ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಶುಲ್ಕ ನಿಗದಿ ಸಂಬಂಧ ಎಲ್ಲ ಜಿಲ್ಲಾ ಶುಲ್ಕ ನಿಯಂತ್ರಣ ಪ್ರಾಧಿಕಾರದ (ಡೇರಾ) ಮುಂದೆ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕರ ಸಂಘಟನೆಗಳ ಸಮನ್ವಯ ಸಮಿತಿ ರಾಜ್ಯ ಶಾಲಾ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದೆ.

ಬೆಂಗಳೂರು (ಜು.17) : ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಶುಲ್ಕ ನಿಗದಿ ಸಂಬಂಧ ಎಲ್ಲ ಜಿಲ್ಲಾ ಶುಲ್ಕ ನಿಯಂತ್ರಣ ಪ್ರಾಧಿಕಾರದ (ಡೇರಾ) ಮುಂದೆ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕರ ಸಂಘಟನೆಗಳ ಸಮನ್ವಯ ಸಮಿತಿ ರಾಜ್ಯ ಶಾಲಾ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದೆ.

ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ವೇದಿಕೆಯ ಅಧ್ಯಕ್ಷ ಬಿ.ಎನ್‌.ಯೋಗಾನಂದ, ಪ್ರಧಾನ ಕಾರ್ಯದರ್ಶಿ ಸಿ.ಎನ್‌.ಭಾಸ್ಕರ್‌ ರೆಡ್ಡಿ, ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಶುಲ್ಕ ನಿಯಂತ್ರಿಸಲು ಸರ್ಕಾರಕ್ಕಿದ್ದ ಅಧಿಕಾರವನ್ನು ರದ್ದುಪಡಿಸಿದ್ದ ಹೈಕೋರ್ಚ್‌ ಆದೇಶದಕ್ಕೆ ಸುಪ್ರೀಂ ಕೋರ್ಚ್‌ ಮಧ್ಯಂತರ ತಡೆ ನೀಡಿರುವುದರಿಂದ ಡೇರಾಗಳ ಮುಂದಿರುವ ಶುಲ್ಕ ನಿಗದಿ ಪ್ರಕರಣಗಳನ್ನು ಇಲಾಖೆಯು ಇತ್ಯರ್ಥಪಡಿಸಲು ದಾರಿ ಸುಗಮವಾಗಿದೆ. ಶುಲ್ಕ ನಿಗದಿ ಸಂಬಂಧ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗಳ ಮುಂದೆ ನೂರಾರು ಪೋಷಕರು ನೀಡಿರುವ ಪ್ರಕರಣಗಳು ಇತ್ಯರ್ಥವಾಗುವುದು ಬಾಕಿ ಇದೆ. ಅವುಗಳನ್ನು ಆದಷ್ಟುಬೇಗ ವಿಚಾರಣೆ ಪೂರ್ಣಗೊಳಿಸಿ ಇತ್ಯರ್ಥ ಪಡಿಸಲು ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ.

ಶಾಲೆಗಳಿಗೆ ಹೊಸ ಶಿಕ್ಷಣ ನೀತಿ ಜಾರಿಗೆ ಸಮಿತಿ ರಚನೆ: ಸಚಿವ ಮಧು ಬಂಗಾರಪ್ಪ

ಹಲವಾರು ಕಾರ್ಪೊರೇಟ್‌ ಶಾಲೆಗಳು ಮನಸೋ ಇಚ್ಛೆ ಶುಲ್ಕ ಹೆಚ್ಚಳ ಮಾಡಿದ್ದು, ಇದನ್ನು ಕಟ್ಟಲಾಗದೆ ಪೋಷಕರು ಡೇರಾಗಳ ಮುಂದೆ ಹೋಗುತ್ತಿದ್ದಾರೆ. ಹಾಗಾಗಿ 2018ರ ಕಾನೂನು ತಿದ್ದುಪಡಿ ಅನುಸಾರ ಶಾಲೆಗಳು ಶುಲ್ಕ ಪಡೆಯುವಂತೆ ಆದೇಶಿಸಬೇಕು. ಇಲಾಖೆಯ ಸ್ಪಷ್ಟಸೂಚನೆ ಇದ್ದರೂ ಬಹುತೇಕ ಶಾಲೆಗಳು ಆಯಾ ಸಾಲಿನ ವಾರ್ಷಿಕ ಶುಲ್ಕದ ಮಾಹಿತಿಯನ್ನು ತಮ್ಮ ಶಾಲಾ ಸೂಚನಾ ಫಲಕದಲ್ಲಿ ಪ್ರಕಟಿಸುತ್ತಿಲ್ಲ. ಹಾಗಾಗಿ ಅಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಫಲಿತಾಂಶ ಬಂದು 3 ತಿಂಗಳಾದ್ರೂ ಪಿಯು ಶಿಕ್ಷಕರಿಗೆ ಇನ್ನೂ ಮೌಲ್ಯಮಾಪನ ಭತ್ಯೆ ಇಲ್ಲ!