Asianet Suvarna News Asianet Suvarna News

ಇಡೀ ವಿಶ್ವದಲ್ಲೇ ಉತ್ತಮವಾದ ಸ್ಥಳ ನಮ್ಮ ಕರ್ನಾಟಕ: ಸಚಿವ ಅಶ್ವತ್ಥ ನಾರಾಯಣ

*  ಪಂಚಮಸಾಲಿ ಸಮಾಜ ನಾನು ಒಡೆದಿಲ್ಲ: ವಚನಾನಂದ ಶ್ರೀ
*  ಇಡೀ ಸಮಾಜವನ್ನು ಕೂಡಿಸುವ, ಜಾಗೃತಗೊಳಿಸುವ ಕೆಲಸ ಮಾಡಿದ್ದೇನೆ
*  ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡಬೇಕು
 

Karnataka is the best place in the world Says Minister CN Ashwathnarayan grg
Author
Bengaluru, First Published Apr 24, 2022, 8:38 AM IST

ದಾವಣಗೆರೆ(ಏ.24):  ಪಂಚಮಸಾಲಿ(Panchamasali) ಸಮಾಜವನ್ನು ನಾನು ಒಡೆದಿಲ್ಲ. ಸಮಾಜವನ್ನು ಕೂಡಿಸುವ, ಜಾಗೃತಗೊಳಿಸುವ ಕೆಲಸ ಮಾಡಿದ್ದೇನೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ(Vachananand Swamiji) ಸ್ಪಷ್ಟಪಡಿಸಿದರು.

ಹರಿಹರದ(Harihara) ಪಂಚಮಸಾಲಿ ಪೀಠದಲ್ಲಿ(Panchamasali Peetha) ಶನಿವಾರ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಂಚಮಸಾಲಿಗಳ ಕೊಡುಗೆ ಹಾಗೂ ಉದ್ಯೋಗ ಮೇಳದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಾನು ಬಂದ ಮೇಲೆ ಪಂಚಮಸಾಲಿ ಸಮಾಜ ಒಡೆದಿದ್ದಾರೆಂಬ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ. ಆದರೆ, ಸಮಾಜವನ್ನು ಕೂಡಿಸುವ, ಜಾಗೃತಗೊಳಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಒಳ್ಳೆಯ ದಿನಗಳು ಬರಲಿವೆ, ಸಿಎಂ ಭರವಸೆ

ಇಡೀ ಲಿಂಗಾಯತ(Lingayat) ಸಮುದಾಯ ಒಂದೇ ಕೆಟಗರಿಯಲ್ಲಿ ಬರಬೇಕು. ಒಂದು ವೀರಶೈವ ಲಿಂಗಾಯತ ಪಂಗಡ ಎಸ್‌ಸಿಯಲ್ಲಿ, ಇನ್ನೊಂದು 2ಎ ವರ್ಗದಲ್ಲಿ, ಮತ್ತೊಂದು 3ಬಿ ಹೀಗೆ ಬೇರೆ ಬೇರೆ ಮೀಸಲಾತಿ ಪಡೆಯುತ್ತಿವೆ. ಆ ಎಲ್ಲ ಪಂಗಡಗಳೂ ಒಗ್ಗೂಡಿ, ಒಂದೇ ಮೀಸಲಾತಿ ಆಗಬೇಕೆಂಬುದು ನಮ್ಮ ಆಶಯ. ಮೊದಲು ಗೆಜೆಟ್‌ನಲ್ಲಿ ಪಂಚಮಸಾಲಿ ಎಂಬುದಾಗಿ ಸೇರಿಸಿದ್ದು, ಹರಿಹರ ಪಂಚಮಸಾಲಿ ಪೀಠ. ಕೇಂದ್ರದ ಮೀಸಲಾತಿಯಲ್ಲಿ ಇಡೀ ಲಿಂಗಾಯತ ಸಮುದಾಯವನ್ನು ಓಬಿಸಿಯಲ್ಲಿ ತರಬೇಕು ಎಂದು ಸಿಎಂಗೆ ಮನವಿ ಮಾಡಿದರು.

ಸಚಿವ ಡಾ.ಅಶ್ವತ್ಥ ನಾರಾಯಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ(Narendra Modi) ನಾಯಕತ್ವದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(National Education Policy) ಜಾರಿಗೆ ತರಲಾಗಿದೆ. ಅದನ್ನು ಮೊದಲು ಅನುಷ್ಠಾನಗೊಳಿಸಿದ್ದು ನಮ್ಮ ರಾಜ್ಯ. 21ನೇ ಶತಮಾನ ಜ್ಞಾನಾದಾರಿತ ಯುಗವಾಗಿದೆ. ನಮ್ಮ ನಾಡಿನ ಜನರಿಗೆ ಉತ್ತಮ ಭವಿಷ್ಯ ಕೊಡಬೇಕು, ಇಡೀ ವಿಶ್ವದಲ್ಲೇ ಉತ್ತಮವಾದ ಸ್ಥಳ ನಮ್ಮ ರಾಜ್ಯ. ಸರ್ಕಾರ 5 ಹೊಸ ವಿವಿಗಳನ್ನು ಆರಂಭಿಸಿದೆ. ಇನ್ನೂ 7 ಹೊಸ ವಿವಿಗಳನ್ನು ಘೋಷಣೆ ಮಾಡಿ, ಅವುಗಳನ್ನು ಅಭಿವೃದ್ಧಿಪಡಿಸಲಾಗುವುದು. ಪ್ರತಿ ಜಿಲ್ಲೆಯಲ್ಲೂ ವಿವಿ ಆರಂಭಿಸಬೇಕೆಂಬುದು ನಮ್ಮ ಸರ್ಕಾರದ ಆಶಯ ಎಂದು ಹೇಳಿದರು.

ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡಬೇಕು. ಈಗಿರುವ 14 ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಏಳನ್ನು ಐಐಟಿ ಮಾದರಿಯಲ್ಲಿ ಮೇಲ್ದರ್ಜೆಗೇರಿಸುತ್ತೇವೆ. ಸ್ಮಾರ್ಚ್‌ ಇ ಗವರ್ನೆನ್ಸ್‌ ಮೂಲಕ ಡಿಜಿಟಲ್‌ ಕಲಿಕೆಗೆ ಅವಕಾಶ ಕಲ್ಪಿಸಲು ಸರ್ಕಾರ ಒತ್ತು ನೀಡಿದೆ. ದೇಶದಲ್ಲಿ ಮಾದರಿ ಕಲಿಕೆಗೆ ರಹದಾರಿ ಹಾಕಿದ್ದೇವೆ. ಉದ್ಯೋಗ ನೀಡುವುದು ನಮ್ಮ ಗುರಿ. 5 ಸಾವಿರ ಕೋಟಿ ಖರ್ಚು ಮಾಡಿ, ಐಐಟಿ ಸಂಸ್ಥೆಗಳನ್ನು ಉನ್ನತೀಕರಿಸಲಾಗಿದೆ. ಇದಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿ ಬಂದಿದೆ. ಬಡ ಮಕ್ಕಳು ಅಮೇರಿಕಾದಲ್ಲಿ(America) ಓದಲಿಕ್ಕೆ ಪಾಲಿಟೆಕ್ನಿಕ್‌ ಪಠ್ಯ ಉನ್ನತೀಕರಿಸಲಾಗಿದೆ. ಈವರೆಗೆ ಇದ್ದ ವ್ಯವಸ್ಥೆಯಲ್ಲಿ 2.5 ಲಕ್ಷ ಮಕ್ಕಳು ತಾಂತ್ರಿಕ ಶಿಕ್ಷಣ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿದ್ದೇವೆ ಎಂದು ವಿವರಿಸಿದರು.

Davanagere job fair ಧರ್ಮ ಮನುಷ್ಯನಿಗೆ ಇರಬೇಕು ಧರ್ಮಕ್ಕಾಗಿ ಮನುಷ್ಯ ಅಲ್ಲ Siddaramaiah

ಸಮಾಜದ ಮುಖಂಡ ಸೋಮನಗೌಡ ಪಾಟೀಲ್‌ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗಬೇಕಾಗಿತ್ತು. ಬಸವರಾಜ ಬೊಮ್ಮಾಯಿ(Bsavaraj Bommai) ಅವರು ತಮಗೆ ಸಿಕ್ಕ ಅವಕಾಶ ಬಳಸಿಕೊಂಡು, ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ(2A Reservation) ನೀಡಬೇಕು ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ನಮ್ಮ ಇಷ್ಟದ ಮುಖ್ಯಮಂತ್ರಿ!

ನನಗೆ ಬಹಳ ಇಷ್ಟವಾದ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯನವರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಮೂರು ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ನನಗೆ ಅವಕಾಶ ಕಲ್ಪಿಸಿದ್ದರು. ಯಾರೂ ಗುರುತಿಸದ ಕಾಲದಲ್ಲಿ ಸಿದ್ದರಾಮಯ್ಯ ನನ್ನನ್ನು ಗುರುತಿಸಿದರು. ಸಿದ್ದರಾಮಯ್ಯ(Siddaramaiah) ಒಬ್ಬ ಯೋಗರಾಮಯ್ಯ ಎಂಬುದಾಗಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಶ್ಲಾಘಿಸಿದರು.
 

Follow Us:
Download App:
  • android
  • ios