ಇನ್ನು ಎಂಬಿಬಿಎಸ್ ಕೋರ್ಸ್‌ನಲ್ಲಿ ಯೋಗ ತರಬೇತಿ ಕಡ್ಡಾಯ
*ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಎಂಬಿಬಿಎಸ್‌ಗೆ ಯೋಗ ತರಬೇತಿ ಕಡ್ಡಾಯ
*ಜೂನ್ 12ರಿಂದ ಎಂಬಿಪಿಎಸ್ ಫೌಂಡೇಷನ್ ಯೋಗ ತರಬೇತಿ ಕೋರ್ಸ್ ಆರಂಭ
*ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಟ್ರೈನಿಂಗ್ ಹಮ್ಮಿಕೊಳ್ಳಲಾಗಿದೆ
ಇತ್ತೀಚಿನ ದಿನಗಳಲ್ಲಿ ಎಲ್ಲರ ಬದುಕು ಫುಲ್ ಫಾಸ್ಟ್ ಆಗಿದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಫುಲ್ ಬಿಜಿ ಲೈಫ್. ಇದರಿಂದಾಗಿ ಮಾನಸಿಕ ಒತ್ತಡದಂಥ ಸಮಸ್ಯೆಗಳು ಹೆಚ್ಚು. ಈ ಒತ್ತಡ ನಿವಾರಣೆಗಾಗಿ ಹಲವರು ನಾನಾ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಈ ಪೈಕಿ ಯೋಗವೂ ಒಂದು. ಭಾರತದ ಪ್ರಾಚೀನ ಪದ್ಧತಿಯಾದ ಯೋಗಕ್ಕೆ ಈಗ ವಿಶ್ವಮನ್ನಣೆ ದೊರೆತಿದೆ. ಅದೇ ಕಾರಣಕ್ಕಾಗಿ ಯೋಗವನ್ನು ಶಿಸ್ತುಬದ್ಧವಾಗ ಕಲಿಸುವ ಕೋರ್ಸುಗಳಿಗೂ ಸಾಕಷ್ಟು ಬೇಡಿಕೆ ಇದೆ. ಕಾರಣಕ್ಕಾಗಿಯೇ ರಾಷ್ಟ್ರೀಯ ವೈದ್ಯಕೀಯ ಆಯೋಗ - ಎನ್‌ಎಂಸಿ (National Medical Commission – MNC)ಯು ಎಂಬಿಬಿಎಸ್ ಫೌಂಡೇಶನ್ (MMBS Foundation) ಕೋರ್ಸ್‌ನಲ್ಲಿ ಯೋಗ (Yoga) ತರಬೇತಿಯನ್ನು ಪರಿಚಯಿಸಿದೆ. ಈ ತರಬೇತಿಯು ಕನಿಷ್ಠ 10 ದಿನಗಳ ಅವಧಿಯವರೆಗೆ ಪ್ರತಿದಿನ ಒಂದು ಗಂಟೆ ಕಡ್ಡಾಯವಾಗಿರುತ್ತದೆ. ಈ ಯೋಗ ತರಬೇತಿ ಕಾರ್ಯಕ್ರಮದ ಬಗ್ಗೆ ಎಲ್ಲಾ ವಿವರಗಳು ಎನ್ಎಂಸಿಯ ಅಧಿಕೃತ ವೆಬ್‌ಸೈಟ್ — nmc.org.in ನಲ್ಲಿ ಲಭ್ಯವಿದೆ. ಜೂನ್ 12 ರಿಂದ ಎಂಬಿಬಿಎಸ್ ಫೌಂಡೇಶನ್ ಕೋರ್ಸ್‌ನ ಯೋಗ ತರಬೇತಿಯು ಪ್ರಾರಂಭವಾಗಲಿದ್ದು, ಜೂನ್ 21ಕ್ಕೆ ಮುಕ್ತಾಯಗೊಳ್ಳಲಿದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ 10 ದಿನಗಳ ಕಾಲ ಈ ಯೋಗ ತರಬೇತಿ ಆಯೋಜಿಸಲಾಗಿದೆ. "ಸ್ನಾತಕಪೂರ್ವ ಕೋರ್ಸ್ ಪಠ್ಯಕ್ರಮಕ್ಕಾಗಿ ಹೊಸ ಸಾಮರ್ಥ್ಯ ಆಧಾರಿತ ವೈದ್ಯಕೀಯ ಶಿಕ್ಷಣವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗವು ಜಾರಿಗೆ ತಂದಿದೆ"ಎಂದು ಎನ್ಎಂಸಿಯ ಅಧಿಕೃತ ಸೂಚನೆ ತಿಳಿಸಿದೆ.
ಪಿಎಚ್‌ಡಿ ಅಭ್ಯರ್ಥಿಗಳಿಗೆ ಗೂಗಲ್ ಇಂಡಿಯಾ ಫೆಲೋಶಿಪ್!
ದೇಶದಾದ್ಯಂತ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಯೋಗ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತದೆ. ಆಯುಷ್ ಸಚಿವಾಲಯದ ಅಡಿಯಲ್ಲಿ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯು ಸಾಮಾನ್ಯ ಯೋಗ ಪ್ರೋಟೋಕಾಲ್ ಅನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. ಇದಕ್ಕಾಗಿ ಯೂಟ್ಯೂಬ್‌ನಲ್ಲಿ ಹಿಂದಿ (Hindi) ಮತ್ತು ಇಂಗ್ಲಿಷ್ (English)ನಲ್ಲಿ ವಿಡಿಯೋಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಅಪ್‌ಲೋಡ್ ಮಾಡಿದ್ದಾರೆ. ಅಧಿಕೃತ ಆಯುಷ್ ವೆಬ್‌ಸೈಟ್ - yoga.ayush.gov.in ನಿಂದ ಬುಕ್‌ಲೆಟ್‌ಗಳನ್ನು ಸಹ ರಿಲೀಸ್ ಮಾಡಲಾಗಿದೆ.
"ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು, ವಿಶ್ವವಿದ್ಯಾನಿಲಯಗಳು ಮತ್ತು ವೈದ್ಯಕೀಯ ಕಾಲೇಜುಗಳು/ಸಂಸ್ಥೆಗಳು, ಪದವಿ ಕೋರ್ಸ್ ಪಠ್ಯಕ್ರಮಕ್ಕೆ ಯೋಗ ತರಬೇತಿ ಕಾರ್ಯಕ್ರಮವನ್ನು ಪ್ರಸ್ತುತ ಬ್ಯಾಚ್ MBBS ವಿದ್ಯಾರ್ಥಿಗಳಿಗೆ ಅಂದರೆ 2021-22, 2021-22 ರಲ್ಲಿ ಪರಿಚಯಿಸಲು ತಕ್ಷಣದ ಕ್ರಮವನ್ನು ಪ್ರಾರಂಭಿಸಲು ಫೆಬ್ರುವರಿ-ಮಾರ್ಚ್ 2022ರಲ್ಲಿ ವಿನಂತಿಸಲಾಗಿದೆ ಎಂದು ಅಧಿಕೃತ ಸೂಚನೆಯಲ್ಲಿ ತಿಳಿಸಲಾಗಿದೆ. ಹೊಸ MBBS ಪಠ್ಯಕ್ರಮದಲ್ಲಿ 10 ದಿನಗಳ ಕಡ್ಡಾಯ ಯೋಗ ತರಬೇತಿಯನ್ನು ಉಲ್ಲೇಖಿಸಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಪದವಿಪೂರ್ವ ವೈದ್ಯಕೀಯ ಶಿಕ್ಷಣ ಮಂಡಳಿ (UGMEB) ಸಾಮಾನ್ಯ ಯೋಗ ಪ್ರೋಟೋಕಾಲ್ ಬಗ್ಗೆ ಮಾಹಿತಿ ನೀಡಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಿದ ಅಪೆಕ್ಸ್ ವೈದ್ಯಕೀಯ ಶಿಕ್ಷಣ ನಿಯಂತ್ರಣ ಸಂಸ್ಥೆ ಎನ್‌ಎಂಸಿ, ಕೋರ್ಸ್‌ನ ಏಕರೂಪತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಆಯುಷ್ ಸಚಿವಾಲಯದ ಅಡಿಯಲ್ಲಿ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗದಿಂದ ಇಂತಹ ಸಾಮಾನ್ಯ ಯೋಗ ಪ್ರೋಟೋಕಾಲ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದೆ. ಇದಲ್ಲದೇ, UGMEB ಸಾಮಾನ್ಯ ಯೋಗ ಪ್ರೋಟೋಕಾಲ್ ಅನ್ನು ಅನುಸರಿಸಲು ವೀಡಿಯೊ ಸಂಪನ್ಮೂಲಗಳನ್ನು ಪ್ರವೇಶಿಸಲು ಲಿಂಕ್‌ಗಳನ್ನು ಲಗತ್ತಿಸಿದೆ.
ಕೊಟ್ಟ ಮಾತಿನಂತೆ ನಡೆದುಕೊಂಡ ಮಣಿಪುರ ಸಚಿವ! ಆ ವಾಗ್ದಾನವೇನು?
"ಸ್ನಾತಕಪೂರ್ವ ಕೋರ್ಸ್ ಪಠ್ಯಕ್ರಮಕ್ಕಾಗಿ ಹೊಸ ಸಾಮರ್ಥ್ಯ ಆಧಾರಿತ ವೈದ್ಯಕೀಯ ಶಿಕ್ಷಣವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗವು 2021-22 ಶೈಕ್ಷಣಿಕ ಅಧಿವೇಶನದಿಂದ 31.03.2022 ರ ಸುತ್ತೋಲೆಯ ಮೂಲಕ ಜಾರಿಗೆ ತಂದಿದೆ. ಇದರಲ್ಲಿ ಯೋಗ ತರಬೇತಿಯನ್ನು ಪ್ರತಿ ದಿನ ಗರಿಷ್ಠ 1 ಗಂಟೆಗಳ ಕಾಲ ಬೇಸಿಕ್ ಕೋರ್ಸ್‌ನಲ್ಲಿ ಪರಿಚಯಿಸಲಾಗಿದೆ. ಪ್ರತಿ ವರ್ಷ ಜೂನ್ 12 ರಿಂದ ಪ್ರಾರಂಭವಾಗುವ 10 ದಿನಗಳ ಅಂತರರಾಷ್ಟ್ರೀಯ ಯೋಗ ದಿನದಂದು ಅಂದರೆ ಜೂನ್ 21 ರಂದು, ದೇಶದಾದ್ಯಂತ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಮುಕ್ತಾಯಗೊಳ್ಳುತ್ತದೆ ಎಂದು ಎಂಎನ್ಸಿ ಏಪ್ರಿಲ್ 29ರ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.