Asianet Suvarna News Asianet Suvarna News

MMRC Recruitment 2022: ಮುಂಬೈ ಮೆಟ್ರೋ ಇಲಾಖೆಯಲ್ಲಿ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ

ಮಹಾರಾಷ್ಟ್ರ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಇರುವ 40 ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 21 ಕೊನೆಯ ದಿನವಾಗಿದೆ. 

Maharashtra Metro Rail Corporation Limited Recruitment 2022 notification for various Manager post gow
Author
Bengaluru, First Published Mar 13, 2022, 3:13 PM IST

ಬೆಂಗಳೂರು(ಮಾ.13): ಮಹಾರಾಷ್ಟ್ರ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (Maharashtra Metro Rail Corporation Limited ) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಸೇರಿ ಒಟ್ಟು 40 ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮಾರ್ಚ್ 21 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ತಾಣ  www.mmrcl.com ಗೆ ಭೇಟಿ ನೀಡಬಹುದು.

ಒಟ್ಟು 40 ಮ್ಯಾನೇಜರ್ ಹುದ್ದೆಗಳ ಮಾಹಿತಿ ಇಂತಿದೆ
ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (Chief Project Manager-ಸಿವಿಲ್) -  1 ಹುದ್ದೆ 
ಜನರಲ್ ಮ್ಯಾನೇಜರ್ (General Manager) (ಹಣಕಾಸು) -  1 ಹುದ್ದೆ 
ಜನರಲ್ ಮ್ಯಾನೇಜರ್ (ಸಿಸ್ಟಮ್ಸ್) - 1 ಹುದ್ದೆ 
ಹೆಚ್ಚುವರಿ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (Additional Chief Project Manager) (ಎಲೆಕ್ಟ್ರಿಕಲ್ / ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ -  1 ಹುದ್ದೆ 
ಹೆಚ್ಚುವರಿ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ವಿದ್ಯುತ್ / ಭೂಗತ) - 1ಹುದ್ದೆ 
ಹೆಚ್ಚುವರಿ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸಿವಿಲ್) -  1 ಹುದ್ದೆ 
ಹೆಚ್ಚುವರಿ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಟ್ರಾಕ್ಷನ್)- 1 ಹುದ್ದೆ 
ಜಂಟಿ ಜನರಲ್ ಮ್ಯಾನೇಜರ್ (Joint General Manager - ನಿರ್ವಾಹಕರು) - 1 ಹುದ್ದೆ 
ಜಂಟಿ ಜನರಲ್ ಮ್ಯಾನೇಜರ್ (ಐ.ಟಿ.) - 1 ಹುದ್ದೆ 
ಹಿರಿಯ ಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್) - 1 ಹುದ್ದೆ 
ಹಿರಿಯ ಉಪ ಪ್ರಧಾನ ವ್ಯವಸ್ಥಾಪಕರು (Senior Deputy General Manager -ಹಣಕಾಸು) - 1 ಹುದ್ದೆ 
ಹಿರಿಯ ಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸಿವಿಲ್) - 4 ಹುದ್ದೆಗಳು
ಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸ್ವಯಂಚಾಲಿತ ಶುಲ್ಕ ಸಂಗ್ರಹ) - 1 ಹುದ್ದೆ 
ಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್) - 2 ಹುದ್ದೆ 
ಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಅಂಡರ್ಗ್ರೌಂಡ್/ಎಲೆಕ್ಟ್ರಿಕಲ್) - 1 ಹುದ್ದೆ 
ಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸಿವಿಲ್) - 6 ಹುದ್ದೆ ಗಳು
ಉಪ ಪ್ರಧಾನ ವ್ಯವಸ್ಥಾಪಕರು (ಆರ್ಕಿಟೆಕ್ಚರ್) - 1 ಹುದ್ದೆ 
ಮ್ಯಾನೇಜರ್ (ಹಣಕಾಸು) - 1 ಹುದ್ದೆ 
ಮ್ಯಾನೇಜರ್ (ಸಿಗ್ನಲ್) - 1 ಹುದ್ದೆ 
ಮ್ಯಾನೇಜರ್ (ಟೆಲಿಕಾಂ) - 1 ಹುದ್ದೆ 
ಮ್ಯಾನೇಜರ್ (ಟ್ರಾಕ್ಷನ್) - 1 ಹುದ್ದೆ 
ಸಹಾಯಕ ವ್ಯವಸ್ಥಾಪಕರು (ರೋಲಿಂಗ್ ಸ್ಟಾಕ್) - 4 ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು (ಕಾರ್ಯಾಚರಣೆಗಳು) - 1 ಹುದ್ದೆ 
ಸಹಾಯಕ ವ್ಯವಸ್ಥಾಪಕರು (ಸುರಕ್ಷತೆ, ತರಬೇತಿ ಮತ್ತು ಸಮನ್ವಯ) - 1 ಹುದ್ದೆ 
ಸಹಾಯಕ ವ್ಯವಸ್ಥಾಪಕರು (ಹಣಕಾಸು) - 2 ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು (HR) - 1 ಹುದ್ದೆ 
ಅಗ್ನಿಶಾಮಕ ಅಧಿಕಾರಿ (Fire Officer)- 1 ಹುದ್ದೆ 

INDIAN ARMY SSC RECRUITMENT 2022: ಭಾರತೀಯ ಸೇನೆಯ ಶಾರ್ಟ್ ಸರ್ವಿಸ್ ಕಮಿಷನ್ ಟೆಕ್ನಿಕಲ್ ಕೋರ್ಸ್‌ ನೇಮಕಾತಿ

ಶೈಕ್ಷಣಿಕ ವಿದ್ಯಾರ್ಹತೆ: ಮುಂಬೈ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಪಡೆದಿರಬೇಕು.  ಡಿಪ್ಲೊಮಾ / ಬಿ.ಇ. / ಬಿ. ಟೆಕ್. / ಪದವೀಧರ ಪದವಿ / B.Arch/ MBA ಮಾಡಿರಬೇಕು.

ವಯೋಮಿತಿ: ಮುಂಬೈ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ಆಯಸ್ಸು ಹುದ್ದೆಗೆ ಅನುಸಾರವಾಗಿ ಇರಬೇಕು.
ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸಿವಿಲ್): ಗರಿಷ್ಠ 55 ವರ್ಷ 
ಜನರಲ್ ಮ್ಯಾನೇಜರ್ (ಹಣಕಾಸು) :  ಗರಿಷ್ಠ 55 ವರ್ಷ 
ಜನರಲ್ ಮ್ಯಾನೇಜರ್ (ಸಿಸ್ಟಮ್ಸ್) :  ಗರಿಷ್ಠ 55 ವರ್ಷ 
ಹೆಚ್ಚುವರಿ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಎಲೆಕ್ಟ್ರಿಕಲ್ / ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ :  ಗರಿಷ್ಠ 53 ವರ್ಷ
ಹೆಚ್ಚುವರಿ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಎಲೆಕ್ಟ್ರಿಕಲ್ / ಅಂಡರ್ಗ್ರೌಂಡ್) :   ಗರಿಷ್ಠ 53 ವರ್ಷ 
ಹೆಚ್ಚುವರಿ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸಿವಿಲ್) :   ಗರಿಷ್ಠ 53 ವರ್ಷ 
ಹೆಚ್ಚುವರಿ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಟ್ರಾಕ್ಷನ್) :  ಗರಿಷ್ಠ 53 ವರ್ಷ 
ಜಂಟಿ ಜನರಲ್ ಮ್ಯಾನೇಜರ್ (ಅಡ್ಮಿನ್.):  ಗರಿಷ್ಠ 50 ವರ್ಷ 
ಜಂಟಿ ಜನರಲ್ ಮ್ಯಾನೇಜರ್ (ಐಟಿ) :  ಗರಿಷ್ಠ 50 ವರ್ಷ 
ಹಿರಿಯ ಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್):   ಗರಿಷ್ಠ 48 ವರ್ಷ 
ಹಿರಿಯ ಉಪ ಜನರಲ್ ಮ್ಯಾನೇಜರ್ (ಹಣಕಾಸು) :  ಗರಿಷ್ಠ 48 ವರ್ಷ 
ಹಿರಿಯ ಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸಿವಿಲ್) :  ಗರಿಷ್ಠ 48 ವರ್ಷ 
ಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸ್ವಯಂಚಾಲಿತ ಶುಲ್ಕ ಸಂಗ್ರಹ) :  ಗರಿಷ್ಠ 45 ವರ್ಷ 
ಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್) :   ಗರಿಷ್ಠ 45 ವರ್ಷ 
ಡೆಪ್ಯುಟಿ ಚೀಫ್ ಪ್ರಾಜೆಕ್ಟ್ ಮ್ಯಾನೇಜರ್ (ಅಂಡರ್ಗ್ರೌಂಡ್/ಎಲೆಕ್ಟ್ರಿಕಲ್) :  ಗರಿಷ್ಠ 45 ವರ್ಷ 
ಉಪ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ (ಸಿವಿಲ್) :   ಗರಿಷ್ಠ 45 ವರ್ಷ 
ಡೆಪ್ಯುಟಿ ಜನರಲ್ ಮ್ಯಾನೇಜರ್ (ಆರ್ಕಿಟೆಕ್ಚರ್) :  ಗರಿಷ್ಠ 45 ವರ್ಷ 
ಮ್ಯಾನೇಜರ್ (ಹಣಕಾಸು) :  ಗರಿಷ್ಠ 40 ವರ್ಷ 
ಮ್ಯಾನೇಜರ್ (ಸಿಗ್ನಲ್) :  ಗರಿಷ್ಠ 40 ವರ್ಷ 
ಮ್ಯಾನೇಜರ್ (ಟೆಲಿಕಾಂ) :   ಗರಿಷ್ಠ 40 ವರ್ಷ 
ಮ್ಯಾನೇಜರ್ (ಟ್ರಾಕ್ಷನ್) :  ಗರಿಷ್ಠ 40 ವರ್ಷ 
ಸಹಾಯಕ ವ್ಯವಸ್ಥಾಪಕ (ರೋಲಿಂಗ್ ಸ್ಟಾಕ್) :  ಗರಿಷ್ಠ 35 ವರ್ಷ 
ಸಹಾಯಕ ವ್ಯವಸ್ಥಾಪಕರು (ಕಾರ್ಯಾಚರಣೆಗಳು) :  ಗರಿಷ್ಠ 35 ವರ್ಷ 
ಸಹಾಯಕ ವ್ಯವಸ್ಥಾಪಕರು (ಸುರಕ್ಷತೆ, ತರಬೇತಿ ಮತ್ತು ಸಮನ್ವಯ) :  ಗರಿಷ್ಠ 35 ವರ್ಷ 
ಸಹಾಯಕ ವ್ಯವಸ್ಥಾಪಕ (ಹಣಕಾಸು) :  ಗರಿಷ್ಠ 35 ವರ್ಷ 
ಸಹಾಯಕ ವ್ಯವಸ್ಥಾಪಕ (HR) : ಗರಿಷ್ಠ 35 ವರ್ಷ 
ಅಗ್ನಿಶಾಮಕ ಅಧಿಕಾರಿ :   ಗರಿಷ್ಠ 40 ವರ್ಷ

Vijayapura Cooperative Bank Recruitment 2022: ವಿಜಯಪುರ ಸಹಕಾರಿ ಬ್ಯಾಂಕ್ ನೇಮಕಾತಿ

ಅರ್ಜಿ ಶುಲ್ಕ:  ಮುಂಬೈ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು 400 ರೂ. SC/ ST/ ಮಾಜಿ ಸೈನಿಕರು  100 ರೂ ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: ಮುಂಬೈ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ: ಮುಂಬೈ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ₹40,000 ದಿಂದ ₹2,80,000 ವರೆಗೆ ವೇತನ ಸಿಗಲಿದೆ.

Follow Us:
Download App:
  • android
  • ios