ನಿಯಮಾನುಸಾರವೇ ಬಿಡಿಎಸ್ ಪರೀಕ್ಷೆ: ವಿವಿ ಪರೀಕ್ಷಾಂಗ ಕುಲಸಚಿವ ಸ್ಪಷ್ಟನೆ
ನಿಯಮಾನುಸಾರವೇ ಬಿಡಿಎಸ್ ಪರೀಕ್ಷೆ ನಡೆಯಲಿದೆ. ತರಾತುರಿಯಲ್ಲಿ ಪರೀಕ್ಷೆ ಆಯೋಜಿಸಿಲ್ಲ ಎಂದು ಕುಲಸಚಿವ ರೆಡ್ಡಿ ಹೇಳಿದ್ದಾರೆ.
ಬೆಂಗಳೂರು (ಆ.21): ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಬಿಡಿಎಸ್ ಪರೀಕ್ಷೆಯನ್ನು ಶೈಕ್ಷಣಿಕ ಹಿತದೃಷ್ಟಿ ಗಮನದಲ್ಲಿ ಇಟ್ಟುಕೊಂಡು ನಿಯಮಾನುಸಾರವೇ ಮಾಡಲಾಗುತ್ತಿದೆ ಎಂದು ವಿವಿ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ರಾಮಕೃಷ್ಣ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 11 ತಿಂಗಳಿಗೆ ನಡೆಬೇಕಿದ್ದ ಬಿಡಿಎಸ್ (ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ) ಪರೀಕ್ಷೆಯನ್ನು 8 ತಿಂಗಳಿಗೇ ನಡೆಸಲಾಗುತ್ತಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿಲ್ಲ. ವೈದ್ಯಕೀಯ ವಿದ್ಯಾರ್ಥಿಗಳ ಫಲಿತಾಂಶ, ಸಿಇಟಿ ಪರೀಕ್ಷೆ ಮತ್ತಿತರ ಅಂಶಗಳನ್ನು ಪರಿಗಣಿಸಿ ವೇಳಾಪಟ್ಟಿ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು. ಪರೀಕ್ಷಾ ದಿನಾಂಕ ನಿಗದಿಪಡಿಸುವ ಮುನ್ನ 38 ಕಾಲೇಜುಗಳ ಪ್ರಾಂಶುಪಾಲರು, 34 ತಜ್ಞರಿರುವ ಬೋರ್ಡ್ ಆಫ್ ಸ್ಟಡೀಸ್ ತಂಡ, ವಿಭಾಗ ಮುಖ್ಯಸ್ಥರು, ಸೆನೆಟ್ ಸದಸ್ಯರು ಸಭೆ ಸೇರಿ ಚರ್ಚಿಸಿದ ನಂತರ ಸೆಪ್ಟೆಂಬರ್‌ನಲ್ಲಿ ಪರೀಕ್ಷಾ ದಿನಾಂಕ ನಿಗದಿ ಮಾಡಲಾಗಿದೆ. ಪರೀಕ್ಷೆ ಮುಂದೂಡುವಂತೆ ಯಾವ ವಿದ್ಯಾರ್ಥಿಯೂ ಕಾಲೇಜಿನ ಪ್ರಾಂಶುಪಾಲರ ಮೂಲಕ ಮನವಿ ಸಲ್ಲಿಸಿಲ್ಲ. ಪರೀಕ್ಷೆಗೆ ಕೆಲವರು ಮಾತ್ರ ಅನಾಮಧೇಯವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ನಾವು ಯಾವುದೇ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿಲ್ಲ. ಪ್ರತಿ ವರ್ಷವೂ ಜುಲೈನಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷದಿಂದ ಕೋವಿಡ್‌ನಿಂದಾಗಿ ಪರೀಕ್ಷಾ ಸಮಯ ಬದಲಾಗಿತ್ತು. ಆದರೆ ವಿದ್ಯಾರ್ಥಿಗಳು 3 ತಿಂಗಳು ಮುಂಚೆಯೇ ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಡೆಯುತ್ತಿದೆ ಎಂದಿದ್ದಾರೆ. ಆದರೆ ನಿಯಮದ ಪ್ರಕಾರ ಈಗ ನಿಗದಿಯಾಗಿರುವ ಪರೀಕ್ಷೆಯೇ 2 ತಿಂಗಳು ವಿಳಂಬವಾಗಿದೆ ಎಂದು ಮಾಹಿತಿ ನೀಡಿದರು.
ಪ್ರಾಧ್ಯಾಪಕರ ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟ: ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ಶುಕ್ರವಾರ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ್ದು, ಇದಕ್ಕೆ ಅಂಕಗಳನ್ನು ಪರಿಗಣನೆ ಮಾಡಿರುವ ವಿಧಾನವನ್ನು ತಿಳಿಸಿದೆ.
ಹಗರಿಗಜಾಪುರ ವಿದ್ಯಾರ್ಥಿಗಳು ಪ್ರೌಢಶಾಲೆಗೆ ಹೋಗುವುದೇ ಹರಸಾಹಸ
ಕಳೆದ ಮಾಚ್‌ರ್‍ನಲ್ಲಿ ಪ್ರಾಧ್ಯಾಪಕರ ನೇಮಕಾತಿಗೆ ಪರೀಕ್ಷೆ ನಡೆಸಿದ್ದ ಕೆಇಎ ಇತ್ತೀಚೆಗಷ್ಟೆಅಭ್ಯರ್ಥಿಗಳ ವೈಯಕ್ತಿಕ ಫಲಿತಾಂಶ ಪ್ರಕಟಿಸಿತ್ತು. ಇದೀಗ ತಾತ್ಕಾಲಿಕ ಮೆರಿಟ್ ಪಟ್ಟಿಪ್ರಕಟಿಸಿದೆ.
Karnataka University: ಅತಿಥಿ ಉಪನ್ಯಾಸಕ ಹೋರಾಟ ತೀವ್ರ; ಬೇಡಿಕೆಗಳಿಗೆ ಸ್ಪಂದಿಸದ ಕುಲಪತಿ
ನೇಮಕಾತಿ ನಿಯಮದ ಪ್ರಕಾರ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇಕಡಾವಾರು ಸಮಾನವಾಗಿದ್ದಲ್ಲಿ, ಅಂತಹ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅರ್ಹತೆಯ ಕ್ರಮವನ್ನು ಅವರ ವಯಸ್ಸಿನ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ. ವಯಸ್ಸಿನಲ್ಲಿ ಹಿರಿಯನಾದ ವ್ಯಕ್ತಿಯನ್ನು ಅರ್ಹತೆಯ ಕ್ರಮದಲ್ಲಿ ಉನ್ನತ ಸ್ಥಾನಕ್ಕೆ ಪರಿಗಣಿಸಲಾಗಿದೆ.
ಮರು ಪರಿಷ್ಕೃತ ಪಠ್ಯ ವೆಬ್‌ನಲ್ಲಿ ಬಿಡುಗಡೆ: ಸೆಪ್ಟೆಂಬರ್ ಅಂತ್ಯದೊಳಗೆ ಶಾಲೆ
ಇದಲ್ಲದೆ, ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಅಂಕಗಳು ಮತ್ತು ಹುಟ್ಟಿದ ದಿನಾಂಕವು ಸಮನಾಗಿರುವ ಸಂದರ್ಭದಲ್ಲಿ ಅರ್ಹತೆಯ ಕ್ರಮವನ್ನು ನಿರ್ಧರಿಸಲು ಸರ್ಕಾರದಿಂದ ಸ್ಪಷ್ಟೀಕರಣ ಕೋರಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.