ಭೋಜ್‌ಪುರಿ ಹಾಡಿಗೆ ಮಕ್ಕಳೆದುರು ಕುಣಿದ ಶಿಕ್ಷಕಿ: ವಿಡಿಯೋ ವೈರಲ್, ಪೋಷಕರ ಆಕ್ರೋಶ
ಇಲ್ಲೊಬ್ಬರು ಶಿಕ್ಷಕರು ಮಕ್ಕಳಿಗೆ ನಲಿದು ನಲಿದು ಪಾಠ ಮಾಡುತ್ತಿದ್ದು, ಟೀಚರ್ ಡಾನ್ಸ್ ನೋಡಿ ಮಕ್ಕಳು ಕೂಡ ಫುಲ್ ಖುಷ್ ಆಗಿದ್ದಾರೆ. ಟೀಚರ್ ಜೊತೆ ಸೇರಿ ಮಕ್ಕಳು ಕೂಡ ಡಾನ್ಸ್ ಮಾಡುತ್ತಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದೆ.
ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರು ಮಕ್ಕಳ ಭವಿಷ್ಯವನ್ನು ಬದಲಾಯಿಸುತ್ತಾರೆ. ಮಕ್ಕಳ ಸರಿತಪ್ಪುಗಳನ್ನು ತಿದ್ದಿ ಮಕ್ಕಳಿಗೆ ಬದುಕಿನ ಪಾಠ ತೋರಿಸುತ್ತಾರೆ. ಪುಟ್ಟ ಮಕ್ಕಳ ಮನಸ್ಸಿನಲ್ಲಿ ಶಿಕ್ಷಕರು ಸದಾ ಹೀರೋಗಳಂತೆಯೇ ಕಾಣಿಸುತ್ತಾರೆ. ಶಾಲೆಯಲ್ಲಿ ಕುಣಿದು ನಲಿದು ಪಾಠ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಕುಣಿದಾರು ಪಾಠ ಮಾಡಲಿ ನಲಿದಾರು ಪಾಠ ಮಾಡಲಿ ಒಟ್ಟಿನಲ್ಲಿ ಮಕ್ಕಳ ತಲೆಯೊಳಗೆ ವಿದ್ಯೆ ಸೇರಲಿ ಎಂಬುದು ಪೋಷಕರ ಮನದಾಳ. ಹಾಗೆಯೇ ಇಲ್ಲೊಬ್ಬರು ಶಿಕ್ಷಕರು ಮಕ್ಕಳಿಗೆ ನಲಿದು ನಲಿದು ಪಾಠ ಮಾಡುತ್ತಿದ್ದು, ಟೀಚರ್ ಡಾನ್ಸ್ ನೋಡಿ ಮಕ್ಕಳು ಕೂಡ ಫುಲ್ ಖುಷ್ ಆಗಿದ್ದಾರೆ. ಟೀಚರ್ ಜೊತೆ ಸೇರಿ ಮಕ್ಕಳು ಕೂಡ ಡಾನ್ಸ್ ಮಾಡುತ್ತಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದ್ದು, 10 ಸೆಕೆಂಡ್‌ನ ಈ ವಿಡಿಯೋವನ್ನು ಗುಲ್ಜರ್ ಸಾಹಬ್ ಎಂಬುವವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಭೋಜ್‌ಪುರಿ (Bhojpuri song) ಹಾಡಾದ ಪಟ್ಲಿ ಕಮರಿಯಾ ಮೊರಿ ಹಾಡಿಗೆ ಶಿಕ್ಷಕಿ ಕ್ಲಾಸ್‌ರೂಮ್‌ನಲ್ಲಿ ಸೊಂಟ ಬಳುಕಿಸುತ್ತಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಕೂಡ ಟೀಚರ್‌ಗೆ ಸಾಥ್ ನೀಡಿದ್ದಾರೆ. ಆದರೆ ಇದು ಭೋಜ್‌ಪುರಿಯ ಅಸಭ್ಯ ಹಾಡು (Indecent song) ಎನ್ನಲಾಗಿದ್ದು, ಈ ಶಿಕ್ಷಕಿಯನ್ನು ಅಮಾನತುಗೊಳಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ಮಕ್ಕಳಿಗೆ ಇವರೆಂಥಾ ಶಿಕ್ಷಣ ನೀಡುತ್ತಿದ್ದಾರೆ. ಇದು ಪುಟ್ಟ ಮಕ್ಕಳಿರುವ ತರಗತಿಯಲ್ಲಿ ಹಾಡುವಂತಹ ಹಾಡ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳನ್ನು ಸೇರಿಸಿಕೊಂಡು ಇವರೆಂಥಾ ಅಸಭ್ಯತೆಯನ್ನು ಹರಡುತ್ತಿದ್ದಾರೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕರು ಯಾವಾಗಲೂ ಮಕ್ಕಳಿಗೆ ರೋಲ್ ಮಾಡೆಲ್ (Roll model) ಆಗಿರಬೇಕು, ಐಟಂ ಡಾನ್ಸರ್‌ಗಳಲ್ಲ, ನಮ್ಮ ಭಾರತೀಯ ಪರಂಪರೆಯಲ್ಲಿ ಗುರುವೃಂದಕ್ಕೆ ಅಪಾರವಾದ ಗೌರವವಿದೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಕೆ ಶಿಕ್ಷಕಿಯರ ಹೆಸರು ಹಾಳು ಮಾಡುತ್ತಿದ್ದಾಳೆ ಕೆಟ್ಟ ಹೆಂಗಸು ಎಂದು ಒಬ್ಬರು ಆಕ್ರೋಶ ಹೊರಹಾಕಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾದರೆ ಯಾರೂ ಸಂಸ್ಕಾರದ ಬಗ್ಗೆ ಮಾತನಾಡಬೇಡಿ ಹಾಗೆಯೇ ಅಪರಾಧದ ಬಗ್ಗೆ ಅಳಬೇಡಿ ಎಂದು ಒಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದೆಂಥಾ ಶಿಕ್ಷಣ... ಐ ಲವ್ ಯೂ ಮೇರಿ ಜಾನ್ ಎಂದು ಶಿಕ್ಷಕಿಗೆ ಕಿರುಕುಳ ನೀಡಿದ ವಿದ್ಯಾರ್ಥಿಗಳು
ಆದರೆ ಕೆಲವರು ಇದನ್ನು ತಮಾಷೆಯಾಗಿ (Fun) ತೆಗೆದುಕೊಂಡಿದ್ದು, ನನಗೆ ಮತ್ತೆ ಶಾಲೆಗೆ ಹೋಗಬೇಕೆನಿಸುತ್ತಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ನಮಗೇಕೆ ಬಾಲ್ಯದಲ್ಲಿ ಇಂತಹ ಶಿಕ್ಷಕಿ ದೊರಕಿಲ್ಲ ಎಂದು ಕೆಲವರು ಬೇಜಾರು ಮಾಡಿಕೊಂಡಿದ್ದಾರೆ. ಚಿಕ್ಕ ಮಕ್ಕಳ (Childres) ಸರ್ವತೋಮುಖ ಅಭಿವೃದ್ಧಿಗೆ ದೇಶದ ಎಲ್ಲಾ ಶಾಲೆಗಳಲ್ಲಿ ಇಂತಹ ಶಿಕ್ಷಕರಿರಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮಕ್ಕಳಿಗೆ ಶಾಲೆಯಲ್ಲಿ ಉತ್ತಮ ಶಿಕ್ಷಣ (Education) ಸಿಗಬೇಕು ನಿಜ. ಆದರೆ ಶಿಕ್ಷಕರು ಕೂಡ ಪುಟ್ಟ ಮಕ್ಕಳ ಮುಂದೆ ಅಷ್ಟೇ ಬದ್ಧತೆಯಿಂದ ಇರಬೇಕು. ಏಕೆಂದರೆ ಶಿಕ್ಷಕರನ್ನೇ ಮಕ್ಕಳು ರೋಲ್ ಮಾಡೆಲ್ ಆಗಿ ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲಿ ಶಿಕ್ಷಕಿಯೇ ಪುಟ್ಟ ಮಕ್ಕಳ ಮುಂದೆ ಅಸಭ್ಯ ಹಾಡು ಹಾಕಿ ಕುಣಿದಿದ್ದು, ಇದೇ ಕಾರಣಕ್ಕೆ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ.
ಇಂಥಾ ಟೀಚರ್ ಇದ್ರೆ ಮಕ್ಕಳ ಜೊತೆ ಪೋಷಕರೂ ಶಾಲೆಗೆ ಹೋಗ್ಬಹುದು
ಕೆಲದಿನಗಳ ಹಿಂದೆ ವಿದ್ಯಾರ್ಥಿಗಳೇ ಮಹಿಳಾ ಶಿಕ್ಷಕಿಯ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿತ್ತು. ಶಿಕ್ಷಕಿಯೊಬ್ಬರಿಗೆ ತರಗತಿಯಲ್ಲೇ ವಿದ್ಯಾರ್ಥಿಗಳು ಐ ಲವ್‌ಯೂ ಮೇರಿ ಜಾನ್ ಎಂದು ಹೇಳಿದ್ದರು. ಅಲ್ಲದೇ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಒಂದು ಮಿತಿಯವರೆಗೆ ವಿದ್ಯಾರ್ಥಿಗಳ ಕಿರುಕುಳ ಸಹಿಸಿದ ಶಿಕ್ಷಕಿ ಮಕ್ಕಳು ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಹಾಕುತ್ತಿದ್ದಂತೆ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿ ಎಫ್ಐಆರ್ ದಾಖಲಿಸಲಾಗಿತ್ತು.
ಅಲ್ಲಿ ಮಸಾಜ್, ಇಲ್ಲಿ ಬಿಟ್ಟಿ ಚಾಕರಿ: ಇಬ್ಬರು ಟೀಚರ್‌ಗಳ ವಿಡಿಯೋ ವೈರಲ್