Kolar: 2017ರಲ್ಲೇ ಆರಂಭವಾದ ಶಾಲಾ ಕಾಮಗಾರಿ ಇನ್ನೂ ಮುಗಿದಿಲ್ಲ: ಮಕ್ಕಳ ಗೋಳು ಕೇಳೋರೇ ಇಲ್ಲ..!

*  ಕುಂಟುತ್ತಾ ಸಾಗಿದ ಹೊಸ ಶಾಲೆಯ ಕಾಮಗಾರಿ
*  ಮಕ್ಕಳು ಹಾಗೂ ಶಾಲಾ ಸಿಬ್ಬಂದಿಗಳಿಗೆ ನರಕ ಯಾತನೆ
*  ನವೋದಯ ಶಾಲೆ ಅಂದರೆ ಇಡೀ ದೇಶದಲ್ಲಿ ಹೆಸರುವಾಸಿ
 

Students Faces Problems For Not Yet Complete School Work in Kolar grg

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ(ಏ.24): ಅದು ದೇಶದ ಪ್ರತಿಷ್ಠಿತ ಹಾಗೂ ಗುಣಮಟ್ಟದ ಶಿಕ್ಷಣ(Education) ಕೊಡುವ ಶಿಕ್ಷಣ ಸಂಸ್ಥೆ. ಅದರೆ ಇಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಕೊರೋನಾ(Coronavirus) ಅನ್ನೋ ಗ್ರಹಣ ಹಿಡಿದ ಪರಿಣಾಮ ಹೊಸ ಶಾಲೆಯ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಇದರಿಂದ ಮಕ್ಕಳು ಹಾಗೂ ಶಾಲಾ ಸಿಬ್ಬಂದಿಗಳಿಗೆ ನರಕ ಯಾತನೆಯಾಗಿದೆ.

Students Faces Problems For Not Yet Complete School Work in Kolar grg

ಬೃಹತ್ತಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳು, ನಿರ್ಮಾಣ ಹಂತದ ಕಟ್ಟಡ ಕಾಮಗಾರಿಗಳ ಮಧ್ಯದಲ್ಲೇ ಓಡಾಡುತ್ತಿರುವ ಮಕ್ಕಳು, ಈ ದೃಶ್ಯಗಳು ಕಂಡು ಬಂದಿದ್ದು ಕೋಲಾರ(Kolar) ತಾಲೂಕಿನ ತಿರುಮಲಕೊಪ್ಪ ಗ್ರಾಮದ ಬಳಿ. ಹೌದು, ಕೋಲಾರ ಜಿಲ್ಲೆಗೆ 2017 ರಲ್ಲಿ ಜವಹಾರ್ ನವೋದಯ ಶಿಕ್ಷಣ ಸಂಸ್ಥೆ(Jawahar Navodaya Vidyalaya) ನಿರ್ಮಾಣಕ್ಕೆ ಅನುಮತಿ ಸಿಕ್ಕಿತ್ತು, ಪರಿಣಾಮ ಕೋಲಾರ ಜಿಲ್ಲಾಡಳಿತ ಕೋಲಾರ ತಾಲೂಕಿನ ತಿರುಮಲಕೊಪ್ಪ ಬಳಿ 30 ಎಕರೆ ಭೂಮಿ ನೀಡಿ ಕಟ್ಟಡ ಕಾಮಗಾರಿ ಆರಂಭ ಮಾಡಿತ್ತು. ಆದರೆ 2017 ರಲ್ಲಿ ಆರಂಭವಾದ ಕಾಮಗಾರಿ ಹಲವು ಕಾರಣಗಳಿಂದ ಇನ್ನೂ ಪೂರ್ಣಗೊಂಡಿಲ್ಲ, 2021 ರ ಡಿಸೆಂಬರ್‌ಗೆ ಕಾಮಗಾರಿ ಪೂರ್ಣವಾಗಬೇಕಿತ್ತು, ಆದರೆ ಕೊರೋನಾ ಸೇರಿದಂತೆ ಹಲವು ಕಾರಣಗಳನ್ನು ಹೇಳಿಕೊಂಡು ಇನ್ನೂ ಕಾಮಗಾರಿ ಪೂರ್ಣವಾಗಿಲ್ಲ, ಇದರ ಬಗ್ಗೆ ಕೇಳಲು ಕಾಮಗಾರಿ ಟೆಂಡರ್‌ನ್ನು(Tender) ಉತ್ತರ ಪ್ರದೇಶ(Uttar Pradesh) ಮೂಲದವರಿಗೆ ನೀಡಲಾಗಿದೆ. ಆದರೆ ಕಂಟ್ರಾಕ್ಟರ್ ಇನ್ನೂ ಕಾಮಗಾರಿಯನ್ನು ಪೂರ್ಣಮಾಡಿಲ್ಲ, ಅದರೆ ಕಳೆದ ಐದು ವರ್ಷಗಳಿಂದ ದೊಡ್ಡಹಸಾಳ ಬಳಿಯ ಡಯಟ್ ಕಟ್ಟಡದಲ್ಲಿ ನವೋದಯ ತರಗತಿಗಳನ್ನು ನಡೆಸಲಾಗುತ್ತಿತ್ತು. ಆದರೆ ದೊಡ್ಡಹಸಾಳದ ಕಟ್ಟಡ ಬಹಳ ಹಳೆಯ ಕಟ್ಟಡವಾಗಿತ್ತು, ಜೊತೆಗೆ ಸಮಸ್ಯೆಗಳು ಹೆಚ್ಚಾದ ಹಿನ್ನೆಲೆ ಏಕಾಏಕಿ ಈ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. 

ಇಡೀ ವಿಶ್ವದಲ್ಲೇ ಉತ್ತಮವಾದ ಸ್ಥಳ ನಮ್ಮ ಕರ್ನಾಟಕ: ಸಚಿವ ಅಶ್ವತ್ಥ ನಾರಾಯಣ

ಇನ್ನು ಈ ಬಗ್ಗೆ ಆಡಳಿತ ಮಂಡಳಿಯನ್ನ ಕೇಳಿದರೆ ಅಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲದ ಪರಿಣಾಮ ಹೊಸ ಕಟ್ಟಡಕ್ಕೆ ವರ್ಗಾವಣೆ ಮಾಡಿದ್ದೇವೆ ಕಟ್ಟಡ ಕಾಮಗಾರಿ ಮುಗಿದಿದೆ, ಇನ್ನು ಆವರಣದಲ್ಲಿ ಕಾಮಗಾರಿ ಬಾಕಿ ಇದೆ ಮಕ್ಕಳಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ ಎನ್ನುತ್ತಿದ್ದಾರೆ.

Students Faces Problems For Not Yet Complete School Work in Kolar grg

ಇನ್ನೂ ಈ ಹೊಸ ಕಟ್ಟಡದಲ್ಲಿ 280 ಮಕ್ಕಳಿದ್ದಾರೆ(Children). ಆದರೆ ಇನ್ನು ಶಾಲೆಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ, ಒಂದೆಡೆ ಶಾಲೆ ನಡೆಯುತ್ತಿದ್ದರೆ ಮತ್ತೊಂದೆಡೆ ಕಾಮಗಾರಿ ನಡೆಯುತ್ತಿದೆ ಇದರಿಂದ ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತಿದೆ. ನವೋದಯ ಶಾಲೆ ಅಂದರೆ ಇಡೀ ದೇಶದಲ್ಲಿ ಹೆಸರುವಾಸಿಯಾಗಿದೆ, ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಸರ್ಕಾರದಿಂದ ಸಂಪೂರ್ಣ ಉಚಿತ ಶಿಕ್ಷಣ ಕೊಡುವ ಸಂಸ್ಥೆ ಎನ್ನುವ ಹೆಗ್ಗಳಿಕೆ ಇದೆ. ಇಲ್ಲಿ ಓದಿದ ಮಕ್ಕಳು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾರೆ, ಅಷ್ಟರ ಮಟ್ಟಿಗಿನ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಇಂತಹ ಶಿಕ್ಷಣ ಸಂಸ್ಥೆಗಳ ನಿರ್ಮಾಣ ಕಾಮಗಾರಿ ಮಾತ್ರ ಹಲವು ತಾಂತ್ರಿಕ ಕಾರಣಗಳು ಮತ್ತು ಕೊರೊನಾ ಕಾರಣ ಹೇಳಿ ವಿಳಂಬ ಮಾಡಲಾಗುತ್ತಿದೆ, ಇದರಿಂದ ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗುತ್ತಿದೆ.

CBSE Syllabus 2022-23 ಪಠ್ಯಕ್ರಮದಲ್ಲಿ ಸಿಬಿಎಸ್‌ಸಿಯಿಂದ ಭಾರೀ ಬದಲಾವಣೆ

ಇನ್ನು ಈ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಕೋಲಾರ ಜಿಲ್ಲಾಧಿಕಾರಿ ಹೇಳುವ ಪ್ರಕಾರ ಇನ್ನು 20 ರಷ್ಟು ಕಾಮಗಾರಿ ಬಾಕಿ ಇದೆ, ಸದ್ಯ ಪರೀಕ್ಷೆ ಸಂಬಂಧ ಮಕ್ಕಳನ್ನು ಸ್ಥಳಾಂತರ ಮಾಡಲಾಗಿದೆ. ಪರೀಕ್ಷೆ ಮುಗಿದ ನಂತರ ಮಕ್ಕಳಿಗೆ ಎರಡು ತಿಂಗಳ ಕಾಲ ಬೇಸಿಗೆ ರಜೆ ಸಿಗಲಿದೆ ಆಷ್ಟರಲ್ಲಿ ಬಾಕಿ ಇರುವ ಕಾಮಗಾರಿಯನ್ನು ಪೂರ್ಣ ಮಾಡಿಕೊಡಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎನ್ನುತ್ತಾರೆ.

ಒಟ್ನಲ್ಲಿ ಉಚಿತ, ಗುಣಮಟ್ಟದ ಶಿಕ್ಷಣ ಕೊಡುವ ಇಂತಹ ಸಂಸ್ಥೆಯೊಂದು ಕೋಲಾರ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿದೆ ಅನ್ನೋದು ಹೆಗ್ಗಳಿಕೆ ವಿಚಾರವಾದ್ರೆ. ಕಾಮಗಾರಿ ಇನ್ನೂ ಪೂರ್ಣವಾಗದೆ ಅನಗತ್ಯ ವಿಳಂಬವಾಗುತ್ತಿದೆ ಅನ್ನೋದು ಬೇಸರದ ಸಂಗತಿ, ಕೂಡಲೇ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
 

Latest Videos
Follow Us:
Download App:
  • android
  • ios