Asianet Suvarna News Asianet Suvarna News

Hampi Kannada University| ಫಲಿತಾಂಶ ಬಂದ್ರೂ ಸಿಗದ ಅಂಕಪಟ್ಟಿ..!

*   2021ರ ಫೆ. 22ರಿಂದ 26ರ ವರೆಗೆ ನಡೆದಿದ್ದ ಪರೀಕ್ಷೆ 
*  ವಿದ್ಯಾರ್ಥಿಗಳ ಸಂಕಟ ಅರಿತು ಬೇಗ ಮೂಲ ಅಂಕಪಟ್ಟಿ ನೀಡಬೇಕು
*  ಕಿಯೋನಿಕ್ಸ್‌ ಸಂಸ್ಥೆಯಿಂದ ಮೂಲ ಅಂಕಪಟ್ಟಿ ಬರುವ ನಿರೀಕ್ಷೆ 

Students Does Not Get Marks Card After Result Came From Hampi Kannada University grg
Author
Bengaluru, First Published Nov 16, 2021, 1:43 PM IST

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ನ.16):  ಹಂಪಿ ಕನ್ನಡ ವಿಶ್ವವಿದ್ಯಾಲಯದ(Hampi Kannada University) ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು(Students) ಪರೀಕ್ಷೆ ಬರೆದು ಪಾಸಾದರೂ ಒರಿಜನಲ್‌ ಅಂಕಪಟ್ಟಿ(Original Markscard) ಕೈಯಲ್ಲಿಲ್ಲ!

ಹೌದು, ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯದಲ್ಲಿ 2018- 19ನೇ ಸಾಲಿನ ಸ್ನಾತಕೋತ್ತರ ಪದವಿ(Master's degree) ಅಂತಿಮ ವರ್ಷದ ವಿದ್ಯಾರ್ಥಿಗಳು ಪರೀಕ್ಷೆ(Exam) ಬರೆದಿದ್ದಾರೆ. ಫಲಿತಾಂಶವೂ(Result) ಪ್ರಕಟಗೊಂಡಿದೆ. ಆದರೆ, ಒರಿಜನಲ್‌ ಅಂಕಪಟ್ಟಿ ಮಾತ್ರ ಅವರ ಕೈಯಲ್ಲಿ ಬಂದಿಲ್ಲ.

ಹಂಪಿ ಕನ್ನಡ ವಿವಿ: ಯುಜಿಸಿ ಪರವಾನಗಿ ಇಲ್ಲದೇ ಕೋರ್ಸ್‌ ಆರಂಭ..?

ಯಾವ್ಯಾವ ವಿಷಯ?:

ದೂರ ಶಿಕ್ಷಣ ನಿರ್ದೇಶನಾಲಯದ(Directorate of Distance Education) ಸ್ನಾತಕೋತ್ತರ ಪದವಿ ವಿಷಯಗಳಾದ ಕನ್ನಡ(Kannada, ಚರಿತ್ರೆ(History), ಸಮಾಜಶಾಸ್ತ್ರ(Sociology), ಪತ್ರಿಕೋದ್ಯಮ(Journalism) ಹಾಗೂ ಡಿಪ್ಲೊಮಾ ಕೋರ್ಸ್‌ಗಳಾದ(Diploma Course) ಪ್ರವಾಸೋದ್ಯಮ ಮತ್ತು ಶಾಸನ ವಿಷಯಗಳ ಕುರಿತು ಒಟ್ಟು 850 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈಗ ಫಲಿತಾಂಶವೂ ಪ್ರಕಟಗೊಂಡಿದೆ. ಆದರೆ, ಒರಿಜನಲ್‌ ಮಾರ್ಕ್ಸ್‌ ಕಾರ್ಡ್‌ ಮಾತ್ರ ವಿದ್ಯಾರ್ಥಿಗಳಿಗೆ ದೊರೆತಿಲ್ಲ.

ಪರೀಕ್ಷೆ ಬರೆದದ್ದು ಯಾವಾಗ?:

2021ರ ಫೆ. 22ರಿಂದ 26ರ ವರೆಗೆ ಪರೀಕ್ಷೆ ನಡೆದಿದ್ದವು. ಬಳಿಕ ಕೋವಿಡ್‌(Covid19) ಕಾರಣದಿಂದಾಗಿ ಲಾಕ್‌ಡೌನ್‌(Lockdown) ಘೋಷಣೆಯಾದ್ದರಿಂದ ಫಲಿತಾಂಶ ಪ್ರಕಟಣೆ ಕೂಡ ತಡವಾಗಿತ್ತು.

ಹೊಸಪೇಟೆ: ತಡರಾತ್ರಿ ಠಾಣೆಯಲ್ಲಿದ್ದ ಹಂಪಿ ವಿವಿ ವಿದ್ಯಾರ್ಥಿನಿಯರು?

ಮುಂಬಡ್ತಿಗೆ ತೊಡಕು:

ಖಾಸಗಿ ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕರು ದೂರ ಶಿಕ್ಷಣದಲ್ಲಿ(Distance Education) ಎಂಎ ಪದವಿ(MA Degree) ಮಾಡಿದ್ದಾರೆ. ಆದರೆ, ಅವರಿಗೆ ಬಡ್ತಿ ಹಾಗೂ ಮುಂಬಡ್ತಿಗಾಗಿ ಅಂಕಪಟ್ಟಿಗಳಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಬಹುತೇಕರು ನಕಲು ಅಂಕಪಟ್ಟಿಗಳನ್ನು ನಿರ್ದೇಶನಾಲಯದಿಂದ ಪಡೆದುಕೊಂಡಿದ್ದಾರೆ. ಆದರೆ, ಮೂಲ ಅಂಕಪಟ್ಟಿಗಳು ದೊರೆತರೆ ಮಾತ್ರ ಬಡ್ತಿ ದೊರೆಯಲಿದೆ. ಹಾಗಾಗಿ ನಿರ್ದೇಶನಾಲಯಕ್ಕೆ ಅಲೆಯುತ್ತಿದ್ದಾರೆ.

ಹಂಪಿ ಕನ್ನಡ ವಿವಿಯ ದೂರಶಿಕ್ಷಣ ನಿರ್ದೇಶನಾಲಯವು ಕೂಡ ಮೂಲ ಅಂಕಪಟ್ಟಿಗಳನ್ನು ಕೊಡಿಸಲು ಪ್ರಯತ್ನಿಸುತ್ತಿದೆ. ಕಿಯೋನಿಕ್ಸ್‌ ಸಂಸ್ಥೆಯಿಂದ(Kionics Institute) ಮೂಲ ಅಂಕಪಟ್ಟಿಗಳು ಬರುವ ನಿರೀಕ್ಷೆ ಇದೆ. ಆದರೆ, ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂದು ಈಗಾಗಲೇ ನಕಲು ಅಂಕಪಟ್ಟಿಗಳನ್ನು ಕೊಡಲಾಗುತ್ತಿದೆ.

ಶುಲ್ಕ ಪಾವತಿಸಿದರೆ ಅಂಕಪಟ್ಟಿ:

ಈ ಮಧ್ಯೆ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು(SC, ST Students) ಪೂರ್ಣ ಶುಲ್ಕ ಪಾವತಿಸಿದರೆ ಮಾತ್ರ ದೂರಶಿಕ್ಷಣ ನಿರ್ದೇಶನಾಲಯ ಮೂಲ ಅಂಕಪಟ್ಟಿಗಳನ್ನು ಕೊಡಲಿದೆ. ಸಮಾಜ ಕಲ್ಯಾಣ ಇಲಾಖೆಗೆ(Department of Social Welfare) ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಈ ಪೂರ್ಣ ಶುಲ್ಕ(Fee) ಪಾವತಿಸಿದರೆ ಮಾತ್ರ ಮೂಲ ಅಂಕಪಟ್ಟಿಗಳನ್ನು ಕೊಡಲಾಗುವುದು ಎಂದು ದೂರಶಿಕ್ಷಣ ನಿರ್ದೇಶನಾಲಯದ ಮೂಲಗಳು ‘ಕನ್ನಡಪ್ರಭ’ಕ್ಕೆ(Kannada Prabha) ತಿಳಿಸಿವೆ.

Hosapete| ಹಂಪಿ ಕನ್ನಡ ವಿವಿ ಪಾವಿತ್ರ್ಯತೆ ಪುನರುಜ್ಜೀವನಕ್ಕೆ ಪತ್ರ ಚಳವಳಿ..!

ದೂರ ಶಿಕ್ಷಣ ನಿರ್ದೇಶನಾಲಯದಲ್ಲಿ ಪರೀಕ್ಷೆ ಬರೆದು ಮೂಲ ಅಂಕಪಟ್ಟಿಗಾಗಿ ದೂರದ ಊರುಗಳಿಂದ ಬರುವಂತಾಗಿದೆ. ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಆಡಳಿತಾಧಿಕಾರಿಗಳು ವಿದ್ಯಾರ್ಥಿಗಳ ಸಂಕಟವನ್ನು ಅರಿತು ಬೇಗ ಮೂಲ ಅಂಕಪಟ್ಟಿಗಳನ್ನು ಕೊಡಿಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹ.

ಹಂಪಿ ಕನ್ನಡ ವಿಶ್ವ ವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯ ಮೂಲ ಅಂಕಪಟ್ಟಿಗಳನ್ನು ಮುದ್ರಿಸುವುದಿಲ್ಲ. ಸರ್ಕಾರವೇ ಕಿಯೋನಿಕ್ಸ್‌ ಸಂಸ್ಥೆಗೆ ಒಪ್ಪಿಸಿದೆ. ಹಾಗಾಗಿ ವಿಳಂಬವಾಗಿದೆ. ಇನ್ನೂ 15 ದಿನದೊಳಗೆ ಮೂಲ ಅಂಕಪಟ್ಟಿಗಳನ್ನು ಕೊಡಲಾಗುವುದು. ವಿದ್ಯಾರ್ಥಿಗಳಿಗೆ ನಕಲು ಅಂಕಪಟ್ಟಿಗಳನ್ನು ಕೂಡ ನಿರ್ದೇಶನಾಲಯದಿಂದ ಕೊಡಲಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ ಎಂದು ಹಂಪಿ ಕನ್ನಡ ವಿವಿ ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ. ಚಿನ್ನಸ್ವಾಮಿ ಸೋಸಲೆ ತಿಳಿಸಿದ್ದಾರೆ. 
 

Follow Us:
Download App:
  • android
  • ios