಗನವಾಡಿಯ ಗ್ಯಾಸ್ ಸಿಲಿಂಡರ್‌ಗಳನ್ನು ಕಳ್ಳತನ ಮಾಡಿದ್ದು ನಾವೇ ಎಂಬುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. 

ಮಲೆನಾಡಿನಲ್ಲಿ ಮಳೆ ಬಿಡುವು , ರೈತರಿಗೆ ಕೃಷಿ ಇಲಾಖೆಯಿಂದ ಸಲಹೆ

ಬಂಧಿತರಿಂದ ಕಳ್ಳತನವಾಗಿದ್ದ ವಸ್ತುಗಳು ವಶಕ್ಕೆ: ಬಂಧಿತರಿಂದ 51 ಸಾವಿರ ರೂ. ಬೆಲೆ ಬಾಳುವ 17 ಮುಳ್ಳುತಂತಿ ಸಿಂಬೆಗಳು, 10 ಸಾವಿರ. ಬೆಲೆಯ 2 ಗ್ಯಾಸ್ ಸಿಲಿಂಡರ್, ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಮೋಟಾರ್ ಬೈಕ್, ಒಂದು ಮಾರುತಿ ಓಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಎನ್.ಪಿ ನವೀನ್, ಜಿ. ಲೋಕೇಶ್ ಸಿಬ್ಬಂಧಿಗಳಾದ ಹೆಚ್‌.ಸಿ.ಬಿ. ಪ್ರಕಾಶ್, ಸತೀಶ್, ಪಿಸಿ ಅರುಣ್ ಕುಮಾರ್, ಮಧು, ಶ್ರೀಧರ್, ಸಂದೇಶ್, ಅಣ್ಣಯ್ಯ, ರೇಣುಕ ರಾಜ್ ಪಾಲ್ಗೊಂಡಿದ್ದರು. ಈ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ಅವರು ಶ್ಲಾಘಿಸಿದ್ದಾರೆ.

Latest Videos
Follow Us:
Download App:
  • android
  • ios