Asianet Suvarna News Asianet Suvarna News

ಪಿಯು ಪರೀಕ್ಷಾ ಕೊಠಡಿಯೊಳಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸ್ಕ್ವಾಡ್‌: ಎಡವಟ್ಟು ಮಾಡಿಕೊಂಡ ಅಧಿಕಾರಿಗೆ ನೋಟಿಸ್‌

ರಾಜ್ಯಾದ್ಯಂತ ಮಾ.9ರಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ನಡೆಯುತ್ತಿದೆ. ಆದರೆ, ವಿಜಯಪುರದಲ್ಲಿ ಪರೀಕ್ಷಾ ಕೊಠಡಿಯೊಳಗೆ ಸ್ಪೆಷಲ್‌ ಆಬ್ಸರ್ವರ್‌ (ಸ್ಕ್ವಾಡ್‌) ಒಬ್ಬರು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ.

Squad clicked selfies inside PU exam hall Notice to offending officer sat
Author
First Published Mar 13, 2023, 4:07 PM IST | Last Updated Mar 13, 2023, 4:07 PM IST

ವಿಜಯಪುರ (ಮಾ.13): ರಾಜ್ಯಾದ್ಯಂತ ಮಾ.9ರಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ನಡೆಯುತ್ತಿದೆ. ಆದರೆ, ವಿಜಯಪುರದಲ್ಲಿ ಪರೀಕ್ಷಾ ಕೊಠಡಿಯೊಳಗೆ ಸ್ಪೆಷಲ್‌ ಆಬ್ಸರ್ವರ್‌ (ಸ್ಕ್ವಾಡ್‌) ಒಬ್ಬರು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ.

ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ದೇವಣಗಾಂವ ಪರೀಕ್ಷಾ ಕೇಂದ್ರದಲ್ಲಿ ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವ ಕೊಠಡಿಯೊಳಗೆ ಮೊಬೈಕ್‌ ಕೊಂಡೊಯ್ದು ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಹಿಂದೆ ಪ್ರೀ- ಯೂನಿವರ್ಸಿಟಿ ಬೋರ್ಡ್‌ ವತಿಯಿಂದ ಪರೀಕ್ಷೆ ನಡೆಸಲಾಗುತ್ತಿತ್ತು. ಈ 2022-23ನೇ ಸಾಲಿನಿಂದ ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ)ಯು ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತಿದೆ. ಆದರೆ, ಈಗ ಕೆಎಸ್‌ಇಎಬಿಯ ನಿಯಮಾವಳಿಯನ್ನು ಸ್ವತಃ ವೀಕ್ಷಕ ಅಧಿಕಾರಿಯೇ ಉಲ್ಲಂಘನೆ ಮಾಡಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆ ಮೊದಲ ದಿನ ಸುಸೂತ್ರ: 95.55% ವಿದ್ಯಾರ್ಥಿಗಳು ಹಾಜರು

ಸಿಂಧಗಿ ಸಮಾಜ ಕಲ್ಯಾಣ ಅಧಿಕಾರಿ: ದ್ವಿತೀಯ ಪಿಯು ಪರೀಕ್ಷಾ ಕೊಠಡಿಯಲ್ಲಿ ವಿಶೇಷ ಪರೀಕ್ಷಾ ವೀಕ್ಷಕರಾಗಿ ಹೋಗಿದ್ದ ಸಿಂಧಗಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲಾ ಭೂಸಗೊಂಡ ಯಡವಟ್ಟು ಅವರೇ ಪರೀಕ್ಷಾ ನಿಯಮ ಉಲ್ಲಂಘನೆ ಮಾಡಿಕೊಂಡಿದ್ದಾರೆ. ದೇವಣಗಾಂವ ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಆಗಿ ನಿರ್ಮಲಾ ಹೋಗಿದ್ದರು. ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದ ವೇಳೆ ಸ್ಮಾರ್ಟ್ ಪೋನ್‌ನಲ್ಲಿ ಸೆಲ್ಪಿ ಕ್ಲಿಕ್ಕಿಸಿ ಗ್ರುಪ್‌ಗಳಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಆದರೆ, ಪರೀಕ್ಷೆ ನಡೆಯುವ ಸಂದರ್ಭದಲ್ಲಿಯೇ ಫೋಟೋ ತೆಗೆದು ವೈರಲ್‌ ಮಾಡಿಕೊಂಡಿರುವುದು ಪರೀಕ್ಷೆಯಲ್ಲಿ ನಕಲು ಮಾಡಲು ಪ್ರೋತ್ಸಾಹ ನೀಡಿದಂತಾಗಿದೆ ಎಂದು ಆರೋಪ ಕೇಳಿಬಂದಿದೆ. ಇನ್ನು ಪರೀಕ್ಷೆ ಪೂರ್ಣಗೊಳ್ಳುವ ಮೊದಲೇ ಪ್ರಶ್ನೆಪತ್ರಿಕೆ ಲೀಕ್‌ ಆಗುವ ಬಗ್ಗೆ ಅನುಮಾನ ಸೃಷ್ಟಿಯಾಗಿದೆ.

ಪರೀಕ್ಷಾ ನಿಯಮ ಉಲ್ಲಂಘನೆಗೆ ನೋಟಿಸ್: ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಆಗಿದ್ದ ನಿರ್ಮಲಾ ಅವರು ತಮ್ಮ ಇಲಾಖೆ ಅಧಿಕಾರಿಗಳು ಮಾಡಿಕೊಂಡಿದ್ದ ಸಿಂಧಗಿ ಸಮಾಜ ಕಲ್ಯಾಣ ಇಲಾಖೆ ವಾಟ್ಸಾಪ್‌ ಗ್ರೂಪ್‌ನಲ್ಲಿ ಸೆಲ್ಪಿ ಪೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ಸೆಲ್ಫಿ ಪೋಟೋ ತೆಗೆದುಕೊಂಡು ಶೇರ್‌ ಮಾಡಿಕೊಂಡ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಕೂಡಲೇ ಪರೀಕ್ಷಾ ನಿಯಮಾವಳಿಯನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಮಹಿಳಾ ಅಧಿಕಾರಿ ನ ಇರ್ಮಲಾಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಇನ್ನು ಮಾ.9 ರಂದು ನಡೆದ ದ್ವಿತೀಯ ಪಿಯುಸಿಯ ಕನ್ನಡ ಭಾಷಾ ಪರೀಕ್ಷೆಯ ವೇಳೆ ಈ ಘಟನೆ ನಡೆದಿದ್ದು, ನೋಟೀಸ್‌ ಜಾರಿಗೊಳಿಸಿದ ನಂತರ ಬೆಳಕಿಗೆ ಬಂದಿದೆ. 

ದಾವಣಗೆರೆ: ದ್ವಿತೀಯ ಪಿಯು ಪರೀಕ್ಷೆ ಆರಂಭಕ್ಕೆ ಮುನ್ನಾ ದಿನವೇ ವಿದ್ಯಾರ್ಥಿನಿ ಆತ್ಮಹತ್ಯೆ!

7.26 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿ: ಇನ್ನು ರಾಜ್ಯಾದ್ಯಂತ ಮಾ.9 ರಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷೆ ಆರಂಭವಾಗಿದೆ. ಕಳೆದ ಎರಡು ವರ್ಷಗಳ ಕಾಲ ಕೋವಿಡ್‌ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ವರ್ಷ ಕೋವಿಡ್‌ ಬಳಿಕ ಪೂರ್ಣ ಪ್ರಮಾಣದಲ್ಲಿ 7.26 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಾಜರಾಗಿದ್ದಾರೆ. ರಾಜ್ಯಾದ್ಯಂತ ಒಟ್ಟು 1.109 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ.

Latest Videos
Follow Us:
Download App:
  • android
  • ios