NAS Survey; 2017ಕ್ಕಿಂತ ಕಳಪೆ ಸಾಧನೆ ಮಾಡಿದ ದಕ್ಷಿಣ ಭಾರತದ ವಿದ್ಯಾರ್ಥಿಗಳು!

ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ವಿದ್ಯಾರ್ಥಿಗಳ ಕಾರ್ಯಕ್ಷಮತೆಯು 2017ಕ್ಕಿಂತ ಕಳಪೆಯಾಗಿದೆ ಎಂದು ರಾಷ್ಟ್ರೀಯ ಸಾಧನೆ ಸಮೀಕ್ಷೆ (NAS) ತಿಳಿಸಿದೆ.

Students perform worse when compared to 2017 in most subjects in four southern states gow

ನವದೆಹಲಿ (ಜೂ.2): ದಕ್ಷಿಣ ಭಾರತದ (southern states) ನಾಲ್ಕು ರಾಜ್ಯಗಳಾದ ಆಂಧ್ರಪ್ರದೇಶ (Andhra Pradesh), ಕೇರಳ (Kerala), ಕರ್ನಾಟಕ (Karnataka) ಮತ್ತು ತಮಿಳುನಾಡಿನ (Tamil Nadu) ಶಾಲೆಗಳ ಎಲ್ಲಾ ತರಗತಿಗಳ ವಿದ್ಯಾರ್ಥಿಗಳ ಕಾರ್ಯಕ್ಷಮತೆಯು 2017ಕ್ಕಿಂತ ಕಳಪೆಯಾಗಿದೆ ಎಂದು ರಾಷ್ಟ್ರೀಯ ಸಾಧನೆ ಸಮೀಕ್ಷೆ( National Achievement Survey -NAS) ತಿಳಿಸಿದೆ.

2021 ರಲ್ಲಿ ಇಂಗ್ಲಿಷ್ ಹೊರತುಪಡಿಸಿ ಹೆಚ್ಚಿನ ವಿಷಯಗಳಲ್ಲಿ ವಿದ್ಯಾರ್ಥಿಗಳು ಅತ್ಯಂತ ಕಳಪೆ ಸಾಧನೆ ಮಾಡಿದ್ದಾರೆ ಎಂದು ಎನ್ಎಎಸ್ ಹೇಳಿದೆ.

ಹೆಚ್ಚಿನ ವಿಷಯಗಳಲ್ಲಿ 500 ಸ್ಕೇಲ್ಡ್ ಸ್ಕೋರ್‌ಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಆದರೆ ದಕ್ಷಿಣ ಭಾರತ ನಾಲ್ಕು ರಾಜ್ಯಗಳಲ್ಲಿ 10ನೇ ತರಗತಿಯ ಹೆಚ್ಚಿನ ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಮೂಲ ಅಂಕಗಳಿಗಿಂತ ಕಡಿಮೆ ಅಂಕಗಳನ್ನು ಗಳಿಸಿದ್ದಾರೆ.

Koppala ಟಿಸಿಗಾಗಿ ತಾಳಿ ಮಾರಲು ಸಿದ್ದವಾಗಿದ್ದ ತಾಯಿ!

ರಾಜ್ಯವಾರು ವರದಿಯ ಪ್ರಕಾರ, ಕೇರಳದಲ್ಲಿ ಭಾಷಾ ವಿಷಯದಲ್ಲಿ 3ನೇ ತರಗತಿ ಅಂಕಗಳು 349 ರಿಂದ 342 ಕ್ಕೆ ಇಳಿದಿದೆ ಎಂದು ತೋರಿಸುತ್ತದೆ. ಗಣಿತದ ಅಂಕಗಳು 340 ರಿಂದ 313 ಕ್ಕೆ ಇಳಿದಿದ್ದು, ಪರಿಸರ ಅಧ್ಯಯನದಲ್ಲಿ 346 ರಿಂದ 318 ಕ್ಕೆ ಇಳಿಕೆಯಾಗಿದೆ. ಇದೆ ಪ್ರವೃತ್ತಿ ಐದು, ಎಂಟು ಮತ್ತು 10ನೇ ತರಗತಿಗಳ ಅಂಕಗಳಲ್ಲಿ ಕಂಡುಬಂದಿದೆ.

ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದ ವಿದ್ಯಾರ್ಥಿಗಳು ಇದೇ ರೀತಿಯ ಇಳಿಮುಖ ಫಲಿತಾಂಶಗಳನ್ನು ದಾಖಲಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

UPSC Recruitment 2022: ಉಪಪ್ರಾಂಶುಪಾಲರು ಸೇರಿ ವಿವಿಧ 161 ಹುದ್ದೆಗೆ ನೇಮಕಾತಿ

ಭಾಷೆಯಲ್ಲಿ 3ನೇ ತರಗತಿಯ ರಾಷ್ಟ್ರೀಯ ಸರಾಸರಿಯು 323, ಗಣಿತದಲ್ಲಿ 306 ಮತ್ತು EVS ನಲ್ಲಿ 307 ಆಗಿದೆ. ದೇಶದಾದ್ಯಂತ 720 ಜಿಲ್ಲೆಗಳಲ್ಲಿ 1.18 ಲಕ್ಷ ಶಾಲೆಗಳಲ್ಲಿ ಸುಮಾರು 34 ಲಕ್ಷ ವಿದ್ಯಾರ್ಥಿಗಳು NAS 2021 ರಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ನಡೆಸಿದ ಅತ್ಯಂತ ವ್ಯಾಪಕವಾದ ವ್ಯಾಯಾಮಗಳಲ್ಲಿ ಭಾಗವಹಿಸಿದ್ದಾರೆ. ಕೊನೆಯ NAS ಅನ್ನು 2017 ರಲ್ಲಿ ನಡೆಸಲಾಯಿತು.

WORK FROM OFFICE: ಉದ್ಯೋಗಿಗಳನ್ನು ಕಚೇರಿಗೆ ಮರಳಿ ತರಲು ಕಂಪನಿಗಳ ಹರಸಾಹಸ

ತಮಿಳುನಾಡಿನಲ್ಲಿ 32%   8ನೇ ತರಗತಿ ವಿದ್ಯಾರ್ಥಿಗಳು ಭಾಷೆಯಲ್ಲಿ ಮೂಲಭೂತ ಮಟ್ಟಕ್ಕಿಂತ ಕಡಿಮೆ ಸಾಧನೆ ಮಾಡಿದ್ದಾರೆಂದು ತೋರಿಸಿದೆ. ಗಣಿತದಲ್ಲಿ ಶೇ.26  ಮತ್ತು EVS ನಲ್ಲಿ ಶೇ.24.

5 ನೇ ತರಗತಿಯಲ್ಲಿ, 40 ಪ್ರತಿಶತ ವಿದ್ಯಾರ್ಥಿಗಳು EVS ನಲ್ಲಿ ಮೂಲಭೂತಕ್ಕಿಂತ ಕಡಿಮೆ ಸಾಧನೆ ಮಾಡಿದ್ದಾರೆ, ಗಣಿತದಲ್ಲಿ 39 ಪ್ರತಿಶತ, ಮತ್ತು ಭಾಷೆಗಳಲ್ಲಿ 27 ಪ್ರತಿಶತ. 

ವರ್ಕ್‌ ಫ್ರಂ ಹೋಂ ಬೇಕು ಅಂದ್ರೆ ಪರ್ಮನೆಂಟಾಗಿ ಮನೆಗೆ ಕಳಿಸ್ತೀನಿ: ಟೆಸ್ಲಾ ಸಿಬ್ಬಂದಿಗೆ ಮಸ್ಕ್‌ ಎಚ್ಚರಿಕೆ

8 ನೇ ತರಗತಿಯಲ್ಲಿ ವಿಜ್ಞಾನ ಮತ್ತು ಸಮಾಜ ವಿಜ್ಞಾನವು ಒಂದು ದೊಡ್ಡ ಸವಾಲಾಗಿ ಪರಿಣಮಿಸಿತು, ಏಕೆಂದರೆ ಅರ್ಧದಷ್ಟು ವಿದ್ಯಾರ್ಥಿಗಳು ಎರಡು ವಿಷಯಗಳಲ್ಲಿ ಮೂಲಭೂತ ಮಟ್ಟಕ್ಕಿಂತ ಕೆಳಗೆ ಸಾಧನೆ ಮಾಡಿದ್ದಾರೆ.

Bank of Baroda Recruitment 2022; ವಿವಿಧ ಹುದ್ದೆಗಳಿಗೆ ನೇಮಕಾತಿ

10ನೇ ತರಗತಿಯಲ್ಲಿ, ಆಶ್ಚರ್ಯ ಎಂಬಂತೆ 85 ಪ್ರತಿಶತದಷ್ಟು ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಕಡಿಮೆ ಸಾಧನೆ ಮಾಡಿದ್ದಾರೆ. ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಲ್ಲಿ ಇದೇ ರೀತಿಯ ಪ್ರವೃತ್ತಿ ಕಂಡುಬಂದಿದೆ, ಅಲ್ಲಿ ಶೇ. 75   ಮತ್ತು ಶೇ. 74 ಪ್ರತಿಶತದಷ್ಟು ವಿದ್ಯಾರ್ಥಿಗಳು ಮೂಲ ಮಟ್ಟಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದ್ದಾರೆ.

Latest Videos
Follow Us:
Download App:
  • android
  • ios