ದೇಶದಲ್ಲಿ ಈಗ ಕೋವಿಡ್-19 ಎರಡನೇ ಅಲೆ ಗಂಭೀರವಾಗಿದೆ. ಎಷ್ಟೇ ಪ್ರಯತ್ನಪಟ್ಟರೂ ಕೋವಿಡ್ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಹಾಕಿಸಿಕೊಳ್ಳುವುದು ಒಂದೇ ನಮಗೆ ಉಳಿದಿರುವ ದಾರಿಯಾಗಿದೆ.

ಕೊರೋನಾ ಸೋಂಕಿಗೆ ಪ್ರಧಾನಿ ಮೋದಿ ಚಿಕ್ಕಮ್ಮ ಬಲಿ!

ಈಗಾಗಲೇ ಸರ್ಕಾರ 45 ಮತ್ತು ಅದಕ್ಕೂ ಮೇಲ್ಪಟ್ಟ ವಯಸ್ಸಿನವರಿಗೆ ಲಸಿಕೆಯನ್ನು ನೀಡುತ್ತಿದೆ. ಕೋವಿಡ್ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಮೇ 1ರಿಂದ 18 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಮುಂದಾಗಿದೆ. ಆದರೆ, ಇದಕ್ಕಾಗಿ ಅರ್ಹರು ಕೋವಿನ್‌ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡಿರಬೇಕು. ಇಲ್ಲದಿದ್ದರೆ ಅಂಥವರಿಗೆ ಲಸಿಕೆ ನೀಡುವುದಿಲ್ಲ. ಹಾಗಾಗಿ, ಪ್ರತಿಯೊಬ್ಬರು ಕೋವಿನ್ ವೆಬ್‌ಸೈಟ್, ಆಪ್ ಅಥವಾ ಆರೋಗ್ಯ ಸೇತು ಆಪ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಮತ್ತು ನಿಮ್ಮ ಹತ್ತಿರದ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಈ ಹಿನ್ನೆಲೆಯ್ಲಲಿ ನಿಮಗೆ ಕೋವಿನ್‌ನಲ್ಲಿ ಹೇಗೆ ನೋಂದಣಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

CoWIN websiteನಲ್ಲಿ ನೋಂದಣಿ ಹೇಗೆ?
ಮೊದಲಿಗೆ CoWIN website ಭೇಟಿ ಕೊಡಿ ಮತ್ತು Register/ Sign in Yourself ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಮೊಬೈಲ್ ನಂಬರ್ ಟೈಪ್ ಮಾಡಿ Get OTP ಬಟನ್ ಮೇಲೆ ಕ್ಲಿಕ್ ಮಾಡಿ.ಇಷ್ಟಾದ ಮೇಲೆ ನಿಮ್ಮ ನೀವು ದಾಖಲಿಸಿದ ಮೊಬೈಲ್ ನಂಬರ್‌ಗೆ 6 ಡಿಜಿಟ್‌ಗಳುಳ್ಳ ಓಟಿಪಿ ಬರುತ್ತದೆ. ಫೋನ್‌ಗೆ ಬಂದ ಓಟಿಪಿಯನ್ನು ವೆಬ್‌ಸೈಟ್‌ನಲ್ಲಿರುವ ಖಾಲಿ ಇರುವ ಜಾಗದಲ್ಲಿ ನಮೂದಿಸಿ ಮತ್ತು Verify ಬಟನ್ ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮ್ಮ ಹೆಸರು, ಲಿಂಗ, ಹುಟ್ಟಿದ ವರ್ಷ ಇತ್ಯಾದಿ ಮಾಹಿತಿಯನ್ನು ದಾಖಲಿಸಿ ಮತ್ತು Register ಬಟನ್  ಮೇಲೆ ಕ್ಲಿಕ್ ಮಾಡಿ. ಲಸಿಕೆ ಹಾಕಿಸಿಕೊಳ್ಳಲು ಅಪಾಯಿಂಟ್‌ಮೆಂಟ್‌ಗಾಗಿ ನಿಮ್ಮ ಹೆಸರಿನ ಮುಂದೆ ಕಾಣಿಸಿಕೊಳ್ಳುವ Schedule  ಮೇಲೆ ಕ್ಲಿಕ್ ಮಾಡಿ. ನಿಮ್ಮ ಏರಿಯಾದ ಪಿನ್‌ಕೋಡ್ ನಂಬರ್ ದಾಖಲಿಸಿ ಮತ್ತು ಸರ್ಚ್ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಪಿನ್ ಕೋಡ್ ಏರಿಯಾದಲ್ಲಿರುವ ಲಸಿಕಾ ಕೇಂದ್ರಗಳ ಮಾಹಿತಿ ನಿಮಗೆ ಗೋಚರವಾಗುತ್ತದೆ. ಜೊತೆಗೆ ನಿಮ್ಮ ರಾಜ್ಯದ ಮತ್ತ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕವೂ ನೀವು ಸರ್ಚ್ ಮಾಡಬಹುದು. ಇಷ್ಟಾದ ಬಳಿಕ ನಿಮ್ಮ ಹತ್ತಿರದ ಸೆಂಟರ್ ಮತ್ತು ಟೈಮ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ ಮತ್ತು Confirm ಮೇಲೆ ಕ್ಲಿಕ್ ಮಾಡಿ. ಇಷ್ಟು ಪ್ರಕ್ರಿಯೆಗಳನ್ನ  ಪೂರೈಸಿದರೆ ನೀವು ನೋಂದಣಿ ಮಾಡಿಕೊಂಡ ಹಾಗೆಯೇ.

ಕೊರೋನಾ ಪತ್ತೆ ಹಚ್ಚಲು ದೇಶದಲ್ಲಿ ಮತ್ತಷ್ಟು ಕ್ರಮ: ಮಹತ್ವದ ಹೆಜ್ಜೆ ಇರಿಸಿದ ICMR!

ಒಂದೇ ನೋಂದಣಿ ಮೂಲಕ ನೀವು ನಿಮ್ಮ ಕುಟುಂಬದ ನಾಲ್ವರು ಸದಸ್ಯರ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಒಂದು ವೇಳೆ ನಿಮ್ಮ ಕುಟುಂಬದ ಸದಸ್ಯರ ಪೈಕಿ ಒಬ್ಬರು 45 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಉಳಿದವರು 18ರಿಂದ 44 ವರ್ಷದೊಳಗಿನವರು ಇದ್ದರೆ ಕಂಬೈನೈಡ್ ಅಪಾಯಂಟ್‌ಮೆಂಟ್ ಪಡೆದುಕೊಳ್ಳಬೇಕಾಗುತ್ತದೆ.

CoWin ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಆರೋಗ್ಯ ಸೇತು ಆಪ್ ಮೂಲಕ ನೋಂದಣಿ
ಒಂದು ವೇಳೆ ನೀವು ಕೋವಿನ್ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಅಥವಾ ಬೇಡವಾದರೆ ನೀವು ಆರೋಗ್ಯ ಸೇತು ಆಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಆರೋಗ್ಯ ಸೇತು ಆಪ್ ಡೌನ್‌ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಂಡಿದ್ದರೆ, ಅದರ ಮೂಲಕ ಲಸಿಕೆಗೆ ನೋಂದಣಿ ಮಾಡಿಕೊಳ್ಳಬಹುದು. ಅದಕ್ಕಾಗಿ ಹೀಗೆ ಮಾಡಿ.

ನಿಮ್ಮ ಮೊಬೈಲ್‌ನಲ್ಲಿರುವ ಆರೋಗ್ಯ ಸೇತು ಆಪ್ ಓಪನ್ ಮಾಡಿ. ಬಳಿಕ ಹೋಮ್‌ಸ್ಕ್ರೀನ್‌ನಲ್ಲಿರುವ ಕೋವಿನ್ ಟ್ಯಾಬ್‌ಗೆ ಹೋಗಿ. ಅಲ್ಲಿರುವ ವ್ಯಾಕ್ಸಿನೇಷನ್ ರಿಜಿಸ್ಟ್ರೇಷನ್ ಸೆಲೆಕ್ಟ್ ಮಾಡಿ ಮತ್ತು ನಿಮ್ಮ ಫೋನ್ ನಂಬರ್ ದಾಖಲಿಸಿ. ಆಗ ನಿಮ್ಮ ಫೋನ್‌ಗೆ ಓಟಿಪಿ ಬರುತ್ತದೆ. ಬಳಿಕ ಓಟಿಪಿ ದಾಖಲಿಸಿ ವೆರಿಫೈ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮನ್ನು ವ್ಯಾಕ್ಸಿನೇಷನ್ ನೋಂದಣಿ ಪುಟಕ್ಕೆ ರಿಡೈರೆಕ್ಟ್ ಮಾಡಲಾಗುತ್ತದೆ. ಕೋವಿನ್‌ನಲ್ಲಿ ನೋಂದಣಿಗೆ ಅನುಸರಿಸಿದ ಸ್ಟೆಪ್‌ಗಳನ್ನು ಇಲ್ಲಿ ಅನುಸರಿಸಿ ಮತ್ತು ನೋಂದಣಿ ಮಾಡಿಕೊಳ್ಳಿ.

ಕೋವಿಡ್ ನಿರ್ವಹಣೆ ಟೀಕೆ: 100ಕ್ಕೂ ಹೆಚ್ಚು ಪೋಸ್ಟ್ ಡಿಲಿಟ್ ಮಾಡಿದ ಟ್ವಿಟರ್, ಫೇಸ್‌ಬುಕ್!