Xiaomi 12 Pro 5G ಸ್ಮಾರ್ಟ್‌ಫೋನ್ ಇದೇ ತಿಂಗಳು ಬಿಡುಗಡೆ, ಇಲ್ಲಿದೆ ಬೆಲೆ ಹಾಗೂ ವಿಶೇಷತೆ!

* ಕಳೆದ ಡಿಸೆಂಬರ್‌ನಲ್ಲಿ ಲಾಂಚ್ ಆಗಿದ್ದ ಶವೊಮಿ 12 ಪ್ರೋ ಭಾರತೀಯ ಮಾರುಕಟ್ಟೆಗೆ ಪಕ್ಕಾ
* ಈ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 8 Gen 1 ಪ್ರೊಸೆಸರ್ ಒಳಗೊಂಡಿದೆ.
* ತನ್ನ ಶವೊಮಿ 12 ಪ್ರೋ ಫೋನ್ ಲಾಂಚ್ ಅನ್ನು ಟ್ವಿಟರ್ ಮೂಲಕ ಖಚಿತಪಡಿಸಿದೆ.

Xiaomi set to launch Xiaomi 12 pro 5g smartphone in india soon rival of samsung galaxy s22 series

ಕಳೆದ ವರ್ಷ ಚೀನಾ (China) ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಶವೊಮಿ 12 ಪ್ರೋ 5ಜಿ (Xiaomi 12 Pro 5G) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಬಹುತೇಕ ಇದೇ ತಿಂಗಳಲ್ಲಿ ಈ ಸ್ಮಾರ್ಟ್‌ಫೋನ್ ಲಾಂಚ್ ಆಗುವುದು ಖಚಿತವಾಗಿದ್ದರೂ, ನಿರ್ದಿಷ್ಟ ದಿನಾಂಕ ಯಾವುದೆಂದು ಗೊತ್ತಾಗಿಲ್ಲ. ಭಾರತೀಯ ಮಾರುಕಟ್ಟೆಗೆ ಶವೊಮಿ 12 ಪ್ರೋ (Xiaomi 12 Pro) ಲಾಂಚ್ ಆಗುವುದನ್ನು ಕಂಪನಿಯೇ ಖಚಿತಪಡಿಸಿದೆ. ಕಳದೆ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಈ ಫೋನ್ ಅನ್ನು ಅನಾವರಣಗೊಳಿಸಲಾಗಿತ್ತು. ದೇ ವೇಳೆ, ಶವೊಮಿ 12 ಮತ್ತು ಶವೊಮಿ 12ಎಕ್ಸ್ ಫೋನ್‌ಗಳನ್ನು ಬಿಡುಗಡೆ ಮಾಡಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಶವೊಮಿ ಈಗ ದೊಡ್ಡ ಬ್ರ್ಯಾಂಡ್ ಆಗಿದೆ. ತನ್ನ ಪ್ರೀಮಿಯಂ ಮತ್ತು ಬಜೆಟ್ ಸ್ಮಾರ್ಟ್‌ಫೋನುಗಳ ಮೂಲಕ ಭಾರತದಲ್ಲಿ ಬಹುದೊಡ್ಡ ಗ್ರಾಹಕವಲಯವನ್ನು ಸೃಷ್ಟಿಸಿಕೊಂಡಿದೆ. ಈಗ ಭಾರತದಲ್ಲಿ ಬಿಡುಗಡೆಯಾಗಲಿರುವ ಶವೊಮಿ 12 ಪ್ರೋ ಸ್ಮಾರ್ಟ್‌ ಫೋನ್ ಕೂಡ ಪ್ರೀಮಿಯಂ ಫೋನ್ ಆಗಿದ್ದು, 50 ಮೆಗಾ ಪಿಕ್ಸೆಲ್ ಕ್ಯಾಮೆರಾ, ಕ್ವಾಲಕಾಂ ಸ್ನ್ಯಾಪ್ ಡ್ರಾಗನ್ 8 ಜೆನ್ ಪ್ರೊಸೆಸರ್ ಸೇರಿದಂತೆ ಇನ್ನಿತರ ಸಂಗತಿಗಳನ್ನು ಒಳಗೊಂಡಿದೆ.

Whatsapp Voice Message: 6 ಹೊಸ ಫೀಚರ್ ಲಾಂಚ್ ಮಾಡಿದ ವಾಟ್ಸಾಪ್

ಹೇಗಿರಬಹುದು ಈ ಫೋನ್?
ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಶವೊಮಿ 12 ಪ್ರೋ ಫೋನ್, MIUI 13 ಒಎಸ್ ಆಧರಿತವಾಗಿರಲಿದೆ. ಈ ಫೋನ್ 6.73-ಇಂಚಿನ WQHD+ (1,440x3,200 ಪಿಕ್ಸೆಲ್‌ಗಳು) E5 AMOLED ಸ್ಕ್ರೀನ್ ಜೊತೆಗೆ 1,500 nits ಗರಿಷ್ಠ ಹೊಳಪು, 480Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 120Hz ಡೈನಾಮಿಕ್ ರಿಫ್ರೆಶ್ ದರವನ್ನು ಹೊಂದಿದೆ. ಈ ಡಿಸ್‌ಪ್ಲೇ ಕಡಿಮೆ-ತಾಪಮಾನದ ಪಾಲಿಕ್ರಿಸ್ಟಲಿನ್ ಆಕ್ಸೈಡ್ (LTPO) ಬ್ಯಾಕ್‌ಪ್ಲೇನ್ ತಂತ್ರಜ್ಞಾನವನ್ನು ಆಧರಿಸಿದೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನೂ ಹೊಂದಿದೆ.

50 ಮೆಗಾ ಪಿಕ್ಸೆಲ್ ಕ್ಯಾಮೆರಾ
ಈ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 8 Gen 1 SoCನಿಂದ ಚಾಲಿತವಾಗಿದ್ದು, 12 GB ವರೆಗಿನ LPDDR5 RAM ನೊಂದಿಗೆ ಜೋಡಿಸಲಾಗಿದೆ. ಈ ಫೋನ್, 50 ಮೆಗಾ ಪಿಕ್ಸೆಲ್ ಪ್ರೈಮರಿ ಸೋನಿ IMX707 ಕ್ಯಾಮೆರಾವನ್ನು ಹೊಂದಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಗೆ ಬೆಂಬಲವೂ ಇದೆ. ಜೊತೆಗೆ 50 ಮೆಗಾ ಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್ ಮತ್ತು 50-ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಅನ್ನು ಹೊಂದಿದೆ. ಫ್ರಂಟ್‌ನಲ್ಲಿ 32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದು. Xiaomi 12 Pro 4,600mAh ಬ್ಯಾಟರಿಯನ್ನು ಹೊಂದಿದ್ದು, ಅದು 120W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋನ್ 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

 

 

ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೆ
ಶವೊಮಿ ಕಂಪನಿಯು ತನ್ನ ಶವೊಮಿ 12 ಪ್ರೋ ಫೋನ್ ಲಾಂಚ್ ಅನ್ನು ಟ್ವಿಟರ್ ಮೂಲಕ ಖಚಿತಪಡಿಸಿದೆ. ಟ್ವಿಟರ್‌ನಲ್ಲಿ ಟೀಸರ್ ಶೇರ್ ಮಾಡಿಕೊಂಡಿದ್ದು, The Showstopper ಎಂದು ಬರೆದುಕೊಳ್ಳಲಾಗಿದೆ. ಈ ಫೋನ್ ಬಿಡುಗಡೆ ಖಚಿತಪಡಿಸಿದ್ದೂ ಬಿಡುಗಡೆಯ ನಿರ್ದಿಷ್ಟ ದಿನಾಂಕವನ್ನು ಅದು ತಿಳಿಸಿಲ್ಲ.  

ಭಾರತದಲ್ಲಿ Honor MagicBook X14, MagicBook 15 ಲ್ಯಾಪ್‌ಟ್ಯಾಪ್ ಲಾಂಚ್, ಬೆಲೆ ಎಷ್ಟು?

ಬೆಲೆ ಎಷ್ಟಿರಬಹುದು?
ಚೀನಾದಲ್ಲಿ ಇದೇ ಫೋನ್ ಲಾಂಚ್ ಮಾಡಿದಾಗ ಅಲ್ಲಿ ಇದರ ಬೆಲೆ, ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅಂದಾಜು 55,100 ರೂ.ನಿಂದ ಆರಂಭವಾಗುತ್ತಿತ್ತು.  ಮತ್ತು ಟಾಪ್ ಎಂಡ್ ಮಾಡೆಲ್‌ ಬೆಲೆ ಇನ್ನೂ ಹೆಚ್ಚಾಗಿರುವ ಸಾಧ್ಯತೆಗಳಿವೆ. ಹಾಗಾಗಿ, ಭಾರತೀಯ ಮಾರುಕಟ್ಟೆಯಲ್ಲಿ ಇದೇ ರೇಂಜ್‌ನಲ್ಲಿ  ಬೆಲೆ ಇರಬಹುದು ಇಲ್ಲವೇ ಸ್ವಲ್ಪ ವ್ಯತ್ಯಾಸವೂ ಆಗಬಹುದು.

Latest Videos
Follow Us:
Download App:
  • android
  • ios