Karnataka University: ಅತಿಥಿ ಉಪನ್ಯಾಸಕ ಹೋರಾಟ ತೀವ್ರ; ಬೇಡಿಕೆಗಳಿಗೆ ಸ್ಪಂದಿಸದ ಕುಲಪತಿ

  • ಸಿಡಿದೆದ್ದ ಅತಿಥಿ ಉಪನ್ಯಾಸಕರಿಂದ ಸಿಂಡಕೇಟ್‌ಗೆ ಅಡ್ಡಿ
  • ಕವಿವಿಯಲ್ಲಿ ತೀವ್ರಗೊಂಡ ಅತಿಥಿ ಉಪನ್ಯಾಸಕ ಹೋರಾಟ
  • ಉಪನ್ಯಾಸಕರ ಹೋರಾಟಕ್ಕೆ ಸ್ಪಂದಿಸದ ಕುಲಪತಿ
Guest Lecturer Struggle Intense Chancellor not responding to demands at dharwad

ಧಾರವಾಡ (ಆ.21) : ಕಳೆದ ಒಂಭತ್ತು ದಿನಗಳಿಂದ ಕವಿವಿ ಆಡಳಿತ ಭವನ ಎದುರು ಧರಣಿ ಕುಳಿತ ಅತಿಥಿ ಉಪನ್ಯಾಕರ ಬೇಡಿಕೆಗೆ ಸ್ಪಂದಿಸದ ಕುಲಪತಿಗಳ ವಿರುದ್ಧ ಸಿಡಿದೆದ್ದು ಶನಿವಾರ ಸಿಂಡಿಕೇಟ್‌ ಸಭೆಗೆ ಅಡ್ಡಿ ಪಡಿಸಿದ ಘಟನೆ ನಡೆಯಿತು. ವೇತನ ಹೆಚ್ಚಳ, ಪದನಾಮ ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿರುವ ಅತಿಥಿ ಉಪನ್ಯಾಸಕರು ಸಿಂಡಿಕೇಟ್‌ ಸಭೆಗೆ ಅಡ್ಡಿಪಡಿಸಿದರು. ಪರಿಣಾಮ ಸಭೆಯಿಂದ ಸದಸ್ಯರು ಎರಡುವರೆ ಗಂಟೆಗೂ ಹೆಚ್ಚು ಸಮಯ ಹೊರಗುಳಿಯುವಂತಾಯಿತು. ಅನಿರ್ದಿಷ್ಟಾವಧಿ ಪ್ರತಿಭಟನೆಯ ಬಿಸಿ ಸಿಂಡಿಕೇಟ್‌ ಸಭೆಗೆ ತಟ್ಟಿತು. ಈ ವೇಳೆ ಮಧ್ಯ ಪ್ರವೇಶಿಸಿದ ಸದಸ್ಯರನ್ನು ಸಭೆಗೆ ಹಾಜಗದಂತೆ ತಡೆಯಬಾರದು ಎಂದು ಹೇಳಿದಾಗ ಆಕ್ರೋಶಗೊಂಡ ಉಪನ್ಯಾಸಕರು ಮತ್ತು ಪ್ರತಿಭಟನಾನಿರತರ ನಡುವೆ ಕೆಲಕಾಲ ವಾಗ್ವಾದವೂ ನಡೆಯಿತು.

ಅತಿಥಿ ಉಪನ್ಯಾಸಕರ ಪ್ರತಿಭಟನೆ, ತುಟಿ ಪಿಟಿಕ್ ಅನ್ನದ Karnataka University

ಪ್ರೊ. ಕೆ.ಬಿ. ಗುಡಸಿ(Pro.K.B.Gudasi) ಕುಲಪತಿಯಾಗಿ ಎರಡು ವರ್ಷ ಗತಿಸಿದ್ದು, ಸರ್ಕಾರದಿಂದ ವಿವಿಗೆ ಬರಬೇಕಾದ . 186 ಕೋಟಿ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಪದನಾಮ ಬದಲಾವಣೆಯಂತ ಕನಿಷ್ಠ ಬೇಡಿಕೆ ಈಡೇರಿಸಲಾಗದಿದ್ದರೆ ಆ ಹುದ್ದೆಯಲ್ಲಿ ಅವರು ಮುಂದುವರಿಯಲು ಅರ್ಹರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕುಲಪತಿ ಹಠಾವೋ ಯುನಿವರ್ಸಿಟಿ ಬಚಾವೋ ಎಂದು ಘೋಷಣೆ ಕೂಗಿದರು.

ಈ ವೇಳೆ ಸಿಂಡಿಕೇಟ್‌ ಸದಸ್ಯರು(Syndicate members) ಸಭೆಗೆ ಹಾಜರಾಗಲು ಅವಕಾಶ ನೀಡುವಂತೆ ಕುಲಸಚಿವ ಯಶಪಾಲ್‌ ಕ್ಷೀರಸಾಗರ(Yashpal ksheerasagar) ಉಪನ್ಯಾಸಕರ ಮನವೊಲಿಸಲು ಯತ್ನಿಸಿದರು. ಆದರೆ, ಸಭೆಯಲ್ಲಿ ತಮ್ಮ ಬೇಡಿಕೆಗಳ ಕುರಿತು ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳುವುದಾದರೆ ಸಭೆಗೆ ಅವಕಾಶ ನೀಡುವುದಾಗಿ ಉಪನ್ಯಾಸಕರು ಪಟ್ಟು ಹಿಡಿದರು. ಆಗ ಈ ಮೊದಲು ನಿಗದಿಯಾಗಿದ್ದ ನಡಾವಳಿ ರದ್ದುಗೊಳಿಸಿ, ಶಿಕ್ಷಕರ ಬೇಡಿಕೆಗಳನ್ನು ನಡಾವಳಿಯಲ್ಲಿ ಲಿಖಿತ ರೂಪದಲ್ಲಿ ಸೇರಿಸಿದ ಮೇಲೆ ಸಭೆಗೆ ಅನುವು ಮಾಡಿಕೊಟ್ಟರು.

ಇನ್ನು, ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಸಿಂಡಿಕೇಟ್‌ ಸದಸ್ಯರು, ಉಪನ್ಯಾಸಕರ ಬೇಡಿಕೆಗಳು ನ್ಯಾಯಯುತವಾಗಿವೆ. ಅವುಗಳ ಕುರಿತು ಕುಲಪತಿ ಸ್ಪಷ್ಟನಿರ್ಧಾರ ಕೈಗೊಳ್ಳದೇ ಇದ್ದರೆ ಮುಂದಿನ ಯಾವ ಸಿಂಡಿಕೇಟ್‌ ಸಭೆಯಲ್ಲೂ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದರು.

Karnataka Guest Lecturers Protest: ದಯಾಮರಣ ಕೋರಿ ಅತಿಥಿ ಉಪನ್ಯಾಸಕರಿಂದ ಪತ್ರ

ವಿಶ್ವವಿದ್ಯಾಲಯ((University)ದ ಆಡಳಿತ ಕಚೇರಿ ಎದುರು ಒಂದು ರೀತಿಯ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಇದೇ ವೇಳೆ ಉಪನ್ಯಾಸಕರ ಹೋರಾಟ ಬೆಂಬಲಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಪ್ರಸಂಗವೂ ನಡೆಯಿತು. ಸಂಘದ ಅಧ್ಯಕ್ಷ ಶಿವಸೋಮಣ್ಣ ನಿಟ್ಟೂರ, ಡಾ. ವೆಂಕನಗೌಡ ಪಾಟೀಲ, ಚಂದ್ರಶೇಖರಗೌಡ ಎಸ್‌., ಪಾಟೀಲ, ಡಾ. ಮಹಾದೇವ ಗುಂಡ್ಲೂರು, ಅಂಬರಿಷ ಸಿಂದಗಿ, ಡಾ. ಮಹೇಂದ್ರ ಹರಿಹರ, ಡಾ. ಮಲ್ಲಿಕಾರ್ಜುನ ಬ್ಯಾಲ್ಯಾಳ, ಡಾ. ನೀತಾ ಕರಿ, ಡಾ.ರಮಾ ಗೂಂಡೂರಾವ, ಡಾ. ಪ್ರೇಮಾ ನಡಕಟ್ಟಿ, ಡಾ. ಶೀಲಾ ಭಂಡಾರಿ, ಡಾ. ಶೈಲಜಾ ಅಮರಶೆಟ್ಟಿ, ಡಾ. ಸುಜಾತಾ ಗೂರವ. ಡಾ. ಮಮತಾ ಶಿರಗಂಬಿ ಇದ್ದರು.

Latest Videos
Follow Us:
Download App:
  • android
  • ios