PhD Not Mandatory: ಪ್ರಾಧ್ಯಾಪಕರಾಗಲು ಪಿಎಚ್‌ಡಿ ಕಡ್ಡಾಯವಲ್ಲ, UGC ಸುತ್ತೋಲೆ!
ವಿಶ್ವವಿದ್ಯಾಲಯ ಧನಸಹಾಯ ಆಯೋಗವು ವಿಶ್ವವಿದ್ಯಾನಿಲಯಗಳಲ್ಲಿ ಬೋಧನೆಗೆ ಪಿಎಚ್‌ಡಿ ಕಡ್ಡಾಯವಲ್ಲ ಎಂದು ಮಹತ್ತರ ನಿರ್ಧಾರವನ್ನು ಪ್ರಕಟಿಸಿದ್ದು, ಇದು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ನಾಂದಿಗೆ ಕಾರಣವಾಗಲಿದೆ ಎನ್ನಲಾಗಿದೆ.
ನವದೆಹಲಿ(ಮಾ.13): ಭಾರತದ ಅನೇಕ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಬೋಧನೆಗೆ ಪಿಎಚ್‌ಡಿ (PhD) ಕಡ್ಡಾಯ ಎನ್ನಲಾಗಿತ್ತು. ಆದರೆ ಇದೀಗ ವಿಶ್ವವಿದ್ಯಾಲಯ ಅನುದಾನ ಆಯೋಗವು (university grants commission - UGC) ತನ್ನ ಮಹತ್ತರ ನಿರ್ಧಾರವನ್ನು ಪ್ರಕಟಿಸಿದ್ದು, ವಿಶ್ವವಿದ್ಯಾನಿಲಯಗಳಲ್ಲಿ ಬೋಧಕರಾಗಿ ಹೆಚ್ಚಿನ ಉದ್ಯಮ ತಜ್ಞರನ್ನು ಹೊಂದಲು ಈ ಹಿಂದೆ ಕಡ್ಡಾಯ ಗೊಳಿಸಿದ್ದ ಪಿಹೆಚ್‌ಡಿ ಅಗತ್ಯತೆಯನ್ನು ತೆಗೆದುಹಾಕಲು ನಿರ್ಧರಿಸಿದೆ. ಪಿಎಚ್‌ಡಿ (Doctor of Philosophy) ಇಲ್ಲದಿದ್ದರೂ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಬಹುದು ಎಂದು ಯುಜಿಸಿ ಸುತ್ತೋಲೆ ಹೊರಡಿಸಿದೆ.
ಇದು ದೇಶದ ಶಿಕ್ಷಣ (Education) ವ್ಯವಸ್ಥೆಯಲ್ಲಿ ಹೊಸ ನಾಂದಿಗೆ ಕಾರಣವಾಗಲಿದೆ ಎನ್ನಲಾಗಿದೆ. ಮಾತ್ರವಲ್ಲ ಆಯಾಯ ಕ್ಷೇತ್ರಗಳ ಪರಿಣಿತರು, ಉದ್ಯಮದ ತಜ್ಞರು ಮತ್ತು ವೃತ್ತಿಪರರನ್ನು ಶಿಕ್ಷಣ ಕ್ಷೇತ್ರದತ್ತ ಸಳೆಯುವ ನಿಟಗ್ಟಿನಲ್ಲಿ ಯುಜಿಸಿ ಈ ನಿರ್ಧಾರ ಕೈಗೊಂಡಿದೆ ಎಂದು ಅಂದಾಜಿಸಲಾಗಿದೆ.
ವರದಿಯ ಪ್ರಕಾರ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಯುಜಿಸಿ, ವಿಶೇಷ ಹುದ್ದೆಗಳನ್ನು ರಚಿಸಲು (special positions) ಯೋಜನೆ ಹಾಕಿಕೊಂಡಿದೆ. ಈ ಹೊಸ ಹುದ್ದೆಗಳು ಪ್ರಾಕ್ಟೀಸ್ ಪ್ರಾಧ್ಯಾಪಕ (Professors of Practice) ಮತ್ತು ಪ್ರಾಕ್ಟೀಸ್ ಸಹ ಪ್ರಾಧ್ಯಾಪಕ (Associate Professor of Practice) ಆಗಿರಲಿದೆ ಈ ಮೂಲಕ ಪಿಎಚ್‌ಡಿ (PhD) ಇಲ್ಲದವರಿಗೂ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ವರದಿ ತಿಳಿಸಿದೆ.
RCFL RECRUITMENT 2022: ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತದಲ್ಲಿ ನೇಮಕಾತಿ
ಪಿಹೆಚ್‌ಡಿ ಕಡ್ಡಾಯವಲ್ಲದ, ಹೊಸ ಬೋಧನಾ ಹುದ್ದೆಗಳನ್ನು ಸೃಷ್ಟಿಸಲು ಮುಂದಾಗಿರುವ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಈ ವಿಶೇಷ ಹುದ್ದೆಗಳನ್ನು ಕೇವಲ ತಾತ್ಕಾಲಿಕವಾಗಿ ರಚಿಸಿದೆಯೋ ಅಥವಾ ಖಾಯಂ ಹುದ್ದೆಗಳಾಗಿ ನೇಮಕ ಮಾಡಿಕೊಳ್ಳಲಿದೆಯೇ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ. ಒಂದು ವೇಳೆ ಯುಜಿಸಿಯ ಈ ಹೊಸ ಯೋಜನೆ ಅನುಷ್ಠಾನಗೊಂಡರೆ ಸಹಾಯಕ ಪ್ರಾಧ್ಯಾಪಕರಾಗಲು ಕಡ್ಡಾಯ ಪಿಎಚ್‌ಡಿ ಅವಶ್ಯಕತೆ ಎಂಬ ಹಳೆಯ ನಿಯಮ ರದ್ದಾಗಲಿದೆ.
ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿ ಆಯಾ ಕ್ಷೇತ್ರದ ಪರಿಣಿತರನ್ನು ನೇಮಕ ಮಾಡಿಕೊಳ್ಳಲು ಯುಜಿಸಿ ಮುಂದಾಗಿದ್ದು, ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ 2020 (National Education Policy of India 2020) ಯೋಜನೆಯಡಿಯಲ್ಲಿ ಯುಜಿಸಿಯ ಈ ತೀರ್ಮಾನವನ್ನು ಜಾರಿಗೆ ತರಲು ಯೋಜಿಸುತ್ತಿದೆ.
MMRC Recruitment 2022: ಮುಂಬೈ ಮೆಟ್ರೋ ಇಲಾಖೆಯಲ್ಲಿ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ
ವರದಿಗಳ ಪ್ರಕಾರ ಹೊಸದಾಗಿ ಮಾತವಲ್ಲ ವಿಶೇಷ ಹುದ್ದೆಗಳನ್ನು ಕೂಡ ರಚಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇದು ಈಗ ಅಸ್ತಿತ್ವದಲ್ಲಿರುವ ವಿವಿಧ ಹುದ್ದೆಗಳ ಮೇಲೆ ಯಾವುದೇ ಅಡ್ಡ ಪರಿಣಾಮಕ್ಕೆ ಕಾರಣವಾಗುವುದಿಲ್ಲ. ನೇಮಕಾತಿಗಳು, ಬಡ್ತಿಗಳು ಮತ್ತು ವೇತನವು ಮೊದಲಿನಂತೆಯೇ ಇರಲಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಈ ನಿರ್ಧಾರವನ್ನು ದೇಶಾದ್ಯಂತ ಇರುವ ವಿವಿಧ ಕೇಂದ್ರೀಯ ವಿಶ್ವವಿದ್ಯಾಲಯಗಳ ಸುಮಾರು 45 ಉಪಕುಲಪತಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರ ಮಾರ್ಚ್ 11 ರಂದು ಈ ನಿರ್ಧಾರವನ್ನು ತೆಗೆದುಕೊಂಡು ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.
ಈ ನೂತನ ವಿಶೇಷ ಅವಕಾಶಗಳ ಬಗ್ಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ, ಯೋಜನೆಗಳು ಆರಂಭಿಕ ಹಂತದಲ್ಲಿವೆ ಮತ್ತು ಯಾವುದೇ ತೀರ್ಮಾನಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ವಿವರಗಳನ್ನು ರೂಪಿಸಲು ಶೀಘ್ರದಲ್ಲೇ ಸಮಿತಿಯನ್ನು ರಚಿಸಲಾಗುವುದು ಮತ್ತು ಶೀಘ್ರದಲ್ಲೇ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗುವುದು ಎಂದು ವರದಿ ತಿಳಿಸಿದೆ.
Vijayapura Cooperative Bank Recruitment 2022: ವಿಜಯಪುರ ಸಹಕಾರಿ ಬ್ಯಾಂಕ್ ನೇಮಕಾತಿ