ಇಂಥಾ ಟೀಚರ್ ಇದ್ರೆ ಮಕ್ಕಳ ಜೊತೆ ಪೋಷಕರೂ ಶಾಲೆಗೆ ಹೋಗ್ಬಹುದು
ಶಿಕ್ಷಕಿಯೊಬ್ಬರು ಮಕ್ಕಳನ್ನು ವಿಭಿನ್ನವಾಗಿ ಸ್ವಾಗತಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೀವನಕ್ಕೆ ಸರಿಯಾದ ಮಾರ್ಗವನ್ನು ತೋರಿಸುವವರು ಗುರುಗಳು. ಬಾಲ್ಯದಲ್ಲಿ ಶಿಕ್ಷಕರು ನೀಡುವ ಶಿಕ್ಷಣ, ಶಿಸ್ತು ಸಂಸ್ಕಾರವೇ ಮಕ್ಕಳನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತದೆ. ಒಳ್ಳೆಯ ಶಿಕ್ಷಕರು ಮಕ್ಕಳ ಬದುಕಿನಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಾರೆ. ಕೆಲ ದಿನಗಳ ಹಿಂದೆ ಶಿಕ್ಷಕರೊಬ್ಬರು ಮಕ್ಕಳೊಂದಿಗೆ ಸೇರಿ ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅದೇ ರೀತಿ ಈಗ ಮಕ್ಕಳನ್ನು ಶಿಕ್ಷಕಿಯೊಬ್ಬಳು ತರಗತಿಗೆ ಸ್ವಾಗತಿಸುತ್ತಾಳೆ. ಶಿಕ್ಷಕಿ ಮಕ್ಕಳನ್ನು ಸ್ವಾಗತಿಸುತ್ತಿರುವ ರೀತಿ ಮಾತ್ರ ತುಂಬಾ ಮುದ್ದಾಗಿದ್ದು, ಮಕ್ಕಳು ಬಹಳ ಖುಷಿ ಖುಷಿಯಿಂದಲೇ ತರಗತಿಯೊಳಗೆ ಬರುತ್ತಾರೆ. ಟೀಚರ್ ಮಕ್ಕಳನ್ನು ಸ್ವಾಗತಿಸುತ್ತಿರುವ ಈ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋವನ್ನು ಅಲ್ವಿನ್ ಫೋ ಎಂಬುವವರು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೂರು ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಡಿಯೋವನ್ನು ಹಾಲಿವುಡ್ ನಟ ಜೇಮ್ಸ್‌ವುಡ್ ಕೂಡ ತಮ್ಮ ಖಾತೆಯಲ್ಲಿ ರಿಟ್ವಿಟ್ ಮಾಡಿದ್ದಾರೆ. ಎಂಥಹಾ ಉತ್ತಮ ಶಿಕ್ಷಕಿ ಎಂದು ಅವರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪ್ರತಿಯೊಂದು ಮಗುವನ್ನು ಕೂಡ ವಿಭಿನ್ನವಾಗಿ ಟೀಚರ್ ಸ್ವಾಗತಿಸುತ್ತಾರೆ. ಒಂದು ಮಗುವನ್ನು ಡಾನ್ಸ್ ಮಾಡುತ್ತಾ ಸ್ವಾಗತಿಸಿದರೆ ಮತ್ತೊಂದು ಮಗುವನ್ನು ತಬ್ಬಿಕೊಂಡು ಇನ್ನೊಂದು ಮಗುವಿಗೆ ಕೂ ಮುಗಿಯುತ್ತಾ, ಮತ್ತೊಂದು ಮಗುವಿನೊಂದಿಗೆ ಡಾನ್ಸ್ ಮಾಡುತ್ತಾ ಹೀಗೆ ಮಕ್ಕಳಿಗೆ ಹೇಗೆ ಬೇಕೂ ಹಾಗೆ ಮಾಡುತ್ತಾ ಎಲ್ಲಾ ಮಕ್ಕಳನ್ನು ತುಂಬಾ ಚೆನ್ನಾಗಿ ಸ್ವಾಗತಿಸುತ್ತಾರೆ.
ಇದೊಂದು ಮುದ್ದಾದ ವಿಡಿಯೋವಾಗಿದ್ದು, ಈ ವಿಡಿಯೋ ಒಂದು ಅನುಕರಿಸಬಹುದಾದ ಉದಾಹರಣೆಯಾಗಿದೆ ಎಂದು ನೋಡುಗರು ಕಾಮೆಮಟ್ ಮಾಡಿದ್ದಾರೆ. ನಾವು ತುಂಬಾ ಕಷ್ಟ ಪಟ್ಟರೆ ಈ ಪ್ರಪಂಚದಲ್ಲಿರುವ ಪ್ರತಿಯೊಂದು ಮಗುವನ್ನು ಒಬ್ಬ ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡಬಹುದು ಎಂದು ನೋಡುಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಟೀಚರ್ ಒಳ್ಳೆಯವರಿದ್ದರೆ ಯಾವ ಮಗೂ ಕೂಡ ಶಾಲೆಗೆ ಹೋಗಲ್ಲ ಅಂತ ಹೇಳಲ್ಲ. ಬಹುತೇಕ ಮಕ್ಕಳ ಪಾಲಿಗೆ ಟೀಚರ್‌ಗಳೇ ಹೀರೋಗಳಾಗಿದ್ದು, ಅವರು ಹೇಳಿದ್ದಕ್ಕಿಂತ ಸ್ವಲ್ಪ ಜಾಸ್ತಿ ಹೇಳೋಕೆ ಹೊರಟ್ರೆ ನಮ್ ಟೀಚರ್ ಹಾಗೇ ಹೇಳಿಲ್ಲ. ನಾ ಮಾಡಲ್ಲ ಅಂತ ಮಕ್ಕಳು ಹೇಳುವುದನ್ನು ನೀವು ಕೇಳಿರಬಹುದು. ಅಷ್ಟರ ಮಟ್ಟಿಗೆ ಶಿಕ್ಷಕರ ಪ್ರಭಾವವನ್ನು ಮಕ್ಕಳಲ್ಲಿ ಕಾಣಬಹುದು. ಒಟ್ಟಿನಲ್ಲಿ ಈ ಟೀಚರ್ ನೋಡಿದ್ರೆ ಯಾವ ಮಕ್ಕಳು ಕೂಡ ಶಾಲೆಗೆ ಹೋಗಲ್ಲ ಅಂತ ಹೇಳಲಾರರು ಅಲ್ವಾ!
ಕ್ಲಾಸ್ ರೂಮ್ ನಲ್ಲೇ ಟೀಚರ್ ನಿದ್ರೆ, ಗಾಳಿ ಬೀಸಿದ ಮಕ್ಕಳು ವೀಡಿಯೋ ವೈರಲ್!
ಕೆಲ ದಿನಗಳ ಹಿಂದೆ ಶಾಲಾ ಶಿಕ್ಷಕಿಯೊಬ್ಬರು ಮಕ್ಕಳ ಜೊತೆ ಡಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಶಾಲಾ ಶಿಕ್ಷಕಿ ಮನು ಗುಲಾಟಿ ಎಂಬುವವರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಬೇಸಿಗೆ ಶಿಬಿರದ ಕೊನೆ ದಿನ ನಮ್ಮ ಅಪರಿಪೂರ್ಣ ಡಾನ್ಸ್. ಕೆಲವು ಪರಿಪೂರ್ಣವಾದ ಖುಷಿಯ ಜೊತೆಗಿನ ಸುಂದರವಾದ ಕ್ಷಣ ಎಂದು ಬರೆದು ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದರು ಹಿಂದಿ ಸಿನಿಮಾವೊಂದರ ಝುಮ್ಕಾ ಬರೇಲಿ ವಾಲಾ ಹಾಡಿಗೆ ಶಿಕ್ಷಕಿ ಹಾಗೂ ಮಕ್ಕಳು ಜೊತೆಯಾಗಿ ಡಾನ್ಸ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಐದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ಡಾನ್ಸ್‌ಗೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಮಕ್ಕಳೊಂದಿಗೆ ಶಿಕ್ಷಕಿಯ ಮಸ್ತ್ ಡಾನ್ಸ್, ವಿಡಿಯೋ ವೈರಲ್