ಧಾರವಾಡ: ಶಾಲೆಗೆ ಬೀಗ ಹಾಕಿ ಕಾರ್ಯಾಗಾರಕ್ಕೆ ತೆರಳಿದ ಶಿಕ್ಷಕರು
ತಾಲೂಕು ಮಟ್ಟದ ಕಾರ್ಯಾಗಾರವಿದೆ ಎಂದು ಶಾಲೆಯ ಎಲ್ಲ ಶಿಕ್ಷಕರು ಓ.ಡಿ. ಹಾಕಿ ಆ.7ರಂದು ಮಧ್ಯಾಹ್ನ 12.30ಕ್ಕೆ ಶಾಲೆಯ ಮಕ್ಕಳಿಗೆ ಬಿಸಿ ಊಟ ವಿತರಿಸಿ ಶಾಲೆಗೆ ರಜೆ ನೀಡಿ ಹೋಗಿದ್ದಾರೆ. ಶಿಕ್ಷಕರನ್ನು ಪ್ರಶ್ನಸಿದರೆ ಶಾಲೆಯ ಎಲ್ಲ ಶಿಕ್ಷಕರು ಹೋಗಬೇಕು ಎಂದು ಹೇಳಿದ್ದಾರೆ ಎಂದು ಆರೋಪಿಸಿದ ಶಾಲೆಯ ಎಸ್‌ಡಿಎಂಸಿ ಸದಸ್ಯ ಗೋಪಾಲ ದೊಡಮನಿ
ಕುಂದಗೋಳ(ಆ.10): ತಾಲೂಕು ಮಟ್ಟದ ಶೈಕ್ಷಣಿಕ ಕಾರ್ಯಾಗಾರವಿದೆ ಎಂಬ ನೆಪವೊಡ್ಡಿ ತಾಲೂಕಿನ ಗುಡೇನಕಟ್ಟಿಸೇರಿದಂತೆ ವಿವಿಧ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಶಿಕ್ಷಕರು ಶಾಲೆಗೆ ಬೀಗಹಾಕಿ ಕಾರ್ಯಾಗಾರಕ್ಕೆ ಹೋಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ತಾಲೂಕು ಮಟ್ಟದ ಕಾರ್ಯಾಗಾರವಿದೆ ಎಂದು ಶಾಲೆಯ ಎಲ್ಲ ಶಿಕ್ಷಕರು ಓ.ಡಿ. ಹಾಕಿ ಆ.7ರಂದು ಮಧ್ಯಾಹ್ನ 12.30ಕ್ಕೆ ಶಾಲೆಯ ಮಕ್ಕಳಿಗೆ ಬಿಸಿ ಊಟ ವಿತರಿಸಿ ಶಾಲೆಗೆ ರಜೆ ನೀಡಿ ಹೋಗಿದ್ದಾರೆ. ಶಿಕ್ಷಕರನ್ನು ಪ್ರಶ್ನಸಿದರೆ ಶಾಲೆಯ ಎಲ್ಲ ಶಿಕ್ಷಕರು ಹೋಗಬೇಕು ಎಂದು ಹೇಳಿದ್ದಾರೆ ಎಂದು ಶಾಲೆಯ ಎಸ್‌ಡಿಎಂಸಿ ಸದಸ್ಯ ಗೋಪಾಲ ದೊಡಮನಿ ಆರೋಪಿಸಿದ್ದಾರೆ.
ದಿನಕ್ಕೆ 1000 ರೂ ಆದಾಯ: ಕೇಂದ್ರ ಸರ್ಕಾರದ ನೆರವಿನಿಂದ ಬದುಕು ಬೆಳಗಿಸಿಕೊಂಡ ಕವಿತಾ
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ಕುಂದರಗಿ ಅವರನ್ನು ಮಾತನಾಡಿಸಿದಾಗ ಕಾರ್ಯಾಗಾರಕ್ಕೆ ಬರಲು ತಾಲೂಕಿನ ಎಲ್ಲ ಶಾಲೆಗಳಿಗೆ ಜ್ಞಾಪನಾಪತ್ರ ನೀಡಿದ್ದು. ಈ ಪತ್ರದಲ್ಲಿ ನಾನು ಸ್ಪಷ್ಟವಾಗಿ ಶಾಲೆಯಲ್ಲಿರುವ ಶಿಕ್ಷಕರಲ್ಲಿ ಶೇ. 50ರಷ್ಟುಶಿಕ್ಷಕರು ಮಾತ್ರ ಕಾರ್ಯಾಗಾರಕ್ಕೆ ಹಾಜರಾಗಿ, ಇನ್ನುಳಿದ ಶೇ. 50ಶಿಕ್ಷಕರು ಶಾಲೆಯಲ್ಲಿಯೇ ಇದ್ದು ಮಕ್ಕಳ ವಿದ್ಯಾಭ್ಯಾಸದ ಚಟುವಟಿಕೆ ಕಡೆ ಗಮನ ಹರಿಸುವಂತೆ ಆದೇಶ ನೀಡಿದ್ದೇನೆ. ಇವರು ಏತಕ್ಕೆ ಶಾಲೆ ಬಂದ್ ಮಾಡಿ ಬಂದಿದ್ದಾರೆ ಎಂದು ತಿಳಿಯದು. ಈ ಕೂಡಲೇ ಶಾಲೆಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.