RRB NTPC Notification 2024: 11558 ಖಾಲಿ ಹುದ್ದೆಗೆ ನೇಮಕಕ್ಕೆ ಅರ್ಜಿ ಆಹ್ವಾನಿಸಿದ ರೈಲ್ವೆ ನೇಮಕಾತಿ ಮಂಡಳಿ!
RRB NTPC Notification 2024 ರೈಲ್ವೆ ನೇಮಕಾತಿ ಮಂಡಳಿ (RRBs) NTPC ನೇಮಕಾತಿ 2024 ಕ್ಕೆ ಅಧಿಸೂಚನೆಯನ್ನು ಪ್ರಕಟಿಸಿದ್ದು, ಒಟ್ಟು 11558 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪದವೀಧರರಿಗಾಗಿ 8113 ಹುದ್ದೆಗಳು ಮತ್ತು ಪದವಿಪೂರ್ವ ವಿದ್ಯಾಭ್ಯಾಸ ಮುಗಿಸಿದವರಿಗೆ 3,445 ಹುದ್ದೆಗಳನ್ನು ಮೀಸಲಿಡಲಾಗಿದೆ.
ಬೆಂಗಳೂರು (ಸೆ.3): ರೈಲ್ವೆ ನೇಮಕಾತಿ ಮಂಡಳಿ (RRBs) ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ. ಆರ್‌ಆರ್‌ಬಿಯಲ್ಲಿ ದೊಡ್ಡ ಪ್ರಮಾಣದ ನೋಟಿಫಿಕೇಶನ್‌ಅನ್ನು ಸೆಪ್ಟೆಂಬರ್ 2 ರಂದು ಬಿಡುಗಡೆ ಮಾಡಿದೆ. NTPC ನೇಮಕಾತಿ 2024 ಕ್ಕೆ RRB ಅಧಿಕೃತವಾಗಿ ಅಧಿಸೂಚನೆಯನ್ನು ಪ್ರಕಟ ಮಾಡಿದ್ದು, ಭಾರತೀಯ ರೈಲ್ವೇಯಲ್ಲಿ ವಿವಿಧ ತಾಂತ್ರಿಕವಲ್ಲದ ಜನಪ್ರಿಯ ವರ್ಗದ (NTPC-ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ) ಹುದ್ದೆಗಳಿಗೆ ಒಟ್ಟು 11558 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. RRB NTPC 2024 ನೋಟಿಫಿಕೇಶ್‌ನಲ್ಲಿ ಪದವೀಧರರಿಗಾಗಿ 8113 ಹುದ್ದೆಗಳನ್ನು ನಿಗದಿ ಮಾಡಲಾಗಿದ್ದರೆ, ಪದವಿಪೂರ್ವ ವಿದ್ಯಾಭ್ಯಾಸ ಮುಗಿಸಿದವರಿಗೆ 3,445 ಹುದ್ದೆಗಳನ್ನು ಮೀಸಲಿಡಲಾಗಿದೆ.
ರೈಲ್ವೆ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ, “ತಾಂತ್ರಿಕವಲ್ಲದ ಜನಪ್ರಿಯ ವರ್ಗಗಳ (NTPC) ಪದವಿ ಮತ್ತು ಪದವಿಪೂರ್ವ ಹುದ್ದೆಗಳ ನೇಮಕಾತಿ ಕೆಳಗಿನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಬೇಕು' ಎಂದು ತಿಳಿಸಿದೆ. ಈ ಅಧಿಸೂಚನೆಯನ್ನು ಸೆಪ್ಟೆಂಬರ್ 2 ರಂದು ಬಿಡುಗಡೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಪದವಿ ಮತ್ತು ಪದವಿಪೂರ್ವ ಹಂತದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು. ಪ್ರಮುಖ ದಿನಾಂಕಗಳು, ಅಪ್ಲಿಕೇಶನ್ ಪ್ರಕ್ರಿಯೆ, ಇತರ ಸಂಬಂಧಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಒಟ್ಟು ಹುದ್ದೆಗಳು: 11558
ಪದವಿಧರರ (ಮಟ್ಟ 5, 6) ಮತ್ತು ಪದವಿಪೂರ್ವ (ಹಂತ 2, 3) ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು. ಒಟ್ಟು 11,558 ಹುದ್ದೆಗಳನ್ನು ಈ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು. ಪದವಿ ಹಂತದ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆಯು ಸೆಪ್ಟೆಂಬರ್ 14 ರಂದು ಪ್ರಾರಂಭವಾಗುತ್ತದೆ. 13 ಅಕ್ಟೋಬರ್‌ವರೆಗೆ ಮುಂದುವರಿಯುತ್ತದೆ. ಪದವಿಪೂರ್ವ ಉದ್ಯೋಗಗಳಿಗೆ ಅರ್ಜಿ ಪ್ರಕ್ರಿಯೆಯು ಸೆಪ್ಟೆಂಬರ್ 21 ರಿಂದ 20 ಅಕ್ಟೋಬರ್‌ವರೆಗೆ ಇರುತ್ತದೆ.
ಪದವೀಧರ ಹುದ್ದೆಗಳಲ್ಲಿ ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಮೇಲ್ವಿಚಾರಕರು, ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ ಮತ್ತು ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳು ಸೇರುವ ಸಾಧ್ಯತೆ ಇದೆ. ಪದವಿಪೂರ್ವ ವಿಭಾಗದಲ್ಲಿ ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಅಕೌಂಟ್ ಕ್ಲರ್ಕ್, ಟ್ರೈನ್ಸ್ ಕ್ಲರ್ಕ್, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ಅವಕಾಶವಿದೆ. ಪದವಿಪೂರ್ವ ಹುದ್ದೆಗಳಿಗೆ 12 ನೇ ತೇರ್ಗಡೆ ಆಗಿರುವುದು ಕಡ್ಡಾಯ. ಪದವೀಧರ ಹುದ್ದೆಗಳಿಗೆ ಪದವಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
ಪದವಿಪೂರ್ವ ಪೋಸ್ಟ್
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್: 990 ಹುದ್ದೆಗಳು
ಅಕೌಂಟ್ಸ್ ಕ್ಲರ್ಕ್ (ಕಮ್ ಟೈಪಿಸ್ಟ್): 361 ಹುದ್ದೆಗಳು
ರೈಲುಗಳ ಗುಮಾಸ್ತ: 72 ಹುದ್ದೆಗಳು
ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್: 2022 ಪೋಸ್ಟ್‌ಗಳು
ಪದವಿ ಪೋಸ್ಟ್
ಗೂಡ್ಸ್ ಟ್ರೈನ್ ಮ್ಯಾನೇಜರ್: 3144 ಪೋಸ್ಟ್‌ಗಳು
ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕ: 1736 ಹುದ್ದೆಗಳು
ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್: 732 ಹುದ್ದೆಗಳು
ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್: 1507 ಹುದ್ದೆಗಳು
ಸ್ಟೇಷನ್ ಮಾಸ್ಟರ್: 994 ಹುದ್ದೆಗಳು
ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ ಏನು?
ಪದವಿಪೂರ್ವ ಹುದ್ದೆಗಳು: ಅಭ್ಯರ್ಥಿಗಳು 18 ರಿಂದ 33 ವರ್ಷ ವಯಸ್ಸಿನವರಾಗಿರಬೇಕು.
ಪದವೀಧರ ಹುದ್ದೆಗಳು: ಅಭ್ಯರ್ಥಿಗಳು 18 ರಿಂದ 36 ವರ್ಷ ವಯಸ್ಸಿನವರಾಗಿರಬೇಕು.
ಪರೀಕ್ಷಾ ವಿಧಾನ:
- ಆನ್‌ಲೈನ್ ಪರೀಕ್ಷೆ ಹಂತ 1 -CBT 1
- ಆನ್‌ಲೈನ್ ಪರೀಕ್ಷೆ ಹಂತ 2 - CBT 2
- ಟೈಪಿಂಗ್ ಟೆಸ್ಟ್ (ಕೌಶಲ್ಯ ಪರೀಕ್ಷೆ) / ಆಪ್ಟಿಟ್ಯೂಡ್ ಪರೀಕ್ಷೆ
- ದಾಖಲೆಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ರೈಲ್ವೆ ಇಲಾಖೆಯಲ್ಲಿ 13,206 ಟೆಕ್ನಿಷಿಯನ್ ಹುದ್ದೆಗಳು: ಐಟಿಐ ಪಾಸಾದವರಿಗೆ ಸುವರ್ಣಾವಕಾಶ!
ಅರ್ಜಿ ಸಲ್ಲಿಸುವುದು ಹೇಗೆ?
- ಹಂತ 1. RRB ಅಧಿಕೃತ ವೆಬ್ಸೈಟ್ rrbapply.gov.in ಗೆ ಭೇಟಿ ನೀಡಿ.
- ಹಂತ 2. RRB NTPC 2024 ಅಧಿಸೂಚನೆಯನ್ನು ನೋಟಿ ಮತ್ತು ಎಚ್ಚರಿಕೆಯಿಂದ ಓದಿ.
- ಹಂತ 3. ಮೂಲ ವಿವರಗಳನ್ನು ಒದಗಿಸುವ ಮೂಲಕ ಖಾತೆಯನ್ನು ರಚಿಸಿ.
- ಹಂತ 4. ನಿಖರವಾದ ಮಾಹಿತಿಯೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಹಂತ 5. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಹಂತ 6. ಅರ್ಜಿ ಶುಲ್ಕವನ್ನು ಪಾವತಿಸಿ.
- ಹಂತ 7. ಪೂರ್ಣಗೊಂಡ ಅರ್ಜಿಯನ್ನು ಅಂತಿಮ ದಿನಾಂಕದೊಳಗೆ ಸಲ್ಲಿಸಿ.
RRB Recruitment 2022: ಭಾರತೀಯ ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 2.65 ಲಕ್ಷ ಹುದ್ದೆ ಖಾಲಿ, ಶೀಘ್ರವೇ ನೇಮಕಾತಿ