Asianet Suvarna News Asianet Suvarna News

ಧಾರವಾಡ: ಜಾತಿ ಪ್ರಮಾಣಪತ್ರಕ್ಕಾಗಿ ಶಾಲೆ ಬಿಟ್ಟು ಡಿಸಿ ಕಚೇರಿಗೆ ಬಂದ ಮಕ್ಕಳು..!

ಶಿಳ್ಳಿಕ್ಯಾತರ ಹಾಗೂ ಕಿಳ್ಳಿಕ್ಯಾತರ ಎಂಬ ಜಾತಿ ಮಧ್ಯೆ ಕೆಲ ವ್ಯತ್ಯಾಸ ಹಾಗೂ ಗೊಂದಲವಿದ್ದು, ಈ ಹಿನ್ನೆಲೆಯಲ್ಲಿ ಶಿಳ್ಳಿಕ್ಯಾತ ಮಕ್ಕಳಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಕೊಟ್ಟಿಲ್ಲ ಜಾತಿ ಪ್ರಮಾಣಪತ್ರ ನೀಡದ ಹಿನ್ನೆಲೆಯಲ್ಲಿ ಗಿರಿಯಾಲ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಿಕೊಳ್ಳುತ್ತಿಲ್ಲ. ಮಕ್ಕಳಿಗೆ ಯಾವ ಸೌಲಭ್ಯಗಳನ್ನೂ ನೀಡುತ್ತಿಲ್ಲ ಎಂದು ಪಾಲಕರು ಆರೋಪಿಸಿದ್ದಾರೆ.  

students held protest in dc office at dharwad for caste certificate grg
Author
First Published Jul 31, 2024, 11:41 AM IST | Last Updated Jul 31, 2024, 12:23 PM IST

ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ(ಜು.31):  ಹುಬ್ಬಳ್ಳಿ ತಾಲೂಕಿನ ಗಿರಿಯಾಲ ಗ್ರಾಮದ ಎಸ್‌ಸಿ ಶಿಳ್ಳಿಕ್ಯಾತರ ಜನಾಂಗದ ಮಕ್ಕಳಿಗೆ ಜಾತಿ ಪ್ರಮಾಣಪತ್ರ ನೀಡದ ಕಾರಣ ಶಾಲಾ ಮಕ್ಕಳನ್ನು ಶಾಲೆಯಿಂದ ಹೊರಹಾಕಲಾಗಿದೆ ಎಂದು ಆರೋಪಿಸಿ ಪಾಲಕರು ಮಕ್ಕಳ ಸಮೇತ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ.

ಶಿಳ್ಳಿಕ್ಯಾತರ ಹಾಗೂ ಕಿಳ್ಳಿಕ್ಯಾತರ ಎಂಬ ಜಾತಿ ಮಧ್ಯೆ ಕೆಲ ವ್ಯತ್ಯಾಸ ಹಾಗೂ ಗೊಂದಲವಿದ್ದು, ಈ ಹಿನ್ನೆಲೆಯಲ್ಲಿ ಶಿಳ್ಳಿಕ್ಯಾತ ಮಕ್ಕಳಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಕೊಟ್ಟಿಲ್ಲ ಜಾತಿ ಪ್ರಮಾಣಪತ್ರ ನೀಡದ ಹಿನ್ನೆಲೆಯಲ್ಲಿ ಗಿರಿಯಾಲ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಿಕೊಳ್ಳುತ್ತಿಲ್ಲ. ಮಕ್ಕಳಿಗೆ ಯಾವ ಸೌಲಭ್ಯಗಳನ್ನೂ ನೀಡುತ್ತಿಲ್ಲ ಎಂದು ಪಾಲಕರು ಆರೋಪಿಸಿದ್ದಾರೆ.  

ಹೆಣ್ಣಿನಿಂದಲೇ ಸಂಕಷ್ಟ: 3 ವರ್ಷ ಸೂಕ್ಷ್ಮವಾಗಿ ಇರುವಂತೆ ವಿನಯ್‌ ಕುಲಕರ್ಣಿಗೆ ಕೊರಗಜ್ಜ ದೈವದ ಸೂಚನೆ..!

ಸಚಿವ ಸಂತೋಷ ಲಾಡ್ ಬರುವವರೆಗೂ ಡಿಸಿ ಕಚೇರಿಯಲ್ಲೇ ಮಕ್ಕಳ ಸಮೇತ ಕುಳಿತ ಪಾಲಕರು ಸಚಿವರ ಎದುರು ತಮ್ಮ ಸಮಸ್ಯೆ ಹೇಳಿಕೊಂಡರು. ಮೂರ್ನಾಲ್ಕು ಕುಟುಂಬಸ್ಥರು ಮಾಡಿದ ತಪ್ಪಿನಿಂದ ಶಿಳ್ಳಿಕ್ಯಾತ ಜನಾಂಗದ ಯಾವೊಬ್ಬರಿಗೂ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಹುಬ್ಬಳ್ಳಿ ತಹಶೀಲ್ದಾರರು ನೀಡುತ್ತಿಲ್ಲ ಎಂದು ಆರೋಪಿಸಿದರು.

ಈ ವೇಳೆ ಲಾಡ್ ಅವರು ತಹಶೀಲ್ದಾರ ಕಚೇರಿಯಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಜಾತಿ ಪ್ರಮಾಣಪತ್ರ ಇಲ್ಲ ಎಂದು ಮಕ್ಕಳನ್ನು ಶಾಲೆಯಿಂದ ಹೊರ ಹಾಕಿದ ಶಿಕ್ಷಕರನ್ನು ಸ್ಥಳಕ್ಕೆ ಕರೆಯಿಸಿ ಎಂದು ಸಚಿವರು ಸೂಚನೆ ನೀಡಿದರು. ಈ ವೇಳೆ ಪ್ರತಿಭಟನಾಕಾರರೊಬ್ಬರು ನಮಗೆ ಯಾವುದಾದರೊಂದು ಜಾತಿ ಪ್ರಮಾಣಪತ್ರ ಕೊಡಿ ಎಲ್ಲ ನೀವು ಮಾಡಿದ ಸಮಸ್ಯೆ ಇದು ಎಂದು ತಹಶೀಲ್ದಾರರ ಮೇಲೆ ಆಕ್ರೋಶಗೊಂಡು ಎಲ್ಲ ಕಾಗದಪತ್ರಗಳನ್ನು ಸಚಿವ ಲಾಡ್‌ ಎದುರೆ ಬಿಸಾಕಿದ ಪ್ರಸಂಗ ನಡೆಯಿತು. 

ಧಾರವಾಡ: ನಿರಂತರ ಮಳೆಗೆ ಜೋಪಡಿ ಮೇಲೆ ಗೋಡೆ ಕುಸಿತ, ಮೂವರಿಗೆ ಗಂಭೀರ ಗಾಯ

ಶಿಳ್ಳಿಕ್ಯಾತರ ಮತ್ತು ಕಿಳ್ಳಿಕ್ಯಾತರ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ ಇದರಲ್ಲಿ ಗೊಂದಲವಿದ್ದು ಮಕ್ಕಳಿಗೆ ಜಾತಿ ಪ್ರಮಾಣಪತ್ರ ನೀಡಿಲ್ಲ.ಹೀಗಾಗಿ ಇವರೆಲ್ಲ ತಮಗೆ ಜಾತಿ ಪ್ರಮಾಣಪತ್ರ ಕೊಡಿ ಎಂದು ಬೇಡಿಕೊಂಡಿದ್ದಾರೆ. ಈ ಸಮಸ್ಯೆ ಬಗ್ಗೆ ಚರ್ಚೆ ನಡೆಸಿರುವ ಸಚಿವ ಸಂತೋಷ ಲಾಡ್ ಹಳೆಯ ರೆಕಾರ್ಡ್ಸ್ ಪ್ರಕಾರ ವ್ಯಕ್ತಿಯೊಬ್ಬರಿಗೆ ಸಿಳ್ಳಿಕ್ಯಾತರ ಎಂದು ಪ್ರಮಾಣ ಪತ್ರ ನೀಡಲಾಗಿತ್ತು ಆತ ಗ್ರಾಪಂ ಚುನಾವಣೆಗೆ ನಿಂತಾಗ ಆತನ ಜಾತಿ ಪ್ರಮಾಣ ಪತ್ರ ತಪ್ಪಾಗಿದೆ ಎಂದು ಕೆಲವರು ತಕರಾರು ತೆಗೆದಿದ್ದರಿಂದ ಮತ್ತೆ ಅದನ್ನು ಕಿಳ್ಳಿಕ್ಯಾತರ ಎಂದು ಮಾಡಲಾಗಿದೆ. ಈ ಬಗ್ಗೆ ಚರ್ಚೆ ನಡೆಸಿ ಸಮಸ್ಯೆ ಸರಿಪಡಿಸಲಾಗುವುದು ಎಂದು ಮಾಧ್ಯಮದವರಿಗೆ ಸಚಿವ ಸಂತೋಷ ಲಾಡ್‌ ಅವರು ಸ್ಪಷ್ಟಪಡಿಸಿದರು.

ಒಟ್ಟಾರೆ ಇಂದು ಶಾಲಾ ಮಕ್ಕಳು ಶಾಲೆ ಬಿಟ್ಟು ತಮಗೆ ನ್ಯಾಯ ಕೊಡಿಸಬೇಕು ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲೇರಿದ್ದರು. ಒಂದು ಹಂತದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಮುಖಂಡರು ಹಾಗೂ ಹುಬ್ಬಳ್ಳಿ ತಹಶೀಲ್ದಾರ ಮಧ್ಯೆ ಜಟಾಪಟಿ ನಡೆದದ್ದಂತೂ ಸುಳ್ಳಲ್ಲ. 

Latest Videos
Follow Us:
Download App:
  • android
  • ios