ವಿದ್ಯಾರ್ಥಿಗಳಿಗೆ ಹುಳು ಮಿಶ್ರಿತ ಆಹಾರ: ವಸತಿ ಶಾಲೆ ಸಿಬ್ಬಂದಿಗೆ ಶಾಸಕ ಹೆಚ್‌ಟಿ ಮಂಜುನಾಥರಿಂದ ಫುಲ್ ಕ್ಲಾಸ್
ಶಾಲಾ ವಿದ್ಯಾರ್ಥಿಗಳಿಗೆ ಹುಳು ಮಿಶ್ರಿತ ಊಟ ನೀಡಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿದ ಶಾಸಕ ಹೆಚ್.ಟಿ.ಮಂಜುನಾಥ ವಸತಿ ಶಾಲೆಯ ಸಿಬ್ಬಂದಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.
ಮಂಡ್ಯ (ಜು.9) : ಶಾಲಾ ವಿದ್ಯಾರ್ಥಿಗಳಿಗೆ ಹುಳು ಮಿಶ್ರಿತ ಊಟ ನೀಡಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿದ ಶಾಸಕ ಹೆಚ್.ಟಿ.ಮಂಜುನಾಥ ಆಹಾರ ಪರಿಶೀಲಿಸಿ ಸಿಬ್ಬಂದಿಗೆ ಫುಲ್ ಕ್ಲಾಸ್ ತೆಗೆದುಕೊಂಡರು.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಜೈನ್ನಹಳ್ಳಿಯ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದಿರುವ ಘಟನೆ. ಹುಳು ಮಿಶ್ರಿತ ಆಹಾರ ನೀಡುತ್ತಿರುವ ವಸತಿ ಶಾಲೆ ಈ ಬಗ್ಗೆ ಮಕ್ಕಳು ಪ್ರಶ್ನಿಸಿದರೆ ಕೇರ್ ಮಾಡದ ವಸತಿ ಶಾಲೆಯ ಪ್ರಾಂಶುಪಾಲ, ವಾರ್ಡನ್, ಸಿಬ್ಬಂದಿ. ಬೇಸತ್ತ ವಿದ್ಯಾರ್ಥಿಗಳು ಶಾಸಕರಿಗೆ ವಸತಿ ಶಾಲೆಯ ಅವ್ಯವಸ್ಥೆ ಕುರಿತು ದೂರು ನೀಡಿದ್ದರು. ಈ ಹಿನ್ನೆಲೆ ಕೆಆರ್ ಪೇಟೆ ಶಾಸಕ ಮಂಜುನಾಥ ಭೇಟಿ ನೀಡಿ ವಾರ್ಡನ್ ಅಡುಗೆ ಸಿಬ್ಬಂದಿ ವಿರುದ್ಧ ಕೆಂಡಾಮಂಡಲರಾದರು.
ಕುಡಿದ ಮತ್ತಿನಲ್ಲಿ ಯುವಕರ ಪುಂಡಾಟ; ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿಗಳ ಮೆಲೆ ಹಲ್ಲೆ!
ಪ್ರತಿದಿನ ಹುಳು ಮಿಶ್ರಿತ ಆಹಾರ ತಿನ್ನುವ ವಿದ್ಯಾರ್ಥಿಗಳು!
ಹುಳು ಮಿಶ್ರಿತ ಊಟ ತಿನ್ನಲು ಆಗದೇ ಸುರಿದಿದ್ದ ಅನ್ನ ತೋರಿಸಿ ವಿದ್ಯಾರ್ಥಿಗಳು ಶಾಸಕರಿಗೆ ದೂರು ನೀಡಿದ ಬಳಿಕ ಶಾಸಕರು ಸ್ವತಃ ಪರಿಶೀಲಿಸಿದರು. ಬಕೆಟ್ ಬಕೆಟ್ ನಲ್ಲಿ ಸುರಿದ ಅನ್ನ ಕಂಡು ಶಾಸಕ ಮಂಜು ಶಾಲೆಯ ಪ್ರಿನ್ಸಿಪಾಲ್ ವಾರ್ಡ್‌ನಗಳ ಕೆಂಡಾಮಂಡಲರಾಗಿ, ಕಣ್ಣು ಇಲ್ವೇನ್ರಿ ನಿಮ್ಗೆ? ತರಾಟೆಗೆ ತೆಗೆದುಕೊಂಡರು. ಅಲ್ಲದೇ ಅದೇ ಸ್ಥಳದಲ್ಲೇ ಪೋನ್ ಕರೆ ಮೂಲಕ ವಸತಿ ಶಾಲಾ ಉಪನಿರ್ದೇಶಕರಿಗೂ ಕ್ಲಾಸ್ ತೆಗೆದಕೊಂಡರು. ಈ ವೇಳೆ ಸರಿಪಡಿಸ್ತೇನೆ ಎಂದ ನಿರ್ದೇಶಕರು. ಅದಕ್ಕೆ ಮತ್ತಷ್ಟು ಗರಂ ಆದ ಶಾಸಕರು, 'ಈಗ ಏನ್ರೀ ಸರಿಪಡಿಸ್ತೀರಾ, ಮಕ್ಕಳಿಗೆ ಹೆಚ್ಚು ಕಡಿಮೆಯಾದ್ರೆ ಯಾರ್ರೀ ಜವಾಬ್ದಾರಿ? ಎಂದು ತರಾಟೆಗೆ ತೆಗೆದುಕೊಂಡು ತಕ್ಷಣವೇ ಊಟದ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದರು.
ಮೂವರು ಶಿಕ್ಷಕಿಯರ ಜಗಳಕ್ಕೆ ಹೆದರಿ ಶಾಲೆ ತ್ಯಜಿಸಿದ 37 ವಿದ್ಯಾರ್ಥಿಗಳು!
ವಸತಿ ಶಾಲೆಯ ಸಿಬ್ಬಂದಿ, ಪ್ರಾಂಶುಪಾಲರು ಹಿಂದಿನಿಂದಲೂ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿಷ್ಕಾಳಜಿವಹಿಸಿದ್ದಾರೆ ಎಂದು ದೂರುಗಳು ಕೇಳಿಬಂದಿವೆ. ಆಹಾರದಲ್ಲಿ ಹುಳುಗಳಿವೆ ಎಂದು ವಿದ್ಯಾರ್ಥಿಗಳು ತೋರಿಸಿದರೂ ಕ್ಯಾರೇ ಮಾಡುತ್ತಿರಲಿಲ್ಲ. ಬದಲಾಗಿ ಅದನ್ನೇ ತಿನ್ನಿ ಎಂದು ಗದರಿಸುತ್ತಿದ್ದಾರೆಂದು, ಅನಿವಾರ್ಯವಾಗಿ ಅದೇ ಹುಳು ಮಿಶ್ರಿತ ಆಹಾರ ತಿನ್ನುತ್ತಿದ್ದೆವೆಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.