5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗೆ ತೀವ್ರ ವಿರೋಧ

ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಮೌಲ್ಯಮಾಪನ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿತ್ತು. ಆದರೆ, ಇದಕ್ಕೆ ಮಕ್ಕಳ ಪೋಷಕರಿಂದ ಹಾಗೂ ಖಾಸಗಿ ಶಾಲೆಗಳ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ.

Opposition to annual examination for 5th and 8th class students sat

ಬೆಂಗಳೂರು (ಡಿ.14): ರಾಜ್ಯ ಪಠ್ಯಕ್ರಮದ ಎಲ್ಲ ಮಾದರಿಯ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಮೌಲ್ಯಮಾಪನ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿತ್ತು. ಆದರೆ, ಇದಕ್ಕೆ ಮಕ್ಕಳ ಪೋಷಕರಿಂದ ಹಾಗೂ ಖಾಸಗಿ ಶಾಲೆಗಳ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಮೌಲ್ಯಮಾಪನ ಪರೀಕ್ಷೆ ನಡೆಸುವ ಆದೇಶದಿಂದ ಈವರೆಗೆ ಜಾರಿಯಲ್ಲಿದ್ದ ಸಮಗ್ರ ಮೌಲ್ಯಮಾಪನ ಪದ್ಧತಿಯು ರದ್ದಾಗಲಿದೆ. ಆದರೆ, ಸರ್ಕಾರ ಈ ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದ್ದು ಮಾ.9ರಿಂದ 17ರೊಳಗೆ ನಡೆಸಲು ನಿರ್ಧರಿಸಲಾಗಿದೆ. ಮೌಲ್ಯಮಾಪನ ಕಾರ್ಯವನ್ನು ಮಾ.21 ಮತ್ತು 28ರವರೆಗೆ ನಡೆಸಿ ಏ.8ರಿಂದ 10ರೊಳಗೆ ಫಲಿತಾಂಶ ಪ್ರಕಟಿಸಬೇಕೆಂದು ಇಲಾಖೆ ಸೂಚಿಸಿದೆ. ಆದರೆ, ಸರ್ಕಾರ ಮಕ್ಕಳ ಪಾಲಕರು ಅಥವಾ ಶಾಲೆಗಳ ಮಾಲೀಕರ ಸಂಘಟನೆಗಳೊಂದಿಗೆ ಯಾವುದೇ ಚರ್ಚೆಯನ್ನು ಮಾಡದೇ ಏಕಾಏಕಿ ನಿರ್ಧಾರ ಕೈಗೊಂಡಿದೆ. ಆದ್ದರಿಂದ ಮಕ್ಕಳ ಪೋಷಕರಿಂದ ವಾರ್ಷಿಕ ಪರೀಕ್ಷೆಗೆ ಭಾರಿ ವಿರೋಧ ಉಂಟಾಗಿದೆ.

ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ, 5 ಮತ್ತು 8ನೇ ತರಗತಿಗೆ ಈ ಶೈಕ್ಷಣಿಕ ವರ್ಷದಿಂದಲೇ ಪಬ್ಲಿಕ್‌ ಪರೀಕ್ಷೆ

ಹಣ ಲೂಟಿಗೆ ದಾರಿ ಕಂಡುಕೊಂಡ ಸರ್ಕಾರ: 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಗೆ ವಿರೋಧ ಪರೀಕ್ಷೆ ಕೈಬಿಡದೆ ಇದ್ರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ. ಸರ್ಕಾರವು ಚಿಕ್ಕ ಮಕ್ಕಳಿಗೆ ವಾರ್ಷಿಕ ಪರೀಕ್ಷೆಗಳ ಮೂಲಕ ಕೋಟ್ಯಾಂತರ ರೂ. ಹಣವನ್ನು ಲೂಟಿ ಮಾಡುವ ಹಾದಿಯನ್ನು ಕಂಡುಕೊಳ್ಳಲು ಮುಂದಾಗಿದೆ ಎಂದು ಪೋಷಕರ ಸಂಘಟನೆಗಳಿಂದ ಆಕ್ರೋಶ ಕೇಳಿಬಂದಿದೆ. ಸಿಬಿಎಸ್​ಸಿ ಕೇಂದ್ರದ ಪಠ್ಯಕ್ರಮದ ಶಾಲೆಗಳಲ್ಲಿಯೂ ಇಲ್ಲದ ವಾರ್ಷಿಕ ಪರೀಕ್ಷೆ ರಾಜ್ಯದಲ್ಲಿ ಜಾರಿಗೆ ಮುಂದಾಗಿರುವುದರ ಉದ್ದೇಶ ಏನು ಎಂಬುದು ತಿಳಿಯುತ್ತಿಲ್ಲ. ಶಿಕ್ಷಣ ಇಲಾಖೆಯು ವಾರ್ಷಿಕ ಪರೀಕ್ಷೆಗಳ ಹೆಸರಲ್ಲಿ ದುಡ್ಡು ಮಾಡುವ ಹುನ್ನಾರ ನಡೆಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಖಾಸಗಿ ಶಾಲೆಗಳಲ್ಲಿ ಲೂಟಿ: ಈವರೆಗೆ ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ತರಗತಿಗಳಿಗೆ 30 ಸಾವಿರ ರೂ.ಗಳಿಂದ ಲಕ್ಷಾಂತರ ರೂ.ವರೆಗೆ ಶುಲ್ಕ ಪಡೆಯಲಾಗುತ್ತಿದೆ. ಇನ್ನು ರಾಜ್ಯ ಸರ್ಕಾರ ಈಗ ಮಾಡಿರುವ  5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೂ ಪಬ್ಲಿಕ್‌ ಪರೀಕ್ಷೆ ಮಾಡುವುದಾದರೆ ಅದಕ್ಕೆ ಶುಲ್ಕ ಮತ್ತು ಉತ್ತೀರ್ಣ ಮಾಡುವ ನೆಪವನ್ನು ಇಟ್ಟುಕೊಂಡು ಸಾವಿರಾರು ರೂ. ಹಣ ವಸೂಲಿ ಮಾಡಲು ಮುಂದಾಗಲಿವೆ. ಈ ಹಿಂದೆ ಸುರೇಶ್ ಕುಮಾರ್ ಶಿಕ್ಷಣ ಸಚಿವರು ಆಗಿದ್ದಾರೆ ಬೋರ್ಡ್ ಪರೀಕ್ಷೆಗೆ ಮುಂದಾಗಿದ್ದರು. ಆದರೆ, ಶಿಕ್ಷಣ ತಜ್ಞರು ಮತ್ತು ಪೋಷಕರಿಂದ ತೀವ್ರ ವಿರೋಧ ಹಾಗೂ ಪ್ರತಿಭಟನೆ ಕೇಳಿ ಬಂದಿತ್ತು. ತೀವ್ರ ವಿರೋಧ ವ್ಯಕ್ತವಾದ ಬಳಿಕ ಬೋರ್ಡ್ ಪರೀಕ್ಷೆಯನ್ನು ಕೈಬಿಡಲಾಗಿತ್ತು. 

ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರಕಾರ ಚಿಂತನೆ

ಪಬ್ಲಿಕ್‌ ಪರೀಕ್ಷೆಗೆ ರುಪ್ಸಾ ವಿರೋಧ: ರಾಜ್ಯದಲ್ಲಿ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಈ ಪರೀಕ್ಷಾ ಕ್ರಮವನ್ನು ವಿರೋಧಿಸಿದೆ. ಶಿಕ್ಷಣ ಎಂದರೆ ಪರೀಕ್ಷೆ ನಡೆಸುವುದಲ್ಲ, ಮಕ್ಕಳ ಕಲಿ ಅಳೆಯಲು ನಿರಂತರ ಸಮಗ್ರ ಶಿಕ್ಷಣ ಪದ್ಧತಿ ಸಮರ್ಪಕವಾಗಿತ್ತು. ವೈಜ್ಞಾನಿಕ ಮಾದರಿಯಲ್ಲಿ ಇದನ್ನು ಜಾರಿಗೆ ತರಲಾಗಿತ್ತು. ಹಾಗಾಗಿ ಸರ್ಕಾರ ವಾರ್ಷಿಕ ಪರೀಕ್ಷೆ ನಡೆಸುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದೆ.

Latest Videos
Follow Us:
Download App:
  • android
  • ios