ಸೈನಿಕರು, ಪೊಲೀಸರಿಗೆ ವಿಶೇಷ ಹೆಲ್ಮೆಟ್ ತಯಾರಿಸಿದ ಗೋರಖಪುರ ಐಟಿಎಂ ವಿದ್ಯಾರ್ಥಿಗಳು!

*ಉತ್ತರ ಪ್ರದೇಶದ ಗೋರಖಪುರ ಐಟಿಎಂ ವಿದ್ಯಾರ್ಥಿಗಳಿಂದ ವಿಶಿಷ್ಟ ಸಾಧನೆ
*ಪೊಲೀಸರು, ಸೈನಿಕರಿಗೆ ನೆರವಾಗುವ ವಿಶಿಷ್ಟ ಹೆಲ್ಮೆಟ್ ಅಭಿವೃದ್ಧಿಪಡಿಸಿದ ಸ್ಟೂಡೆಂಟ್ಸ್
*ಪೊಲೀಸರು, ಸೈನಿಕರು ಕಾಣೆಯಾದಾಗ ಸಂಪರ್ಕದ ನೆರವಿಗ ಬರಲಿದೆ ಈ ಹೆಲ್ಮೆಟ್

Students of ITM Gorakhpur develop special helmet for police and soldiers

ಉತ್ತರ ಪ್ರದೇಶದ ವಿದ್ಯಾರ್ಥಿಗಳು ಸೈನಿಕರು, ಪೊಲೀಸರಿಗಾಗಿ 'ವಿಶೇಷ ಹೆಲ್ಮೆಟ್' ಅನ್ನು ಅಭಿವೃದ್ಧಿಪಡಿಸಿದ್ದಾರೆ. ಗೋರಖ್‌ಪುರದಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (Institute Of Technology And Management- ಐಟಿಎಂ) ವಿದ್ಯಾರ್ಥಿಗಳು ರಕ್ಷಣಾ ಮತ್ತು ಭದ್ರತಾ ಸಿಬ್ಬಂದಿಗಾಗಿ ವಿಶೇಷ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence_ಎಐ) ಆಧಾರಿತ ಫೈರಿಂಗ್ ಹೆಲ್ಮೆಟ್(Firing Helmet) ಅನ್ನು ಅಭಿವೃದ್ಧಿಗೊಳಿಸಿದ್ದಾರೆ. ಈ ಸ್ಮಾರ್ಟ್ ಹೆಲ್ಮೆಟ್ ಅನ್ನು ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (BCA) ಮತ್ತು ಬ್ಯಾಚುಲರ್ ಆಫ್ ಟೆಕ್ನಾಲಜಿ (B.Tech) ವಿದ್ಯಾರ್ಥಿಗಳು ಡೆವಲಪ್ ಮಾಡಿದ್ದಾರೆ. ಇದಕ್ಕೆ 'AI ಆಧಾರಿತ ಸ್ವಯಂಚಾಲಿತ ಫೈರಿಂಗ್ ಹೆಲ್ಮೆಟ್' ಎಂದು ಹೆಸರಿಸಲಾಗಿದೆ. ಈ ಫೈರಿಂಗ್ ಹೆಲ್ಮೆಟ್‌ನಲ್ಲಿ GPS ಟ್ರ್ಯಾಕರ್ ಇದೆ. ಇದರ ಮೂಲಕ ಫೋಟೋಗಳು ಮತ್ತು ವೀಡಿಯೊಗಳನ್ನು ಬೇಸ್ ಅಥವಾ ಕಂಟ್ರೋಲ್ ರೂಂಗೆ ಕಳುಹಿಸಬಹುದು. ಯಾವುದೇ ಸೈನಿಕ ಸಂಪರ್ಕ ಕಳೆದುಕೊಂಡರೆ ಹೆಲ್ಮೆಟ್ ಕೂಡ ಸಹಾಯ ಮಾಡುತ್ತದೆ ಎಂದು ಸ್ಪೆಷಲ್ ಹೆಲ್ಮೆಟ್ ತಯಾರಿ ಯೋಜನೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ಇದು ಜಿಪಿಎಸ್ ಟ್ರ್ಯಾಕರ್ ಹೊಂದಿರುವ ಎಐ ಆಧಾರಿತ ಫೈರಿಂಗ್ ಹೆಲ್ಮೆಟ್ ಆಗಿದೆ. ಸೈನಿಕರು ಹಾಗೂ ಪೊಲೀಸರು ಸಂಪರ್ಕ ಕಳೆದುಕೊಂಡ ಸಂದರ್ಭದಲ್ಲಿ ನಿಯಂತ್ರಣ ಕೊಠಡಿಗೆ ವಿಡಿಯೊಗಳು ಮತ್ತು ಫೋಟೋಗಳನ್ನು ಕಳುಹಿಸಬಹುದು. ಇದು ನಿಗದಿತ ವ್ಯಾಪ್ತಿಯಲ್ಲಿ ಎಲ್ಲಾ ದಿಕ್ಕುಗಳಲ್ಲಿಯೂ ಫೈರ್ ಕೂಡ ಮಾಡಬಹುದು ಎಂದು ಐಟಿಎಂ ಕಾಲೇಜಿನ ನಿರ್ದೇಶಕ ಎನ್‌.ಕೆ ಸಿಂಗ್ ಹೇಳಿದ್ದಾರೆ.

IAS ಅಧಿಕಾರಿ ಅವನೀಶ್ ಶರಣ್ 10 ಬಾರಿ ಪ್ರಿಲಿಮ್ಸ್ ಫೇಲ್ ಆಗಿದ್ದರಂತೆ!

ನಮ್ಮ ಯೋಧರು ಮತ್ತು ಪೊಲೀಸರನ್ನು ರಕ್ಷಿಸಲು ನಾವು ಈ ಹೆಲ್ಮೆಟ್ ಅನ್ನು ತಯಾರಿಸಿದ್ದೇವೆ. ಭೂಕುಸಿತ ಮತ್ತು ಹಿಮಪಾತದ ಸಮಯದಲ್ಲಿ ಗಡಿ ಪ್ರದೇಶಗಳಲ್ಲಿ ಸಿಲುಕಿಕೊಳ್ಳುವುದರಿಂದ ಯಾರೊಂದಿಗೆ ಸಂಪರ್ಕ ಸಾಧಿಸಲು ಕಷ್ಟವಾಗುತ್ತದೆಯೋ ಅವರನ್ನು ಪತ್ತೆ ಹಚ್ಚುವುದು ಇದರ ಉದ್ದೇಶವಾಗಿದೆ ಎನ್ನುತ್ತಾರೆ ವಿದ್ಯಾರ್ಥಿನಿ ಪ್ರತಿಮಾ ಗೋಸ್ವಾಮಿ. ಈ ಮಾದರಿಗೆ ಹೆಲ್ಮೆಟ್, ಬ್ಯಾರೆಲ್, ಟ್ರಾನ್ಸ್‌ಮಿಟರ್, ರಿಸೀವರ್, ಬುಲೆಟ್, ಎಚ್‌ಡಿ ಪೋರ್ಟಬಲ್ ಡಿವಿಆರ್, ಬ್ಯಾಟರಿ, ಸೋಲಾರ್ ಪ್ಯಾನಲ್, ರಿಮೋಟ್, ಇಂಡಿಕೇಟರ್, ಟ್ರಿಗರ್ ಬಳಸಲಾಗಿದೆ ಎಂದು ಗೋಸ್ವಾಮಿ ವಿವರಿಸಿದ್ದಾರೆ.

ಬ್ಯಾರೆಲ್ ಅನ್ನು ಎಲೆಕ್ಟ್ರಿಕ್ ಗನ್ ಆಗಿ ಪರಿವರ್ತಿಸಿದ್ದೇವೆ. ಅದು ಏಕಕಾಲದಲ್ಲಿ ಮೂರರಿಂದ ನಾಲ್ಕು ಬುಲೆಟ್‌ಗಳನ್ನು ಲೋಡ್ ಮಾಡಬಲ್ಲದು, ಅದನ್ನು ಹೆಲ್ಮೆಟ್‌ನಲ್ಲಿರುವ ಟ್ರಿಗರ್ ಬಳಸಿ ಒಂದೊಂದಾಗಿ ಹಾರಿಸಬಹುದು. ಈ ಎಲೆಕ್ಟ್ರಿಕ್ ಗನ್ ಅನ್ನು ಅವಶ್ಯಕತೆಗೆ ಅನುಗುಣವಾಗಿ 360 ಡಿಗ್ರಿ ತಿರುಗಿಸಬಹುದು ಮತ್ತು ಹೀಗಾಗಿ ಬಳಕೆದಾರರು ಯಾವುದೇ ದಿಕ್ಕಿನಲ್ಲಿ ಶೂಟ್ ಮಾಡಬಹುದಾಗಿದೆ.

ಎಚ್‌ಡಿ ಪೋರ್ಟಬಲ್ ಡಿವಿಆರ್‌ನೊಂದಿಗೆ, ಸುತ್ತಮುತ್ತಲಿನ ದೃಶ್ಯಗಳನ್ನು ರೆಕಾರ್ಡ್ ಮಾಡಬಹುದು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬಹುದು. ಆದ್ದರಿಂದ ಬೆದರಿಕೆ ಗ್ರಹಿಕೆಯ ಆಧಾರದ ಮೇಲೆ ಅಗತ್ಯ ಕ್ರಮಗಳನ್ನು ಪೂರ್ವ-ಎಂಪ್ಟ್ ಮಾಡಬಹುದು ಎಂದು ಇನ್ನೊಬ್ಬ ವಿದ್ಯಾರ್ಥಿನಿ ಅಂಕಿತಾ ತಿಳಿಸಿದ್ದಾರೆ. ನಾವು ಹಿರಿಯ ಅಧಿಕಾರಿಗಳಿಗೆ ಸಂಕೇತಗಳನ್ನು ಕಳುಹಿಸಲು ಟ್ರಾನ್ಸ್‌ಮೀಟರ್ ಅನ್ನು ಬಳಸಿದ್ದೇವೆ. ರಿಸೀವರ್ ನಂತರ ಸೈನಿಕನ ಸ್ಥಳವನ್ನು ಪತ್ತೆಹಚ್ಚಲು ಸಿಗ್ನಲ್ ಅನ್ನು ಪತ್ತೆ ಮಾಡಬಹುದು.

Tamil Nadu: ಮಕ್ಕಳಿಗೆ ವೈಜ್ಞಾನಿಕ ಆಸಕ್ತಿ ಬೆಳೆಸಲು ರೈನ್‌ಬೋ ಫೋರ್ಮ್

ಹೆಲ್ಮೆಟ್‌ನಲ್ಲಿ ಅಳವಡಿಸಲಾಗಿರುವ ಇಂಡಿಕೇಟರ್ ನಿರಂತರ ಕೆಂಪು ಸಂಕೇತ ನೀಡುತ್ತದೆ. ಅದು ರಿಸೀವರ್ ತುದಿಗೆ ಹತ್ತಿರ ಬಂದಾಗ ಹಸಿರು ಬಣ್ಣಕ್ಕೆ ತಿರುಗುತ್ತದೆ ಅಂತಾರೆ ಅಂಕಿತಾ. ಲೈವ್ ವೀಡಿಯೋಗಳನ್ನು ಸೆರೆ ಹಿಡಿಯುವ ಎಚ್‌ಡಿ ಪೋರ್ಟಬಲ್ ಸಾಧನವನ್ನು ಇದರಲ್ಲಿ ಬಳಸಲಾಗಿದೆ. ಆದೇಶವನ್ನು ಕಾರ್ಯಗತಗೊಳಿಸಿದ ಸ್ಥಳದ ಬಗ್ಗೆಯೂ ತಿಳಿದುಕೊಳ್ಳಬಹುದು. ಹೆಲ್ಮೆಟ್ ಧರಿಸಿದ ವ್ಯಕ್ತಿ ಇದ್ದ ಸ್ಥಳದಲ್ಲಿ ಭೂಕುಸಿತ ಸಂಭವಿಸಿದರೆ ಸ್ಥಾಪಿಸಲಾದ ಟ್ರಾನ್ಸ್‌ಮಿಟರ್ ತಿಳಿಸುತ್ತದೆ. ಇದು ಬಟನ್ ಸಹಾಯದಿಂದ ಇದರಲ್ಲಿ ಗುಂಡುಗಳನ್ನು ಹಾರಿಸಬಹುದು. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಇದನ್ನು ಮೆಣಸಿನ ಬಾಂಬ್‌ನಂತೆ ಬಳಸಬಹುದು. ಈ ಹೆಲ್ಮೆಟ್ ಅನ್ನು ಇನ್ನು ಹೆಚ್ಚು ಸುಧಾರಿತ ರೂಪದಲ್ಲಿ ತಯಾರಿಸಬಹುದು ಅಂತಾರೆ ಪ್ರತಿಮಾ ಗೋಸ್ವಾಮಿ.

Latest Videos
Follow Us:
Download App:
  • android
  • ios