ದ್ವಿತೀಯ ಪಿಯುಸಿ ಪರೀಕ್ಷೆ, ಹಿಜಾಬ್ ಅವಕಾಶವಿಲ್ಲ, ಬಸ್‌ನಲ್ಲಿ ವಿದ್ಯಾರ್ಥಿಗಳಿಗೆ ಪ್ರಯಾಣ ಫ್ರೀ

*2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 
* ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಮಹತ್ದ ಮಾಹಿತಿ ನೀಡಿದ ಸಚಿವ ನಾಗೇಶ್
* ಇದೇ ಏಪ್ರಿಲ್ 22ರಿಂದ ಮೇ.18ರ ವರೆಗೆ ನಡೆಯಲಿರುವ ಪರೀಕ್ಷೆ

Minister BC nagesh Press Conference about Hijab And 2nd PUC Exams details rbj

ಬೆಂಗಳೂರು, (ಏ.19): ಇದೇ ಏಪ್ರಿಲ್ 22ರಿಂದ ಮೇ.18ರ ವರೆಗೆ 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ಸುದ್ದಿಗೋಷ್ಠಿ ನಡೆಸಿ, ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನೀತಿ-ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಅದು ಈ ಕೆಳಗಿನಂತಿದೆ ನೋಡಿ...

ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವ ದಿನಾಂಕಗಳಂದು  ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದ್ದು, ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ ಬಿಎಂಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಮನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

II PUC 2022 exam: ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿ ಬದಲಾವಣೆ

ಪರೀಕ್ಷೆ ಯನ್ನು ಬಹಳ ಆರಾಮವಾಗಿ, ಕೂಲ್ ಆಗಿ ಎದುರಿಸಿ ಎಂದು ಮಕ್ಕಳಲ್ಲಿ ಮನವಿ ಮಾಡ್ತೀನಿ. ಭಯ ಬೇಡ , ಎಸ್ ಎಸ್ ಎಲ್ ಸಿ ರೀತಿಯಲ್ಲೇ ಇದನ್ನೂ ಬರೆಯಿರಿ. ಪೋಷಕರು ಕೂಡಾ ಗಾಬರಿ ಆಗಬೇಡಿ. ಎಂಟು ತಿಂಗಳು ನಿಮ್ಮ ಮಕ್ಕಳನ್ನು ತಯಾರು ಮಾಡಿದ್ದೇವೆ. ಈ ತಿಂಗಳು 22  ರಿಂದ ಮುಂದಿನ ತಿಂಗಳು 18 ರ ವರೆಗೆ ಪರೀಕ್ಷೆ ಗಳು ನಡೆಯುತ್ತವೆ. 684255 ಮಕ್ಕಳು ನೊಂದಾಯಿಸಿಕೊಂಡಿದ್ದಾರೆ.
ರೆಗ್ಯುಲರ್ ವಿದ್ಯಾರ್ಥಿಗಳು 600519 ಪುನಾರವರ್ತಿತ ವಿದ್ಯಾರ್ಥಿಗಳು 61808 ಇದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಒಟ್ಟು 6.84.255 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರೆಗ್ಯುಲರ್ ವಿದ್ಯಾರ್ಥಿಗಳು- 600519. ಪುನಾರವರ್ತಿತ ವಿದ್ಯಾರ್ಥಿಗಳು- 61808. ಖಾಸಗಿ ಅಭ್ಯರ್ಥಿಗಳು- 21928 . ಒಟ್ಟು ಪರೀಕ್ಷಾ ಕೇಂದ್ರಗಳ ಸಂಖ್ಯೆ-1076. ಬೆಂಗಳೂರು ದಕ್ಷಿಣದಲ್ಲಿ 83 ಕೇಂದ್ರ ಗಳಿರುತ್ತವೆ. (ಅತಿ ಹೆಚ್ಚು) ರಾಮನಗರ ದಲ್ಲಿ 13. ಕೇಂದ್ರಗಳಿರುತ್ತವೆ  ( ಅತಿ ಕಡಿಮೆ) ಎಂದರು.

ಹಿಜಾಬ್‌ಗೆ ಅವಕಾಶ ಇಲ್ಲ
ಯೂನಿಫಾರಂ ಬಗ್ಗೆ ಈಗಾಗಲೇ ಇಲಾಖೆ ಆದೇಶ ಹೊರಡಿಸಿದೆ. ಎಲ್ಲಿ ಸಮವಸ್ತ್ರ ಇದೆ ಅಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಹಾಕಿಕೊಂಡು ಬರಬೇಕು ಯೂನಿಫಾರಂ ಇಲ್ಲದೆ ಕಡೆ ಸಮವಸ್ತ್ರ ಅಗತ್ಯ ಇಲ್ಲ. ಪರೀಕ್ಷಾ ಕೇಂದ್ರಗಳಿಗೆ ಯಾವುದೇ ಧರ್ಮ ಸೂಚಕ ಬಟ್ಟೆಗಳನ್ನ ಧರಿಸಲು ಅವಕಾಶ ಇಲ್ಲ. ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಬರೆಯಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

PUC Exams in Karnataka: ಪಿಯು ಪರೀಕ್ಷಾರ್ಥಿಗಳಿಗೆ ಉಚಿತ ಬಸ್‌ ಪ್ರಯಾಣ

ಟೀಚರ್ಸ್ (ಪರೀಕ್ಷಾ ಮೇಲ್ವಿಚಾರಕಿಯರು) ಹಿಜಬ್ ಹಾಕುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,  ನೈತಿಕವಾಗಿ ಅವರೇ ಅದನ್ನು ತಿಳಿದುಕೊಳ್ಳಬೇಕು. ಆಯಾಯ ಆಡಳಿತ ಮಂಡಳಿಗಳು ಹೇಳಿದ್ದಾವೆ. ತೆಗೆಯದೇ ಇರುವವರನ್ನು ಎಕ್ಸಾಮ್ ಕೆಲಸದಿಂದ ತೆಗೆಯಲಾಗಿದೆ. ಆದರೆ ಅವರನ್ನು ಕೆಲಸದಿಂದ ವಜಾ ಮಾಡಿಲ್ಲ ಎಂದು ತಿಳಿಸಿದರು.

ಪಿಯುಸಿ ಪರೀಕ್ಷೆ ಗೆ  ಸಂಬಂಧಿಸಿದಂತೆ ಸಹಾಯವಾಣಿ ತೆರೆಯಲಾಗಿದೆ. 080- 23080864 ಈ ಸಂಖ್ಯೆ ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಸಚಿವ ನಾಗೇಶ್ ಹೇಳಿದರು.

* ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಅಳವಡಿಕೆ
* ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ನಿಷೇಧ
* ಪರೀಕ್ಷಾ ಕೇಂದ್ರಗಳಿಗೆ ಸಿಬ್ಬಂದಿ ನಿಯೋಜನೆ
* ವಿಶೇಷ ಜಾಗೃತದಳ- 2152
* ತಾಲೂಕು ಜಾಗೃತ ದಳ-858
* ಜಿಲ್ಲಾ ಜಾಗೃತದಳ- 64
* ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ನಿಷೇಧಿತ ಪ್ರದೇಶ ಎಂದು ಘೋಷಣೆ
* ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್  ನಿಯೋಜನೆ
 

Latest Videos
Follow Us:
Download App:
  • android
  • ios