ಕಲಿಕೆಗೆ ಬೆಳಕು ನೀಡಿದ ಸೂರ್ಯ: ವಸತಿ ಶಾಲೆಯಲ್ಲಿ ಸೋಲಾರ್‌ನಿಂದ ಸ್ಮಾರ್ಟ್ ಕ್ಲಾಸ್
ರಾಮನಗರ: ಎಲೆ ಮರೆಯ ಕಾಯಂತೆ ತೆರೆಯ ಮರೆಯಲ್ಲೇ ಇದ್ದು ಸದ್ದಿಲ್ಲದೇ ಸಾಮಾಜಿಕ ಅಭ್ಯುದಯಕ್ಕೆ ಹೋರಾಡುವ ಸಂಘ ಸಂಸ್ಥೆಗಳಿಗೆ ನಿಜಕ್ಕೂ ಪ್ರಚಾರ ಪಡೆಯುವ ಉದ್ದೇಶ ಇರುವುದಿಲ್ಲ ಎಂಬುದಕ್ಕೆ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್‌ನ ಅವಿರತ ಸೇವೆಯೇ ನಿದರ್ಶನ.
ಬಸವಂತಿ ಕೋಟೂರ
ರಾಮನಗರ: ಎಲೆಯ ಮರೆಯ ಕಾಯಂತೆ ತೆರೆಯ ಮರೆಯಲ್ಲೇ ಇದ್ದು ಸದ್ದಿಲ್ಲದೇ ಸಾಮಾಜಿಕ ಅಭ್ಯುದಯಕ್ಕೆ ಹೋರಾಡುವ ಸಂಘ ಸಂಸ್ಥೆಗಳಿಗೆ ನಿಜಕ್ಕೂ ಪ್ರಚಾರ ಪಡೆಯುವ ಉದ್ದೇಶ ಇರುವುದಿಲ್ಲ ಎಂಬುದಕ್ಕೆ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್‌ನ ಅವಿರತ ಸೇವೆಯೇ ನಿದರ್ಶನ. ಹೀಗೆ ಹೇಳಬೇಕೆಂದರೆ ಈ ಸಂಸ್ಥೆ ಮಾಡಿದ ಕೆಲಸ ಕಾರ್ಯ ಏನಿರಬಹುದೆಂದು ಇಲ್ಲಿ ಉಲ್ಲೇಖಿಸಲೇಬೇಕು. ಇತ್ತೀಚೆಗಷ್ಟೇ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ರಾಮನಗರದ ಖಾಸಗಿ ಹೋಟೆಲ್‌ನಲ್ಲಿ ಇಂಧನ ಆಧಾರಿತ ಸಾಮಾಜಿಕ ಅಭಿವೃದ್ಧಿ ಕಾರ್ಯಾಗಾರ ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಜೀವನೋಪಾಯ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ವಿವಿಧ ಯೋಜನಾ ಸ್ಥಳಗಳಿಗೆ ಭೇಟಿ ಕಾರ್ಯಕ್ರಮ ಆಯೋಜಿಸಿತ್ತು.
ಸೆಲ್ಕೋ ಸಂಸ್ಥೆ ಫಲಾನುಭವಿಗಳಿಗೆ ಸೌರ ಶಕ್ತಿ ಸಂಪರ್ಕ ಒದಗಿಸುವ ಮೂಲಕ ಕುಲಕಸಬುದಾರರು ಜೀವನೋಪಾಯದಲ್ಲಿ ತೊಡಗಿರುವ ಸ್ಥಳಗಳನ್ನು ಪರಿಚಯಿಸಿತು. ಸೆಲ್ಕೋ ಸಂಸ್ಥೆ ಸಮಾಜದಲ್ಲಿರುವ ಬಡ ಕುಟುಂಬಗಳನ್ನು ಅಭಿವೃದ್ಧಿಪಡಿಸಲು ಸ್ವಂತ ಉದ್ಯೋಗದ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಹಳೆಯ ತಲೆಮಾರಿನ ಕಸುಬುಗಳು ನಶಿಸಿ ಹೋಗದಂತೆ ಅವುಗಳಿಗೆ ತಂತ್ರಜ್ಞಾನ ಸ್ಪರ್ಶ ನೀಡಿ, ಬಡ ಕುಟುಂಬಗಳನ್ನು ಸಶಕ್ತಗೊಳಿಸುವ ಕಾರ್ಯಕ್ಕೆ ಮುಂದಣ ಹೆಜ್ಜೆ ಹಾಕಿದ ಎಲ್ಲ ಸಂಗತಿಗಳನ್ನು ಎಳೆ ಎಳೆಯಾಗಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಬಿಡಿಸಿಟ್ಟರು.
ಮಂಗಳೂರು: ಸೋಲಾರ್ ರೆಡಿಯೋದಿಂದ ರೈತರಿಗೆ ಕೃಷಿ ಮಾಹಿತಿ
ಶಾಲಾ ಮಕ್ಕಳ ಶಿಕ್ಷಣ ಸುಧಾರಿಸಲು, ಮಕ್ಕಳ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಗುರಿಯಿಂದ ಡಿಜಿಟಲ್ ಸ್ಮಾರ್ಟ್ ಕ್ಲಾಸ್‌ನ್ನು ರೂಪುಗೊಳಿಸಿದೆ. ಚೆಕ್ಕೆರೆ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಸೆಲ್ಕೋ ವತಿಯಿಂದ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಗೊಳಿಸಲಾಗಿದೆ. ಎಲ್‌ಇಡಿ ಟಿವಿಗೆ ವಿದ್ಯುತ್ ಸಂಪರ್ಕದ ಬದಲಾಗಿ 2 ಸೋಲಾರ್ ಯುಪಿಎಸ್ ಬ್ಯಾಟರಿ ಚಾರ್ಜ್ ಮಾಡಿ, ಅದರಿಂದ ಟಿವಿ ಕೆಲಸ ನಿರ್ವಹಿಸುವಂತೆ ಮಾಡಲಾಗಿದೆ. ಇದರಿಂದ ವಿದ್ಯುತ್ ಉಳಿತಾಯವಾಗುತ್ತದೆ ಮತ್ತು ಖರ್ಚು ಕಡಿಮೆ. ಶಿಕ್ಷಕರು ಟಿವಿ ಪರದೆಯ ಮೇಲೆ ಪ್ರಾಯೋಗಿಕವಾಗಿ, ಚಿತ್ರಗಳ ಮೂಲಕ ಪಾಠ ಮಾಡುವುದರಿಂದ ಶಾಲಾ ವಿದ್ಯಾರ್ಥಿಗಳು ಬಹುಬೇಗ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಐತಿಹಾಸಿಕ ಕೋಟೆ, ಕೊತ್ತಲುಗಳು, ರಾಜರುಗಳ ಚಿತ್ರ, ವಿಜ್ಞಾನ ವಿಷಯಗಳಲ್ಲಿ ಹಲವು ಪ್ರಯೋಗಳನ್ನು ಚಿತ್ರಗಳನ್ನು ತೋರಿಸುವ ಮೂಲಕ ವಿದ್ಯಾರ್ಥಿಗಳಿಗೆ ಬಹು ಬೇಗನೆ ಅರ್ಥವಾಗುತ್ತದೆ ಎನ್ನುತ್ತಾರೆ ಶಾಲೆಯ ಪ್ರಾಂಶುಪಾಲ ಹನುಮಂತಯ್ಯ(Hanumantaia).
ಶಾಲೆಯಲ್ಲಿ ಶಿಕ್ಷಕರ (Teacher) ಸಂಖ್ಯೆ ಕಡಿಮೆ ಇದ್ದುದರಿಂದ ಸ್ಮಾರ್ಟ್ ಕ್ಲಾಸ್ ಹೆಚ್ಚು ಉಪಯುಕ್ತವಾಗಿದೆ. ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯಿಂದ ದಿನಕ್ಕೆ ಎಷ್ಟು ಕ್ಲಾಸ್ ನಡೆದಿವೆ ಮತ್ತು ಎಷ್ಟು ಸಮಯದವರೆಗೆ ಕ್ಲಾಸ್ ನಡೆದಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದಾಗಿದೆ. ಈ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಗೆ 1.75 ಲಕ್ಷ ರೂಪಾಯಿ. ವ್ಯಯಿಸಲಾಗಿದ್ದು, ಶೇಕಡಾ 50 ರಷ್ಟು ಶಾಲೆ ಇನ್ನುಳಿದದ್ದನ್ನು ಉಚಿತವಾಗಿ ಐದು ವರ್ಷಗಳವರೆಗೆ ನಿರ್ವಹಿಸಲು ಸೆಲ್ಕೋ ಹೊಣೆ ಹೊತ್ತುಕೊಂಡಿದೆ.
ವಸತಿ ಶಾಲೆಯಲ್ಲಿ ಓದುತ್ತಿರುವ ಹಲವು ಗ್ರಾಮೀಣ ಭಾಗಗಳ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಫಲಿತಾಂಶ ಗಮನದಲ್ಲಿಟ್ಟುಕೊಂಡು ಸ್ಲಾರ್ಟ್ ಕ್ಲಾಸ್ ರೂಪುಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲೆಗಳಲ್ಲಿ ಇದನ್ನು ಜಾರಿಗೊಳಿಸುವ ಉದ್ದೇಶವನ್ನು ಸೆಲ್ಕೋ ಹೊಂದಿದೆ. ಈ ಸಂದರ್ಭದಲ್ಲಿ ಸೆಲ್ಕೋ ಸಂಪಾದಕೀಯ ವಿಭಾಗ ಕರಿಸ್ವಾಮಿ, ಸುಕುಮಾರ, ರಾಮನಗರ ಶಾಖೆಯ ಶಂಕರ್, ಪ್ರಜ್ವಲ್ ಮತ್ತಿತರರು ಪಾಲ್ಗೊಂಡರು.
ಸೋಲಾರ್ ಪಾರ್ಕ್‌ಗೆ ಭೂಮಿ ಕೊಟ್ಟ ರೈತರ ಕಲ್ಯಾಣಕ್ಕೆ ಆದ್ಯತೆ: ಸಚಿವ ಸುನಿಲ್ ಕುಮಾರ್
ಸಾಮಾಜಿಕವಾಗಿ ಹಲವು ಉದ್ಯೋಗಗಳನ್ನು ಮುಂದಿಟ್ಟುಕೊಂಡು ಅವುಗಳಿಗೆ ವಿದ್ಯುತ್ ಬದಲಾಗಿ ಸೌರ ಶಕ್ತಿ ಸಂಪರ್ಕ ಕಲ್ಪಿಸಿ ಕುಲ ಕಸುಬುಗಳಿಗೆ ಜೀವ ತುಂಬಿದ್ದಾರೆ. ಅವುಗಳ ಪೈಕಿ ಸೌರಶಕ್ತಿ ಬಳಸಿ ಮಡಿಕೆ, ಹೂ ಕುಂಡ, ಟೀ ಕಪ್, ಮೊಸರು ಕುಡಿಕೆ, ಸೌರ ಶಕ್ತಿಯಿಂದ ಕಾರ್ಯನಿರ್ವಹಿಸುವ ಕುಲುಮೆ, ಹೋಲಿಗೆ ಯಂತ್ರಕ್ಕೆ ಸೌರ ಚಾಲಿತ ಮೋಟರ್ ಅಳವಡಿಕೆ, ಹಸುವಿನ ಹಾಲು ಕರೆಯಲು ಯಂತ್ರಕ್ಕೂ ಸೌರ ಶಕ್ತಿ ಸಂಪರ್ಕ, ಜೊತೆಗೆ ಫೋಟೊ ಕಾಪಿ ಪಡೆಯುವ ಜೆರಾಕ್ಸ್‌ನಂತಹ ಕಾರ್ಯಗಳನ್ನೂ ಸೋಲಾರ್‌ಶಕ್ತಿಯಿಂದ ಮಾಡಿಕೊಳ್ಳಬಹುದಾಗಿದೆ.
ಶಿಕ್ಷಕರು ಇತಿಹಾಸ, ವಿಜ್ಞಾನ, ಗಣಿತ ವಿಷಯಗಳನ್ನು ಪಾಠ ಮಾಡುವಾಗ ಟಿವಿ ಪರದೆಯ (Tv screen) ಮೇಲೆ ತೋರಿಸುವುದರಿಂದ ಪಾಠ ಬೇಗ ಅರ್ಥವಾಗುತ್ತದೆ. ಹೇಳುವುದಕ್ಕಿಂದ ಚಿತ್ರಗಳ ಮೂಲಕ ನೋಡುವುದರಿಂದ ಹೆಚ್ಚು ಪಾಠಗಳು ಅರ್ಥವಾಗುತ್ತಿದೆ ಎಂದು ಈ ಸ್ಮಾರ್ಟ್ ಕ್ಲಾಸ್ ಬಗ್ಗೆ ಮೊರಾರ್ಜಿ ವಸತಿ ಶಾಲೆಯ 10ನೇ, ತರಗತಿ ವಿದ್ಯಾರ್ಥಿ ಇಂಪನಾ ಹೇಳುತ್ತಾರೆ. ಪಾಠ ಮಾಡುವಾಗ ಶಿಕ್ಷಕರು ಹೇಳಿ ಕೊಡುವ ಜೊತೆಗೆ ನಮ್ಮಲ್ಲಿ ಸಂದೇಹಗಳು ಇದ್ದಾಗ, ವಿವರಣೆ ಕೊಟ್ಟು ಪಾಠವನ್ನು ಕಲಿಸುವ ಮೂಲಕ ಸುಲಭ ಮಾಡುತ್ತಾರೆ ಎಂದು 10ನೇ ಮತ್ತೊಬ್ಬ ವಿದ್ಯಾರ್ಥಿ ಸ್ನೇಹಾ ಹೇಳಿದರು.