ರಾಷ್ಟ್ರೀಯ ಶಿಕ್ಷಣ ನೀತಿ ಚೆನ್ನಾಗಿದೆ, ಆದರೆ ಅದಕ್ಕೆ ಕಡಿವಾಣ ಇಲ್ಲ: ರೋಹಿತ್ ಚಕ್ರತೀರ್ಥ
ಒಂದು ಶಿಕ್ಷಣ ನೀತಿ ಕೆಟ್ಟದಾಗಿದ್ರೂ ಅದನ್ನ ಒಳ್ಳೆಯದಾಗಿ ಅಳವಡಿಕೆ ಮಾಡಬೇಕು. ಹೀಗಾಗಿ ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯ ಸ್ಥಿತಿಯೂ ಹಾಗೇ ಇದೆ. ರಾಷ್ಟ್ರೀಯ ಶಿಕ್ಷಣ ನೀತಿ ಚೆನ್ನಾಗಿದೆ, ಆದರೆ ಅದಕ್ಕೆ ಕಡಿವಾಣ ಇಲ್ಲ. ಹಾಗಾಗಿ ಒಂದಷ್ಟು ನಿಯಮಗಳನ್ನು ಇಲ್ಲಿ ರೂಪಿಸಿಕೊಳ್ಳಬೇಕು ಎಂದು ರೋಹಿತ್ ಚಕ್ರತೀರ್ಥ ಹೇಳಿದರು.
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ನ.19): ಒಂದು ಶಿಕ್ಷಣ ನೀತಿ ಕೆಟ್ಟದಾಗಿದ್ರೂ ಅದನ್ನ ಒಳ್ಳೆಯದಾಗಿ ಅಳವಡಿಕೆ ಮಾಡಬೇಕು. ಹೀಗಾಗಿ ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯ ಸ್ಥಿತಿಯೂ ಹಾಗೇ ಇದೆ. ರಾಷ್ಟ್ರೀಯ ಶಿಕ್ಷಣ ನೀತಿ ಚೆನ್ನಾಗಿದೆ, ಆದರೆ ಅದಕ್ಕೆ ಕಡಿವಾಣ ಇಲ್ಲ. ಹಾಗಾಗಿ ಒಂದಷ್ಟು ನಿಯಮಗಳನ್ನು ಇಲ್ಲಿ ರೂಪಿಸಿಕೊಳ್ಳಬೇಕು ಎಂದು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದರು. ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.) ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಪೋಷಕರ ಜೊತೆ ಚಕ್ರತೀರ್ಥ ಸಂವಾದ ನಡೆಸಿದರು.
35 ವರ್ಷಗಳ ನಿಂತ ನೀರಾಗಿದ್ದ ಶಿಕ್ಷಣ ವ್ಯವಸ್ಥೆ ಈಗ ಹರಿಯಲು ಶುರುವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪದವಿ ಹಂತದಲ್ಲಿ ಕೆಲ ಗೊಂದಲ ಇದೆ. ಇಂಜಿನಿಯರಿಂಗ್ ವಿಷಯ ಅರ್ಥ ಮಾಡಿಕೊಳ್ಳಲು ಗಣಿತದ ಜ್ಞಾನ ಬೇಕೇ ಬೇಕು. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಂಜಿನಿಯರಿಂಗ್ ನಲ್ಲಿ ಗಣಿತವನ್ನ ತೆಗೆದಿದ್ದಾರೆ. ಆದರೆ ಇದರ ಪರಿಣಾಮ ಈಗ ಗೊತ್ತಾಗಲ್ಲ, ಸುಧೀರ್ಘವಾಗಿ ಪರಿಣಾಮ ಇರಬಹುದು. ಸದ್ಯಕ್ಕೆ ಗಣಿತವನ್ನ ತೆಗೆದರೆ ಏನಾಗುತ್ತೆ ಅಂತ ಗೊತ್ತಾಗಲ್ಲ. ಆದರೆ ದೀರ್ಘಕಾಲಿನವಾಗಿ ಇದರ ಪರಿಣಾಮ ಇರಬಹುದು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಕೆಲ ಗೊಂದಲಗಳಿವೆ. ನೀವು ಏನೇ ಕೆಲಸ ಮಾಡಿದರೂ ಅದಕ್ಕೆ ವಿರೋಧ ಇದ್ದೇ ಇರುತ್ತೆ. ಹಾಗಾಗಿ ರಾಷ್ಟ್ರೀಯ ಶಿಕ್ಷಣ ನೀತಿಗೂ ವಿರೋಧ ಇದೆ.
ಮಕ್ಕಳಿಗಿನ್ನೂ ಇಲ್ಲ ಶೂ-ಸಾಕ್ಸ್ ಭಾಗ್ಯ: ಬರಿಗಾಲಲ್ಲಿ ಶಾಲೆಗೆ ಬರುತ್ತಿದ್ದಾರೆ ಬಡವರ ಮಕ್ಕಳು..!
ರಾಷ್ಟ್ರೀಯ ಪಠ್ಯ ಕ್ರಮದ ಚಿಂತನೆ ಆರೇಳು ವರ್ಷಗಳಿಂದ ನಡೀತಾ ಇದೆ. ಹಲವು ವರ್ಷಗಳ ಕಾಲ ಎರಡು ಲಕ್ಷ ಅಭಿಪ್ರಾಯ ಸಂಗ್ರಹಿಸಿ ನೀತಿ ಜಾರಿಗೆ ತರಲಾಗಿದೆ. ಅದರ ಕರಡು ಪ್ರತಿ ವರ್ಷಗಳ ಕಾಲ ಸಾರ್ವಜನಿಕರಿಗೆ ಮುಕ್ತವಾಗಿತ್ತು. ಆಗ ಒಬ್ಬರೇ ಒಬ್ಬ ಶಿಕ್ಚಣ ತಜ್ಞರು ಇದರ ಬಗ್ಗೆ ಆಕ್ಷೇಪ ಎತ್ತಲಿಲ್ಲ. ನಾವು ಜಡತ್ವ ತೋರಿಸಿದ ಪರಿಣಾಮ ಎರಡು ವರ್ಷಗಳ ನಂತರ ನೀತಿ ಜಾರಿಗೆ ಬಂದಿದೆ. ಲೋಪ ದೋಷಗಳು ಇರೋದು ಸಹಜ, ಆದರೆ ಇದರ ಪರವಾಗಿ ನಿಲ್ಲುವ ಮನೋಭಾವ ಇರಬೇಕು.
ಶಿಕ್ಷಣದಲ್ಲಿ ಭಾರತೀಯತೆ ತರಲು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಶಿಕ್ಷಣ ಸಚಿವ ನಾಗೇಶ್
ರಾಷ್ಟ್ರೀಯ ಶಿಕ್ಷಣ ನೀತಿ ಮಾತೃಭಾಷೆಯ ಬಗ್ಗೆ ಗೊಂದಲ ಮಾಡಿಲ್ಲ. ಈ ನೀತಿಯನ್ನ ಕನ್ನಡಿಗರು ಅಳವಡಿಸುವಾಗ ನಮ್ಮ ವ್ಯವಹಾರಿಕ ಭಾಷೆ ಅಂತ ಹೇಳಬಹುದು. ಇವತ್ತು ನಮ್ಮ ಮಕ್ಕಳ ಮಾತೃ ಭಾಷೆ ಇಂಗ್ಲೀಷ್ ಆಗಿದೆ. ಪ್ರಾಥಮಿಕ ಶಾಲೆಯಲ್ಲೂ ಇಂಗ್ಲೀಷ್ ನಲ್ಲೇ ಶಿಕ್ಷಣ ಪಡೀತಾರೆ. ಕರ್ನಾಟಕ ತನ್ನ ಆಡಳಿತ ಭಾಷೆ ಕನ್ನಡದಲ್ಲೇ ಶಿಕ್ಷಣ ಅನ್ನೋದನ್ನ ಕ್ಲಿಯರ್ ಮಾಡಬೇಕು ಎಂದರು.