ಎಂಜಿನಿಯರಿಂಗ್‌ ಕೋರ್ಸ್‌ನ 2021ನೇ ಸಾಲಿನ ಪ್ರಥಮ ವರ್ಷ 2ನೇ ಸೆಮಿಸ್ಟರ್‌ ಮುಖ್ಯ ಪರೀಕ್ಷೆಗಳನ್ನು ಮುಂದೂಡುವಂತೆ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಆಗ್ರಹಿಸಿವೆ.

ಬೆಂಗಳೂರು (ಆ.22): ಎಂಜಿನಿಯರಿಂಗ್‌ ಕೋರ್ಸ್‌ನ 2021ನೇ ಸಾಲಿನ ಪ್ರಥಮ ವರ್ಷ 2ನೇ ಸೆಮಿಸ್ಟರ್‌ ಮುಖ್ಯ ಪರೀಕ್ಷೆಗಳನ್ನು ಮುಂದೂಡುವಂತೆ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು (ವಿಟಿಯು) ಆಗ್ರಹಿಸಿವೆ. ವಿಟಿಯು ಸೆ.12ರಿಂದ 29ರವರೆಗೆ ಪರೀಕ್ಷೆಯನ್ನು ನಡೆಸಲು ಉದ್ದೇಶಿಸಿದೆ. ಕಾಲೇಜುಗಳು ಶೈಕ್ಷಣಿಕ ವೇಳಾಪಟ್ಟಿಅನುಸರಿಸುವುದಕ್ಕಾಗಿ ಪ್ರಾಧ್ಯಾಪಕರು ಆರು ತಿಂಗಳಲ್ಲಿ ಮುಗಿಸ ಬೇಕಾದ ಪಠ್ಯಕ್ರಮವನ್ನು ಕೇವಲ ಎರಡು ತಿಂಗಳಲ್ಲಿ ಮುಗಿಸಲು ಮುಂದಾಗಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ತರಾತುರಿಯಲ್ಲಿ ಪಠ್ಯಕ್ರಮ ಮುಗಿಸಿರುವುದರಿಂದ ವಿದ್ಯಾರ್ಥಿಗಳಿಗೆ ಪಾಠಗಳೇ ಅರ್ಥವಾಗಿಲ್ಲ ಎಂದಿದ್ದಾರೆ. ಇದೀಗ ತಕ್ಷಣ ಪರೀಕ್ಷೆ ನಡೆಸಲು ವೇಳಾಪಟ್ಟಿಹೊರಡಿಸಿರುವುದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಹುಟ್ಟಿಸಿದೆ. ನಿಗದಿತ ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಸಿದರೆ, ಪರೀಕ್ಷೆಗೆ ಸಿದ್ಧತೆ ನಡೆಸಲು ಸಮಯವೇ ಇಲ್ಲದಂತಾಗಿ ಸಾಕಷ್ಟುವಿದ್ಯಾರ್ಥಿಗಳು ಕಡಿಮೆ ಅಂಕ ಪಡೆಯುವ ಹಾಗೂ ಫೇಲ್‌ ಆಗಬೇಕಾಗುತ್ತದೆ. ಇದು ಭವಿಷ್ಯದಲ್ಲಿ ಪ್ಲೇಸ್‌ಮೆಂಟ್‌ಗಳ ಮೇಲೆ ಪ್ರಭಾವ ಬೀರಲಿದೆ. ಈ ಹಿನ್ನೆಲೆಯಲ್ಲಿ ದಯವಿಟ್ಟು ಪರೀಕ್ಷೆಯನ್ನು ಮುಂದೂಡಿ ಪಠ್ಯಕ್ರಮ ಪೂರ್ಣಗೊಳಿಸಿ, ಪರೀಕ್ಷೆಗೆ ಸಿದ್ಧತೆ ನಡೆಸಲು ಅಗತ್ಯ ಕಾಲಾವಕಾಶ ನೀಡಿ ನಂತರ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ವಿಟಿಯು ಮೌಲ್ಯಮಾಪನ ಕುಲಸಚಿವರಿಗೆ ಪತ್ರ ಬರೆದಿದ್ದಾರೆ.

ದಂತವೈದ್ಯ ಪರೀಕ್ಷೆ 1 ತಿಂಗಳು ಮುಂದೂಡಲು ಆಗ್ರಹ: 
ದಂತ ವೈದ್ಯಕೀಯ ಪದವಿಯ (ಬಿಡಿಎಸ್‌) ವಿವಿಧ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ನಲ್ಲಿ ನಿಗದಿಪಡಿಸಿರುವ ಪರೀಕ್ಷೆಗಳನ್ನು ಕನಿಷ್ಠ ಒಂದು ತಿಂಗಳಾದರೂ ಮುಂದೂಡಬೇಕು ಎಂದು ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಆಗ್ರಹಿಸಿದ್ದಾರೆ.

Karnataka University: ಅತಿಥಿ ಉಪನ್ಯಾಸಕ ಹೋರಾಟ ತೀವ್ರ; ಬೇಡಿಕೆಗಳಿಗೆ ಸ್ಪಂದಿಸದ ಕುಲಪತಿ

ಪ್ರಸಕ್ತ 2022-23ನೇ ಸಾಲಿನಲ್ಲಿ ಕೂಡ ಭೌತಿಕ ತರಗತಿಗಳು ತಡವಾಗಿ ಆರಂಭವಾಗಿವೆ. ಇದರಿಂದ ಸಮರ್ಪಕವಾಗಿ ತರಗತಿಗಳು ನಡೆದಿಲ್ಲ. ಬಹಳಷ್ಟುಕಾಲೇಜುಗಳಲ್ಲಿ ಇನ್ನೂ ಕೂಡ ಪಠ್ಯಕ್ರಮ ಬೋಧನೆ ಪೂರ್ಣಗೊಂಡಿಲ್ಲ. ಇದರಿಂದ ವಿದ್ಯಾರ್ಥಿಗಳು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದೇವೆ. ಅಲ್ಲದೆ ಪರೀಕ್ಷೆಗೆ ಸಿದ್ದರಾಗಲು ಸಮಯಾವಕಾಶವೇ ಸಿಗುವುದಿಲ್ಲ. ಹಾಗಾಗಿ ಪರೀಕ್ಷೆಗಳನ್ನು ಕನಿಷ್ಠ ಒಂದು ತಿಂಗಳಾದರೂ ಮುಂದೂಡಬೇಕೆಂದು ವಿದ್ಯಾರ್ಥಿಗಳು ಆರ್‌ಜಿಯುಎಚ್‌ಎಸ್‌ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ನಿಯಮಾನುಸಾರವೇ ಬಿಡಿಎಸ್‌ ಪರೀಕ್ಷೆ: ವಿವಿ ಪರೀಕ್ಷಾಂಗ ಕುಲಸಚಿವ ಸ್ಪಷ್ಟನೆ

ವಿದ್ಯಾರ್ಥಿಗಳ ಬೇಡಿಕೆಯಂತೆ ಪರೀಕ್ಷೆ ಮುಂದೂಡುವಂತೆ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಕೂಡ ವಿಶ್ವವಿದ್ಯಾಲಯವನ್ನು ಆಗ್ರಹಿಸಿದೆ. ಸಂಘಟನೆ ನಡೆಸಿದ ಸಮೀಕ್ಷೆಯಲ್ಲಿ ಶೇ.99.7ರಷ್ಟುವಿದ್ಯಾರ್ಥಿಗಳು ಪರೀಕ್ಷೆಯನ್ನು ಕನಿಷ್ಠ ಒಂದು ತಿಂಗಳು ಮುಂದೂಡಲು ಒತ್ತಾಯಿಸಿದ್ದಾರೆ. ಅಧಿಕಾರಿಗಳು ಪರೀಕ್ಷೆ ಮುಂದೂಡದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ಪರೀಕ್ಷಾ ವಂಚನೆ ತಡೆಗೆ ಅಸ್ಸಾಂನಲ್ಲಿ 4 ತಾಸು ಇಂಟರ್ನೆಟ್‌ ಬಂದ್‌!
ದಿಸ್ಪುರ್‌: ವಿವಿಧ ಸರ್ಕಾರಿ ಹುದ್ದೆಗಳಿಗೆ ಭಾನುವಾರ ನಡೆದ ಪರೀಕ್ಷೆ ವೇಳೆ, ಡಿಜಿಟಲ್‌ ಅಕ್ರಮ ತಡೆಯಲು ಅಸ್ಸಾಂ ಸರ್ಕಾರ, ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲೂ 4 ಗಂಟೆಗಳ ಕಾಲ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಿತ್ತು. 27,000 ಹುದ್ದೆ ಭರ್ತಿಗೆ ಸರ್ಕಾರ 3 ಹಂತದಲ್ಲಿ ಪರೀಕ್ಷೆ ನಡೆಸುತ್ತಿದ್ದು, ಒಟ್ಟು 14 ಲಕ್ಷ ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆ ಇದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಾನಿಕ್‌ ಉಪಕರಣ ಬಳಸಿ ಅಕ್ರಮ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಹಂತದ ಪರಿæ್ಷ ಆ.28 ಮತ್ತು ಸೆ.11ಕ್ಕೆ ನಡೆಯಲಿದೆ.