Asianet Suvarna News Asianet Suvarna News

ಬಳ್ಳಾರಿ: ಅನುಮತಿ ಇಲ್ಲದ ‘ಸತ್ಯಂ ಟಿನಿಟಾಟ್ಸ್‌’ ಶಾಲೆಗೆ ಬೀಗ

ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆಯಿಂದ ಪರವಾನಗಿ ಇಲ್ಲದಿರುವುದು ಅಧಿಕಾರಿಗಳು ಪತ್ತೆ ಹಚ್ಚಿದರಲ್ಲದೆ, ಶಾಲೆಯ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿದ್ದಾರೆ. ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೆ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಶಾಲೆ ಆರಂಭಿಸುವ ಸಂಬಂಧ ಕಳೆದ ಜೂನ್‌ನಲ್ಲಿ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು. ಸೂಕ್ತ ದಾಖಲೆಗಳು ಇಲ್ಲದ ಕಾರಣ ಅನುಮತಿ ನಿರಾಕರಿಸಲಾಗಿತ್ತು. ಇಷ್ಟಾಗಿಯೂ ಶಾಲೆಯನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. 

Satyam Tinitats School Closed For Without Permission in Ballari grg
Author
First Published Aug 11, 2023, 10:15 PM IST

ಬಳ್ಳಾರಿ(ಆ.11): ಸರ್ಕಾರದ ಅನುಮತಿಯಿಲ್ಲದೆ ನಡೆಯುತ್ತಿದ್ದ ಇಲ್ಲಿನ ಪಾರ್ವತಿನಗರದ ‘ಸತ್ಯಂ ಟಿನಿಟಾಟ್ಸ್‌ ’ ಪೂರ್ವ ಪ್ರಾಥಮಿಕ ಶಾಲೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ಅನುಮತಿರಹಿತ ಶಾಲೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ನವ ಕರ್ನಾಟಕ ಯುವಶಕ್ತಿ ಸಂಘಟನೆಯ ಮುಖಂಡರು, ‘ಸತ್ಯಂ ಟಿನಿಟಾಟ್ಸ್‌’ ಶಾಲೆಯು ಸಹ ಶಿಕ್ಷಣ ಇಲಾಖೆಯಿಂದ ಯಾವುದೇ ಪರವಾನಗಿ ತೆಗೆದುಕೊಳ್ಳದೆ ನಡೆಸುತ್ತಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್‌ ಮಂಜುನಾಥ್‌ ಅವರು ನೀಡಿದ ದೂರಿನ ಮೇರೆಗೆ ಬುಧವಾರ ಶಾಲೆಗೆ ಆಗಮಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಭುಜಂಗಾಚಾರಿ, ಬಿಆರ್‌ಪಿ ಬಿ.ಜಿ. ಶಿವಕುಮಾರ್‌, ಡಿ. ಶಿವಮ್ಮ ಮತ್ತಿತರರು ದಾಖಲಾತಿಗಳನ್ನು ಪರಿಶೀಲಿಸಿದರು.

ಆ.14ರೊಳಗೆ ಕರ್ನಾಟಕದಲ್ಲಿ 1300 ಅನಧಿಕೃತ ಶಾಲೆ ಬಂದ್‌

ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆಯಿಂದ ಪರವಾನಗಿ ಇಲ್ಲದಿರುವುದು ಅಧಿಕಾರಿಗಳು ಪತ್ತೆ ಹಚ್ಚಿದರಲ್ಲದೆ, ಶಾಲೆಯ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿದ್ದಾರೆ. ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೆ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಶಾಲೆ ಆರಂಭಿಸುವ ಸಂಬಂಧ ಕಳೆದ ಜೂನ್‌ನಲ್ಲಿ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು. ಸೂಕ್ತ ದಾಖಲೆಗಳು ಇಲ್ಲದ ಕಾರಣ ಅನುಮತಿ ನಿರಾಕರಿಸಲಾಗಿತ್ತು. ಇಷ್ಟಾಗಿಯೂ ಶಾಲೆಯನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ ಎಂದು ಕರ್ನಾಟಕ ಯುವಶಕ್ತಿ ಸಂಘಟನೆಯ ಸಿದ್ಮಲ್‌ ಮಂಜುನಾಥ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಸಂಘಟನೆಯ ಮುಖಂಡರಾದ ಮುಂಡಾಸದ ಮಲ್ಲಿಕಾರ್ಜುನ, ದೇವೇಶ್‌, ಎಸ್‌. ಸಂತೋಷ್‌ಕುಮಾರ್‌ ಇತರರಿದ್ದರು.

ಧಾರವಾಡ: ಶಾಲೆಗೆ ಬೀಗ ಹಾಕಿ ಕಾರ್ಯಾಗಾರಕ್ಕೆ ತೆರಳಿದ ಶಿಕ್ಷಕರು

ನಗರದಲ್ಲಿ ಇತ್ತೀಚೆಗೆ ವಿಜಯವಾಡ ಶ್ರೀಚೈತನ್ಯ ಕಾಲೇಜು ಒಂದುಕಡೆ ಪರವಾನಗಿ ಪಡೆದು ಮತ್ತೊಂದು ಕಡೆ ಕಾಲೇಜು ನಡೆಸುತ್ತಿರುವ ಕುರಿತು ಪತ್ತೆ ಹಚ್ಚಿದ ಕರ್ನಾಟಕ ಯುವಶಕ್ತಿ ಸಂಘಟನೆಯ ಮುಖಂಡರು ಇಲಾಖೆ ಗಮನಕ್ಕೆ ತಂದಿದ್ದರು.

ಶಿಕ್ಷಣ ಇಲಾಖೆ ಅಧಿಕಾರಿಗಳ ಸಹಮತದಿಂದಲೇ ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ವಿವಿಧ ಸಂಘಟನೆಗಳ ಒತ್ತಾಯ ಮಾಡಿದಾಗ ಮಾತ್ರ ಶಾಲೆಗೆ ಬೀಗ ಜಡಿಯುವ ಕೆಲಸವಾಗುತ್ತಿದೆ. ಒಂದು ಕಡೆ ಪರವಾನಗಿ ಪಡೆದು ಮತ್ತೊಂದು ಕಡೆ ಕಾರ್ಯನಿರ್ವಹಿಸುವ ಶಾಲೆಗಳು ಸಾಕಷ್ಟಿವೆ. ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಯುವಶಕ್ತಿ ಸಂಘಟನೆ ಆಗ್ರಹಿಸಿದೆ.

Follow Us:
Download App:
  • android
  • ios