Asianet Suvarna News Asianet Suvarna News

Indian Army Recruitment 2022: 4 ವರ್ಷಗಳ B.Sc  ನರ್ಸಿಂಗ್ ಕೋರ್ಸ್ 2022 ಗಾಗಿ ಅಧಿಸೂಚನೆ

ಭಾರತೀಯ ಸೇನೆಯು ಮಿಲಿಟರಿ ನರ್ಸಿಂಗ್ ಗಾಗಿ ಮಹಿಳಾ ಅಭ್ಯರ್ಥಿಗಳಿಂದ  4 ವರ್ಷಗಳ B.Sc  ನರ್ಸಿಂಗ್ ಕೋರ್ಸ್ 2022 ಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಪ್ರಕ್ರಿಯೆಯು ಮೇ 11, 2022 ರಂದು ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 31, 2022.

Indian Army Recruitment 2022 Notification for Military Nursing Service B.Sc course gow
Author
Bengaluru, First Published Apr 30, 2022, 9:36 AM IST

ಬೆಂಗಳೂರು(ಎ.30): ಭಾರತೀಯ ಸೇನೆಯು (Indian Army) ಮಿಲಿಟರಿ ನರ್ಸಿಂಗ್ ಸೇವೆ BSc ಕೋರ್ಸ್ 2022 ಗಾಗಿ ಮಹಿಳಾ ಅಭ್ಯರ್ಥಿಗಳಿಂದ  4 ವರ್ಷಗಳ B.Sc  ನರ್ಸಿಂಗ್ ಕೋರ್ಸ್ 2022 ಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 220 ಸೀಟುಗಳು ಇದ್ದು, ಆಸಕ್ತ ಅಭ್ಯರ್ಥಿಗಳು ಕಡ್ಡಾಯವಾಗಿ NEET (UG) 2022 ಗೆ ಅರ್ಹತೆ ಪಡೆಯಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಅರ್ಜಿ ಪ್ರಕ್ರಿಯೆಯು ಮೇ 11, 2022 ರಂದು ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 31, 2022. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್, joinindianarmy.nic.in ಮೂಲಕ ಅರ್ಜಿ ಸಲ್ಲಿಸಬಹುದು.

ಒಟ್ಟು 220 ಸೀಟುಗಳ ಪ್ರದೇಶವಾರು ಮಾಹಿತಿ
AFMC ಪುಣೆ: 40
CH(EC) ಕೋಲ್ಕತ್ತಾ: 30
INHS ಅಶ್ವಿನಿ: 40
AH (R&R) ನವದೆಹಲಿ: 30
CH (CC) ಲಕ್ನೋ: 40
CH (AF) ಬೆಂಗಳೂರು: 40

IIMB Recruitment 2022: ಸಹಾಯಕ ವ್ಯವಸ್ಥಾಪಕ ಹುದ್ದೆಗೆ ನೇಮಕಾತಿ

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಸೇನೆಯ ಮಿಲಿಟರಿ ನರ್ಸಿಂಗ್ ಸೇವೆ BSc ಕೋರ್ಸ್ 2022 ಗಾಗಿ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಹುದ್ದೆಗೆ ಅನುಸಾರ ವಿದ್ಯಾರ್ಹತೆ ಪಡೆದಿರಬೇಕು.

ಅಭ್ಯರ್ಥಿಯು ಹಿರಿಯ ಮಾಧ್ಯಮಿಕ ಪರೀಕ್ಷೆ (10+2) ಅಥವಾ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ (ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ) ಮತ್ತು ಇಂಗ್ಲಿಷ್ ನಲ್ಲಿ  ಶೇ.50 ಕ್ಕಿಂತ ಹೆಚ್ಚು ಅಂಕಗಳೊಂದಿಗೆ  ಉತ್ತೀರ್ಣರಾಗಿರಬೇಕು. ಅರ್ಹತಾ ಪರೀಕ್ಷೆಯ ಅಂತಿಮ ವರ್ಷಕ್ಕೆ ಹಾಜರಾಗುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಕಡ್ಡಾಯವಾಗಿ NEET (UG) 2022 ಗೆ ಅರ್ಹತೆ ಪಡೆಯಬೇಕು.

ವಯೋಮಿತಿ: ಭಾರತೀಯ ಸೇನೆಯ ಮಿಲಿಟರಿ ನರ್ಸಿಂಗ್ ಸೇವೆ BSc ಕೋರ್ಸ್ 2022 ಗಾಗಿ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 01 ಅಕ್ಟೋಬರ್ 1997 ಮತ್ತು 30 ಸೆಪ್ಟೆಂಬರ್ 2005 ರ ನಡುವೆ ಜನಿಸಿರಬೇಕು.

ಅರ್ಜಿ ಶುಲ್ಕ: ಭಾರತೀಯ ಸೇನೆಯ ಮಿಲಿಟರಿ ನರ್ಸಿಂಗ್ ಸೇವೆ BSc ಕೋರ್ಸ್ 2022 ಗಾಗಿ ಅರ್ಜಿ ಸಲ್ಲಿಸಲು ಇಚ್ಚಿಸುವ ಎಲ್ಲಾ ವರ್ಗದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ₹750 ಅರ್ಜಿ ಶುಲ್ಕ ಪಾವತಿಸಬೇಕು.

ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ: ಮೇ 11, 2022
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 31, 2022

ONGC Recruitment 2022: ಬರೋಬ್ಬರಿ 3614 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಿರಿಯ ಸಂಶೋಧನಾ ಅಭ್ಯರ್ಥಿ ಹುದ್ದೆಗಳಿಗೆ ನೇಮಕಾತಿ:  ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (National Institute of Technology - NIT) ಕರ್ನಾಟಕದಲ್ಲಿ  ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಕಿರಿಯ ಸಂಶೋಧನಾ ಅಭ್ಯರ್ಥಿ (Junior Research Fellow)ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮೇ22, 2022ರಂದು ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ  ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಅಧಿಕೃತ ವೆಬ್‌ತಾಣ https://www.nitk.ac.in/ ಗೆ ಭೇಟಿ ನೀಡಬಹುದು. ಅಥವಾ debashree@nitk.edu.in ಈ ಮೇಲ್‌ ಮಾಡುವ ಮೂಲಕ ತಿಳಿದುಕೊಳ್ಳಬಹುದು. ಅಥವಾ ದೂರವಾಣಿ ಸಂಖ್ಯೆ: 91-824-2474000 (ext.3212), 7022504322 ಈ ನಂಬರ್ ಗೆ ಕರೆ ಮಾಡಿ ತಿಳಿದುಕೊಳ್ಳಬಹುದು.

ಶೈಕ್ಷಣಿಕ ವಿದ್ಯಾರ್ಹತೆ:  ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಕಿರಿಯ ಸಂಶೋಧನಾ ಅಭ್ಯರ್ಥಿ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್/ಸಂಸ್ಥೆ/ ಯಿಂದ ಹುದ್ದೆಗಳಿಗನುಗುಣವಾಗಿ ME, M.Tech, BE  ವಿದ್ಯಾರ್ಹತೆಯನ್ನು  ಪಡೆದಿರಬೇಕು.

Follow Us:
Download App:
  • android
  • ios