Asianet Suvarna News Asianet Suvarna News

ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಟ್ಟ ಮೋದಿ, ನಾಳೆ ಹಲವು ಯೋಜನೆಗಳ ಲೋಕಾರ್ಪಣೆ

ದೇಶಾದ್ಯಂತ ಶಿಕ್ಷಣ ಮತ್ತು ಕೌಶಲ್ಯ ಮೂಲಸೌಕರ್ಯಗಳನ್ನು ಉನ್ನತೀಕರಿಸುವ ಮತ್ತು ಅಭಿವೃದ್ಧಿಪಡಿಸುವ ಮಹತ್ವದ ಹೆಜ್ಜೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 13,375 ಕೋಟಿ ರೂಪಾಯಿಗಳ ಹಲವಾರು ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ

PM will give a major boost to the education sector in UP Global Investors Summit gow
Author
First Published Feb 19, 2024, 4:00 PM IST

ನವದೆಹಲಿ (ಫೆ.19): ದೇಶಾದ್ಯಂತ ಶಿಕ್ಷಣ ಮತ್ತು ಕೌಶಲ್ಯ ಮೂಲಸೌಕರ್ಯಗಳನ್ನು ಉನ್ನತೀಕರಿಸುವ ಮತ್ತು ಅಭಿವೃದ್ಧಿಪಡಿಸುವ ಮಹತ್ವದ ಹೆಜ್ಜೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 13,375 ಕೋಟಿ ರೂಪಾಯಿಗಳ ಹಲವಾರು ಯೋಜನೆಗಳನ್ನು ನಾಳೆ ಜಮ್ಮುವಿನಲ್ಲಿ ದೇಶಕ್ಕೆ ಸಮರ್ಪಿಸಲಿದ್ದಾರೆ ಮತ್ತು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. 

ಭಾರತೀಯ ಚಾಲನಾ ಪರವಾನಗಿ ಇದ್ದರೆ ನೀವು ಈ ದೇಶಗಳಿಗೆ ಕಾರಲ್ಲೇ ಹೋಗಬಹುದು

ದೇಶಕ್ಕೆ ನೀಡುತ್ತಿರುವ ಯೋಜನೆಗಳಲ್ಲಿ ಕಾಲೇಜುಗಳಿಗೆ  ಶಾಶ್ವತ ಕ್ಯಾಂಪಸ್  ಕಲ್ಪಿಸುವುದು ಪ್ರಮುಖವಾಗಿದೆ. ಅದರಲ್ಲಿ ಐಐಟಿ ಭಿಲಾಯ್, ಐಐಟಿ ತಿರುಪತಿ, ಐಐಟಿ ಜಮ್ಮು, ಐಐಐಟಿಡಿಎಂ ಕಾಂಚೀಪುರಂ, ಕಾನ್ಪುರದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (IIS) ಸುಧಾರಿತ ತಂತ್ರಜ್ಞಾನಗಳ ಪ್ರವರ್ತಕ ಕೌಶಲ್ಯ ತರಬೇತಿ ಸಂಸ್ಥೆ ಮತ್ತು ದೇವಪ್ರಯಾಗ (ಉತ್ತರಾಖಂಡ) ಮತ್ತು ಅಗರ್ತಲಾ (ತ್ರಿಪುರ)ದಲ್ಲಿರುವ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯಗಳು ಸೇರಿವೆ.

ಇದರ ಜೊತೆಗೆ ಐಐಎಂ ಜಮ್ಮು, ಐಐಎಂ ಬೋಧಗಯಾ ಮತ್ತು ಐಐಎಂ ವಿಶಾಖಪಟ್ಟಣಂ ಎಂಬ ಮೂರು ಹೊಸ ಐಐಎಂಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.

ಅತಿಥಿಗಳಿಗಾಗಿ ವಿಮಾನಗಳು, ಹೆಲಿಕಾಪ್ಟರ್ ಗಿಫ್ಟ್, ಕೋಟಿ ಮೌಲ್ಯದ ಆಭರಣ, ಅತ್ಯಂತ ದುಬಾರಿ ಭಾರತೀಯ ವಿವಾಹ

ದೇಶಾದ್ಯಂತ ಕೇಂದ್ರೀಯ ವಿದ್ಯಾಲಯ (KVs) ಮತ್ತು 13 ಹೊಸ ನವೋದಯ ವಿದ್ಯಾಲಯಗಗಳಿಗೆ (NVs) 20 ಹೊಸ ಕಟ್ಟಡಗಳನ್ನು ಅವರು ಉದ್ಘಾಟಿಸಲಿದ್ದಾರೆ.

ಪ್ರಧಾನಮಂತ್ರಿಯವರು ದೇಶದಾದ್ಯಂತ ಐದು ಕೇಂದ್ರೀಯ ವಿದ್ಯಾಲಯ ಕ್ಯಾಂಪಸ್‌ಗಳು, ಒಂದು ನವೋದಯ ವಿದ್ಯಾಲಯ ಕ್ಯಾಂಪಸ್ ಮತ್ತು ಐದು ವಿವಿಧೋದ್ದೇಶ ಹಾಲ್‌ಗಳನ್ನು ನವೋದಯ ವಿದ್ಯಾಲಯಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಪ್ರಧಾನಿ ಮೋದಿ (Narendra Modi)  ಫೆಬ್ರವರಿ 20 ಜಮ್ಮುವಿಗೆ (Jammu) ಭೇಟಿ ನೀಡಲಿದ್ದಾರೆ. ಬೆಳಗ್ಗೆ 11:30ರ ಸುಮಾರಿಗೆ ಜಮ್ಮುವಿನ ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ (Maulana Azad Stadium) ಸಾರ್ವಜನಿಕ ಸಮಾರಂಭದಲ್ಲಿ ಮೋದಿ 30,500 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮಾಡಲಿದ್ದು, ಯೋಜನೆಗಳು ಆರೋಗ್ಯ, ಶಿಕ್ಷಣ, ರೈಲು, ರಸ್ತೆ, ವಿಮಾನಯಾನ, ಪೆಟ್ರೋಲಿಯಂ, ನಾಗರಿಕ ಮೂಲಸೌಕರ್ಯ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿವೆ. 

Follow Us:
Download App:
  • android
  • ios