Asianet Suvarna News Asianet Suvarna News

ಕೋವಿಡ್‌ನಿಂದ ಪೋಷಕರ ಕಳೆದುಕೊಂಡ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸೋನು ಸೂದ್ ಮನವಿ

ಕಷ್ಟ ಅಂದ್ಕೂಡಲೇ ತಾಯಿಯ ಮನಸಿನಂತೆ ಮರುಗುವ ಸಹೃದಯಿ ಬಾಲಿವುಡ್ ನಟ ಸೋನು ಸೂದ್. ಅದರಲ್ಲೂ ಲಾಕ್‌ಡೌನ್‌ನಂತಹ ಸಂದಿಗ್ಧ ಸಂದರ್ಭದಲ್ಲಿ ಬಡವರಿಗೆ ಸಹಾಯ ಹಸ್ತ ಚಾಚಿದ ಹೃದಯವಂತ. ತಾನೊಬ್ಬ ನಟ, ಶ್ರೀಮಂತ ಎಂಬ ಹಮ್ಮು-ಬಿಮ್ಮು ಕಿಂಚಿತ್ತೂ ಇಲ್ಲದ ಕರುಣಾಮಯಿ. ಕಳೆದ ವರ್ಷದ ಲಾಕ್‌ಡೌನ್ ವೇಳೆ ಸೋನು ಸೂದ್ ಮಾಡಿದ ಮಹತ್ಕಾರ್ಯಗಳು ಒಂದೆರಡಲ್ಲ. ಸದಾ ನೆರವಿನ ಹಸ್ತ ಚಾಚಲು ಮಿಡಿಯುವ ಅವರ ಮನಸ್ಸು, ಈಗಲೂ ತಮ್ಮ ಕೈಲಾದ ಸಹಾಯವನ್ನ ಮುಂದುವರಿಸಿದ್ದಾರೆ.

Soon urges to provide education for kids who lost parents due to Covid 19
Author
Bengaluru, First Published Apr 30, 2021, 6:08 PM IST

ದೇಶಾದ್ಯಂತ ಈಗಾಗಲೇ ಕೊರೊನಾ ೨ನೇ ಅಲೆ ಆರ್ಭಟಿಸುತ್ತಿದ್ದು, ನಿತ್ಯ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷಕ್ಕಿಂತಲೂ ಈ ಸಲ ಪರಿಸ್ಥಿತಿ ಭೀಕರವಾಗಿದ್ದರೂ, ಇಡೀ ದೇಶವನ್ನ ಇನ್ನೂ ಲಾಕ್‌ಡೌನ್ ಮಾಡಿಲ್ಲ. ಜನತಾ ಕರ್ಫ್ಯೂ, ಕೊರೊನಾ ಕರ್ಫ್ಯೂ, ಹಾಫ್ ಲಾಕ್‌ಡೌನ್ ಹೆಸರಲ್ಲಿ ಒಂದಷ್ಟು ನಿರ್ಬಂಧಗಳನ್ನ ಹಾಕೋ ಮೂಲಕ ಕೆಲ ರಾಜ್ಯ ಸರ್ಕಾರಗಳು ಕೊರೊನಾವನ್ನ ಕಟ್ಟಿಹಾಕುವ ಪ್ರಯತ್ನ ನಡೆಸಿವೆ.

ಕೋವಿಡ್ ಲಸಿಕೆ: CoWINನಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ?

ಕಳೆದ ಸಲ ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಸಮಸ್ಯೆಗಳು ಉದ್ಭವಿಸಿದ್ದವು. ಆದ್ರೆ ಈ ಅದಕ್ಕಿಂತಲೂ ಬಹುದೊಡ್ಡ ಸಮಸ್ಯೆ, ಆಕ್ಸಿಜನ್, ವೆಂಟಿಲೇಟರ್ ಕೊರತೆ ಜನರ ಜೀವವನ್ನ ಬಲಿ ಪಡೆಯುವಂತಾಗಿದೆ. ಇಂಥ ಕಠಿಣ ಸಂದರ್ಭದಲ್ಲೂ ಸೋನು ಸೂದ್ ಮತ್ತೆ ನೆರವಿಗೆ ಧಾವಿಸಿದ್ದೂ ಆಗಿದೆ. ಪ್ರತಿ ನಿತ್ಯ ಎಮರ್ಜೆನ್ಸಿ ಬೆಡ್, ಆಕ್ಸಿಜನ್, ರೆಮ್‌ಡೆಸಿವಿರ್‌ಗಾಗಿ ಹಲವರು ಸೋನು ಸೂದ್‌ಗೆ ಕರೆ ಮಾಡಿ ಮನವಿ ಮಾಡ್ತಿದ್ದಾರೆ. ಕಷ್ಟ ಅಂತ ಬಂದವರಿಗೆಲ್ಲ ಈಗಲೂ ಸೋನು ಸೂದ್ ಸಹಾಯ ಮಾಡ್ತಿದ್ದಾರೆ. ಸಾವಿರಾರು ಬಡವರ, ವಲಸೆ ಕಾರ್ಮಿಕರ ಪಾಲಿಗೆ ಆಶಾಕಿರಣ ಅವರು.

 

 
 
 
 
 
 
 
 
 
 
 
 
 
 
 

A post shared by Sonu Sood (@sonu_sood)

 

ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಸೋನು ಸೂದ್, ಕೋವಿಡ್‌ನಿಂದಾಗಿ ಮೃತಪಟ್ಟವರ ಮಕ್ಕಳಿಗೆ ಸರ್ಕಾರ ಉಚಿತ ಶಿಕ್ಷಣ ಒದಗಿಸಬೇಕೆಂದು ಮನವಿ ಮಾಡಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋಯೊಂದನ್ನ ಶೇರ್ ಮಾಡಿರುವ ಸೋನು ಸೂದ್, ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಮಕ್ಕಳ ಶಿಕ್ಷಣಕ್ಕಾಗಿ ಮಿಡಿದಿದ್ದಾರೆ.  ಹಲೋ. ನಾನು ಸಹಾಯ ಮಾಡಲು ಬಯಸುವ ಸರ್ಕಾರ ಮತ್ತು ಸಂಸ್ಥೆಗಳಿಗೆ ಮನವಿ ಮಾಡಲು ಬಯಸುತ್ತೇನೆ. ನಾವು ಕೋವಿಡ್ -19 ಸಾಂಕ್ರಾಮಿಕದ ಈ ಅಲೆಯ ಸಮಯದಲ್ಲಿ, ಅನೇಕ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವುದನ್ನು ನೋಡಿದ್ದೇವೆ. 8, 10 ಮತ್ತು 12 ವರ್ಷ ವಯಸ್ಸಿನ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ಕೆಲವು ಮಕ್ಕಳು, ತಮ್ಮ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದಾರೆ. ಮುಂದೆ ಅವರ ಭವಿಷ್ಯ ಏನಾಗಬಹುದು ಎಂದು ನಾನು ಯಾವಾಗಲೂ ಚಿಂತಿಸುತ್ತೇನೆ ಎಂದು ವಿಡಿಯೋದಲ್ಲಿ ಸೋನು ಸೂದ್ ಹೇಳಿದ್ದಾರೆ.

ಕೋವಿಡ್ ನಿರ್ವಹಣೆ ಟೀಕೆ: 100ಕ್ಕೂ ಹೆಚ್ಚು ಪೋಸ್ಟ್ ಡಿಲಿಟ್ ಮಾಡಿದ ಟ್ವಿಟರ್, ಫೇಸ್‌ಬುಕ್!

ಸಹಾಯ ಮಾಡಲು ಪ್ರಯತ್ನಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಮಾನವೀಯ ಸಂಘಟನೆಗಳಲ್ಲಿ ವಿನಂತಿಸಿಕೊಳ್ಳುವುದೇನೆಂದ್ರೆ, ಕೋವಿಡ್  ಸಂದರ್ಭದಲ್ಲಿ ತನ್ನ ಪೋಷಕರನ್ನ ಕಳೆದುಕೊಂಡಿರುವ ಯಾವುದೇ ಮಗು, ಶಾಲೆಯಿಂದ ಕಾಲೇಜಿಗೆ ಹೋಗಲಿ, ಸರ್ಕಾರಿ ಶಾಲೆ ಅಥವಾ ಖಾಸಗಿ ಶಾಲೆಯಲ್ಲಿ ಓದುತ್ತಿರಲಿ, ಅವರ ಶಿಕ್ಷಣ ಸಂಪೂರ್ಣ ಉಚಿತ ಎಂಬ ನಿಯಮ ರೂಪಿಸಬೇಕು. ಅವರು ಯಾವುದೇ ಕ್ಷೇತ್ರದಲ್ಲಿ ಅಧ್ಯಯನ ಮಾಡಲು ಬಯಸಿದ್ರೆ, ಅದು ಎಂಜಿನಿಯರಿಂಗ್ ಅಥವಾ ವೈದ್ಯಕೀಯ ವಲಯವಾಗಿದ್ದರೂ ಉಚಿತ ಶಿಕ್ಷಣ ಒದಗಿಸಬೇಕು. ಅದು ಅವರ ಭವಿಷ್ಯವನ್ನು ರೂಪಿಸುವಂತಹ ನಿಯಮ ಆಗಿರಬೇಕು  ಅಂತಾರೆ ಸೋನು ಸೋದ್.  

Soon urges to provide education for kids who lost parents due to Covid 19

ನಿಜ ಜೀವನದಲ್ಲೂ ರಿಯಲ್ ಹೀರೋ ಆಗಿರುವ ಸೋನು ಸೂದ್‌, ಹಿಂದೆಲ್ಲಾ ಬಡವರರ ಮಕ್ಕಳಿಗೆ ಶಿಕ್ಷಣ ಪಡೆಯಲು ಹಲವು ಬಾರಿ ನೆರವಾಗಿದ್ದಾರೆ. ವಿದ್ಯಾಭ್ಯಾಸ ಮಾಡುತ್ತಿದ್ದ ಮಕ್ಕಳನ್ನ ಬಳಸಿಕೊಂಡು ಉಳುಮೆ ಮಾಡುತ್ತಿದ್ದ ಬಡ ರೈತನನ್ನ ಕಂಡು ಮರುಗಿದ್ದ ಸೋನು, ಆ ರೈತನಿಗೆ ಟ್ರ್ಯಾಕ್ಟರ್ ಕೊಡಿಸಿದ್ದರು. ಇದಿಷ್ಟೇ ಅಲ್ಲದೇ ಆ ಹೆಣ್ಮಕ್ಕಳ ಶಿಕ್ಷಣಕ್ಕೆ ಸಕಲ ನೆರವು ಕಲ್ಪಿಸಿದ್ದರು. ಹೀಗೆ ಸದಾ ಮಕ್ಕಳ ಭವಿಷ್ಯ, ಶಿಕ್ಷಣದ ಬಗ್ಗೆ ಚಿಂತಿಸುವ ಸೋನು ಸೂದ್, ಈ ಸಲ ತಮ್ಮ ಅಭಿಪ್ರಾಯವನ್ನ ಸರ್ಕಾರದ ಮುಂದಿಟ್ಟಿದ್ದಾರೆ. ನಟನ ಈ ಮನವಿಯನ್ನ ಸರ್ಕಾರಗಳು ಅದು ಹೇಗೆ ಸ್ವೀಕರಿಸುತ್ತವೆ ಅನ್ನೋದೇ ಸದ್ಯದ ಕುತೂಹಲ.

ದಕ್ಷಿಣ ರೈಲ್ವೆಯಲ್ಲಿ 191 ಪ್ಯಾರಾ ಮೆಡಿಕಲ್ ಹುದ್ದೆ ಖಾಲಿ, ಅಪ್ಲೈ ಮಾಡಿ

Follow Us:
Download App:
  • android
  • ios