RRB Recruitment 2022: ಭಾರತೀಯ ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 2.65 ಲಕ್ಷ ಹುದ್ದೆ ಖಾಲಿ, ಶೀಘ್ರವೇ ನೇಮಕಾತಿ
ರಾಜ್ಯಸಭೆಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಭಾರತೀಯ ರೈಲ್ವೇಯಲ್ಲಿ ಒಟ್ಟು 2,65,547 ಹುದ್ದೆಗಳು ಖಾಲಿ ಇದೆ ಎಂದು ಮಾಹಿತಿ ನೀಡಿದ್ದಾರೆ.
ನವದೆಹಲಿ(ಫೆ.16): ರಾಜ್ಯಸಭೆಯಲ್ಲಿ (Rajya Sabha) ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Union Railway Minister Ashwini Vaishnaw) ಅವರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಭಾರತೀಯ ರೈಲ್ವೇಯಲ್ಲಿ (Indian Railway ) 2,177 ಗೆಜೆಟೆಡ್ (gazetted) ಹುದ್ದೆಗಳು ಮತ್ತು 2,63,370 ನಾನ್ ಗೆಜೆಟೆಡ್ (non-gazetted) ಹುದ್ದೆಗಳನ್ನು ಒಳಗೊಂಡಂತೆ ಇಲಾಖೆಯಲ್ಲಿ ಒಟ್ಟು 2,65,547 ಹುದ್ದೆಗಳು ಖಾಲಿ ಇದೆ ಎಂದು ಮಾಹಿತಿ ನೀಡಿದ್ದಾರೆ. ಈ ಹುದ್ದೆಗಳ ನೇಮಕಾತಿ ಮೂಲಕ ದೇಶದ ನಿರುದ್ಯೋಗದ ಸಮಸ್ಯೆಗೆ ಪರಿಹಾರ ಕಾಣಬಹುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ರೈಲ್ವೆ ಇಲಾಖೆಯ (Railway Department) ಮಾಹಿತಿ ಪ್ರಕಾರ, ಕೇಂದ್ರ ರೈಲ್ವೆಯಲ್ಲಿ 56, ಪೂರ್ವ ಕರಾವಳಿ ರೈಲ್ವೆಯಲ್ಲಿ 87, ಪೂರ್ವ ರೈಲ್ವೆಯಲ್ಲಿ 195, ಪೂರ್ವ ಮಧ್ಯ ರೈಲ್ವೆಯಲ್ಲಿ 170, ಮೆಟ್ರೋ ರೈಲ್ವೆಯಲ್ಲಿ 22, ಉತ್ತರ ಮಧ್ಯ ರೈಲ್ವೆಯಲ್ಲಿ 141, ಈಶಾನ್ಯ ರೈಲ್ವೆಯಲ್ಲಿ 62, ಈಶಾನ್ಯ ಗಡಿ ರೈಲ್ವೆಯಲ್ಲಿ 112 , ಉತ್ತರ ರೈಲ್ವೆ 115, ವಾಯುವ್ಯ ರೈಲ್ವೆ 100, ದಕ್ಷಿಣ ಮಧ್ಯ ರೈಲ್ವೆ 43, ಆಗ್ನೇಯ ಮಧ್ಯ ರೈಲ್ವೆ 88, ಆಗ್ನೇಯ ರೈಲ್ವೆ 137, ದಕ್ಷಿಣ ರೈಲ್ವೆ 65, ಪಶ್ಚಿಮ ಮಧ್ಯ ರೈಲ್ವೆ 59, ಪಶ್ಚಿಮ ರೈಲ್ವೆ 172 ಮತ್ತು ಇತರ ಘಟಕಗಳಲ್ಲಿ 507 ಗೆಜೆಟೆಡ್ ಹುದ್ದೆಗಳು ಖಾಲಿ ಇವೆ.
East Coast Railway Apprentice Recruitment 2022: ಬರೋಬ್ಬರಿ 756 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇನ್ನು ನಾನ್ ಗೆಜೆಟೆಡ್ ಹುದ್ದೆಗಳಿಗೆ ಸಂಬಂಧಿಸಿದಂತೆ, ಕೇಂದ್ರ ರೈಲ್ವೆಯಲ್ಲಿ 27,177, ಪೂರ್ವ ಕರಾವಳಿ ರೈಲ್ವೆಯಲ್ಲಿ 8,447, ಪೂರ್ವ ರೈಲ್ವೆಯಲ್ಲಿ 28,204, ಪೂರ್ವ ಮಧ್ಯ ರೈಲ್ವೆಯಲ್ಲಿ 15,268, ಮೆಟ್ರೋ ರೈಲ್ವೆಯಲ್ಲಿ 856, ಉತ್ತರ ಮಧ್ಯ ರೈಲ್ವೆಯಲ್ಲಿ 9,366, ಈಶಾನ್ಯ ರೈಲ್ವೆಯಲ್ಲಿ 14,231 ರೈಲ್ವೆ, ಈಶಾನ್ಯ ಗಡಿ ರೈಲ್ವೆ 15,477, ಉತ್ತರ ರೈಲ್ವೆಯಲ್ಲಿ 37,436, ವಾಯುವ್ಯ ರೈಲ್ವೆಯಲ್ಲಿ 15,049, ದಕ್ಷಿಣ ಮಧ್ಯ ರೈಲ್ವೆಯಲ್ಲಿ 16,741, ಆಗ್ನೇಯ ಮಧ್ಯ ರೈಲ್ವೆಯಲ್ಲಿ 9,422, ಆಗ್ನೇಯ ರೈಲ್ವೆಯಲ್ಲಿ 16,847, ದಕ್ಷಿಣ ಭಾರತೀಯ ರೈಲ್ವೆಯಲ್ಲಿ 9,500, ದಕ್ಷಿಣ ಪಶ್ಚಿಮ ರೈಲ್ವೆಯಲ್ಲಿ 6,5315, ಪಶ್ಚಿಮ ರೈಲ್ವೆಯಲ್ಲಿ 26,227 ಹುದ್ದೆಗಳು ಮತ್ತು ಇತರ ಘಟಕಗಳಲ್ಲಿ 12760 ಗೆಜೆಟೆಡ್ ಹುದ್ದೆಗಳು ಖಾಲಿ ಇವೆ.
ದೇಶದಲ್ಲಿ ನಿರುದ್ಯೋಗ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು, ಈ ಹುದ್ದೆಗಳನ್ನು ಭರ್ತಿ ಮಾಡುವುದರಿಂದ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವಲ್ಲಿ ನಿಸ್ಸಂಶಯವಾಗಿ ನೆರವಾಗಲಿದೆ ಈ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದಿರುವ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್, ಈ ಮೂಲಕ ನಿರುದ್ಯೋಗಗಳಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಮುಂದಾಗಲಿದೆ ಎಂದಿದ್ದಾರೆ.
South Western Railway Recruitment 2022: ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವವರಿಗೆ ಸುವರ್ಣವಕಾಶ
ರೈಲ್ವೇ ನೇಮಕಾತಿ ಮಂಡಳಿ ( Railway Recruitment Board - RRB) ಮತ್ತು ರೈಲ್ವೇ ನೇಮಕಾತಿ ಕೋಶ ಕಳೆದ ಐದು ವರ್ಷಗಳಲ್ಲಿ 1,89,790 ಜನರನ್ನು ನೇಮಕ ಮಾಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಈ ಮಧ್ಯೆ ರೈಲ್ವೆ ನೇಮಕಾತಿ ಮಂಡಳಿಯು ಇಮೇಲ್ ಮೂಲಕ 2 ಲಕ್ಷ ಕುಂದುಕೊರತೆಗಳ ದೂರನ್ನು ಸ್ವೀಕರಿಸಿದೆ. ಫೆಬ್ರವರಿ 3, 2022 ರವರೆಗೆ 9861 ಶಿಬಿರಗಳು ಮತ್ತು ವೆಬ್ ಪ್ರೋಗ್ರಾಂಗಳನ್ನು ನಡೆಸಿದೆ.