Asianet Suvarna News Asianet Suvarna News

ರಂಜಾನ್ ಹಬ್ಬದ ಹಿನ್ನೆಲೆ ಮೈಸೂರು ವಿವಿ ಪರೀಕ್ಷೆಗಳು ಮುಂದೂಡಿಕೆ

ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಪ್ರಯುಕ್ತ ಮೇ.2 ರಿಂದ ಆರಂಭವಾಗಬೇಕಿದ್ದ ಮೈಸೂರು ವಿಶ್ವವಿದ್ಯಾನಿಲಯವು ಪದವಿ ಪರೀಕ್ಷೆಗಳನ್ನು ಮುಂದೂಡಿದೆ. 
 

Ramzan festival mysore university postpones ug examination gow
Author
Bengaluru, First Published May 2, 2022, 9:26 AM IST

ಮೈಸೂರು(ಮೇ.2): ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಪ್ರಯುಕ್ತ ಮೈಸೂರು ವಿಶ್ವವಿದ್ಯಾನಿಲಯವು ಪದವಿ ಪರೀಕ್ಷೆಗಳನ್ನು ಮುಂದೂಡಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಮೈಸೂರು ವಿವಿ, ದಿನಾಂಕ ಮೇ.2 ರಂದು 2022 ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ದಿನಾಂಕ 02/05/2022ರಂದು ರಂಜಾನ್ ಹಬ್ಬದ ಪ್ರಯುಕ್ತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರುವುದರಿಂದ, ಸದರಿ ದಿನದಂದು ನಡೆಯಬೇಕಿದ್ದ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕ ಪದವಿ(ಯುಜಿ)– ಎನ್ಇಪಿ ಮೊದಲನೇ ಸೆಮಿಸ್ಟರ್ ಮತ್ತು ಇನ್ನಿತರ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಹೇಳಿದೆ. ಮುಂಂದೂಡಲಾಗಿರುವ ಈ ಪರೀಕ್ಷೆಗಳನ್ನು ದಿನಾಂಕ ಮೇ,7 ರಂದು ನಡೆಸಲಾಗುವುದು ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.

ಸೋಮವಾರವೇ  ರಂಜಾನ್ ಹಬ್ಬ ಆಚರಣೆಗೆ ಮೂನ್ ಕಮಿಟಿ ನಿರ್ಧರಿಸಿದ್ದು, ಮಂಗಳವಾರ ಬದಲು ಸೋಮವಾರವೇ ರಂಜಾನ್ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ರಂಜಾನ್ ಹಬ್ಬದ ಪ್ರಯುಕ್ತ ಸೋಮವಾರ ಸಾರ್ವತ್ರಿಕ ರಜೆ ಘೋಷಿಸಿ ಆದೇಶ ಹೊರಡಿಸಿದೆ.

NTPC Recruitment 2022: ವಿವಿಧ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ

ರಂಜಾನ್ ಹಬ್ಬದ ರಜೆ ಬದಲಾವಣೆ: ವಿಶ್ವವೇ ರಂಜಾನ್ ಹಬ್ಬದ ಆಚರಣೆಗೆ ಸಕಲ ತಯಾರಿಯಲ್ಲಿದೆ. ಮುಸ್ಲಿಮ್ ಬಾಂಧವರ ಪವಿತ್ರ ಹಬ್ಬದ ಆಚರಣೆಗೆ ಇದೀಗ ಕರ್ನಾಟಕ ಸರ್ಕಾರ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ ಮಾಡಿದೆ. ಮೇ.03ರ ಬದಲು ಮೇ 02ರಂದೆ ರಂಜಾಬ್ ಹಬ್ಬ ಆಚರಿಸುತ್ತಿರುವ ಕಾರಣ ಸಾರ್ವತ್ರಿಕ ರಜೆಯನ್ನು ಮೇ02ಕ್ಕೆ ನೀಡಲಾಗಿದೆ. 

ಈ ಮೊದಲು ಸಾರ್ವತ್ರಿಕ ರಜೆ ಪಟ್ಟಿಯಲ್ಲಿ ರಂಜಾನ್ ಹಬ್ಬಕ್ಕೆ ಮೇ 3ರಂದು ರಜೆ ನೀಡಲಾಗಿತ್ತು. ಆದ್ರೆ, ಇದೀಗ ಮೂನ್ ಕಮಿಟಿ ಮೇ 2ರಂದು ರಂಜಾನ್ ಆಚರಿಸಲು ತೀರ್ಮಾನಿಸಿದ್ದರಿಂದ ರಾಜ್ಯ ಸರ್ಕಾರ ರಜೆಯಲ್ಲಿ ಬದಲಾವಣೆ ಮಾಡಲಾಗಿದೆ. ಮೇ3ರ ಬದಲಿಗೆ ಮೇ 2ರಂದು ರಜೆ ಘೋಷಣೆ ಮಾಡಲಾಗಿದೆ.

Indian Army Recruitment 2022: 4 ವರ್ಷಗಳ B.Sc  ನರ್ಸಿಂಗ್ ಕೋರ್ಸ್ 2022 ಗಾಗಿ ಅಧಿಸೂಚನೆ

ವೈದ್ಯ ವಿದಾರ್ಥಿಗಳಿಗೆ ಚರಕ ಶಪಥ ಬೋಧನೆ,  ಡೀನ್‌ ವಜಾ: ತಮಿಳುನಾಡಿನ (Tamil Nadu) ಮಧುರೈ ಸರ್ಕಾರಿ ವೈದ್ಯಕೀಯ ಕಾಲೇಜಿನ (Madurai Medical College) ಹೊಸ ವಿದ್ಯಾರ್ಥಿಗಳಿಗೆ (Students) ಹಿಪ್ಪೊಕ್ರಾಟಿಕ್‌ ಶಪಥ ಬದಲು ‘ಮಹರ್ಷಿ ಚರಕ ಶಪಥ’ವನ್ನು (Maharshi Charak Shapath) ಭೋದಿಸಿದ ಕಾರಣಕ್ಕಾಗಿ ಕಾಲೇಜಿನ ಡೀನ್‌ ಡಾ.ಎ.ರಥಿನಾವೇಲ್‌ (Dr A Rathinavel) ಅವರನ್ನು ಹುದ್ದೆಯಿಂದ ತೆಗೆದುಹಾಕಿ ವೇಟಿಂಗ್‌ ಲಿಸ್ಟ್‌ನಲ್ಲಿ ಇರಿಸಲಾಗಿದೆ. 

ಜೊತೆಗೆ, ಕಾಲೇಜು ನಿಯಮವನ್ನು ಉಲ್ಲಂಘಿಸಿದ್ದಲ್ಲದೇ, ಎಲ್ಲ ವಿದ್ಯಾರ್ಥಿಗಳಿಗೂ ಚರಕ ಶಪಥ ಮಾಡುವಂತೆ ಒತ್ತಾಯಿಸಿದ್ದಕ್ಕಾಗಿ ಸರ್ಕಾರವು ಇದರ ವಿರುದ್ಧ ಇಲಾಖಾ ವಿಚಾರಣೆ ಕೈಗೊಳ್ಳಲು ಭಾನುವಾರ ಆದೇಶ ನೀಡಿದೆ. ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕಡ್ಡಾಯವಾಗಿ ಹಿಪ್ಪೊಕ್ರಾಟಿಕ್‌ ಶಪಥವನ್ನೇ ಬೋಧಿಸಬೇಕು ಗೃಹ ಸಚಿವ ಮಾ ಸುಬ್ರಮಣಿಯನ್‌ ಆದೇಶ ನೀಡಿದ್ದಾರೆ. ನಡುವೆ ಸಂಸ್ಕೃತದಲ್ಲಿ ಶಪಥ ಸ್ವೀಕರಿಸಿದ್ದಕ್ಕೆ ರಾಜ್ಯದ ಹಣಕಾಸು ಸಚಿವ ಪಳನಿವೇಲ್‌ ಥೈಗರಾಜನ್‌ ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಇತ್ತೀಚೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವು ಸಾಮಾನ್ಯವಾಗಿ ಬಳಕೆಯಲ್ಲಿರುವ ಪ್ರಾಚೀನ ಗ್ರೀಕ್‌ ವೈದ್ಯ ಹಿಪ್ಪೊಕ್ರಾಟಿಕ್‌ನ ಶಪಥದ ಬದಲಾಗಿ ಪುರಾತನ ಭಾರತೀಯ ಆಯುರ್ವೇದ ಗ್ರಂಥ ಚರಕ ಸಂಹಿತೆಯ ಒಂದು ಭಾಗವನ್ನು ಚರಕ ಶಪಥವಾಗಿ ಹೊಸ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭೋದಿಸುವಂತೆ ಶಿಫಾರಸು ಮಾಡಿತ್ತು. ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಕೂಡಾ ಸಂಸತ್ತಿನಲ್ಲಿ ಮಹರ್ಷಿ ಚರಕ ಶಪಥವನ್ನು ಬೋಧನೆ ಮಾಡುವುದು ಐಚ್ಛಿಕವಾಗಿರುತ್ತದೆ. ಇದನ್ನು ಸ್ವೀಕರಿಸುವಂತೆ ವಿದ್ಯಾರ್ಥಿಗಳಿಗೆ ಒತ್ತಾಯಿಸುವಂತಿಲ್ಲ ಎಂದು ಹೇಳಿದ್ದರು.

Follow Us:
Download App:
  • android
  • ios