ಪೆಟ್ರೋಲಿಯಂ ಇಂಜಿನಿಯರಿಂಗ್ ಓದಿದವರಿಗೆ ಉದ್ಯೋಗಾವಕಾಶಗಳು
* ಇಂಧನ ವಲಯದಲ್ಲಿ ಪೆಟ್ರೋಲಿಯಂ ಇಂಜನಿಯರಿಂಗ್ ಸಾಕಷ್ಟು ಉದ್ಯೋಗವನ್ನು ನೀಡುತ್ತದೆ
* ಇಂಧನ ಭದ್ರತೆಯನ್ನು ಸುರಕ್ಷಿತಗೊಳಿಸಲು ಸಮಸ್ಯೆಗಳನ್ನು ಪರಿಹರಿಸಲು ಪರಿಶೋಧನೆ
* ಪೆಟ್ರೋಲಿಯಂ ಇಂಜಿನಿಯರಿಂಗ್ ಕೋರ್ಸ್ ಪೂರೈಸಿದವರು ವಿವಿಧ ಹುದ್ದೆಗಳನ್ನ ನಿರ್ವಹಿಸಬಹುದು
ಸುಮ್ಮನೆ ಒಂದು ಬಾರಿ ಊಹಿಸಿಕೊಳ್ಳಿ. ಪೆಟ್ರೋಲ್ ಮತ್ತು ಡೀಸೆಲ್ ಇಲ್ಲದಿದ್ದರೆ ಈ ಜಗತ್ತು ಹೇಗೆ ಇರುತ್ತಿತ್ತು? ತುಂಬ ನೀರಸವಾಗಿರುತ್ತಿತ್ತು. ಯಾವುದೇ ಕೈಗಾರಿಕೆಗಲು ಇರುತ್ತಿರಲಿಲ್ಲ, ವಾಹನ ಮೋಟಾರುಗಳ ರಸ್ತೆ ಮೇಲೆ ಓಡಾಡುತ್ತಿರಲಿಲ್ಲ, ಇಡೀ ಜಗತ್ತೇ ಒಂದು ರೀತಿ ಸ್ತಭ್ತ ರೀತಿ ಭಾಸವಾಗುತ್ತಿತ್ತು. ಜಗತ್ತಿಗೆ ಚೈತನ್ಯ ತಂದುಕೊಟ್ಟಿದ್ದೇ ತೈಲ ಕ್ಷೇತ್ರ. ಈ ಇಂಧನ ವಲಯದ್ದೇ ದೊಡ್ಡ ಜಗತ್ತು. ಇಂಧನ ಉದ್ಯಮ ಅಕ್ಷರಶಃ ಜಗತ್ತನ್ನೇ ಆಳುತ್ತಿದೆ. ಪೆಟ್ರೋಲ್ (Petrol), ಡೀಸೆಲ್ (Deiseal) ಸೇರಿದಂತೆ ನೈಸರ್ಗಿಕ ಅನಿಲಗಳ ಉತ್ಪಾದನೆ, ಮಾರಾಟ ಬೇರೆಲ್ಲಾ ಉದ್ಯಮಗಳಿಂದ ಪವರ್ಫುಲ್ ಅಂದ್ರೆ ತಪ್ಪಾಗಲ್ಲ. ಜಗತ್ತಿನಲ್ಲಿ ವಾಹನಗಳ ಸಂಚಾರಕ್ಕೆ ತೈಲ ಅತ್ಯಗತ್ಯ. ಹೀಗಾಗಿಯೇ ಇಂಧನ ಉದ್ಯಮ ಅತ್ಯಂತ ಬಲಿಷ್ಠ ವ್ಯವಹಾರವಾಗಿ ಬೆಳೆದು ನಿಂತಿದೆ. ದೇಶ-ದೇಶಗಳ ನಡುವೆ ಬಿಕ್ಕಟ್ಟು ತಂದಿಡುವಷ್ಟು, ಒಂದು ದೇಶದ ಆರ್ಥಿಕತೆಯನ್ನ ನಿರ್ಧರಿಸುವಷ್ಟರ ಮಟ್ಟಿಗೆ ತೈಲೋದ್ಯಮ ತನ್ನದೇ ಛಾಪು ಮೂಡಿಸಿದೆ. ಇಂಥ ಪ್ರಭಾವಶಾಲಿ ಇಂಧನ ಉದ್ಯಮಕ್ಕೆ ಪ್ರವೇಶಿಸಲು ಸಾಕಷ್ಟು ಪ್ರಾಯೋಗಿಕ ಜ್ಞಾನ ಇರಬೇಕು. ಜೊತೆಗೆ ಗಣಿತ, ಭೌತಶಾಸ್ತ್ರ ಮತ್ತು ಭೂವಿಜ್ಞಾನದ ಬಲವಾದ ಗ್ರಹಿಕೆ ಅಗತ್ಯವಿರುತ್ತದೆ. ಪೆಟ್ರೋಲಿಯಂ ಇಂಜಿನಿಯರಿಂಗ್ (Petroleum Engineering) ಕೋರ್ಸ್‌ಗಳಲ್ಲಿ ಪದವಿ ಪಡೆದ್ರೆ ಈ ಉದ್ಯಮದಲ್ಲಿ ಔದ್ಯೋಗಿಕ ನೆಲೆ ಕಂಡುಕೊಳ್ಳಬಹುದು.
ಹರಿಯಾಣ ಸರ್ಕಾರದಿಂದ 3 ಲಕ್ಷ ಟ್ಯಾಬ್ ವಿತರಣೆ
ಈ ಇಂಜಿನಿಯರಿಂಗ್ ವಿಭಾಗವು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂನಂತಹ ಹೈಡ್ರೋಕಾರ್ಬನ್‌ಗಳ ಉತ್ಪಾದನೆಯಲ್ಲಿ ಒಳಗೊಂಡಿರುವ ಚಟುವಟಿಕೆಗಳೊಂದಿಗೆ ವ್ಯವಹರಿಸುತ್ತದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಭೂವಿಜ್ಞಾನ, ಥರ್ಮೋಡೈನಾಮಿಕ್ಸ್, ಕಂಪ್ಯೂಟೇಶನ್, ಅಪ್ಲೈಡ್ ಮೆಕ್ಯಾನಿಕ್ಸ್ ಮತ್ತು ಸ್ಟ್ರಕ್ಚರಲ್ ಇಂಜಿನಿಯರಿಂಗ್ ಈ ನಿರ್ದಿಷ್ಟ ಕೋರ್ಸ್‌ನಲ್ಲಿ ಒಳಗೊಂಡಿರುವ ಕೆಲವು ಪ್ರಾಥಮಿಕ ಕ್ಷೇತ್ರಗಳಾಗಿವೆ. ಪೆಟ್ರೋಲಿಯಂ ಎಂಜಿನಿಯರ್‌ಗಳು ಇಂಧನ ಭದ್ರತೆಯನ್ನು ಸುರಕ್ಷಿತಗೊಳಿಸಲು ಸಮಸ್ಯೆಗಳನ್ನು ಪರಿಹರಿಸಲು ಪರಿಶೋಧನೆ ನಡೆಸುತ್ತಾರೆ.
12ನೇ ತರಗತಿ ಅಥವಾ ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತವನ್ನು ಕಡ್ಡಾಯ ವಿಷಯಗಳಾಗಿ ಅಭ್ಯಾಸ ಮಾಡಿರಬೇಕು. ಎನ್‌ಐಟಿಗಳು, ಸಿಎಫ್‌ಟಿಐಗಳು ಮತ್ತು ಇತರ ಎಂಜಿನಿಯರಿಂಗ್ ಸಂಸ್ಥೆಗಳ ಪ್ರವೇಶಕ್ಕಾಗಿ ಜೆಇಇ ಮೇನ್ಸ್ ತೇರ್ಗಡೆಯಾಗಿ ನೀವು ಪೆಟ್ರೋಲಿಯಂ ಎಂಜಿನಿಯರಿಂಗ್ ಪದವಿಯನ್ನು ಸೇರಬಹುದು. ಪೆಟ್ರೋಲಿಯಂ ಇಂಜಿನಿಯರಿಂಗ್ ಕೋರ್ಸ್ ಪೂರೈಸಿದವರು ವಿವಿಧ ಹುದ್ದೆಗಳನ್ನ ನಿರ್ವಹಿಸಬಹುದು.
ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಯೋಜನಾ ವಿಭಾಗದ ಸಂಪೂರ್ಣ ಕಾರ್ಯಾಚರಣೆ ಮತ್ತು ನಿರ್ವಹಣೆಯ ಉಸ್ತುವಾರಿ ವಹಿಸುತ್ತಾರೆ. ಸಂಸ್ಥೆ ಮತ್ತು ಕ್ಲೈಂಟ್‌ಗೆ ಗರಿಷ್ಠ ಮೌಲ್ಯವನ್ನು ತಲುಪಿಸಲು ಸೂಕ್ತವಾದ ರೀತಿಯಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಾಜೆಕ್ಟ್ ಮ್ಯಾನೇಜರ್ ಜವಾಬ್ದಾರರಾಗಿರುತ್ತಾರೆ. Project Manager ಅತ್ಯುತ್ತಮ ನಿರ್ಹವಣಾ ಹುದ್ದೆಯಾಗಿದೆ. ಅದೇ ರೀತಿ, ಪರೀಕ್ಷಾ ವ್ಯವಸ್ಥಾಪಕ (Testing manager) ಹುದ್ದೆ ಸಾಕಷ್ಟು ಜವಾಬ್ದಾರಿಯುತವಾಗಿರುತ್ತದೆ. ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಬೇಕಾದ ಹಲವಾರು ಘಟಕಗಳೊಂದಿಗೆ ವಿವಿಧ ಅತ್ಯಾಧುನಿಕ ಯಂತ್ರಗಳನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಪೆಟ್ರೋಲಿಯಂ ಸಂಸ್ಕರಣಾಗಾರದಲ್ಲಿ ಕ್ಷೇತ್ರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸಣ್ಣ ತಂಡವನ್ನು ನಿರ್ವಹಿಸುವ ಮೂಲಕ ಪರೀಕ್ಷಾ ವ್ಯವಸ್ಥಾಪಕರು ಮೇಲ್ವಿಚಾರಣಾ ಪಾತ್ರವನ್ನು ನಿರ್ವಹಿಸುತ್ತಾರೆ.
ಇನ್ನು ಸಂಶೋಧಕರಾಗಿ(Researcher) ಕೈಗಾರಿಕೆಗಳು ಮತ್ತು ಸಹಯೋಗಿಗಳು ಯಾವುದನ್ನಾದರೂ ಬಳಸಬಹುದೆಂದು ಹುಡುಕಲು ಸಂಶೋಧನಾ ಯೋಜನೆಗಳಲ್ಲಿ ಕೆಲಸ ಮಾಡುವುದು ಈ ಸ್ಥಾನದ ಅವಶ್ಯಕತೆಯಾಗಿದೆ. ಜತಗೆ, ಸಲಹೆಗಾರ ಹುದ್ದೆ ಕೂಡ ಈ ಇಂಧನ ವಲಯದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ಕೆಲಸವು ಗಂಭೀರ ತೊಂದರೆಗಳನ್ನು ಹೇಗೆ ಪರಿಹರಿಸುವುದು ಎಂಬುದರ ಕುರಿತು ತಾಂತ್ರಿಕ ಮತ್ತು ತಜ್ಞರ ಸಲಹೆಯನ್ನು ನೀಡುತ್ತಾರೆ. ಈ ವಲಯದಲ್ಲಿ ಅನುಭವಿ ತಜ್ಞರಿಗೆ ಈ ಸ್ಥಾನವು ಸೂಕ್ತವಾಗಿರುತ್ತದೆ.
ಇನ್ನು ಎಂಬಿಬಿಎಸ್ ಕೋರ್ಸ್‌ನಲ್ಲಿ ಯೋಗ ತರಬೇತಿ ಕಡ್ಡಾಯ
ಇಂಧನ ಕ್ಷೇತ್ರದಲ್ಲಿ ನೀವು ಜೂನಿಯರ್ ಇಂಜಿನಿಯರ್ (Junior engineer) ಆಗಿ ಯೋಜನೆಯ ನೆಲಮಟ್ಟದ ಕಾರ್ಯಗತಗೊಳಿಸುವ ಸಮಯದಲ್ಲಿ ಉದ್ಭವಿಸುವ ತಾಂತ್ರಿಕ ಸಮಸ್ಯೆಗಳನ್ನು ನಿಭಾಯಿಸಬೇಕಾಗುತ್ತದೆ. ಇದು ರಚನೆಯ ವಿನ್ಯಾಸ ಅಥವಾ ಅದರ ಅನುಷ್ಠಾನ ಕೂಡ ಆಗಿರಬಹುದು. ಇನ್ನು ಟೆಕ್ನಿಷಿಯನ್ ಸ್ಥಾನಕ್ಕೆ ಪೆಟ್ರೋಲಿಯಂ ರಿಫೈನರಿ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ನಿರ್ವಹಿಸುವ ಅಗತ್ಯವಿದೆ. ಇದು ನುರಿತ ಉದ್ಯೋಗವಾಗಿದ್ದು, ಕಂಪನಿಯ ಕಾರ್ಯಾಚರಣೆಗಳು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವ ಕೆಲಸ ಮಾಡುತ್ತಾರೆ.