Asianet Suvarna News Asianet Suvarna News

ದಕ್ಷಿಣ ರೈಲ್ವೆಯಲ್ಲಿ 191 ಪ್ಯಾರಾ ಮೆಡಿಕಲ್ ಹುದ್ದೆ ಖಾಲಿ, ಅಪ್ಲೈ ಮಾಡಿ

ಖಾಲಿ ಇರುವ 191 ಪ್ಯಾರಾಮೆಡಿಕಲ್ ಹುದ್ದೆಗಳಿಗೆ ದಕ್ಷಿಣ ರೈಲ್ವೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 30 ಕೊನೆಯದಿನವಾಗಿದೆ. ಹಾಗಾಗಿ, ಆಸಕ್ತಿ ಅಭ್ಯರ್ಥಿಗಳು ಕೂಡಲೇ ಅರ್ಜಿ  ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳು ಚೆನ್ನೈನ ಪೆಂಬರೂರುಲ್ಲಿರುವ ರೈಲ್ವೆ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ.

Southern Railway recruitment for its paramedical posts and check details
Author
Bengaluru, First Published Apr 23, 2021, 4:34 PM IST

ದಕ್ಷಿಣ ರೈಲ್ವೆ ವಲಯ ಅರೆ ವೈದ್ಯಕೀಯ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಿದೆ. ಅರ್ಹ ಅಭ್ಯರ್ಥಿಗಳಿಂದ ಪ್ಯಾರಾ ಮೆಡಿಕಲ್ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಒಟ್ಟು 191 ಅರೆ ವೈದ್ಯಕೀಯ ಹುದ್ದೆಗಳು ಖಾಲಿಯಿದ್ದು, ಏಪ್ರಿಲ್ 30ರೊಳಗೆ ಅರ್ಜಿ ಸಲ್ಲಿಸಬಹುದು.

ಆಯ್ಕೆಯಾಗುವ ಅರೆವೈದ್ಯಕೀಯ ಸಿಬ್ಬಂದಿಯನ್ನು ಚೆನ್ನೈನ ಪೆರಂಬೂರುನಲ್ಲಿರೋ ರೇಲ್ವೇ ಆಸ್ಪತ್ರೆಯ ಹೆಡ್‌ಕ್ವಾಟ್ರಸ್‌ಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ಮೀರುವ ಮೊದಲೇ ಅರ್ಜಿ ಸಲ್ಲಿಸುವುದು ಒಳ್ಳೆಯದು.  ಭಾರತೀಯ ರೇಲ್ವೆ ಇಲಾಖೆಯು ಉದ್ಯೋಗ ದೃಷ್ಟಿಯಲ್ಲಿ ನೆಚ್ಚಿನ ತಾಣವಾಗಿದೆ. ಖಾಲಿ ಇರುವ 191 ಪ್ಯಾರಾ ಮೆಡಿಕಲ್ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭಿಸಿರುವ ದಕ್ಷಿಣ ರೈಲ್ವೆ ಹೊರಡಿಸಿರು ಅಧಿಸೂಚನೆ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಐಡಿಬಿಐ ಬ್ಯಾಂಕಿನಲ್ಲಿ ಆಫೀಸರ್ ಹುದ್ದೆ, ವಾರ್ಷಿಕ 60 ಲಕ್ಷ ರೂ.ವರೆಗೂ ಪ್ಯಾಕೇಜ್

ನರ್ಸಿಂಗ್ ಸೂಪರಿಂಟೆಂಡೆಂಟ್ 83 ಹುದ್ದೆಗಳು, ಫಿಸಿಯೋಥೆರಫಿಸ್ಟ್ 1 ಹುದ್ದೆ, ಇಸಿಜಿ ಟೆಕ್ನಿಷಿಯನ್ 4 ಹುದ್ದೆಗಳು, ಹಿಮೋಡಯಾಲಿಸಿಸ್ ಟೆಕ್ನಿಷಿಯನ್ 3 ಹುದ್ದೆಗಳು, ಹಾಸ್ಪಿಟಲ್ ಅಸಿಸ್ಟೆಂಟ್ 48 ಹುದ್ದೆಗಳು, ಹೌಸ್ ಕೀಪಿಂಗ್ ಅಸಿಸ್ಟೆಂಟ್ಸ್ (ಮೆಡಿಕಲ್) 40 ಹುದ್ದೆಗಳು, ಲ್ಯಾಬ್ ಅಸಿಸ್ಟೆಂಟ್ ಗ್ರೇಡ್ -29 ಹುದ್ದೆಗಳು ಹಾಗೂ ರೇಡಿಯೋಗ್ರಾಫರ್ 3 ಹುದ್ದೆಗಳಿಗೆ ಈ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು. ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಹೆಚ್ಚಿನ ಮಾಹಿತಿಯ ಪಡೆದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಅಭ್ಯರ್ಥಿಯು ಒಪ್ಪಂದ ಮಾಡಿಕೊಳ್ಳುವ ಮೊದಲು ಫಿಟ್‌ನೆಸ್‌ಗಾಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು. ಅರೆವೈದ್ಯಕೀಯ ಸಿಬ್ಬಂದಿಯ ಅಭ್ಯರ್ಥಿಗಳ ಆಯ್ಕೆಗಾಗಿ ದೂರವಾಣಿ ಸಂದರ್ಶನ ನಡೆಸಲಾಗುತ್ತದೆ. ಒಪ್ಪಂದದ ಪ್ರಕಾರ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಆಡಳಿತಾತ್ಮಕ ಅಗತ್ಯಗಳಿಗೆ ಅನುಗುಣವಾಗಿ ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು.

ಸಂಬಳ ಎಷ್ಟು?:  ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ₹44,900,  ಫಿಸಿಯೋಥೆರಫಿಸ್ಟ್‌ಗೆ ₹35,400, ಇಸಿಜಿ ಟೆಕ್ನಿಷಿಯನ್‌ಗೆ ₹25,500, ಹಿಮೋಡಯಾಲಿಸಿಸ್ ಟೆಕ್ನಿಷಿಯನ್ ₹35,400, ಹಾಸ್ಪಿಟಲ್ ಅಸಿಸ್ಟೆಂಟ್ ₹18,000, ಹೌಸ್ ಕೀಪಿಂಗ್ ಅಸಿಸ್ಟೆಂಟ್ಸ್ (ಮೆಡಿಕಲ್)  ₹18,000, ಲ್ಯಾಬ್ ಅಸಿಸ್ಟೆಂಟ್ ಗ್ರೇಡ್ -2 ₹21,700 ಹಾಗೂ ರೇಡಿಯೋಗ್ರಾಫರ್ ₹29,200 ಸಂಬಳ ಸಿಗಲಿದೆ. ಇದರಲ್ಲಿ ಡಿಎ ಹಾಗೂ ಇನ್ನಿತರೆ ಅಲೋಯನ್ಸ್‌ ಇರಲಿವೆ.

Southern Railway recruitment for its paramedical posts and check details

ಪ್ಯಾರಾ ವೈದ್ಯಕೀಯ ಸಿಬ್ಬಂದಿಯ ಒಪ್ಪಂದವು, ಸೆಪ್ಟೆಂಬರ್ 30, 2021 ರವರೆಗೆ ಪೂರ್ಣ ಸಮಯದ ಗುತ್ತಿಗೆ ಆಧಾರದಲ್ಲಿರುತ್ತದೆ.

ಬ್ಯಾಂಕ್ ಆಫ್‌ ಬರೋಡದಲ್ಲಿ 511 ಹುದ್ದೆಗಳಿಗೆ ನೇಮಕಾತಿ, ಅಪ್ಲೈ ಮಾಡಿ

ಅರ್ಜಿ ಸಲ್ಲಿಸುವುದು ಹೇಗೆ?:  ಆಸಕ್ತ ಅರ್ಹ ಅಭ್ಯರ್ಥಿಗಳು ಮೊದಲು ಆಯ್ಕೆ ಪ್ರಕ್ರಿಯೆಗೆ ನೋಂದಾಯಿಸಿಕೊಳ್ಳಬೇಕು. ದಕ್ಷಿಣ ರೈಲ್ವೆಯ ಅಧಿಕೃತ ವೆಬ್‌ಸೈಟ್ sr.indianrailways.gov.in ನಲ್ಲಿ ಲಾಗಿನ್ ಆಗಿ ಅರ್ಜಿ ಸಲ್ಲಿಸಬೇಕು.

ಭಾರತೀಯ ರೈಲ್ವೆಯು ಜಗತ್ತಿನಲ್ಲೇ ಅತಿದೊಡ್ಡ ನೆಟ್ವರ್ಕ್ ಹೊಂದಿದೆ. ಅಲ್ಲದೇ ಅತಿದೊಡ್ಡ ಉದ್ಯೋಗದಾತ ಇಲಾಖೆಯೂ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದೆ. ಜಗತ್ತಿನಲ್ಲೇ ನಾಲ್ಕೇ ಅತಿ ದೊಡ್ಡ ರೈಲು ಜಾಲ ಹೊಂದಿದೆ ಎಂಬ ಹೆಗ್ಗಳಿಕೆ ನಮ್ಮ ಭಾರತೀಯ ರೈಲ್ವೆಗೆ ಇದೆ.

20220 ಮಾರ್ಚ್ ಅಂಕಿ ಸಂಖ್ಯೆಗಳ ಪ್ರಕಾರ, ಭಾರತೀಯ ರೈಲ್ವೆ ಮೂಲಕ 808 ಕೋಟಿ ಜನರು ಪ್ರಯಾಣ ಮಾಡಿದ್ದಾರೆ. ಹಾಗೆಯೇ 121 ಕೋಟಿ ಟನ್ ಸರಕು ಸಾಗಣೆಯನ್ನು ರೈಲ್ವೆ ಮೂಲಕ ಮಾಡಲಾಗಿದೆ. ಈ ಮಾಹಿತಿಯೇ ಭಾರತೀಯ ರೈಲ್ವೆ ಇಲಾಖೆಯ ಭವ್ಯತೆಯನ್ನು ಸಾದರಪಡಿಸುತ್ತದೆ ಎಂದು ಹೇಳಬಹುದು. ಈ ಕಾರ್ಯನಿರ್ವಹಣೆಯ ಜತೆಗೆ ಭಾರತೀಯ ರೇಲ್ವೆ ಅತಿದೊಡ್ಡ ಉದ್ಯೋಗದಾತ ಕಂಪನಿಯೂ ಆಗಿದೆ ಎಂಬುದನ್ನು ಮರೆಯಬಾರದು.

ಸೇನೆಯಿಂದ ಶೀಘ್ರ ಜೂನಿಯರ್ ಕಮಿಷನ್ಡ್ ಆಫೀಸರ್‌ ಹುದ್ದೆಗಳಿಗೆ ನೇಮಕಾತಿ?

Follow Us:
Download App:
  • android
  • ios