IAS ಅಧಿಕಾರಿ ಅವನೀಶ್ ಶರಣ್ 10 ಬಾರಿ ಪ್ರಿಲಿಮ್ಸ್ ಫೇಲ್ ಆಗಿದ್ದರಂತೆ!

*ಬಿಹಾರದ ಸ್ಪರ್ಧಾಂಕ್ಷಿಗೆ ತಮಗಾದ ಅನುಭವ ಮೂಲಕ ಪ್ರೇರಣೆ ನೀಡಿದ ಐಎಎಸ್ ಅಧಿಕಾರಿ
*ಕೇವಲ 4 ಅಂಕಗಳಿಂದ ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ ಫೇಲ್ ಆಗಿದ್ದ ಅಭ್ಯರ್ಥಿ
*ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಐಎಎಸ್ ಅಧಿಕಾರಿ
 

IAS officer Awanesh Sharan failed prelims for 10 times!

ಸೋಲೇ ಗೆಲುವಿನ ಸೋಪಾನ.. ಒಮ್ಮೆ ಸೋತ ಮಾತ್ರಕ್ಕೆ ಜೀವನ ಮುಗಿದು ಹೋಗಲ್ಲ. ಮರಳಿ ಮರಳಿ ಪ್ರಯತ್ನಿಸಿದರೆ ಗುರಿ ಸಾಧಿಸಬಹುದು ಅನ್ನೋದಕ್ಕೆ ಸಾಕಷ್ಟು ನಿದರ್ಶನಗಳು ಕಣ್ಮುಂದಿವೆ. ಐಎಎಸ್ (IAS Officer) ಆಫೀಸರ್ ಆಗಬೇಕು, ಕೆಎಎಸ್ ಅಧಿಕಾರಿ (KAS Officer) ಆಗಬೇಕು, ದೊಡ್ಡ ಸ್ಟಾರ್ ಆಗಬೇಕು.. ಹಾಗೇ ಆಗಬೇಕು.. ಹೀಗೆ ಆಗಬೇಕು ಅಂತ ಒಬ್ಬರದ್ದು ಒಂದೊಂದು ಕನಸು. ಆ ಡ್ರೀಮ್ ನನಸಾಗಿಸಿಕೊಳ್ಳಲು ಪ್ರಯತ್ನ ಮಾಡ್ತಾನೆ ಇರ್ತಾರೆ. ಕೆಲವೊಮ್ಮೆ ಸೋತಾಗ ಕುಗ್ಗಿ ಹೋಗೋದು ಸಾಮಾನ್ಯ. ಅಂಥವರಿಗೆ ಐಎಎಸ್ ಅಧಿಕಾರಿ ಅವನೀಶ್ ಶರಣ್ (IAS Officer Awanish Sharan) ಅವರು ನಿಜಕ್ಕೂ ಸ್ಫೂರ್ತಿ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ಅವರು ಐಎಎಸ್ ಪ್ರಿಲಿಮ್ಸ್ ಪರೀಕ್ಷೆಯಲ್ಲಿ 10 ಸಲ ಫೇಲ್ ಆಗಿದ್ರಂತೆ.  ನಾನು 2002 ರಲ್ಲಿ ಪದವಿ ಪೂರೈಸಿದ್ದೆ, ಆದ್ರೆ 2009 ರಲ್ಲಿ ಕೆಲಸ ಸಿಕ್ಕಿತು ಅಂತ ಸ್ವತಃ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರೇ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ (BPSC)ಪರೀಕ್ಷೆಯಲ್ಲಿ ಆಕಾಂಕ್ಷಿಯೊಬ್ಬರು, ಕೇವಲ 4 ಅಂಕಗಳಿಂದ ಅನುತ್ತೀರ್ಣರಾಗಿದ್ರು. ಇದರಿಂದ ತೀವ್ರ ನಿರಾಸೆಗೊಂಡು ಟ್ವೀಟರ್ನಲ್ಲಿ ತಮ್ಮ ಬೇಸರವನ್ನ ಹೊರಹಾಕಿದ್ರು. ಈ ಟ್ವೀಟ್ ಟ್ಯಾಗ್ ಮಾಡಿರುವ ಐಎಎಸ್ ಅವನೀಶ್ ಶರಣ್, ‘ನಾನು 10 ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ' ಅಂತ ಹೇಳೋ ಮೂಲಕ ಆ ಬಿಪಿಎಸ್‌ಸಿ ಆಕಾಂಕ್ಷಿಗೆ ಧೈರ್ಯ ತುಂಬಿದ್ದಾರೆ. ಮತ್ತೊಮ್ಮೆ ಪರೀಕ್ಷೆಗೆ ಪ್ರಯತ್ನಿಸುವಂತೆ ಆತನಿಗೆ ಪ್ರೇರೇಪಿಸಿದ್ದಾರೆ. 

IAS ಅಧಿಕಾರಿ ಅವನೀಶ್ ಶರಣ್ ಅವರು ತಮ್ಮದೇ ಕಥೆ ಅಥವಾ ಉದಾಹರಣೆಯನ್ನು ಹಂಚಿಕೊಳ್ಳುವ ಮೂಲಕ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರ್ತಾರೆ. ಇದೀಗ  ಬಿಹಾರ ಸಾರ್ವಜನಿಕ ಸೇವಾ ಆಯೋಗದ ಉದ್ಯೋಗಾಕಾಂಕ್ಷಿ 4 ಅಂಕಗಳಿಂದ ಉತ್ತೀರ್ಣರಾಗದಿದ್ದಕ್ಕೆ ಎಷ್ಟು ನಿರಾಶೆಗೊಂಡಿದ್ರು. ಅವರಿಗೆ ತಮ್ಮ ಪರಿಸ್ಥಿತಿಯನ್ನ ವಿವರಿಸುವ ಮೂಲಕ ಸ್ಫೂರ್ತಿ ತುಂಬಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ‘ಸರ್, ಜೀವನವು ನಿರ್ಣಾಯಕ ಕ್ಷಣದಲ್ಲಿದೆ ... Bpsc ಪರೀಕ್ಷೆಯಲ್ಲಿ 4 ಅಂಕಗಳಿಂದ ಆಯ್ಕೆಯಾಗಿಲ್ಲ! ಏನು ಮಾಡಬೇಕೆಂದು ತಿಳಿಯುತ್ತಿಲ್ಲ? 2017 ರಲ್ಲಿ B.tech ಉತ್ತೀರ್ಣರಾಗಿದ್ದೆ. ಆದ್ರೆ ಇಲ್ಲಿಯವರೆಗೆ 5 ವರ್ಷಗಳಿಂದ ನಿರುದ್ಯೋಗಿಯಾಗಿದ್ದೇನೆ ಎಂದು ಟ್ವೀಟ್ ಮಾಡಿ BPSC ಪರಾಜಿತ ಆಕಾಂಕ್ಷಿ ತಮ್ಮ ಜೀವನ ಪರಿಸ್ಥಿತಿಯ ಬಗ್ಗೆ ಹಂಚಿಕೊಂಡಿದ್ರು. 

Amazon Academy: ಮುಂದಿನ ವರ್ಷ ಆಗಸ್ಟ್‌ನಿಂದ ಅಮೆಜಾನ್ ಅಕಾಡೆಮಿ ಸ್ಥಗಿತ

ಈ ಟ್ವೀಟಿಗೆ ಪ್ರತಿಕ್ರಿಯಿಸಿರುವ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು, ಚಿಂತಿಸಬೇಡಿ.. ನಾನು ಐಎಎಸ್ ಪರೀಕ್ಷೆಯ ಪ್ರಿಲಿಮ್ಸ್‌ನಲ್ಲಿ 10 ಬಾರಿ  ಅನುತ್ತೀರ್ಣನಾಗಿದ್ದೆ. ನಾನು 2002 ರಲ್ಲಿ ಪದವಿ ಪಡೆದಿದ್ದೇನೆ, ಆದರೆ 2009 ರಲ್ಲಿ ನನ್ನ ಕೆಲಸ ಸಿಕ್ಕಿತು. ಆಲ್ ದಿ ಬೆಸ್ಟ್’ ಎಂದಿದ್ದಾರೆ.  ಅವನೀಶ್ ಶರಣ್ ಅವರ ಈ ಟ್ವೀಟ್ ಭಾರೀ ವೈರಲ್ ಆಗ್ತಿದ್ದಂತೆ, ನೆಟ್ಟಿಗರು ರಿಯಾಕ್ಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ (Social Media) ಅವನೀಶ್ ಶರಣ್ ಯಾವಾಗಲೂ ಆಕ್ಟೀವ್ ಆಗಿ ಇರ್ತಾರೆ. ಉತ್ತಮ ಸಂದೇಶ, ಸಲಹೆಗಳನ್ನು ನೀಡುತ್ತಾರೆ. ಇತ್ತೀಚೆಗಷ್ಟೇ ಐಎಎಸ್ ಅವನೀಶ್ ಶರಣ್, ಟ್ವಿಟರ್ ನಲ್ಲಿ ಜೀವನದ ಪಾಠವನ್ನು (Life Lesson) ಹಂಚಿಕೊಂಡಿದ್ರು.  ಯಶಸ್ಸನ್ನು ಸಾಧಿಸುವ ವ್ಯಕ್ತಿಯ ಯೋಜನೆ ಮತ್ತು ದೇವರ ಯೋಜನೆಯ ನಡುವಿನ ವ್ಯತ್ಯಾಸವನ್ನು ವಿವರಿಸುವ ಚಿತ್ರವನ್ನು ಅವರು ಟ್ವೀಟ್ ಮಾಡಿದ್ರು. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ನಾವು ಯಾವಾಗಲೂ ಯೋಚಿಸುತ್ತೇವೆ ಅಥವಾ ನೇರವಾದ ಮಾರ್ಗವನ್ನು ಹುಡುಕುತ್ತೇವೆ ಎಂದು ಇದು ತೋರಿಸುತ್ತದೆ. ಆದರೆ, ದೇವರು ನಮಗಾಗಿ ವಿಭಿನ್ನ ಯೋಜನೆಗಳನ್ನು ಹೊಂದಿರುತ್ತಾನೆ ಎಂದು ಬರೆದುಕೊಂಡಿದ್ದರು. ಗುರಿ ಮುಟ್ಟುವ ಮುನ್ನ ನಾವು ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತೇವೆ. ಆ ಸಮಯದಲ್ಲಿ ಅದು ನಮಗೆ ಮಾತ್ರ ಏಕೆ ಆಗುತ್ತಿದೆ ಎಂದು ನಾವು ಯೋಚಿಸುತ್ತೇವೆ. ಆದರೆ ಸಾಮಾನ್ಯವಾಗಿ 'ಎಲ್ಲವೂ ಒಂದು ಕಾರಣಕ್ಕಾಗಿ ನಡೆಯುತ್ತದೆ ಎಂಬ ಅರ್ಥದಲ್ಲಿ ವಿವರಿಸಿದ್ದರು. ಈ ಬಗ್ಗೆ ನೆಟ್ಟಿಗರು ಕೂಡ ಸಾಕಷ್ಟು ಕಮೆಂಟ್ ಗಳನ್ನು ಮಾಡಿದ್ದರು. 

Project Zimadari: ಕಣಿವೆ ರಾಜ್ಯದ ಶಿಕ್ಷಣದಲ್ಲಿ ಕ್ರಾಂತಿ ಸೃಷ್ಟಿಸಿದ ಜಿಮಾದಾರಿ ಕಾರ್ಯಕ್ರಮ!

Latest Videos
Follow Us:
Download App:
  • android
  • ios